ವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ಕೊಠಡಿ ಗುರುತಿಸಿಕೊಳ್ಳಿ
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಗಳವಾರದಂದು ಪ್ರಮಾಣ ವಚನ ಸ್ವೀಕರಿಸಿದ 17 ಕ್ಯಾಬಿನೆಟ್ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ ನಂತರ ತಮ್ಮ ಕುರ್ಚಿ ಏರಲಿದ್ದಾರೆ. ಸದ್ಯಕ್ಕೆ ಎಲ್ಲಾ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸ ನಿರತರಾಗಿದ್ದು, ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಲು ತೆರಳಿದ್ದಾರೆ.
ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಾಗುವ ಮುನ್ನ ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಮುಖ್ಯಮಂತ್ರಿಗಳು ಮಂಗಳವಾರ(ಆಗಸ್ಟ್ 21) ದಂದು ಆದೇಶ(ಸಂಖ್ಯೆ ಸಿಆಸುಇ 131 ಡಿಬಿಎಂ 2019) ಹೊರಡಿಸಿದ್ದಾರೆ.

ಯಡಿಯೂರಪ್ಪ ಅವರ ಸಚಿವ ಸಂಪುಟದ 17 ಮಂದಿ ಸಚಿವರ ಪೈಕಿ 12 ಮಂದಿಗೆ ಕೊಠಡಿ ಹಂಚಿಕೆ ಸಚಿವರಾಗಿ ಅನುಭವವಿದೆ. ಮಿಕ್ಕ ಐವರಿಗೆ ಇದು ಹೊಸ ಅನುಭವ. ಡಾ. ಸಿ.ಎನ್ ಅಶ್ವಥ ನಾರಾಯಣ, ಶಶಿಕಲಾ ಜೊಲ್ಲೆ, ಪ್ರಭು ಚವಾಣ್, ಮಾಧುಸ್ವಾಮಿ ಅವರಿಗೆ ಸಚಿವರಾಗಿ ಹೊಸ ಅನುಭವ, ಹೊಸ ಕೊಠಡಿ ಲಭ್ಯತೆ.
ಬದಲಾವಣೆ: ಆಗಸ್ಟ್ 26ರಂದು ಮರು ಆದೇಶ ನೀಡಿ, ಲಕ್ಷ್ಮಣ ಸವದಿ, ವಿ ಸೋಮಣ್ಣ, ಪ್ರಭು ಚೌವಾಣ್ ಅವರಿಗೆ ನೀಡಿದ್ದ ಕೊಠಡಿ ಸಂಖ್ಯೆಗಲನ್ನು ಬದಲಾಯಿಸಲಾಗಿದೆ.
* ಲಕ್ಷ್ಮಣ ಸವದಿ 301-301 ಎ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿತ್ತು. ಈಗ 344-345, ವಿಕಾಸಸೌಧ
* ವಿ ಸೋಮಣ್ಣ - 329-329 A ವಿಧಾನಸೌಧ ಬದಲಿಗೆ 143-146 ವಿಕಾಸ ಸೌಧ
* ಪ್ರಭು ಚೌವಾಣ್ 143-146 ವಿಕಾಸಸೌಧ ಬದಲಿಗೆ 329-329 ಎ ವಿಧಾನಸೌಧ
| ಕ್ರಮ ಸಂಖ್ಯೆ | ಸಚಿವರ ಹೆಸರು | ಕೊಠಡಿ ಸಂಖ್ಯೆ |
| 01 | ಗೋವಿಂದ ಎಂ ಕಾರಜೋಳ | 340-340ಎ, ವಿಧಾನಸೌಧ |
| 02 | ಡಾ. ಸಿ.ಎಸ್ ಅಶ್ವಥನಾರಾಯಣ | 242-243, ವಿಕಾಸಸೌಧ |
| 03 | ಲಕ್ಷ್ಮಣ ಸಂಗಪ್ಪ ಸವದಿ | 344-345, ವಿಕಾಸಸೌಧ |
| 04 | ಕೆಎಸ್ ಈಶ್ವರಪ್ಪ | 329-329ಎ, ವಿಧಾನಸೌಧ |
| 05 | ಆರ್. ಅಶೋಕ | 317-317ಎ, ವಿಧಾನಸೌಧ |
| 06 | ಜಗದೀಶ್ ಶೆಟ್ಟರ್ | 315-315ಎ, ವಿಧಾನಸೌಧ |
| 07 | ಬಿ. ಶ್ರೀರಾಮುಲು | 328-328ಎ, ವಿಧಾನಸೌಧ |
| 08 | ಎಸ್ ಸುರೇಶ್ ಕುಮಾರ್ | 262-262ಎ, 201ಎಫ್, ವಿಧಾನಸೌಧ |
| 09 | ವಿ ಸೋಮಣ್ಣ | 143-146 ವಿಕಾಸ ಸೌಧ |
| 10 | ಸಿ.ಟಿ ರವಿ | 344-344ಎ, ವಿಧಾನಸೌಧ |
| 11 | ಬಸವರಾಜ ಬೊಮ್ಮಾಯಿ | 327-327ಎ, ವಿಧಾನಸೌಧ |
| 12 | ಕೋಟಾ ಶ್ರೀನಿವಾಸ ಪೂಜಾರಿ | 336-336ಎ, ವಿಧಾನಸೌಧ |
| 13 | ಜೆ. ಸಿ ಮಾಧುಸ್ವಾಮಿ | 316-316ಎ, ವಿಧಾನಸೌಧ |
| 14 | ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ | 305-305ಎ, ವಿಧಾನಸೌಧ |
| 15 | ಎಚ್ ನಾಗೇಶ್ | 342-343, ವಿಕಾಸಸೌಧ |
| 16 | ಪ್ರಭು ಚೌಹಾಣ್ | 329-329 ಎ ವಿಧಾನಸೌಧ |
| 17 | ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ | 141-142, ವಿಕಾಸಸೌಧ |












Click it and Unblock the Notifications