• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

|
   Lok Sabha Election 2019 : ಮಂಡ್ಯ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

   ಸಕ್ಕರೆ ನಾಡು, ಕಾವೇರಿ ಬೀಡು ಮಂಡ್ಯ ಜಿಲ್ಲೆ ರೈತಾಪಿ ವರ್ಗವನ್ನು ಹೆಚ್ಚಾಗಿ ಹೊಂದಿರುವ ಕ್ಷೇತ್ರ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ತಾಲೂಕು ಆಗಿದ್ದ ಮಂಡ್ಯವನ್ನು ಆನಂತರ, ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಲಾಯಿತು.

   ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಜಿಲ್ಲೆಯೆಂದರೆ ಅದು ಮಂಡ್ಯ ಮಾತ್ರ. ಬರದ ನಾಡಾಗಿದ್ದ ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿ ಮಂಡ್ಯ ಜಿಲ್ಲೆಯಲ್ಲಿ ಹಸಿರು ತುಂಬಿ ತುಳುಕುವಂತೆ ಮಾಡಿದರು.

   ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ

   ರಾಜ್ಯದ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಜನರಿಗೆ ರಾಜಕೀಯವೇ ಅನ್ನ ಆಹಾರ. ಅಸ್ತಿತ್ವದ ಕಳಕೊಂಡ ಹಿಂದಿನ ಕನಕಪುರ ಕ್ಷೇತ್ರದಲ್ಲಿದ್ದ ಮಳವಳ್ಳಿ ಈಗ ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಕಿರುಗಾವಲು ಕ್ಷೇತ್ರ ಕಳೆದುಕೊಂಡು ಮೈಸೂರು ವ್ಯಾಪ್ತಿಯಲ್ಲಿದ್ದ ಕೆ ಆರ್ ನಗರವನ್ನು ಸೇರಿಸಿಕೊಂಡಿದೆ.

   ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಮಂಡ್ಯ ಕ್ಷೇತ್ರ ಸದ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೃಷ್ಣರಾಜಸಾಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

   ಕಳೆದ ವರ್ಷದ ಜನ ಗಣತಿಯಂತೆ 20,58,426 ಜನಸಂಖ್ಯೆಯಲ್ಲಿ ಶೇ 83.8ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದರೆ, ಶೇ 16.72ರಷ್ಟು ನಗರ ಪ್ರದೇಶದಲ್ಲಿದ್ದಾರೆ. ಶೇ 14.73ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 1.94ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

   ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

   ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16,69,262 ಮತದಾರರು ಮತದಾರರಿದ್ದಾರೆ. ಈ ಪೈಕಿ 8,39,052 ಪುರುಷರು, 8,30,210 ಮಹಿಳಾ ಮತದಾರರಿದ್ದಾರೆ. ಒಕ್ಕಲಿಗರ ಮತಗಳು ಇಲ್ಲಿ ನಿರ್ಣಾಯಕ. ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ, ವೀರಶೈವ, ಕುರುಬ, ಮುಸ್ಲಿಮ್, ಬ್ರಾಹ್ಮಣ, ಕ್ರೈಸ್ತರ ಮತಗಳು ಕ್ರಮವಾಗಿ ಲೆಕ್ಕಕ್ಕೆ ಸಿಗಲಿದೆ.

   ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ ಮಂಡ್ಯದಿಂದ 1951ರಲ್ಲಿ ಕಾಂಗ್ರೆಸ್ಸಿನ ಎಂಕೆ ಶಿವನಂಜಪ್ಪ ಇಲ್ಲಿನ ಆಯ್ಕೆಯಾದ ಮೊದಲ ಸಂಸದರು. ಕರ್ನಾಟಕ ರಾಜ್ಯ ಉದಯವಾದ ಬಳಿಕ 1977ರಲ್ಲಿ ಕಾಂಗ್ರೆಸ್ಸಿನ ಕೆ ಚಿಕ್ಕಲಿಂಗಯ್ಯ ಅವರು ಗೆಲುವು ಸಾಧಿಸಿದರು.

   1980ರಲ್ಲಿ ಎಂಎಸ್ ಕೃಷ್ಣ, 1984ರಲ್ಲಿ ಕೆವಿ ಶಂಕರಗೌಡ, 1989ರಲ್ಲಿ ಜಿ ಮಾದೇಗೌಡರು ಆಯ್ಕೆಯಾದರು. 1998, 99, 2004ರಲ್ಲಿ ಅಂಬರೀಷ್ ಅವರು ಇಲ್ಲಿಂದ ಸಂಸತ್ತಿಗೆ ಆಯ್ಕೆಯಾದರು. 2013ರಲ್ಲಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

   ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ

   2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಅವರು ಶೇ 63.19 (5,69,347 ಮತಗಳನ್ನು) ಮತಗಳನ್ನು ಪಡೆದು, ಬಿಜೆಪಿಯ ಡಿ.ಆರ್ ಸಿದ್ದರಾಮಯ್ಯ ಶೇ 27.38 ರಷ್ಟು ಮತಗಳು (2,44,404)ಅವರನ್ನು ಸೋಲಿಸಿದರು.

   1980ರಿಂದ ಇಲ್ಲಿ ತನಕದ ಸ್ಟ್ರೈಕ್ ರೇಟ್ ನಂತೆ ಶೇ 56ರಷ್ಟು ಸರಾಸರಿಯೊಂದಿಗೆ ಕಾಂಗ್ರೆಸ್ 5 ಬಾರಿ ಗೆಲುವು ಸಾಧಿಸಿದ್ದರೆ, ಶೇ 44ರಷ್ಟು ಗೆಲುವು ಸರಾಸರಿಯಂತೆ 4ಬಾರಿ ಜೆಡಿಎಸ್ ಗೆಲುವು ಸಾಧಿಸಿದೆ.

   ಜೀವನದಿ ಕಾವೇರಿಯ ಕೃಪೆಯಿಂದ ಹಸಿರಿನಿಂದ ಕಂಗೊಳಿಸುವ ಜಿಲ್ಲೆ. ಕಬ್ಬು ಮತ್ತು ಭತ್ತ ಕ್ಷೇತ್ರದ ಪ್ರಮುಖ ಬೆಳೆ. ಬಯಲುಸೀಮೆ ಮಂಡ್ಯದಲ್ಲಿ ಮೇಲುಕೋಟೆ ಮಾತ್ರ ಮಲೆನಾಡಿನಂತಿದೆ.

   ಕೆಆರ್ ಎಸ್, ಬೃಂದಾವನ, ರಂಗನತಿಟ್ಟು, ಮೇಲುಕೋಟೆ, ಶ್ರೀರಂಗ ಪಟ್ಟಣ, ಶಿವನಸಮುದ್ರ, ಮುಂತಾದ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಿಗೆ ಕ್ಷೇತ್ರ ಪ್ರಸಿದ್ದಿ. ಕ್ಷೇತ್ರದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ. ತೂಬಿನಕೆರೆ ಮತ್ತು ಸೋಮನಹಳ್ಳಿ ಕೈಗಾರಿಕಾ ಪ್ರದೇಶಗಳಿದ್ದರೂ ಅವಸಾನದ ಅಂಚಿನಲ್ಲಿವೆ. ಏಷಿಯಾದ ಮೊದಲ ಜಲ ವಿದ್ಯುತ್ ಕೇಂದ್ರ ಶಿವನಸಮುದ್ರ ಕ್ಷೇತ್ರದಲ್ಲಿದ್ದರೂ ಇಲ್ಲಿ ವಿದ್ಯುತ್ ಸಮಸ್ಯೆ ವಿಪರೀತ.

   ಕ್ಷೇತ್ರದ ಸಮಸ್ಯೆಗಳು:

   ಕಾವೇರಿ ಜಲ ವಿವಾದ ಒಂದು ಹಂತಕ್ಕೆ ಬಗೆಹರಿದಿರುವುದರಿಂದ ಇತ್ತೀಚೆಗೆ ಕೃಷಿಕರಿಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ, ಹಲವಾರು ನೀರಾವರಿ ಯೋಜನೆಗಳು ನೆನಗುದಿಗೆ ಬಿದ್ದಿವೆ. ಬೆಂಗಳೂರು-ಮೈಸೂರಿನ ನಡುವಿನ ರಸ್ತೆ ಹೆದ್ದಾರಿ, ಎಕ್ಸ್ ಪ್ರೆಸ್ ರೈಲು ಮಾರ್ಗಗಳ ಸುಧಾರಣೆಯಿಂದ ಮಂಡ್ಯಕ್ಕೂ ಲಾಭ. ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿಲ್ಲ. ಕಬ್ಬು ಬೆಳೆಗಾರರು ಬೆಂಬಲ ಬೆಲೆ ಸಿಗದೆ ಪರದಾಡುತ್ತಿದ್ದಾರೆ.

   ಕ್ಷೇತ್ರದ ಈ ಹಿಂದಿನ ಸಂಸದರಾಗಿದ್ದ ಸಿಎಸ್ ಪುಟ್ಟರಾಜು ಅವರು ಸಂಸತ್ತಿನಲ್ಲಿ ಶೇ 55ರಷ್ಟು ಹಾಜರಾತಿ ಹೊಂದಿದ್ದರು. 579 ಪ್ರಶ್ನೆಗಳನ್ನು ಕೇಳಿದ್ದು ಒಮ್ಮೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಮಂಡ್ಯ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ ಲಭ್ಯವಿದ್ದ 20 ಕೋಟಿ ರು ಮೊತ್ತದಲ್ಲಿ ಸಿಎಸ್ ಪುಟ್ಟರಾಜು ಅವರ ಅವಧಿಯಲ್ಲಿ 14.82 ಕೋಟಿ ರು ಸಿಕ್ಕಿತ್ತು. ಈ ಪೈಕಿ 11.35 ಕೋಟಿ ರುಗಳನ್ನು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Election 2019 : Mandya Constituency is one of the main constitunecy out of 28 in Karnataka. Former PM, JDS supremo L.R Shivarame Gowda is the current MP. This constituency covers the entire Mandya district and part of Mysore district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more