ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಭರಣವೂ ನಿಮ್ಮ ತ್ವಚೆಗೆ ಘಾಸಿ ಮಾಡಬಹುದು!

|
Google Oneindia Kannada News

ನಮ್ಮ ತ್ವಚೆಗೆ ಕೆಲವೊಮ್ಮೆ ಆಭರಣಗಳು ಕೂಡ ಮಾರಕವಾಗುತ್ತವೆ ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ತಮ್ಮನ್ನು ಕಾಡುತ್ತಿರುವುದು ಆಭರಣಗಳ ಅಲರ್ಜಿ ಎಂಬುದು ಗೊತ್ತಾಗುವ ಹೊತ್ತಿಗೆ ಕತ್ತಿನ ಭಾಗವನ್ನು ಕೆರೆದುಕೊಂಡು ಗಾಯ ಮಾಡಿಕೊಂಡು ಬಿಟ್ಟಿರುತ್ತಾರೆ.

ಕೆಲವು ಆಭರಣಗಳು ತ್ವಚೆಗೆ ಹೊಂದಿಕೆಯಾಗದ ಕಾರಣ ಸಮಸ್ಯೆಗಳು ಕಂಡು ಬರುತ್ತವೆ. ಅದರಲ್ಲೂ ಸಾಮಾನ್ಯವಾಗಿ ಮಹಿಳೆಯರು ಕತ್ತು, ಕಿವಿ, ಬೆರಳು, ಮೂಗು ಮತ್ತು ಕೈಗಳಿಗೆ ಆಭರಣಗಳನ್ನು ಧರಿಸುವುದರಿಂದಾಗಿ ಆ ಜಾಗಗಳಲ್ಲಿ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ.

ಚಿನ್ನದ ಬೆಲೆ ಮತ್ತಷ್ಟು ಕುಸಿತ: ಆಭರಣ ಖರೀದಿದಾರರಿಗೆ ಸುವರ್ಣಾವಕಾಶಚಿನ್ನದ ಬೆಲೆ ಮತ್ತಷ್ಟು ಕುಸಿತ: ಆಭರಣ ಖರೀದಿದಾರರಿಗೆ ಸುವರ್ಣಾವಕಾಶ

ಕೆಲವರಿಗೆ ಇದು ಆಭರಣಗಳಿಂದ ಕಾಣಿಸಿಕೊಂಡ ಸಮಸ್ಯೆ ಎಂಬುದು ಗೊತ್ತಾಗುವುದಿಲ್ಲ ಹಾಗಾಗಿ ಅವರು ಆಭರಣ ಹಾಕಿಕೊಂಡೇ ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಪಡೆಯುತ್ತಾ ಹೋಗುತ್ತಾರೆ.

ಪಿಪಿಇ ಕಿಟ್ ಧರಿಸಿ 25 ಕೆ.ಜಿ. ಚಿನ್ನ ಕಳ್ಳತನ; ಸಿಸಿ ಟಿ.ವಿಯಲ್ಲಿ ಸೆರೆಸಿಕ್ಕ ದೃಶ್ಯಪಿಪಿಇ ಕಿಟ್ ಧರಿಸಿ 25 ಕೆ.ಜಿ. ಚಿನ್ನ ಕಳ್ಳತನ; ಸಿಸಿ ಟಿ.ವಿಯಲ್ಲಿ ಸೆರೆಸಿಕ್ಕ ದೃಶ್ಯ

 Jewellery May Infect Skin We Should Care About This

ತಲೆನೋವು ತಂದ ಮೂಗುತಿ; ಮಹಿಳೆಯೊಬ್ಬರಿಗೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಅದು ಏತಕ್ಕೆ ಬರುತ್ತದೆ ಎಂಬುದರ ಬಗ್ಗೆ ತಿಳಿಯಲು ಎಲ್ಲ ರೀತಿಯ ಪರೀಕ್ಷೆ ಮಾಡಲಾಯಿತು. ಎಲ್ಲವೂ ನಾರ್ಮಲ್ ಇತ್ತು. ಕೊನೆಗೆ ಆಕೆ ಧರಿಸಿದ ವಜ್ರದ ಮೂಗುತಿಯೇ ಆಕೆಯ ತಲೆನೋವಿಗೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಯಿತು.

5 ವರ್ಷದಿಂದ ಮುಚ್ಚಲಾಗಿದ್ದ ಮಳಿಗೆಯಿಂದ 140 ಕೋಟಿಯಷ್ಟು ಚಿನ್ನ, ವಜ್ರ ಕಳವು5 ವರ್ಷದಿಂದ ಮುಚ್ಚಲಾಗಿದ್ದ ಮಳಿಗೆಯಿಂದ 140 ಕೋಟಿಯಷ್ಟು ಚಿನ್ನ, ವಜ್ರ ಕಳವು

ಹೀಗೆ ಕೆಲವೊಮ್ಮೆ ನಾವು ಇಷ್ಟಪಟ್ಟು ಧರಿಸುವ ಆಭರಣವೂ ನಮಗೆ ತೊಂದರೆ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ವೈದ್ಯಲೋಕದಲ್ಲಿ ಆಭರಣಗಳ ಅಲರ್ಜಿಯನ್ನು ಡರ್ಮಟಿಟಿಸ್ನ ಎಂದು ಕರೆಯಲಾಗುತ್ತದೆ. ಕೆಲವೊಂದು ವಸ್ತುವು ನಮ್ಮ ತ್ವಚೆಗೆ ಹೊಂದಾಣಿಕೆಯಾಗುವುದಿಲ್ಲ. ಆಗ ಇಂತಹ ಅಲರ್ಜಿಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಚಿನ್ನ ಸೇರಿದಂತೆ ದುಬಾರಿ ಲೋಹದ ಆಭರಣಗಳ ತಯಾರಿಕೆ ವೇಳೆ ಬಳಸಲಾಗುವ ನಿಕ್ಕಲ್ ಈ ಅಲರ್ಜಿಗೆ ಕಾರಣ ಎಂದು ಹೇಳಲಾಗುತ್ತದೆ.

ನಿಕ್ಕಲ್ ಅಲರ್ಜಿ ತರಬಹುದು; ಚಿನ್ನ ಮತ್ತು ಬೆಳ್ಳಿ ಆಭರಣಗಳಲ್ಲಿ ನಿಕ್ಕಲ್ ಬಳಕೆಯಾಗುವುದರಿಂದ ಅದು ತ್ವಚೆಗೆ ತೊಂದರೆಕೊಡುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಆಭರಣಗಳು ಮತ್ತು ಅದರಲ್ಲಿರುವ ನಿಕ್ಕಲ್ ಮುಂತಾದ ಲೋಹಗಳಿಗೆ ತ್ವಚೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತದೆಯಂತೆ ಆಗ ಆಭರಣ ಅಲರ್ಜಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

 Jewellery May Infect Skin We Should Care About This

ಕೆಲವೊಮ್ಮೆ ಆಭರಣದ ಕೆಲ ಭಾಗಗಳಲ್ಲಿರುವ ಲೋಹಗಳು ಮತ್ತು ಅವುಗಳ ಘರ್ಷಣೆ, ಲೋಹದ ಕಣಗಳು, ಸೋಪ್, ಧೂಳು ಮುಂತಾದವು ಕೂಡ ತ್ವಚೆಗೆ ಸರಿಹೊಂದದೆ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ತುರಿಕೆ ಮತ್ತು ಸಣ್ಣಗಿನ ಕಜ್ಜಿಗಳು ಕಂಡು ಬಂದು ಅಸಹ್ಯ ಹುಟ್ಟಿಸಲೂ ಬಹುದು. ಇದು ಎಲ್ಲರಲ್ಲಿ ಕಾಣಿಸುವುದಿಲ್ಲ ಬದಲಿಗೆ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಸ್ವಚ್ಛತೆ ಕೊರತೆ ಮಾರಕವಾಗಬಹುದು; ಆಭರಣ ಧರಿಸುವ ಕಿವಿ, ಕುತ್ತಿಗೆ, ಬೆರಳುಗಳಲ್ಲಿ ಆಭರಣ ಧರಿಸಿದ ಸಂದರ್ಭ ತುರಿಕೆ, ಕಜ್ಜಿಗಳು ಕಾಣಿಸಿದರೆ ಅದನ್ನು ಆಭರಣ ಅಲರ್ಜಿ ಎನ್ನಬಹುದಾದರೂ ಕೆಲವೊಮ್ಮೆ ಸ್ವಚ್ಛತೆಯ ಕೊರತೆಯಿಂದಲೂ ಈ ತೊಂದರೆ ಕಾಣಿಸಬಹುದು.

ಆಭರಣ ಧರಿಸಿದ ಭಾಗಗಳು ಕೆಂಪಾಗುತ್ತವೆ, ಚಿಕ್ಕದಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ತ್ವಚೆ ದಪ್ಪವಾದಂತೆ ಭಾಸವಾಗುವುದು ಹೀಗೆ ಕೆಲವೊಂದು ಲಕ್ಷಣಗಳು ಕಾಣಿಸಬಹುದು. ಕೆಲವರಿಗೆ ಚಿನ್ನಾಭರಣ ಧರಿಸಿದರೆ ಯಾವುದೇ ಸಮಸ್ಯೆ ಕಾಣಿಸದೆ ಇತರೆ ಫ್ಯಾನ್ಸಿ ಆಭರಣಗಳನ್ನು ಧರಿಸಿದಾಗ ಸಮಸ್ಯೆಗಳು ಕಾಣಿಸಬಹುದು.

ಸಾಮಾನ್ಯವಾಗಿ ಚಿನ್ನದ ಒಡವೆ ಧರಿಸುವವರಿಗೆ ಇಂತಹ ಸಮಸ್ಯೆ ಕಡಿಮೆಯೇ ಆದರೆ ಫ್ಯಾನ್ಸಿ ಆಭರಣಗಳನ್ನು ಧರಿಸುವವರು ಇಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ನಮ್ಮ ತ್ವಚೆಗೆ ಯಾವುದು ಹೊಂದಿಕೆಯಾಗದೆ ಸಮಸ್ಯೆ ನೀಡುತ್ತದೆಯೋ ಅಂತಹ ಆಭರಣಗಳನ್ನು ಧರಿಸದಿರುವುದು ಒಳಿತು.

ತ್ವಚೆಗೆ ಹೊಂದುವ ಆಭರಣ ಧರಿಸಿ; ಇಂತಹ ಸಮಸ್ಯೆಗಳು ಕಂಡು ಬಂದರೆ ಚರ್ಮ ರೋಗದ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇತ್ತೀಚೆಗಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬಳಕೆಗಿಂತ ಇತರೆ ಲೋಹಗಳ ಬಳಕೆ ಜಾಸ್ತಿಯಾಗಿರುವುದರಿಂದ ಕೆಲವು ಲೋಹಗಳು ತ್ವಚೆಗೆ ಸರಿ ಹೊಂದದೆ ಸಮಸ್ಯೆಗಳನ್ನು ತರಬಹುದು.

ನೀವು ಯಾವ ಲೋಹ ಧರಿಸುತ್ತೀರೋ ಅದು ತ್ವಚೆಗೆ ಹೊಂದಿಕೆಯಾದರೆ ಮಾತ್ರ ಬಳಸಿ ಇಲ್ಲದೆ ಹೋದರೆ ಅಂತಹುಗಳಿಂದ ದೂರ ಇರುವುದೇ ಒಳಿತು. ಏಕೆಂದರೆ ಅವುಗಳನ್ನು ಧರಿಸಿ ತ್ವಚೆಯನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಧರಿಸದರಿರುವುದೇ ಜಾಣತನ.

English summary
Jewellery may be infect your skin. Women should careful in the time of wearing gold and diamond Jewellery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X