ಜಿಮ್ನಾಸ್ಟ್ ಆಟಗಾರ್ತಿ ಜೊತೆ ಪುಟಿನ್ ದಶಕದಿಂದ ಚಕ್ಕಂದ; ಈಗ ಇಯು ನಿಷೇಧ

ಮಾಸ್ಕೋ, ಮೇ 7: ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವಿರುದ್ಧ ಐರೋಪ್ಯ ಒಕ್ಕೂಟ (European Union) ಸಾಲು ಸಾಲಾಗಿ ನಿಷೇಧಗಳನ್ನ ಹೇರುತ್ತಿದೆ. ರಷ್ಯಾದ ಮಿಲಿಟರಿ ಅಧಿಕಾರಿಗಳು, ಪುಟಿನ್ ಆಪ್ತರು, ದೊಡ್ಡ ರಷ್ಯನ್ ಉದ್ಯಮಿಗಳು ಇವರೆಲ್ಲರ ಕುಟುಂಬ ಸದಸ್ಯರ ಮೇಲೆ ಯೂರೋಪಿಯನ್ ಯೂನಿಯನ್ ನಿಷೇಧಿಸುತ್ತಾ ಬರುತ್ತಿದೆ. ಯುದ್ಧ ಆರಂಭಗೊಂಡಾಗಿನಿಂದಲೂ ರಷ್ಯಾ ವಿರುದ್ಧ ಕ್ರಮಗಳ ಐದು ಪಟ್ಟಿಯನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಇಬ್ಬರು ಹೆಣ್ಮಕ್ಕಳು ಸೇರಿ ಹಲವರ ಹೆಸರು ಇದೆ. ಈಗ ಆರನೇ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಪುಟಿನ್‌ರ ಗರ್ಲ್ ಫ್ರೆಂಡ್ ಎನ್ನಲಾದ ಅಲೀನ ಮರಾಟವ್ನ ಕಬಾಯೇವ (Alina Maratavna Kabaeva) ಇದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಪಟ್ಟಿಯನ್ನು ಯೂರೋಪ್‌ನ ಎಲ್ಲಾ ಸರಕಾರಗಳು ಅನುಮೋದನೆ ಮಾಡಿದರೆ ಅಧಿಕೃತವಾಗಿ ನಿಷೇಧ ಜಾರಿಗೆ ಬರುತ್ತದೆ. ವಿವಿಧ ದೇಶಗಳು ಇಚ್ಛಿಸಿದರೆ ಪಟ್ಟಿಯಲ್ಲಿರುವ ಯಾವುದೇ ಹೆಸರನ್ನೂ ಕೈಬಿಡಬಹುದು ಅಥವಾ ಹೊಸ ಹೆಸರನ್ನು ಸೇರಿಸುವ ಅವಕಾಶ ಇರುತ್ತದೆ.

ಅದೇನೇ ಇರಲಿ, ವ್ಲಾದಿಮಿರ್ ಪುಟನ್‌ಗೂ ಕಬಾಯೇವಗೂ ನಿಜಕ್ಕೂ ಸಂಬಂಧ ಇದೆಯಾ? ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ, ಬರೀ ಗಾಳಿಸುದ್ದಿ ಇದ್ದರೂ ಇರಬಹುದು ಎನ್ನಲಾಗುತ್ತಿದೆ. ಪುಟಿನ್ ಜೊತೆ ಈ ಯುವತಿಯ ಒಡನಾಟ ಇದೆಯಾದರೂ ಇಬ್ಬರೂ ಪ್ರೀತಿಸುತ್ತಿರುವುದಕ್ಕೆ ಪುರಾವೆ ಇಲ್ಲ. ಅಲೀನಾ ಜೊತೆ ತಾನು ಸಂಬಂಧ ಇಟ್ಟುಕೊಂಡಿಲ್ಲ ಎಂದು ಈ ಹಿಂದೆ ಪುಟಿನ್ ಸ್ಪಷ್ಟಪಡಿಸಿದ್ದರು.

ಯಾರು ಈ ಅಲೀನ ಕಬಾಯೇವ?
39 ವರ್ಷ ವಯಸ್ಸಿನ ಅಲೀನಾ ಕಬಾಯೇವಾ ದಶಕಗಳ ಹಿಂದೆ ಖ್ಯಾತ ಜಿಮ್ನಾಸ್ಟ್ ಆಟಗಾರ್ತಿ ಆಗಿದ್ದರು. ಒಲಿಂಪಿಕ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡು ಪದಕಗಳನ್ನೂ ಗೆದ್ದಿದ್ದರು. 2004ರ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಿದಮಿಕ್ ಜಿಮ್ನಾಸ್ಟಿಕ್ (Rythmic Gymnastics) ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ರು. ಈಕೆಯ ಮೈ ರಬ್ಬರಿನಂತೆ ಹೇಗೆ ಬೇಕಾದರೂ ಬಗ್ಗುತ್ತದೆ ಎನ್ನುವಷ್ಟು ಈಕೆ ಖ್ಯಾತರಾಗಿದ್ದರು.

Know who is Alina Kabaeva the rumoured girlfriend of Vladimir Putin

ಅಲೀನ ಕಬಾಯೇವಾ ಕೆಲ ಒಲಿಂಪಿಕ್ಸ್ ಪದಕಗಳ ಜೊತೆಗೆ 18 ವಿಶ್ವ ಚಾಂಪಿಯನ್‌ಶಿಪ್ ಪದಕಗಳು ಮತ್ತು 25 ಯೂರೋಪಿಯನ್ ಚಾಂಪಿಯನ್‌ಶಿಪ್ ಪದಕಗಳನ್ನ ಗೆದ್ದಿದ್ದಾರೆ.

ಜಿಮ್ನಾಸ್ಟ್ ಕ್ರೀಡೆಯಿಂದ ನಿವೃತ್ತರಾದ ಬಳಿಕ ಅಲೀನಾ ಕಬಾಯೇವಾ ರಾಜಕಾರಣಕ್ಕೆ ಬಂದು ಈಗ ಆಡಳಿತ ನಡೆಸುತ್ತಿರುವ ಯುನೈಟೆಡ್ ರಷ್ಯಾ ಪಕ್ಷ ಸೇರಿದರು. 2007ರಿಂದ 2014ರವರೆಗೂ ಅಲ್ಲಿನ ರಾಷ್ಟ್ರೀಯ ಸಭೆ (ಲೋಕಸಭೆ) ಸದಸ್ಯರಾಗಿದ್ದರು. 2014ರಲ್ಲಿ ರಷ್ಯಾದ ಸೋಕಿ (Sochi City) ನಗರದಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ (Winter Olympics) ಆತಿಥೇಯ ರಷ್ಯಾದ ಟಾರ್ಚ್ ಬೇರರ್ ಆಗಿ ಈಕೆ ಆಯ್ಕೆಯಾಗಿದ್ದು ವಿಶೇಷ. ಈಕೆ ರಾಜಕೀಯಕ್ಕೆ ಬಂದ ಬಳಿಕ ವ್ಲಾದಿಮಿರ್ ಪುಟಿನ್ ಒಡನಾಟ ಆರಂಭವಾಯಿತು ಎಂಬ ಸುದ್ದಿ ಕೆಲವಾರು ವರ್ಷಗಳಿಂದ ದಟ್ಟವಾಗಿ ಕೇಳಿಬರುತ್ತಿರುವುದಂತೂ ಹೌದು.

ವ್ಲಾದಿಮಿರ್ ಪುಟಿನ್ ತನ್ನ ಪತ್ನಿ ಲುದ್ಮಿಲಾ ಶಕ್ರೆನೇವಾಗೆ (Lyudmila Shkrebneva) ವಿಚ್ಛೇದನ ನೀಡಿದ್ದಾರೆ. ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದು ಪುಟಿನ್ ಸಂಗಡವೇ ಇದ್ದಾರೆ. ಹೆಣ್ಮಕ್ಕಳಾದ ಕಟೆರೀನಾ ಟಿಖೋನೋವಾ (Katerina Tikhonova) ಮತ್ತು ಮರಿಯಾ ಪುಟಿನಾ (Maria Putina) ಹೆಚ್ಚಾಗಿ ಯೂರೋಪ್ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಅವರನ್ನ ಇಯು ನಿರ್ಬಂಧಿಸಿದೆ. ಈಗ ವ್ಲಾದಿಮಿರ್ ಪುಟಿನ್ ಅವರ ಗರ್ಲ್ ಫ್ರೆಂಡ್ ಎನ್ನಲಾದ ಅಲೀನಾ ಕಬಾಯೇವ ಮೇಲೆ ಐರೋಪ್ಯ ಒಕ್ಕೂಟದ ಕಣ್ಣು ಬಿದ್ದಿದೆ.

ನಾಲ್ಕು ಮಕ್ಕಳ ತಾಯಿ ಕಬಾಯೇವ:
ಅಚ್ಚರಿ ಎಂದರೆ ಅವಿವಾಹಿತೆಯಾಗಿ ಅಲೀನಾ ಕಬಾಯೇವ ನಾಲ್ಕು ಮಕ್ಕಳನ್ನ ಹೊಂದಿದ್ದಾರೆ. 2002ರವರೆಗೂ ಮುಸ್ಲಿಮಳಾಗಿದ್ದ ಅವರು ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆನ್ನಲಾಗಿದೆ. ಕೆಲ ವರ್ಷಗಳ ಬಳಿಕ (2009) ಅವರಿಗೆ ಹೆಣ್ಮಗುವಾಗಿದೆ. ಆಗಲೇ ಅದು ಪುಟಿನ್ ಸಂತಾನ ಎಂಬಂತಹ ಸುದ್ದಿ ಬಂದಿತ್ತು. ಅಗ ಪುಟಿನ್ ಆ ಸುದ್ದಿಯನ್ನ ಬಲವಾಗಿ ತಳ್ಳಿಹಾಕಿದ್ದರು. 2015ರಲ್ಲಿ ಮತ್ತೊಂದು ಹೆಣ್ಮಗುವಿಗೆ ಜನ್ಮ ಕೊಟ್ಟರು. 2019ರಲ್ಲಿ ಅವಳಿಜವಳಿಯಾದ ಎರಡು ಗಂಡು ಮಕ್ಕಳ ತಾಯಿಯಾಗಿದ್ದಾರೆ.

ಯೂರೋಪ್‌ನಲ್ಲಿ ಎಲ್ಲಿದ್ದಾರೆ ಕಬಾಯೇವ?
ಸುದ್ದಿಗಳ ಪ್ರಕಾರ ಅಲೀನ ಕಬಾಯೇವ ಸ್ವಿಟ್ಜರ್‌ಲೆಂಡ್‌ನಲ್ಲಿ ಅಡಗಿಕೊಂಡಿದ್ದಾರೆನ್ನಲಾಗಿದೆ. ಕೆಲ ಸಾರ್ವಜನಿಕರಿಂದ ಈ ಬಗ್ಗೆ ಅಭಿಯಾನವಾಗಿ ಆಕೆಯನ್ನು ಯೂರೋಪ್‌ನಿಂದ ಹೊರಹಾಕುವಂತೆ ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಈಗ ರಷ್ಯಾ ವಿರುದ್ಧದ ನಿಷೇಧದ ಪಟ್ಟಿಯಲ್ಲಿ ಅಲೀನರನ್ನು ಸೇರಿಸಲಾಗಿದೆ. ಈ ಪಟ್ಟಿಗೆ ಅನುಮೋದನೆ ಸಿಕ್ಕರೆ ಅಲಿನಾರನ್ನು ಯೂರೋಪ್‌ನಿಂದ ಗಡೀಪಾರು ಮಾಡುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+