ಕೇಂದ್ರೀಯ ವಿವಿಗಳ ಪದವಿ ಪ್ರವೇಶಕ್ಕೆ CUET: ರಾಜ್ಯದಲ್ಲಿ SUET ಬಂದ್ರೆ ಪಿಯುಸಿ ಕಥೆ ಏನು?
ಬೆಂಗಳೂರು, ಏ. 05 : ಕೇಂದ್ರೀಯ ವಿದ್ಯಾಲಯಗಳಲ್ಲಿ ಪದವಿ ಕೋರ್ಸ್‌ಗಳಿಗೆ ಪರಿಚಯಿಸಿರುವ CUET ಕೇಂದ್ರೀಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ರಾಜ್ಯ ವಿಶ್ವ ವಿದ್ಯಾಲಯಗಳಿಗೂ ವಿಸ್ತರಣೆಯಾಗಲಿದೆಯಾ? ಒಂದು ವೇಳೆ ರಾಜ್ಯದ ವಿಶ್ವ ವಿದ್ಯಾಲಯಗಳಿಗೆ SUET ಪರಿಚಯಿಸಿದಲ್ಲಿ ಭವಿಷ್ಯದಲ್ಲಿ ಪಿಯುಸಿ ಅಂಕಗಳು ಮಹತ್ವ ಕಳೆದುಕೊಳ್ಳಲಿದೆಯಾ? ಈ ವಿಚಾರ ಇದೀಗ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಈ ಕುರಿತ ವಾಸ್ತವ ಚಿತ್ರಣ ಇಲ್ಲಿ ನೀಡಲಾಗಿದೆ.
ಏನಿದು ಸಿಯುಇಟಿ:
2022-23ನೇ ಸಾಲಿನಿಂದ ಕೇಂದ್ರೀಯ ವಿದ್ಯಾಲಯಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಯುಇಟಿ ಕಡ್ಡಾಯಗೊಳಸಿಲಾಗಿದೆ. ಬಿಎ, ಬಿಕಾಂ, ಬಿಎಸ್ ಸಿ ಸೇರಿದಂತೆ ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪಡೆಯಲು ಇಚ್ಛಿಸುವರು ಸಿಯುಇಟಿ ಪರೀಕ್ಷೆ ಬರೆಯಬೇಕು. ಪಿಯುಸಿ ಅಂಕ ಹಾಗೂ ಸಿಯುಇಟಿಯಲ್ಲಿ ಪಡೆದ ಅಂಕ ಪರಿಗಣಿಸಿ ಪದವಿ ಸೀಟು ಮಂಜೂರು ಮಾಡಲಾಗುತ್ತದೆ. ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿದ್ಯಾಲಯ ಸೇರಿ ದೆಶದ 40 ವಿಶ್ವ ವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿನ ಪದವಿ ಕೋರ್ಸ್‌ಗಳಿಗೆ ಸಿಯುಇಟಿ ಪರಿಚಯಿಸಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಜತೆಗೆ ಸ್ವತಂತ್ರ ಡೀಮ್ಡ್ ವಿವಿಗಳು ಸಹ ಈ ಪ್ರವೇಶ ಪರಿಕ್ಷೆಯನ್ನು ಪರಿಚಯಿಸಲಿವೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ SUET ಜಾರಿ ಗೊಂದಲ:
ಕೇಂದ್ರೀಯ ವಿದ್ಯಾಲಯಗಳ ಪದವಿ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ಪರಿಚಯಿಸಿರುವ ಸಿಯುಇಟಿ ಮಾದರಿಯಲ್ಲಿ ರಾಜ್ಯದ ವಿವಿಗಳಿಗೆ ರಾಜ್ಯ ವಿಶ್ವ ವಿದ್ಯಾಲಯಗಳ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳ ಪ್ರವೇಶಕ್ಕೆ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಪರಿಚಯಿಸಲಾಗುತ್ತಿದೆ. ಇದಕ್ಕೆ ಕೆಲವು ವಿವಿಗಳು ಸಮ್ಮತಿಸಿವೆ ಎಂದೇ ಹೇಳಲಾಗುತ್ತಿದೆ. ಆದರೆ ವಾಸ್ತವ ಚಿತ್ರಣವೇ ಬೇರೆಯದ್ದೇ ಇದೆ.

ರಾಜ್ಯದಲ್ಲಿ ಎಸ್‌ಯುಇಟಿ ಜಾರಿ ಬಗ್ಗೆ ಈವರೆಗೂ ಯಾವುದೇ ಆದೇಶ ಉನ್ನತ ಶಿಕ್ಷಣ ಇಲಾಖೆಯಿಂದ ಬಂದಿಲ್ಲ. ರಾಜ್ಯ ವಿವಿಗಳಿಗೆ SUET ಪರಿಚಯಿಸುವುದು ಅಸಾಧ್ಯ. ಶಿಕ್ಷಣ ರಾಜ್ಯ ಮತ್ತು ಕೇಂದ್ರ ಪಟ್ಟಿಯಲ್ಲಿ ಬರುವ ವಿಚಾರ. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಈ ನಿರ್ಣಯ ಕೈಗೊಳ್ಳಬೇಕು. ವಾಸ್ತವದಲ್ಲಿ ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುವ ಸರ್ಕಾರಿ ಪದವಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯ ವಿರುವ ಪದವಿ ಸೀಟುಗಳು ತುಂಬುತ್ತಿಲ್ಲ. ಸೀಟುಗಳಿಗಿಂತಲೂ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಹೀಗಾಗಿ ಕೇಂದ್ರೀಯ ವಿದ್ಯಾಲಯಗಳಿಗೆ ಪರಿಚಯಿಸಿರುವ ಪದವಿ ಪ್ರವೇಶ ಪರೀಕ್ಷೆ ರಾಜ್ಯದಲ್ಲಿ ಪರಿಚಯಿಸುವ ಪ್ರಮೇಯವೇ ಬೀಳುವುದಿಲ್ಲ. ಪಿಯುಸಿ ಮಹತ್ವ ಕಳೆದುಕೊಳ್ಳುತ್ತದೆ ಎಂಬುದು ಸತ್ಯಕ್ಕೆ ದೂರವಾದದು ಎಂದು ತುಮಕೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಸಿದ್ದೇಗೌಡ ಅವರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.
''ರಾಜ್ಯದಲ್ಲಿ ಪ್ರಸ್ತುತ ಎನ್ಇಪಿ ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯ ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರೀಯ ವಿದ್ಯಾಲಯಗಳಿಗೆ ಪರಿಚಯಿಸಿರುವ ಸಿಯುಇಟಿ ಮಾದರಿ ಪ್ರವೇಶ ಪರೀಕ್ಷೆ ರಾಜ್ಯದ ವಿವಿಗಳಿಗೆ ಪರಿಚಯಿಸುತ್ತಾರೆ ಎಂಬ ಪ್ರಸ್ತಾಪವೇ ಇನ್ನೂ ಬಂದಿಲ್ಲ. ಈ ಕುರಿತು ಯಾವುದೇ ತೀರ್ಮಾನಗಳು ವಿವಿ ಹಂತದಲ್ಲಿ ಅಗಿಲ್ಲ,'' ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

ಗೊಂದಲ ಬೇಡ :
ಸದ್ಯದ ಸ್ಥಿತಿಯಲ್ಲಿ ರಾಜ್ಯದ ಪದವಿ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಮೊದಲ ವರ್ಷದ ಜಾರಿಯಲ್ಲಿ ಕೆಲವು ಅಡೆತಡೆಗಳಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ತುಂಬಾ ಚೆನ್ನಾಗಿದೆ. ಆದರೆ, ಅದರ ಅನುಷ್ಠಾನದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ಇದನ್ನು ಸರಿ ಪಡಿಸಿ ಉತ್ತಮ ರೀತಿಯಲ್ಲಿ ಜಾರಿಮಾಡಿದರೆ ಸಾಕು ಎನ್ನುವಂತಹ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಸಿಯುಇಟಿ ಮಾದರಿಯಲ್ಲಿ ರಾಜ್ಯದ ವಿವಿಗಳಲ್ಲಿ ಎಸ್ ಯುಇಟಿ ಜಾರಿ ಮಾಡುವುದು ಅಪ್ರಸ್ತುತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಎನ್ಇಪಿ ಸಮರ್ಥ ಜಾರಿ ಮಾಡುವತ್ತ ಇಲಾಖೆ ಹೆಚ್ಚು ಮಹತ್ವ ಕೊಡಬೇಕು ಎಂದು ಮೈಸೂರು ಮಹಾಜನ್ ಕಾಲೇಜಿನ ಪ್ರೊ. ತಿಮ್ಮೇಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ ರಾಜ್ಯ ವಿಶ್ವ ವಿದ್ಯಾಲಗಳ ವ್ಯಾಪ್ತಿಗೆ ಒಳಪಟ್ಟಿರುವ ಕಾಲೇಜುಗಳ ಪದವಿ ಪ್ರವೇಶಕ್ಕೆ ಎಸ್‌ಯುಇಟಿ ಪರಿಚಯಿಸುವುದು ಅನುಮಾನ. ಈ ಹಿಂದೆ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಬೆಂಗಳೂರು ವಿವಿ ಸೇರಿದಂತೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಹಾಗಂತ ಪದವಿ ಕೋರ್ಸ್ ಗಳು ಅಸ್ತಿತ್ವ ಕಳೆದುಕೊಂಡವೇ ? ಒಂದು ವೇಳೆ ರಾಜ್ಯದ ವಿವಿಗಳ ವ್ಯಾಪ್ತಿಗೆ ಒಳಪಟ್ಟಿರುವ ಕಾಲೇಜುಗಳಲ್ಲಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ ಮಾಡಿದರೂ, ಪಿಯುಸಿ ಮಹತ್ವ ಕಳೆದುಕೊಳ್ಳುವುದಿಲ್ಲ. ಈಗಾಗಲೇ ಪಿಯುಸಿ ಆಧಾರದ ಮೇಲೆ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಸರ್ಕಾರಿ ಹುದ್ದೆಗಳ ನೇಮಕ ಸಂಬಂಧ ಪರೀಕ್ಷೆ ನಡೆಸುವುದಿಲ್ಲವೇ? ಪ್ರವೇಶ ಪರೀಕ್ಷೆ ಪರಿಚಯಿಸಿದರೂ ಪಿಯುಸಿ ಯಾವ ಮಹತ್ವ ಕಳೆದುಕೊಳ್ಳುವುದಿಲ್ಲ ಎಂದು ಶಿಕ್ಷಣ ತಜ್ಞರು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರೀಯ ವಿದ್ಯಾಲಯಗಳ ಪದವಿ ಪ್ರವೇಶಕ್ಕೆ ಈಗ ಪರಿಚಯಿಸಿರುವ ಸಿಯುಇಟಿ ಮಾದರಿಯಲ್ಲಿ ರಾಜ್ಯದ ವಿಶ್ವ ವಿದ್ಯಾಲಯಗಳ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪದವಿ ಪ್ರವೇಶ ಪರೀಕ್ಷೆ ಜಾರಿಗೆ ಬಂದಿದ್ದೇ ಅದಲ್ಲಿ, ಪಿಯುಸಿ ಅಂಕಗಳು ಮೌಲ್ಯ ಕಳೆದುಕೊಳ್ಳಬಹುದು. ಆದ್ರೆ, ಪಿಯುಸಿ ಅರ್ಹತೆ ಆಧಾರದ ಮೇಲೆ ನೇಮಕವಾಗುವ ಸರ್ಕಾರಿ ಕೆಲಸಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗಾಗಿ ಪ್ರವೇಶ ಪರೀಕ್ಷೆ ಜಾರಿಗೆ ಬಂದ್ರೂ ಪಿಯುಸಿ ಮತ್ತು ಅಂಕಗಳ ಬಗ್ಗೆ ಗೊಂದಲಕ್ಕೆ ಒಳಗಾಗುವ ಪ್ರಮೇಯವೇ ಇಲ್ಲ.

ಸಿಯುಇಟಿಗೆ ನೋಂದಣಿ ಪ್ರಕ್ರಿಯೆ ಆರಂಭ:
ಕೇಂದ್ರೀಯ ವಿದ್ಯಾಲಯಗಳಲ್ಲಿ ಪದವಿ ಓದಲು ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂದಿನಿಂದ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಮೇ. 6 ಅರ್ಜಿ ಸಲ್ಲಿಸಲು ಕೊನೆ ದಿನಾಂಕ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಕನ್ನಡದಲ್ಲಿ ಸಹ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಪದವಿ ಕೋರ್ಸ್ ಪ್ರವೇಶ ಪಡೆಯಬೇಕಾದರೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ಅಗುವುದು ಕಡ್ಡಾಯಗೊಳಿಸಲಾಗಿದೆ. ಈ ವಿಷಯವನ್ನು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ ( UGC ) ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಇತ್ತೀಚೆಗೆ ಸ್ಪಷ್ಟ ಪಡಿಸಿದ್ದರು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
SSLC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಒಟ್ಟು ಅಂಕ 625ರ ಬದಲು 525ಕ್ಕೆ ಇಳಿಕೆ, ತೃತೀಯ ಭಾಷೆಗೆ ಗ್ರೇಡ್ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
CBSE 12ನೇ ತರಗತಿಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ: ತಜ್ಞರು ಮತ್ತು ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ಮಾಹಿತಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ












Click it and Unblock the Notifications