• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾರಾಷ್ಟ್ರದಲ್ಲಿ ಮೂಲ ಕನ್ನಡಿಗರು

By ಶಿವಾನಂದ ಗುಂಡನವರ
|

ಪ್ರಾಚೀನ ಮತ್ತು ಮಧ್ಯಕಾಲೀನ ಅವಧಿಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಇಂದಿನ ಮಧ್ಯ ತಮಿಳುನಾಡಿನ ಕಾವೇರಿ ಡೆಲ್ಟಾದಿಂದ ಮಹಾರಾಷ್ಟ್ರದ ನಾಸಿಕ್ ಪ್ರದೇಶದ ಗೋದಾವರಿಯವರೆಗೆ ಇದ್ದವು. ಈ ಎರಡು ನದಿಗಳ ನಡುವೆ ಇರುವ ಕನ್ನಡ ಪ್ರದೇಶದ ಬಗ್ಗೆ ಅಮೋಘವರ್ಷ ಶ್ರೀವಿಜಯ ಅವರ 'ಕವಿರಾಜಮಾರ್ಗ' ದಲ್ಲಿ ಮಾಡಿದ ಹಕ್ಕುಗಳು ನಿಜವೆಂದು ಇದು ತೋರಿಸಿದೆ.

ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಕನ್ನಡಿಗರನ್ನು 'ಹಟ್ಕರ್ ಕನ್ನಡಿ ಜನರು' ಎಂದು ಕರೆಯುವ ಹಿಂದಿನ ಇತಿಹಾಸ ಏನು?. ಅದೇ ರೀತಿ ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ವಾಸಿಸುವ ಹಟ್ಕರ್ ಕನ್ನಡಿ ಜನರು ತಮ್ಮದೇ ಆದ ಇತಿಹಾಸವನ್ನು ಹೊಂದಿದ್ದಾರೆ. ಅವರ ಇತಿಹಾಸವನ್ನು ತಿಳಿದುಕೊಳ್ಳಲು ನಾವು ಸ್ವಲ್ಪ ಮಧ್ಯ ಯುಗದ ಭಾರತದ ಇತಿಹಾಸದ ಕಡೆಗೆ ಗಮನ ಹರಿಸಬೇಕು.

ಬೆಳಗಾವಿಯ ಮೊದಲ ಕನ್ನಡ ಮೇಯರ್ ನಿಧನ: ಸಚಿವ ಜಾರಕಿಹೊಳಿ ಕಂಬನಿ

ಮುಸ್ಲಿಂ ದಾಳಿಕೋರರ ದಕ್ಷಿಣದ ದಂಡನಾಯಕ ಮಲ್ಲಿಕಾಫರನ ದಾಳಿಯಲ್ಲಿ ಧಕ್ಖನ್ ಕರ್ನಾಟಕದ ಸೇವುಣರು ದಕ್ಷಿಣ ಕರ್ನಾಟಕದ ಹೊಯ್ಸಳ ಸಾಮ್ರಾಜ್ಯಗಳು ನಶಿಸಿ ಕನ್ನಡಿಗರ ಸಾಮ್ರಾಜ್ಯಗಳ ಯುಗ ಅಲ್ಲಿಗೆ ಕೊನೆಯಾಗುತ್ತದೆ. ಆ ಸಮಯದಲ್ಲಿ ಉತ್ತರದಿಂದ ಬಂದ ಇಂಡೋ-ಆರ್ಯನ್ ಬುಡಕಟ್ಟಿನ ಮರಾಠಿ ಜನ ಕನ್ನಡ ನಾಡಿನ ಉತ್ತರದ ತುದಿ ವಿಂದ್ಯ ಪರ್ವತದ ನರ್ಮದಾ ನದಿ ದಕ್ಷಿಣ ಮುಖ(ನಾಗಪುರ್) ಭೂಮಿಯಲ್ಲಿ ಬಂದು ನೆಲೆ ನಿಲ್ಲುತ್ತಾರೆ.

ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಒಂದು ಜಾತಿಗೆ ಸೀಮಿತವಲ್ಲ: ಸಚಿವ ಜಾರಕಿಹೊಳಿ

ಅಲ್ಲಿಯವರೆಗೆ ನರ್ಮದೆಯವರೆಗೆ ಅತ್ಯಂತ ಶ್ರೀಮಂತ ಕನ್ನಡ ಸಂಸ್ಕೃತಿಯಿಂದ ಕೂಡಿದ್ದ ಆ ಭೂಮಿ ಕನ್ನಡ ಪ್ರೇರಿತ ರಾಜ್ಯಾಡಳಿತವಿಲ್ಲದೆ ಪರ ಸಂಸ್ಕೃತಿಯತ್ತ ವಾಲುತ್ತಾ ಸಾಗುತ್ತೆ, ತದ ನಂತರ ಬಂದ ವಿಜಯನಗರದ ಅರಸರು ಕರ್ನಾಟಕದ ಉತ್ತರದ ತುದಿ ತಲುಪಲೇ ಇಲ್ಲ, ಕ್ರಮೇಣವಾಗಿ ಇಂಧೋರಿನಿಂದ ಶುರುವಾದ ಮರಾಠಿ ಪಾಳೆಗಾರಿಕೆ ಔರಂಗಾಬಾದ ತಲುಪಲು ಬಹಳ ಸಮಯ ಹಿಡಿಯಲಿಲ್ಲ.

ಇನ್ನು ಕನ್ನಡದಲ್ಲಿಯೂ ವಿಜ್ಞಾನ ಕಲಿಕೆ: ಕನ್ನಡ ಭಾಷೆಯಲ್ಲಿ ಪಿಸಿಎಂಬಿ ಪುಸ್ತಕ

ಮರಾಠಿಗೆ ಮುನ್ನಣೆ ನೀಡಿದರು

ಮರಾಠಿಗೆ ಮುನ್ನಣೆ ನೀಡಿದರು

ಮೊಗಲರಿಗೆ ಒಂದೇ LANGUAGE -FAMILY ಭಾಷೆಯಾದ ಪರ್ಷಿಯನ್ ಮತ್ತು ಮರಾಠಿ ಭಾಷೆಗಳ ಒಳಹೊಕ್ಕುವಿಕೆಗೆ ತೊಂದರೆಯಾಗದೆ ಅವರು ಕೂಡ ಮರಾಠಿಗೆ ಮುನ್ನಣೆ ನೀಡಿದರು. ನಂತರ ಸಿಂದೆ ಹೋಳ್ಕರ ಬೋಸ್ಲೆ ಮನೆತನಗಳ ಪ್ರಭಾವದಿಂದ ಕನ್ನಡ ಮೂಲೆಗುಂಪಾಗಿ ಮರಾಠಿ ಆಡಳಿತ ಭಾಷೆಯಾಯಿತು. ವಿಂದ್ಯ ಪರ್ವತ, ನಾಗಪುರ್ ಮತ್ತು ನಾಶಿಕ್ ಗುಡ್ಡುಗಾಡಿನಲ್ಲಿದ್ದ ಜನಗಳು ಮಾತ್ರ 19ನೇ ಶತಮಾನದ ವರೆಗೂ ಕನ್ನಡವನ್ನ ಉಳಿಸಿಕೊಂಡು ಬಂದಿದ್ದರು. ಅದರಲ್ಲಿ ಹಾಟ್ಕರ್ ಕಾನಡಿ, ಕೋಳಿ ಮತ್ತು ಹೊಲಿಯ-ಗೋಲರ್ ಜನಾಂಗ ಮುಖ್ಯರು.

ನಾಸಿಕ್‌ನಲ್ಲಿ ಉಳಿದಿದ್ದಾರೆ

ನಾಸಿಕ್‌ನಲ್ಲಿ ಉಳಿದಿದ್ದಾರೆ

1947 ರಲ್ಲಿ ಭಾರತ ಸ್ವತಂತ್ರವಾಯಿತು ಮತ್ತು ರಾಜ್ಯಗಳ ಮರುಸಂಘಟನೆ ಕಾಯ್ದೆ 1956ರ ಪ್ರಕಾರ, ಮುಂಬೈ ಪ್ರಾಂತ್ಯದ ಕನ್ನಡ ಪ್ರದೇಶಗಳು , ಹೈದರಾಬಾದ್ ರಾಜ್ಯ, ಮದ್ರಾಸ್ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ರಾಜ್ಯದೊಂದಿಗೆ ಏಕೀಕರಿಸಲ್ಪಟ್ಟವು. ಆದರೆ, ಏಕೀಕರಣದ ಸಮಯದಲ್ಲಿ ಕೆಲವು ಪ್ರದೇಶಗಳನ್ನು ಸೇರಿಸಲಾಗಲಿಲ್ಲ. 1909ರ ಬ್ರೀಟಿಷರ ನಕ್ಷೆಯಲ್ಲಿ ಇಂದಿನ ಗೋವಾ, ಬೆಳಗಾವಿ, ಕೊಲ್ಹಾಪುರ ಮತ್ತು ಸೋಲಾಪುರ ಸಹ ಕರ್ನಾಟಕಕ್ಕೆ ಸೇರಿದ್ದವು. ಆದರೆ ಆಧುನಿಕ ಕರ್ನಾಟಕವು ಅದರಲ್ಲಿ ಬೆಳಗಾವಿಯನ್ನು ಮಾತ್ರ ಒಳಗೊಂಡಿದೆ ಇದು ಕನ್ನಡಿಗರ ದುರಂತ.

ವಿಶಿಷ್ಟ ಬುಡಕಟ್ಟು ಜನಾಂಗ

ವಿಶಿಷ್ಟ ಬುಡಕಟ್ಟು ಜನಾಂಗ

ಈ ನಾಸಿಕ್ ಜಿಲ್ಲೆಯಲ್ಲಿ 'ಹಟ್ಕರ್ ಕನ್ನಡಿ' ಜನರು ಎಂಬ ವಿಶಿಷ್ಟ ಬುಡಕಟ್ಟು ಜನಾಂಗವಿದೆ. ಮಾತನಾಡುವ ಕನ್ನಡದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕಾರಣ ಅವರಿಗೆ ಈ ಹೆಸರಿಡಲಾಗಿದೆ. ಇಂದಿಗೂ ಅಲ್ಲಿನ ಜನರು ಹಳೆಯ ಕನ್ನಡಿಯನ್ ಭಾಷೆಯನ್ನು ಮಾತನಾಡುವ ಕೆಲ ಜನಗಳನ್ನ ಕಾಣಬಹುದು, ಉತ್ತರ ಮಹಾರಾಷ್ಟ್ರದ ನಾಸಿಕ್ ಪ್ರದೇಶವು ಕೆಲವು ದಶಕಗಳ ಹಿಂದೆ ಸ್ಪಷ್ಟ ಹಳೆಗನ್ನಡ ಮಾತಾಡುವ ಸಾವಿರರರು ಜನಸಂಖ್ಯೆ ಅಲ್ಲಿತ್ತು.

ಉತ್ತರ ಮಹಾರಾಷ್ಟ್ರದ ನಾಸಿಕ್ ಬಳಿಯಿರುವ ‘ಹಟ್ಕರ್-ಕನದಿ' ಎಂಬ ಬುಡಕಟ್ಟು ಜನಾಂಗದವರು ಮಾತನಾಡುವ ನಾಲಿಗೆಯ ಭಾಷಾ ಅಧ್ಯಯನವನ್ನು ಆಧರಿಸಿದೆ ಎಂದು ಅವರು ಹೇಳಿದರು. "ಹೊಸ ಕನ್ನಡದಲ್ಲಿ,‘ ಮಗ 'ಮತ್ತು‘ ಮಗಳು 'ಗೆ ಸಮಾನ ಪದಗಳಿದ್ದರೂ,‘ ಪುತ್ರರಿಗೆ ಅಥವಾ ಪುತ್ರಿಯರಿಗೆ 'ಯಾವುದೇ ಪದಗಳಿಲ್ಲ ಆದರೆ ಆ ಹಟ್ಕರ್ ಜನಾಂಗ ಮಾತಾಡುವ ಕನ್ನಡದಲ್ಲಿ ಮಗಂದಿರ್ ಮಗಳ್ದಿರ್ ಎಂಬ ಪದಗಳ ಶ್ರೀಮಂತಿಕೆಯನ್ನ ಕಾಣಬಹುದು.

ನಾಗಪುರದ ಹೋಲಿಯ ಎಂಬ ವರ್ಗದ ಜನ ಕನ್ನಡ ಮಾತನಾಡುತ್ತಿರುವುದನ್ನು ನೂರು ವರ್ಷಗಳ ಹಿಂದೆ ಗ್ರಿಯರ್ಸನ್ ದಾಖಲಿಸಿದ್ದಾನೆ, 1901 ರ ಜನಗಣತಿಯ ಪ್ರಕಾರ ಇದನ್ನು ಮಹಾರಾಷ್ಟ್ರದ (ವಿದರ್ಭ) ನಾಗ್ಪುರ ಮತ್ತು ಭಂಡಾರ ಜಿಲ್ಲೆಗಳಲ್ಲಿ ಮತ್ತು ಮಧ್ಯಪ್ರದೇಶದ ಸಿಯೋನಿ ಮತ್ತು ಬಾಲಘಾಟ್ ಜಿಲ್ಲೆಗಳಲ್ಲಿ ಸುಮಾರು 3,614 ಜನರು ನಾವು ಹೋಲಿಯ ಕನ್ನಡ ಜನಾಂಗ ಅಂತ ಹೇಳಿಕೊಂಡಿದ್ದರು.

ಮೂಲ ಕನ್ನಡಿಗರು ಇದ್ದಾರೆ

ಮೂಲ ಕನ್ನಡಿಗರು ಇದ್ದಾರೆ

ಮುಂಬೈ ಮೂಲ ನಿವಾಸಿಗಳಾದ ಕೋಳಿ ಮೀನುಗಾರ ಜನಾಂಗದ ಆಡು ಭಾಷೆ ಕನ್ನಡ. . ಕೋಳಿ ಜನಾಂಗದ ಆರಾಧ್ಯ ದೈವ ಮುಂಡಾದೇವಿ ನೆಲಸಿರುವ ಸ್ಥಳ ಮಲಾರ್ ಹಿಲ್ಸ್ ಕರ್ನಾಟಕದ ಮಲೆಬಾರ್ (ಗುಡ್ಡಗಾಡು ನಿವಾಸಿಗಳು) ಜನಾಂಗ ಅಲ್ಲಿ ನೆಲೆಸಿದ್ದರಿಂದ ಆ ಹೆಸರು ಬಂದಿತು. ಅಲ್ಲಿರುವ ಬಂಡೆಗಳ ಸಂದಿನಲ್ಲಿರುವ ಒಂದು ನೀರಿನ ಗುಂಡಿಗೆ ಶ್ರೀ ಗುಂಡಿ ಎನ್ನುತ್ತಾರೆ. ಕ್ರಿ.ಶ ೧೮೧೮ರಲ್ಲಿ ಮೌಂಟ್ ಸ್ಟುವರ್ಟ್ ಎಲ್ಫಿನ್‌ಸ್ಟನ್‌ನು ಗವರ್ನರ ಆಗಿ ಅಧಿಕಾರ ವಹಿಸಿಕೊಳ್ಳಲು ಮುಂಬೈಗೆ ಬಂದಾಗ ಅಲ್ಲಿನ ನಾಗರಿಕರು ಒಪ್ಪಿಸಿದ ಸನ್ಮಾನ ಪತ್ರ ಸಹ ಕನ್ನಡದಲ್ಲಿತ್ತು, ಮುಂಬೈ ಉಪನಗರವಾದ ಡೊಂಬಿವಳ್ಳಿ ಕನ್ನಡದ ಡೊಂಬಿವಳ್ಳಿ ಲೋನಾವಳ ಸಹ ಲೋಣವಳ್ಳಿ ದಕ್ಷಿಣ ಮಹಾರಾಷ್ಟ್ರದ ಸಿಂಧು ದುರ್ಗ, ಕೊಲ್ಲಾಪುರ, ಸಾಂಗ್ಲಿ, ಸತಾರಾ, ಉಸ್ಮಾನಾಬಾದ್, ಸೊಲ್ಲಾಪುರ, ಲಾತೂರ್, ನಾಂದೇಡ ಜಿಲ್ಲೆಗಳ ಹಿಂದಿನ ಶಾಸನಗಳಲ್ಲಿ ಸಂಪೂರ್ಣ ಕನ್ನಡವೇ ಆಗಿದ್ದು, ಅಲ್ಲಿ ಇನ್ನೂ ಸಾಕಷ್ಟು ಮೂಲ ಕನ್ನಡಿಗರು ಇದ್ದಾರೆ.

ಕನ್ನಡ ಹೆಸರಿನ ಊರುಗಳು

ಕನ್ನಡ ಹೆಸರಿನ ಊರುಗಳು

ಮಹಾರಾಷ್ಟ್ರದ ಸಂಶೋಧಕ ರಾಜವಾಡೆ ಹೇಳುವ ಪ್ರಕಾರ ಆ ರಾಜ್ಯದ ನೂರಕ್ಕೆ ಐವತ್ತರಷ್ಟು ಹಳ್ಳಿ ಪಟ್ಟಣಗಳ ಹೆಸರು ಕನ್ನಡ ಆಗಿವೆ. ರತ್ನಗಿರಿ, ರಾಯಗಡ, ಸಿಂಧುದುರ್ಗ, ನಾಸಿಕ, ಜಲಗಾಂವ್, ಅಮರಾವತಿ, ನಾಗಪುರ, ಸಾಂಗ್ಲಿ, ಸೊಲ್ಲಾಪುರ, ಬಸ್ಮಾನಾಬಾದ್ ನಾಂದೇಡ ಜಿಲ್ಲೆಗಳವರೆಗೆ ಎಲ್ಲಾ ಕಡೆಗೂ ಅಚ್ಚ ಕನ್ನಡದ ಸ್ಥಳ ನಾಮಗಳು ಅಥವಾ ಕನ್ನಡ ಪದಗಳಿರುವ ಸ್ಥಳ ನಾಮ ದೊರಕುತ್ತವೆ. ನಾಸಿಕ ಜಿಲ್ಲೆಯ ಭಗೂರ್, ಕೋಮಾರ್, ಮಲೆಗಾಂವ, ನುಪೂರ್, ಪುಣೆ ಜಿಲ್ಲೆಯ ಸಿರೂರ್, ಜತೂರ್, ಮಳಾವರಿ, ಔರಂಗಾಬಾದ್ ಜಿಲ್ಲೆಯ ಅಂತೂರ್, ರತ್ನಗಿರಿ ಜಿಲ್ಲೆಯ ನರೂರ್, ಕೂಡಲ್, ಕೋಗಳೆ ದೂಲಿಯ ಜಿಲ್ಲೆಯ ನೀರಗುಡಿ, ಮಾಳೆಗಾಂವ್, ವಾರ್ಧಾ ಜಿಲ್ಲೆಯ ಜೋಗ್, ನಾಗಪುರ ಜಿಲ್ಲೆಯ ಸಿರಸಿ, ಮಾಳೆಗಾಂವ್ ಕೆಲವು ಉದಾಹರಣೆ ಅಲ್ಲದೆ ಕಲ್ಮಡ, ಅಕ್ಕಲಕೊಪ್ಪ ದೇವಿಕೊಪ್ಪ, ಉಳವಿ ದೋಣಿ ಮೊಸಳೆ, ನೀರ್ಗುಂಡಿ, ಕಳಸ ಸಂಗಮ, ಬ್ರಹ್ಮನಾಳ, ಕುರಡಿವಾಡಿ ಫಾಣಗಾಪುರ ಮೂಲ ಹೆಸರಿನ ಊರುಗಳಿವೆ.

ಹೀಗೆ ಕೆದುಕುತ್ತ ಹೋದರೆ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಗುರುತು ಹೆಚ್ಚುತ್ತಾ ಹೋಗುತ್ತೆ. ಆದರೆ ಇದೆಲ್ಲವೂ ತಿಳಿದು ಬೆಳಗಾವಿ ನನ್ನದು ಎನ್ನುವ ಮಹಾರಾಷ್ಟ್ರದವರ ಧೋರಣೆ ಕನ್ನಡಿಗರಿಗೆ ಸವಾಲಾಗಿದೆ. ಇತಿಹಾಸ ಭಾಷೆ ಅರಿವು ಇಟ್ಟುಕೊಂಡು ಮರಾಠಿಗರು ಕನ್ನಡಿಗರಲ್ಲಿ ಬೇರೆಯಬೇಕಾಗಿದೆ, ಇದನ್ನೆಲ್ಲಾ ತಿಳಿದು ಕೂಡ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ ಹೋಗಬಾರದು.

English summary
We should understand Maharashtra and Karnataka relationship. Discussion began about border dispute between two states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X