ಜಯನಗರದ ಮಕ್ಕಳು ಒಲಂಪಿಕ್ಸ್ ಮೆಡಲ್ ಗೆಲ್ಲಬೇಕಂತಾರೆ ವಿಜಯಕುಮಾರ್

Posted By:
Subscribe to Oneindia Kannada
   ಬಿ ಎನ್ ವಿಜಯ್ ಕುಮಾರ್ ಜಯನಗರ ಎಂ ಎಲ್ ಎ ಬೆಂಗಳೂರಿನ ಬಗ್ಗೆ ಮಾತನಾಡಿದ್ದು ಹೀಗೆ | Oneindia Kannada

   ಬೆಂಗಳೂರು, ಡಿಸೆಂಬರ್ 26 : "ಭಾರತದ ಅದರಲ್ಲೂ ಬೆಂಗಳೂರಿನ, ಇನ್ನೂ ಸ್ಪಷ್ಟವಾಗಬೇಕು ಹೇಳಬೇಕು ಅಂದರೆ ಜಯನಗರದ ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ಚೀನಾ, ಕೆನಡಾದವರು ಒಲಂಪಿಕ್ಸ್ ನಲ್ಲಿ ಮಾಡುವ ರೀತಿಯಲ್ಲಿ ನಮ್ಮ ದೇಶದ ಸಾಧನೆ ಮಾಡಬೇಕು".

   ಸಿಎಂ ಬಗ್ಗೆ ಬಿಜೆಪಿ ಎಂಎಲ್ಎ ಹೇಳಿದ್ದೇನು: ವಿಜಯ್ ಕುಮಾರ್ ಸಂದರ್ಶನ

   -ಅರೇ ಇದ್ಯಾರೋ ಜಯನಗರದ ಕ್ರೀಡಾಳುವೊಬ್ಬರ ಅಭಿಪ್ರಾಯದಂತಿದೆ ಅಂತ ನೀವು ಅಂದುಕೊಂಡರೆ ಆ ಊಹೆ ತಪ್ಪು. ಈ ಮಾತು ಹೇಳಿದವರು ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್. ರಾಜಕೀಯ, ಚುನಾವಣೆ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಸಹಜ. ಆದರೆ ಒನ್ಇಂಡಿಯಾ ಕನ್ನಡದಿಂದ ಕ್ರೀಡೆ- ಸಿನಿಮಾದ ಅವರ ಆಸಕ್ತಿ ಹಾಗೂ ಪ್ರೀತಿ ಬಗ್ಗೆ ಪ್ರಶ್ನೆ ಕೇಳಿದಾಗ ಸಿಕ್ಕ ಉತ್ತರವಿದು.

   Jayanagar MLA Vijaykumar

   ಮಕ್ಕಳು ಮನೆಗಳಿಂದ ಆಚೆ ಬಂದು, ಬೀದಿಯಲ್ಲಿ- ಮೈದಾನದಲ್ಲಿ ಆಟವಾಡಬೇಕು ಎನ್ನುವ ಅವರು, ಸಿನಿಮಾ ಬಗ್ಗೆ ತಮಗೆ ಅಸಡ್ಡೆಯೂ ಇಲ್ಲ, ಭಾವುಕ ಎನಿಸುವಂಥ ಪ್ರೀತಿಯೂ ಇಲ್ಲ. ಸಮಾಜಕ್ಕೆ, ದೇಶಕ್ಕೆ, ಈ ದೇಶದ ಮಕ್ಕಳಿಗೆ ಏನು ಸಂದೇಶ ನೀಡಬೇಕೋ ಅದನ್ನು ನೀಡಿದರೆ ಸಂತೋಷ ಪಡುತ್ತೇನೆ ಎನ್ನುತ್ತಾರೆ ವಿಜಯಕುಮಾರ್.

   ನಮ್ಮ ಶಾಸಕರೊಬ್ಬರು ಕ್ರೀಡೆ, ಮೈದಾನಗಳು, ಮಕ್ಕಳ ಬಗ್ಗೆ ಮಾತನಾಡುವುದೇ ವಿರಳ. ಅಂಥದ್ದರಲ್ಲಿ ವಿಜಯಕುಮಾರ್ ಅವರ ಮಾತು ವಿಭಿನ್ನವಾಗಿದೆ, ಆಲೋಚನೆ ಮಾದರಿ ಅನಿಸುವಂತಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bengaluru, particularly Jayanagar children's should win Olympics medal, this is the wish of Jayanagar MLA B.N.Vijayakumar. He shares wishes with One India Kannada.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ