Kaveri Aarti: ಕೆಆರ್‌ಎಸ್‌ನಲ್ಲೂ ನಡೆಯಲಿದೆ ಕಾವೇರಿ ಆರತಿ ಕಾರ್ಯಕ್ರಮ, ಯಾವಾಗ?
ಉತ್ತರ ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಗಮನ ಸೆಳೆದಿದ್ದ ಗಂಗಾ ಆರತಿ ಕಾರ್ಯಕ್ರಮದ ಮಾದರಿ ಕರ್ನಾಟಕದಲ್ಲೂ ಜನಮಾತೆಗೆ ನಮಿಸುವ ಆರತಿ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕಾವೇರಿ ಆರತಿ ಕಾರ್ಯಕ್ರಮ ನೆರವೇರಿಸಿರುವ ಸರ್ಕಾರವು ಇದೀಗ ಮಂಡ್ಯದ ಕೆಆರ್‌ಎಸ್‌ನಲ್ಲೂ ಕನ್ನಡ ನಾಡಿನ ಜೀವನದಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಶುಕ್ರವಾರದಂದು ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಅದ್ಧೂರಿಯಾಗಿ ಕಾವೇರಿ ಆರತಿ ಕಾರ್ಯಕ್ರಮವನ್ನು ನೆರವೇರಿಸಿದ ಡಿಕೆ ಶಿವಕುಮಾರ್ ಅವರು ಇದೇ ವೇಳೆ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಂಡ್ಯದ ಕೆಆರ್‌ಎಸ್ ಡ್ಯಾಂನಲ್ಲಿ ಈ ಬಾರಿಯ ದಸರಾ ವೇಳೆಗೆ "ಕಾವೇರಿ ಆರತಿ" ಮಾಡಲು ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೊಂದು ಸಮಿತಿ ರಚಿಸಿದ್ದೇವೆ. ಜಲಮಾತೆಗೆ ನಮನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನೀರಿಲ್ಲದೇ ನಾವಿಲ್ಲ, ನೀರೇ ನಾಗರಿಕತೆ-ನೀರಿನಿಂದದಲೇ ಧರ್ಮ. ಬರಗಾಲ ಬಂದಾಗ, ಬಾವಿ ಒಣಗಿದಾಗ ನೀರಿನ ಮಹತ್ವ ನಮಗೆ ತಿಳಿಯುತ್ತದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಾರದೆಂದು ಪ್ರಾರ್ಥನೆ ಮಾಡಲು, ದೇಶದ ಇತಿಹಾಸ ಸಂಸ್ಕೃತಿ ಉಳಿಸಲು ಈ "ಕಾವೇರಿ ಆರತಿ" ಮಾಡಿದ್ದೇವೆ. ಐತಿಹ್ಯವಿರುವ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಮಾತೆಗೆ ಆರತಿ ಬೆಳಗಿ, ಅಲ್ಲಿ ನೆರೆದಿದ್ದವರೊಂದಿಗೆ ಜಲಸಂರಕ್ಷಣೆಯ ಸಂಕಲ್ಪ ಕೈಗೊಂಡಿದ್ದೇನೆ. ಸಾರ್ವಜನಿಕರೆಲ್ಲರೂ ಈ ಪ್ರತಿಜ್ಞೆ ಸ್ವೀಕರಿಸಿ, ನೀರಿನ ಸಂರಕ್ಷಣೆಯ ಪಣ ತೊಡಿ. ಕಾವೇರಿ ಆರತಿ, ಅದು ಅನುದಿನವೂ ಜಲಜಾಗೃತಿಯಾಗಲಿ ಎಂದು ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಕತ್ತಲೆಯನ್ನು ಸೀಳಿ ಬೆಳಗಿದ ಕಾವೇರಿ ಆರತಿ, ಇದು ಜಲ ಸಂರಕ್ಷಣೆಯ ಜ್ಯೋತಿ. ಕರ್ನಾಟಕದಲ್ಲೇ ಮೊದಲ ಬಾರಿಗೆ ನಮ್ಮ ಬೆಂಗಳೂರು 'ಕಾವೇರಿ ಆರತಿ'ಯ ವೈಭವಕ್ಕೆ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ನೆರೆದಿದ್ದವರೆಲ್ಲರ ಮನಸ್ಸಿನಲ್ಲಿ ಭಾವನೆಗಳ ಸಂಚಲನವನ್ನು ಸೃಷ್ಟಿಸಿದೆ ಎಂದಿದ್ದಾರೆ. ಭಾಗಮಂಡಲದ ಸನ್ನಿಧಿಯಿಂದ, ತಲಕಾವೇರಿಯ ಮಡಿಲಿನಿಂದ ತಂದ ಪುಣ್ಯ ತೀರ್ಥವನ್ನು ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ನಡೆದ 'ಕಾವೇರಿ ಆರತಿ' ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು.

ವಿಶ್ವ ಜಲ ದಿನದ ಅಂಗವಾಗಿ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಅಭಿಯಾನಕ್ಕೆ ಕರೆ ನೀಡಿದ್ದೇವೆ. ಇದಕ್ಕೆ ಪವಿತ್ರವಾದ ಕಾವೇರಿ ಆರತಿ ಮೂಲಕ ಚಾಲನೆ ನೀಡಲಾಗುತ್ತಿದೆ. ನೀವು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದೀರಿ. ನಿಮಗೆ ಸರ್ಕಾರದ ಪರವಾಗಿ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ. ನಾನೇ ತಲಕಾವೇರಿಗೆ ಹೋಗಿ, ಕಾವೇರಿ ಪೂಜೆ ಮಾಡಿ, ಪವಿತ್ರ ಕಾವೇರಿ ಜಲವನ್ನು ತಂದು ಮಲ್ಲೇಶ್ವರದಲ್ಲಿರುವ ಸ್ಯಾಂಕಿ ಕೆರೆಗೆ ಅರ್ಪಿಸಿ ಪವಿತ್ರವಾದ ಕಾರ್ಯಕ್ರಮ ನಡೆಸಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ನೀರು ಉಳಿಸುವ ಬಗ್ಗೆ ಜಾಗೃತಿಗಾಗಿ ಪ್ರತಿಜ್ಞಾವಿಧಿಯನ್ನು ಕೂಡ ಬೋಧಿಸಿದರು.
-
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications