ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಿಕ್ಷಿತ ರಾಜಕಾರಣಿ ಅರವಿಂದ್ ಕೇಜ್ರಿವಾಲ್ ಪರಿಚಯ

|
Google Oneindia Kannada News

ಅಪಾರವಾದ ಸಾಮಾಜಿಕ ಕಳಕಳಿ ಹೊಂದಿರುವ ದೇಶದ ಸುಶಿಕ್ಷಿತ ರಾಜಕಾರಣಿಗಳಲ್ಲಿ ಒಬ್ಬರು ಅರವಿಂದ್ ಕೇಜ್ರಿವಾಲ್. ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯ 7 ಮುಖ್ಯಮಂತ್ರಿ.

ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಉಪವಾಸ ಕುಳಿತಾಗ ಅವರ ಜೊತೆಗಿದ್ದರು ಅರವಿಂದ್ ಕೇಜ್ರಿವಾಲ್. ನಂತರ ಚುನಾವಣಾ ರಾಜಕಾರಣಕ್ಕೆ ಬಂದ ಅವರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಏರಿದಾಗ ದೇಶವೇ ಅವರತ್ತ ತಿರುಗಿ ನೋಡಿತ್ತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಗೋಬಿಂದ್ ರಣ್ ಕೇಜ್ರಿವಾಲ್ ಹಾಗೂ ಗೀತಾದೇವಿ ಅವರ ಪುತ್ರ ಅರವಿಂದ್ ಕೇಜ್ರಿವಾಲ್. ಜೂನ್ 16, 1968ರಲ್ಲಿ ಹರ್ಯಾಣದಲ್ಲಿ ಜನನ. ಅಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಖರಗ್‌ಪುರದ ಪ್ರತಿಷ್ಠಿತ ಐಐಟಿಯಲ್ಲಿ 1989ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‌ ಪದವಿ ಪಡೆದ್ದಾರೆ.

ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡುದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು

ಟಾಟಾ ಸ್ಟೀಲ್‌ನಲ್ಲಿ 1989ರಲ್ಲಿ ವಾರ್ಷಿಕ 5 ರಿಂದ 8 ಲಕ್ಷದ ಪ್ಯಾಕೇಜ್‌ನ ನೌಕರಿ ಪಡೆದರು. 1992ರಲ್ಲಿ ಕೆಲಸವನ್ನು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಬರೆದರು. 1995ರಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು.

ದೆಹಲಿಯಲ್ಲಿ ಮತ್ತೆ ಚಿಗುರಿದ ಕನಸು! 'ಪೊರಕೆ' ಹಿಡಿಯೋಕೆ 'ಕೈ' ರೆಡಿ?ದೆಹಲಿಯಲ್ಲಿ ಮತ್ತೆ ಚಿಗುರಿದ ಕನಸು! 'ಪೊರಕೆ' ಹಿಡಿಯೋಕೆ 'ಕೈ' ರೆಡಿ?

ಸಮಾಜ ಸೇವೆಯಲ್ಲಿ ಆಸಕ್ತಿ

ಸಮಾಜ ಸೇವೆಯಲ್ಲಿ ಆಸಕ್ತಿ

ಸಮಾಜ ಸೇವೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಪಾರವಾದ ಆಸಕ್ತಿ ಇತ್ತು. ಕೋಲ್ಕತ್ತಾದ ಮದರ್ ಥೆರೇಸಾರ ಮಿಷನರಿ ಆಫ್ ಚಾರಿಟಿ, ರಾಮಕೃಷ್ಣ ಮಿಷನ್, ನೆಹರೂ ಯುವ ಕೇಂದ್ರ ಮುಂತಾದ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿದ್ದರು.

ಸರ್ಕಾರಿ ಕಚೇರಿಯಲ್ಲಿನ ವ್ಯವಹಾರಗಳು, ಮೀತಿ ಮೀರಿದ ಭ್ರಷ್ಟಾಚಾರದ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಅಪಾರವಾದ ನೋವಿತ್ತು. 2006ರಲ್ಲಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಹೋರಾಟ ಮಾಡಲು ಪರಿವರ್ತನ ಎಂಬ ಸಂಘಟನೆ ಸ್ಥಾಪನೆ ಮಾಡಿದರು. 2006ರ ಡಿಸೆಂಬರ್‌ನಲ್ಲಿ ಮನೀಷ್ ಸಿಸೋಡಿಯಾ ಅವರ ಜೊತೆ ಸೇರಿ ಪಬ್ಲಿಕ್ ಕಾಸ್ ಫಾರ್ ರಿಸರ್ಚ್ ಫೌಂಡೇಷನ್ ಎಂಬ ಸಂಸ್ಥೆ ಸ್ಥಾಪಿಸಿದರು.

ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆರಂಭಿಸಿದರು. ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ಆಡಳಿತ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲು ಆರಂಭಿಸಿದರು. ಅರವಿಂದ್ ಕೇಜ್ರಿವಾಲ್ ಅವರ ಜನಪರ ಕಾಳಜಿಗಾಗಿ ಅವರಿಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಯಿತು.

ಜನಾಂದೋಲನಕ್ಕೆ ಚಾಲನೆ

ಜನಾಂದೋಲನಕ್ಕೆ ಚಾಲನೆ

ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಶಿಕ್ಷಿಸಲು ಸರಿಯಾದ ಕಾನೂನಿನ ಅವಕಾಶ ಇಲ್ಲವೆಂಬುದನ್ನು ಅರಿತರು. ಕಿರಣ್ ಬೇಡಿ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಸಂತೋಷ್ ಹೆಗ್ಡೆ ಮುಂತಾದ ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲರೂ ಒಂದಾದರು.

ಭ್ರಷ್ಟರನ್ನು ಶಿಕ್ಷಿಸಲು ಜನ ಲೋಕಪಾಲ ಮಸೂದೆ ಜಾರಿಗೆ ತರಲು ಸರ್ಕಾರವನ್ನು ಆಗ್ರಹಿಸಲು ಜನಾಭಿಪ್ರಾಯ ಸಂಗ್ರಹಣೆ ಆರಂಭಿಸಿದರು. ಭ್ರಷ್ಟಾಚಾರ ವಿರುದ್ಧ ಭಾರತ ಎಂಬ ಸಂಘ ಸ್ಥಾಪನೆ ಆಯಿತು.
2011ರ ಏಪ್ರಿಲ್‌ನಲ್ಲಿ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು.

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಆರಂಭವಾಯಿತು. ಆಗಸ್ಟ್‌ 16ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಆದರೆ, ಅನುಮತಿ ಪಡೆಯದ ಕಾರಣಕ್ಕೆ ಅಣ್ಣಾ ಹಜಾರೆ, ಕೇಜ್ರಿವಾಲ್ ಬಂಧಿಸಲಾಯಿತು.

ರಾಜಕೀಯ ಪಕ್ಷ ಸ್ಥಾಪನೆ

ರಾಜಕೀಯ ಪಕ್ಷ ಸ್ಥಾಪನೆ

ಜೈಲಿನಿಂದ ಬಿಡುಗಡೆಯಾದ ಬಳಿಕ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. 12 ದಿನದ ಸತ್ಯಾಗ್ರಹದ ಬಳಿಕ ಸಂಸತ್‌ನಲ್ಲಿ ಲೋಕಪಾಲ ಮಸೂದೆ ಮಂಡನೆ ಮಾಡಲಾಯಿತು. ಸಂಸತ್‌ನಲ್ಲಿ ಅಂಗೀಕಾರಗೊಂಡರೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಗಲಿಲ್ಲ.

ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ನಿರ್ಧಾರವನ್ನು ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದರು. ಆದರೆ, ರಾಜಕೀಯದಲ್ಲಿ ಆಸಕ್ತಿ ಹೊಂದಿರದ ಅಣ್ಣಾ ಹಜಾರೆ ಮುಂತಾದವರು ರಾಜಕೀಯದಿಂದ ದೂರ ಉಳಿದರು.

2012ರ ನವೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷವನ್ನು ಅರವಿಂದ್ ಕೇಜ್ರಿವಾಲ್ ಸ್ಥಾಪನೆ ಮಾಡಿದರು. 2013ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಧಾನಿಯಲ್ಲಿ ಕಾಂಗ್ರೆಸ್ ಆಡಳಿತವನ್ನು ಅಂತ್ಯಗೊಳಿಸಿದರು.

ದೆಹಲಿ ಮುಖ್ಯಮಂತ್ರಿಯಾದರು

ದೆಹಲಿ ಮುಖ್ಯಮಂತ್ರಿಯಾದರು

ಜನಲೋಕಪಾಲ್ ಮಸೂದೆ ಮಂಡನೆಯಾಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅರವಿಂದ್ ಕೇಜ್ರಿವಾಲ್ ಅವರು 48 ದಿನದಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರ ಪತನಗೊಂಡು ಚುನಾವಣೆ ಎದುರಾಯಿತು.

2015ರಲ್ಲಿ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾಯಿತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್‌ ಆದ್ಮಿ ಪಕ್ಷ 67 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಪಾರ ಜನ ಬೆಂಬಲವನ್ನು ಪಡೆಯಿತು.

ಮುಖ್ಯಮಂತ್ರಿಗಳ ಸರಳ ಜೀವನ

ಮುಖ್ಯಮಂತ್ರಿಗಳ ಸರಳ ಜೀವನ

ಮುಖ್ಯಮಂತ್ರಿಯಾದರೂ ಸರಳ ಜೀವನ ಶೈಲಿಯ ಮೂಲಕ ಅರವಿಂದ್ ಕೇಜ್ರಿವಾಲ್ ದೇಶದ ಜನರ ಗಮನ ಸೆಳೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಹೋರಾಟವನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಗುರುತಿಸಿದ್ದು, ಭಾರತದ ಪ್ರಭಾವಿ ವ್ಯಕ್ತಿ ಎಂದು ಹೇಳಿದೆ.

ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಅವರು ಕೇಂದ್ರ ಸಚಿವಾಲಯವೊಂದರಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ನಂತರ ದೇಶದ ಇತರ ರಾಜ್ಯಗಳಲ್ಲಿಯೂ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ.

English summary
Arvind Kejriwal Aam Aadmi Party chief and 7th Chief Minister of Delhi. Here are the profile of Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X