ಟೈಮ್ಸ್ ನೌ ವಿಎಂಆರ್ : ಕರ್ನಾಟಕದಿ ಅರಳಿದ ಬಿಜೆಪಿ, ಮುದುಡಿದ ಕೈ-ತೆನೆ

Recommended Video

      #ExitPoll 2019: ಲೋಕಸಭಾ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಭಾನುವಾರ ಸಂಜೆ ಪ್ರಕಟ

      ಬೆಂಗಳೂರು, ಮಾರ್ಚ್ 18 : ಲೋಕಸಭಾ ಚುನಾವಣೆ 2019ರ ಮತದಾನೋತ್ತರ ಸಮೀಕ್ಷೆ ಭಾನುವಾರ(ಮೇ 19) ಸಂಜೆ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು 2 ಹಂತದಲ್ಲಿ ಮತದಾನ ನಡೆಸಲಾಗಿತ್ತು. ಏಪ್ರಿಲ್ 11ರಿಂದ ಮೇ 19ರ ತನಕ ಮತದಾನ ನಡೆಸಲಾಗಿತ್ತು. ವಿವಿಧ ಸಂಸ್ಥೆಗಳ ಸಮೀಕ್ಷೆಗಳ ಸಂಗ್ರಹದಂತೆ ಕರ್ನಾಟಕದಲ್ಲಿ ಬಿಜೆಪಿಯ ಕಮಲ ಅರಳುವುದು ನಿಶ್ಚಿತವಾಗಿದೆ.

      543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂದು ತಿಳಿಸಲಿದೆ.

      ಟೈಮ್ಸ್ ನೌ ಚುನಾವಣಾಪೂರ್ವ ಫಲಿತಾಂಶ : ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿತ್ತು. ಜೆಡಿಎಸ್ ಪಕ್ಷ 8 ಕ್ಷೇತ್ರಗಳ ಪೈಕಿ 1ರಲ್ಲಿ ಮಾತ್ರ ಜಯಗಳಿಸಲಿದೆ ಎಂದು ಹೇಳಲಾಗಿತ್ತು.

      Lok Sabha Elections 2019: Times Now -VMR exit poll results for Karnataka

      ಚುನಾವಣಾ ಪೂರ್ವ ಸಮೀಕ್ಷೆಯ ಅನ್ವಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 13 (12+1), ಬಿಜೆಪಿ 15 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಮೈತ್ರಿಕೂಟ ಶೇ 43.50ರಷ್ಟು ಮತಗಳನ್ನು ಪಡೆಯಲಿದೆ. ಬಿಜೆಪಿ 44.30 ರಷ್ಟುಮತ ಹಾಗೂ ಇತರರು 11.20 ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ವಿವರವಾಗಿ ವರದಿ ನೀಡಲಾಗಿತ್ತು.

      2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ 17 , ಕಾಂಗ್ರೆಸ್ 9, ಜನತಾ ದಳ 2 ಸ್ಥಾನ ಗಳಿಸಿದ್ದವು.

      ಕರ್ನಾಟಕ(28)
      ಟೈಮ್ಸ್ ನೌ ವಿಎಂಆರ್ 2019: ಬಿಜೆಪಿ 21, ಕಾಂಗ್ರೆಸ್ -ಜೆಡಿಎಸ್ : 7, ಇತರೆ 0
      ಮೈ ಆಕ್ಸಿಸ್ : ಬಿಜೆಪಿ 23, ಕಾಂಗ್ರೆಸ್ -ಜೆಡಿಎಸ್ 4, ಇತರೆ 1
      ನ್ಯೂಸ್ ನೇಷನ್ : ಬಿಜೆಪಿ 18, ಕಾಂಗ್ರೆಸ್ 10, ಇತರೆ 0

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+