ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26/11 ಮುಂಬೈ ದಾಳಿ: ರತನ್‌ ಟಾಟಾಗೆ, ತಾಜ್ ಹೋಟೆಲ್‌ನ ಮ್ಯಾನೇಜರ್ ಹೇಳಿದ್ದೇನು?

|
Google Oneindia Kannada News

ಮುಂಬೈನ ತಾಜ್ ಹೋಟೆಲ್‌ನಲ್ಲಿ ನಡೆದ 26/11 ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಕರಂಬಿರ್ ಕಾಂಗ್, ವಿಶ್ವಸಂಸ್ಥೆಯಲ್ಲಿ ನಡೆದ ಉಗ್ರರ ದಾಳಿಯ ನೋವಿನ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಹೇಳಿದರು. ಇದರೊಂದಿಗೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.

14 ವರ್ಷಗಳ ಹಿಂದೆ, ನವೆಂಬರ್ 26, 2008ರಂದು, ಮುಂಬೈನ ತಾಜ್ ಹೋಟೆಲ್ ಮೇಲಿನ ಭಯೋತ್ಪಾದಕ ದಾಳಿಯು ಇನ್ನೂ ಅನೇಕ ಕುಟುಂಬಗಳನ್ನು ಕಾಡುತ್ತಿದೆ. ಅದರಲ್ಲಿ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್ ಹೋಟೆಲ್‌ನ ಜಿಎಂ (ಜನರಲ್ ಮ್ಯಾನೇಜರ್) ಆಗಿದ್ದ ಕರಂಬಿರ್ ಕಾಂಗ್ ಸಹ ಒಬ್ಬರು. ಕರಂಬಿರ್ ಕಾಂಗ್ ಅವರು ಈ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ನೋವಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

 ಕರಂಬಿರ್ ಕಾಂಗ್ ಅವರ ಧೈರ್ಯಕ್ಕಾಗಿ ಫೋರ್ಬ್ಸ್ ವರ್ಷದ ವ್ಯಕ್ತಿ

ಕರಂಬಿರ್ ಕಾಂಗ್ ಅವರ ಧೈರ್ಯಕ್ಕಾಗಿ ಫೋರ್ಬ್ಸ್ ವರ್ಷದ ವ್ಯಕ್ತಿ

ಉಗ್ರರ ದಾಳಿಯಲ್ಲಿ ಧೈರ್ಯ ತೋರಿದ್ದಕ್ಕಾಗಿ ಆಗಿನ ಫ್ರೆಂಚ್ ಅಧ್ಯಕ್ಷ ನಿರೋಲಾಸ್ ಸರ್ಕೋಜಿ ಅವರು ಕರಂಬಿರ್ ಕಾಂಗ್ ಅವರಿಗೆ 'ಆಫೀಸರ್ ಆಫ್ ನ್ಯಾಷನಲ್ ಆರ್ಡರ್ ಆಫ್ ಮೆರಿಟ್' ಪದಕವನ್ನು ನೀಡಿ ಗೌರವಿಸಿದರು. ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಹಾಜರಿದ್ದ ನೂರಾರು ಅತಿಥಿಗಳಲ್ಲಿ ಫ್ರಾನ್ಸ್‌ನ ನಾಗರಿಕರು ಇದ್ದರು. ಅವರನ್ನು ತಾಜ್ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ತಾಜ್ ಹೋಟೆಲ್ ಮಾಲೀಕ ರತನ್ ಟಾಟಾ ಅವರು ಭಯೋತ್ಪಾದಕ ದಾಳಿಯ ನಂತರ ಕರಂಬಿರ್ ಕಾಂಗ್ ಅವರನ್ನು ಭೇಟಿಯಾದಾಗ, ಇದರಿಂದ ನನಗೆ ಎಷ್ಟು ನೋವಾಗಿದೆ ಎಂದು ಹೇಳಿದರು. ಸರ್ ನಾವು ತಾಜ್‌ನ್ನು ಮೊದಲಿನಂತೆ ಮಾಡಲಿದ್ದೇವೆ ಎಂದು ಕಾಂಗ್ ಹೇಳಿದರು ಆಗ ರತನ್‌ ರತನ್ ಟಾಟಾ ಅವರು ಬೆಚ್ಚಿಬಿದ್ದರು.

 ವಿಶ್ವಸಂಸ್ಥೆಯಲ್ಲಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಕೆ

ವಿಶ್ವಸಂಸ್ಥೆಯಲ್ಲಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಕೆ

ಭಯೋತ್ಪಾದನೆಯಿಂದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಈ ವಿಷಯವನ್ನು ಚರ್ಚಿಸಲು ಅನೇಕ ದೇಶಗಳ ಪ್ರತಿನಿಧಿಗಳು ಇಂದು ಯುಎನ್‌ಗೆ ಹಾಜರಾಗಿದ್ದರು, ಇದನ್ನು ಉದ್ದೇಶಿಸಿ ಕರಂಬಿರ್ ಕಾಂಗ್ ಹೇಳಿದರು, ನನ್ನ ದೇಶದ ಮುಂಬೈನಲ್ಲಿರುವ ತಾಜ್ ಹೋಟೆಲ್ ಮೇಲೆ 10 ಭಯೋತ್ಪಾದಕರು ದಾಳಿ ಮಾಡಿದಾಗ ಇಡೀ ಜಗತ್ತು ಅದನ್ನು ನೋಡಿದೆ, ಅದರಲ್ಲಿ ನಾನು ಜನರಲ್ ಮ್ಯಾನೇಜರ್ ಆಗಿದ್ದೆ ಎಂದರು.

 26/11 ದಾಳಿಯಲ್ಲಿ ನನ್ನ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಸಾವು

26/11 ದಾಳಿಯಲ್ಲಿ ನನ್ನ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಸಾವು

ಈ ಭಯೋತ್ಪಾದಕ ದಾಳಿಯಲ್ಲಿ ನನ್ನ ಪತ್ನಿ ಮತ್ತು ಇಬ್ಬರು ಚಿಕ್ಕ ಪುತ್ರರು ಸಹ ಸಾವನ್ನಪ್ಪಿದ್ದಾರೆ. ನಾನು ಎಲ್ಲವನ್ನೂ ಕಳೆದುಕೊಂಡೆ ಎಂದು ಕರಂಬಿರ್ ಕಾಂಗ್ ಹೇಳಿದ್ದಾರೆ. ನನ್ನ ಸಿಬ್ಬಂದಿ ಶಸ್ತ್ರಾಸ್ತ್ರಗಳಿಲ್ಲದೆ ಧೈರ್ಯದಿಂದ ಅಲ್ಲಿ ನಿಂತರು, ಇದಕ್ಕಾಗಿ ಟಾಟಾ ಗ್ರೂಪ್ ಮತ್ತು ತಾಜ್ ಹೆಸರುವಾಸಿಯಾಗಿದೆ ಎಂದು ಹೇಳಿದರು. ಈ ದಾಳಿಯಲ್ಲಿ ವೀರಾವೇಶದಿಂದ ಸಾವಿರಾರು ಜೀವಗಳನ್ನು ಉಳಿಸಿದ ಅನೇಕ ವೀರ ಸಹಚರರನ್ನು ಕಳೆದುಕೊಂಡಿದ್ದೇವೆ.

 21 ದಿನದ ನಂತರವೇ ತಾಜ್ ಹೋಟೆಲ್ ಆರಂಭ

21 ದಿನದ ನಂತರವೇ ತಾಜ್ ಹೋಟೆಲ್ ಆರಂಭ

ಭಯೋತ್ಪಾದಕರ ದಾಳಿಯಲ್ಲಿ ಜನರನ್ನು ರಕ್ಷಿಸಿದ ನಮ್ಮ ಕಂಪನಿ ಮತ್ತು ಉದ್ಯೋಗಿಗಳಿಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ ಎಂದು ಕರಂಬಿರ್ ಕಾಂಗ್ ಹೇಳಿದರು. ನ್ಯಾಯಕ್ಕಾಗಿ ನಾವು 14 ಸುದೀರ್ಘ ಮತ್ತು ನೋವಿನ ವರ್ಷಗಳನ್ನು ಕಳೆದಿದ್ದೇವೆ. ಇಂದು ನಾನು ಅಂತರರಾಷ್ಟ್ರೀಯ ಸಮುದಾಯಕ್ಕೆ ನ್ಯಾಯವನ್ನು ಪಡೆಯಲು ಒಟ್ಟಾಗಿ ಕೆಲಸ ಮಾಡಲು ಕರೆ ನೀಡುತ್ತೇನೆ. ಈ ಘೋರ ಅಪರಾಧವನ್ನು ಬೇರುಸಹಿತ ಬೇರೂರಿಸಲು ಭಯೋತ್ಪಾದಕರಿಗೆ ಯಾವುದೇ ಸುರಕ್ಷಿತ ಆಶ್ರಯವಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಭಯೋತ್ಪಾದಕರ ದಾಳಿಯ 21 ದಿನಗಳ ನಂತರ ನಾವು ತಾಜ್ ಹೋಟೆಲ್‌ನ್ನು ಮತ್ತೆ ತೆರೆದಿದ್ದೇವೆ. ಅಂದು ನಮಗೆ ಬಂದ ಧೈರ್ಯದ ಪ್ರೇರಣೆಯಾಗಿದೆ ಹಾಗೂ ಭಯೋತ್ಪಾದನೆ ನಾಶವಾಗಬೇಕಾಗಿದೆ ಎಂದು ಕರೆ ನೀಡಿದರು.

English summary
Karambir Kang shared the painful memories of the attack of 26/11, when he lost his family: his wife and two young sons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X