Get Updates
Get notified of breaking news, exclusive insights, and must-see stories!

Karnataka Assembly Election 2023: ಚಿಕ್ಕಮಗಳೂರು ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ಮಲೆನಾಡು , ಬಯಲುಸೀಮೆಯನ್ನು ಒಳಗೊಂಡಿರುವ ಜಿಲ್ಲೆ ಕಾಫಿನಾಡು ಚಿಕ್ಕಮಗಳೂರು . ವಾಣಿಜ್ಯ ಬೆಳೆಗಳಿಂದ ಪ್ರಸಿದ್ಧಿ ಪಡೆದಿರುವ ಜಿಲ್ಲೆ ರಾಜಕೀಯವಾಗಿಯೂ ಹೆಸರುವಾಸಿಯಾಗಿದೆ. ದಿವಗಂತ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಜಿಲ್ಲೆ ಎನ್ನುವ ಕೀರ್ತಿಗೂ ಇದು ಪಾತ್ರವಾಗಿದೆ.

ಚಿಕ್ಕಮಗಳೂರು ಜಿಲ್ಲೆಯೂ 6ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿತ್ತು. ಕ್ಷೇತ್ರ ಮರುವಿಂಗಡನೆಯ ನಂತರ 5 ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಯಿತು. 2008ರ ವಿಧಾನಸಭಾ ಚುನಾವಣೆ ಮುಂಚೆ ಚಿಕ್ಕಮಗಳೂರು, ಕಡೂರು, ಬೀರೂರು, ತರೀಕೆರೆ, ಶೃಂಗೇರಿ, ಮೂಡಿಗೆರೆ ಕ್ಷೇತ್ರವನ್ನು ಒಳಗೊಂಡಿತ್ತು. ಬೀರೂರು ವಿಧಾನಸಭಾ ಕ್ಷೇತ್ರವನ್ನು ತರೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ 9 ತಾಲೂಕುಗಳನ್ನು ಒಳಗೊಂಡಿದೆ.

9 ತಾಲೂಕುಗಳಿಂದ 5 ವಿಧಾನ ಸಭಾ ಕ್ಷೇತ್ರವನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು. ಅಡಿಕೆ, ಕಾಫಿ, ಮೆಣಸು , ವಾಣಿಜ್ಯ ಬೆಳೆಗಳನ್ನು ಇಲ್ಲಿ ಬೆಳೆಯುಲಾಗುತ್ತದೆ. ಪಂಚ ನದಿಗಳ ಉಗಮ ಸ್ಥಳ ಇದಾಗಿದ್ದು ಕುಡಿಯುವ ನೀರಿನ ಸಮಸ್ಯೆ ಮಾತ್ರ ಇಂದಿಗೂ ಜೀವಂತ. ನಕ್ಸಲ್ , ಭೂ ಒತ್ತುವರಿ, ಕಾಡು ಪ್ರಾಣಿಗಳು ಕಾಟ ಇಲ್ಲಿನ ಜನರ ಪ್ರಮುಖ ಸಮಸ್ಯೆ. ರಾಜಕೀಯವಾಗಿ ಈ ಜಿಲ್ಲೆಯಿಂದ ಹಲವು ನಾಯಕರ ರಾಜ್ಯ, ರಾಷ್ಟ್ರಮಟ್ಟಕ್ಕೆ ಹೋಗಿದ್ದಾರೆ. ಮಲೆನಾಡಿನ ಗಾಂಧಿ ಎಂದೇ ಪ್ರಸಿದ್ದ ಪಡೆದ್ದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ದಿವಂಗತ ಗೋವಿಂದ ಗೌಡರು ಕೂಡ ಇದೇ ಜಿಲ್ಲೆಯವರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಬರುತ್ತೇವೆ. ಚಿಕ್ಕಮಗಳೂರು _ಉಡುಪಿ ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರ್ಪೆಡೆಗೊಂಡಿವೆ. ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ತರೀಕರೆ ವಿಧಾನಸಭಾ ಕ್ಷೇತ್ರವೂ ಸೇರಿಕೊಂಡು ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಬಿ.ಎಲ್. ಶಂಕರ್ , ತಾರಾದೇವಿ, ಡಿ.ಬಿ ಚಂದ್ರೇಗೌಡ, ಮೋಟಮ್ಮ, ಗೋವಿಂದಗೌಡ , ಸಗೀರ್ ಅಹಮ್ಮದ್ , ಕಡಿದಾಳು ಮಂಜಪ್ಪ, ರಾಮಯ್ಯ, ವೀರಪ್ಪಗೌಡರು ಸೇರಿದಂತೆ ಹಲವು ನಾಯಕರನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಬಲಾಬಲ ಹಾಗೂ ಯಾವು ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವ ಬಗ್ಗೆ ಒಂದು ನೋಟ.

 1. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ : ಸಿ.ಟಿ ರವಿ ( ಬಿಜೆಪಿ)

1. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ : ಸಿ.ಟಿ ರವಿ ( ಬಿಜೆಪಿ)

2. ಶೃಂಗೇರಿ ವಿಧಾನ ಸಭಾ ಕ್ಷೇತ್ರ : ಟಿ ಡಿ ರಾಜೇಗೌಡ (ಕಾಂಗ್ರೆಸ್‌)
3. ಕಡೂರು ವಿಧಾನ ಸಭಾ ಕ್ಷೇತ್ರ : ಬೆಳ್ಳಿ ಪ್ರಕಾಶ್ (ಬಿಜೆಪಿ)
4. ಮೂಡಿಗೆರೆ ವಿಧಾನಸಭಾ ಕ್ಷೇತ್ರ : ಎಂ.ಪಿ ಕುಮಾರಸ್ವಾಮಿ (ಬಿಜೆಪಿ)
5. ತರೀಕರೆ ವಿಧಾನ ಸಭಾ ಕ್ಷೇತ್ರ : ಡಿ.ಎಸ್. ಸುರೇಶ್ (ಬಿಜೆಪಿ)

 ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ: ಸಿ.ಟಿ.ರವಿಗೆ ಮತ್ತೆ ಟಿಕೆ ದಕ್ಕುವುದೇ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ: ಸಿ.ಟಿ.ರವಿಗೆ ಮತ್ತೆ ಟಿಕೆ ದಕ್ಕುವುದೇ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾರರು : 2,20,532
ಪುರುಷ ಮತದಾರರು: 1,09,563
ಮಹಿಳಾ ಮತದಾರರು: 1,10,946

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು:

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈ ಬಾರಿ ಚುನಾವಣೆಯಲ್ಲಿ ಅತ್ಯಂತ ಪ್ರತಿಷ್ಠಿತ ಕಣವಾಗಲಿದೆ. ಕ್ಷೇತ್ರದಲ್ಲಿ ಅತೀ ಹೆಚ್ಚಾಗಿರುವ ಲಿಂಗಾಯಿತ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

20 ವರ್ಷಗಳಿಂದ ಕಾಫಿನಾಡಲ್ಲಿ ಎದುರಾಳಿಯೇ ಇಲ್ಲದೆ ಇರುವ ಶಾಸಕ ಎಂದು ಕರೆಸಿಕೊಂಡಿದ್ದ ಶಾಸಕ ಸಿ.ಟಿ ರವಿ ವಿರುದ್ಧ ಮೊದಲ ಬಾರಿಗೆ ಬಂಡಾಯ ಆರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ. ಮೊದಲ ಬಾರಿಗೆ ಬಿಜೆಪಿಯಲ್ಲಿ ಸಿ.ಟಿ.ರವಿಗೆ ಬದಲು ತಮಗೂ ಒಂದು ಅವಕಾಶ ನೀಡಿ, ನಮಗೂ ಟಿಕೆಟ್‌ ಕೊಡಿ ಎಂದು ಬಿಜೆಪಿ ಮುಖಂಡ ಎಚ್.ಡಿ ತಿಮ್ಮಯ್ಯ ಮನವಿ ಮಾಡಿದ್ದಾರೆ.

ಇನ್ನು ಕಾಂಗ್ರೆಸ್‌ನಿಂದ ಗಾಯಿತ್ರಿ ಶಾಂತೇಗೌಡ, ಬಿ.ಎಲ್‌ ಶಂಕರ್‌, ಬಿ.ಹೆಚ್ ಹರೀಶ್, ಯೂತ್‌ ಕಾಂಗ್ರೆಸ್‌ನಿಂದ ನಗರಸಭೆಯ ಸದಸ್ಯ ಸಂದೀಪ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಹಾಗೂ ತಿಮ್ಮ ಶೆಟ್ಟಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಈ ಪೈಕಿ ತಿಮ್ಮ ಶೆಟ್ಟಿಗೆ ಪಕ್ಷ ಟಿಕೆಟ್‌ ನೀಡಿದ್ದು, ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡಿದೆ.

 ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ

ಶೃಂಗೇರಿ ವಿಧಾನ ಸಭಾ ಕ್ಷೇತ್ರ :
ಒಟ್ಟು ಮತದಾರರು : 1,67,909
ಪುರುಷ ಮತದಾರರು : 82,534
ಮಹಿಳಾ ಮತದಾರರು : 85,372

ಶೃಂಗೇರಿ ವಿಧಾನಸಭಾ ಕ್ಷೇತ್ರ ಬಿಜೆಪಿಯಿಂದ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇದ್ದು, ಡಿ.ಎನ್.ಜೀವರಾಜ್, ಕಲ್ಲಮಕ್ಕಿ ಉಮೇಶ್ , ರವಿಶಂಕರ್ ಹಾಗೂ ನಯನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ರಾಜೇಗೌಡ ಟಿ.ಡಿ, ಸಚಿನ್‌ ಮೀಗಾ ಹಾಗೂ ಆರತಿ ಕೃಷ್ಣ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನು ಜೆಡಿಎಸ್‌ನಿಂದ ಸುಧಾಕರ್ ಶೆಟ್ಟಿಗೆ ಪಕ್ಷ ಟಿಕೆಟ್‌ ನೀಡಿದೆ.

 ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗೆ ಭಾರಿ ಪೈಪೋಟಿ

ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗೆ ಭಾರಿ ಪೈಪೋಟಿ

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ :
ಒಟ್ಟು ಮತದಾರರು : 1,70,435
ಪುರುಷ ಮತದಾರರು: 83,627
ಮಹಿಳಾ ಮತದಾರರು: 86,803

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಂ.ಪಿ.ಕುಮಾರಸ್ವಾಮಿ, ದೀಪಕ್ ದೊಡ್ಡಯ್ಯ ಹಾಗೂ ಶಿವಣ್ಣ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಮೊಟಮ್ಮ, ನಯನ ಮೊಟಮ್ಮ ಹಾಗೂ ಎಚ್‌.ಎಸ್‌ ಪುಟ್ಟಸ್ವಾಮಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಜೆಡಿಎಸ್‌ನಿಂದ ಬಿ.ಬಿ‌.ನಿಂಗಯ್ಯಗೆ ಪಕ್ಷ ಟಿಕೆಟ್‌ ನೀಡಿದ್ದು, ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡಿದೆ.

 ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ಸಿನಿಂದ ಯಾರಿಗೆ ಟಿಕೆಟ್?

ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ಸಿನಿಂದ ಯಾರಿಗೆ ಟಿಕೆಟ್?

ತರೀಕೆರೆ ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾರರು : 1,90,045
ಪುರುಷ ಮತದಾರರು: 94,892
ಮಹಿಳಾ ಮತದಾರರು: 95,152

ಇನ್ನು ತರೀಕರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸುರೇಶ್ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ನಿಂದ ಶ್ರೀನಿವಾಸ್, ಗೋಪಿಕೃಷ್ಣ ಹಾಗೂ ಲೋಕೇಶ್ ತಾಳಿಕಟ್ಟೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

 ಕಡೂರು ಅಸೆಂಬ್ಲಿ ಟಿಕೆಟಿಗೆ ಭಾರೀ ಪೈಪೋಟಿ

ಕಡೂರು ಅಸೆಂಬ್ಲಿ ಟಿಕೆಟಿಗೆ ಭಾರೀ ಪೈಪೋಟಿ

ಕಡೂರು ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾರರು : 2,03,816
ಪುರುಷ ಮತದಾರರು: 1,02,449
ಮಹಿಳಾ ಮತದಾರರು: 1,01,362

ಕಡೂರು ವಿಧಾನಸಭಾ ಕ್ಷೇತ್ರ ಬಿಜೆಪಿಯಿಂದ ಬೆಳ್ಳಿ ಪ್ರಕಾಶ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್‌ನಿಂದ ಕೆ.ಎಸ್.ಆನಂದ್, ವಿನಾಯಕ್, ಹಾಗೂ ಶರತ್ ಕೃಷ್ಣಮೂರ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಕಡೂರು ವಿಧಾನಸಭಾಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ವೈ.ವಿ.ಎಸ್.ದತ್ತ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದ್ದು, ಒಂದು ವೇಳೆ ವೈ.ವಿ.ಎಸ್.ದತ್ತ ಜೆಡಿಎಸ್‌ ತೊರೆದರೆ ಜೆಡಿಎಸ್‌ನಿಂದ ನೂತನ ಅಭ್ಯರ್ಥಿ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+