ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ವಿಶೇಷ: ಜೆಡಿಎಸ್‍ಗೆ ಶಕ್ತಿ ತುಂಬುತ್ತಾ ಸಿ.ಎಂ. ಇಬ್ರಾಹಿಂ ಸೇರ್ಪಡೆ?

|
Google Oneindia Kannada News

ಮೈಸೂರು, ಮಾರ್ಚ್ 18: ಚುನಾವಣೆ ಸಮಯದಲ್ಲಿ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಸಿದ್ದರಾಮಯ್ಯರಿಗೆ ಪ್ರತ್ಯುತ್ತರ ನೀಡಲೆಂದೇ ಜೆಡಿಎಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರಿಗೆ ವೇದಿಕೆ ಸೃಷ್ಟಿ ಮಾಡಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷವಷ್ಟೇ ಬಾಕಿಯಿರುವುದರಿಂದ ರಾಜಕೀಯ ನಾಯಕರಿಗೆ ಮುಂದಿನ ಅಷ್ಟು ‍ದಿನಗಳು ಅಮೂಲ್ಯವಾಗಿದ್ದು, ಸಂಘಟನೆ ಜೊತೆಜೊತೆಯಲ್ಲಿಯೇ ಟೀಕೆ, ಆರೋಪ, ವಾಗ್ದಾಳಿಗಳನ್ನು ನಡೆಸಲು ನಾಯಕರು ತಯಾರಿ ನಡೆಸುತ್ತಿದ್ದಾರೆ. ಇನ್ನು ಮುಂದೆ ಎಲ್ಲ ವಿಚಾರಗಳು ರಾಜಕೀಯ ಸ್ವರೂಪ ಪಡೆದುಕೊಂಡರೆ ಅಚ್ಚರಿಪಡಬೇಕಾಗಿಲ್ಲ.

 ಕಾಂಗ್ರೆಸ್ ನಾಯಕರ ನಿದ್ದೆಗೆಡಿಸುತ್ತಿರುವ ತೃತೀಯ ರಂಗದ ಗುಮ್ಮ! ಕಾಂಗ್ರೆಸ್ ನಾಯಕರ ನಿದ್ದೆಗೆಡಿಸುತ್ತಿರುವ ತೃತೀಯ ರಂಗದ ಗುಮ್ಮ!

 ಕಾಂಗ್ರೆಸ್‌ಗೆ ನಷ್ಟ ಜೆಡಿಎಸ್‌ಗೆ ಲಾಭ?

ಕಾಂಗ್ರೆಸ್‌ಗೆ ನಷ್ಟ ಜೆಡಿಎಸ್‌ಗೆ ಲಾಭ?

ಕಾರ್ಯಕರ್ತರ ಡಿಜಿಟಲ್ ನೋಂದಣಿ ಮಾಡುತ್ತಿರುವ ಕಾಂಗ್ರೆಸ್ ಒಬ್ಬ ಕಾರ್ಯಕರ್ತ ತನ್ನ ಶ್ರಮದಲ್ಲಿ ಒಂದೇ ಒಂದು ಹೆಚ್ಚಿಗೆ ಮತ ಹಾಕಿಸುವಂತಾದರೆ ಸಾಕು ರಾಜ್ಯದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಪಡೆಯುವುದು ಕಷ್ಟವಾಗಲ್ಲ ಎಂಬ ಆಲೋಚನೆಯಲ್ಲಿದೆ. ಹೀಗಾಗಿಯೇ ಹಠಕ್ಕೆ ಬಿದ್ದವರಂತೆ ಕಾರ್ಯಕರ್ತರ ನೋಂದಣಿ ಕಾರ್ಯವನ್ನು ಮಾಡುತ್ತಿದ್ದಾರೆ.

ಈಗಾಗಲೇ ಒಂದಷ್ಟು ಮುಖಂಡರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಪರ್ವ ಮುಂದುವರೆಯುವ ಲಕ್ಷಣ ಹೆಚ್ಚಿದೆ. ಆದರೆ ಮುಸ್ಲಿಂ ಸಮುದಾಯದ ಮತ್ತು ಉತ್ತಮ ವಾಗ್ಮಿಯಾಗಿದ್ದ ಸಿ.ಎಂ. ಇಬ್ರಾಹಿಂ ಪಕ್ಷವನ್ನು ಬಿಟ್ಟು ಹೋಗಿರುವುದು ಪಕ್ಷಕ್ಕೆ ಒಂದಷ್ಟು ನಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕಾಂಗ್ರೆಸ್ ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ವಾಸ್ತವದಲ್ಲಿ ಸತ್ಯವಿದೆ. ಈಗಾಗಲೇ ರೋಷನ್ ಬೇಗ್ ಪಕ್ಷದಿಂದ ದೂರವಿದ್ದರೆ ಮಾಧ್ಯಮ ಸಂಯೋಜಕ, ಮುಸ್ಲಿಂ ಮುಖಂಡ ಸಲೀಂ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಉಗ್ರಪ್ಪ ಅವರೊಂದಿಗೆ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತಿನಲ್ಲಿಡಲಾಗಿದೆ.

 ಜೆಡಿಎಸ್ ಪ್ರಬಲವಾದರೆ ಕಾಂಗ್ರೆಸ್ ಗೆ ಕಷ್ಟ

ಜೆಡಿಎಸ್ ಪ್ರಬಲವಾದರೆ ಕಾಂಗ್ರೆಸ್ ಗೆ ಕಷ್ಟ

ಇನ್ನು ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆಯಾಗುತ್ತಿದ್ದು, ಅದು ಮುಸ್ಲಿಂ ಸಮುದಾಯದ ಮತಗಳನ್ನು ನಿಧಾನವಾಗಿ ಸೆಳೆದುಕೊಳ್ಳುತ್ತಿದೆ. ಅದು ಪ್ರಬಲವಾದಂತೆ ಕಾಂಗ್ರೆಸ್‌ಗೆ ಹೆಚ್ಚಿನ ಸವಾಲು ತಂದೊಡ್ಡಲಿದೆ. ಅಲ್ಪಸಂಖ್ಯಾತ ಮತ್ತು ದಲಿತ ಹಿಂದುಳಿದ ವರ್ಗಗಳ ಮತದಿಂದಲೇ ಗೆಲ್ಲುತ್ತಾ ಬಂದಿರುವ ಕಾಂಗ್ರೆಸ್‌ಗೆ ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಎಸ್‌ಡಿಪಿಐ ತಲೆನೋವಾಗಿ ಪರಿಣಮಿಸಿದೆ. ಇದು ಬಿಜೆಪಿಗೆ ಲಾಭವಾಗಿ ಕಾಂಗ್ರೆಸ್‌ಗೆ ಮುಳುವಾಗುತ್ತಿದೆ. ಜತೆಗೆ ಒಂದಷ್ಟು ಮತಗಳನ್ನು ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳು ಕೂಡ ಕಸಿದುಕೊಳ್ಳುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹೊಸ ಪಕ್ಷಗಳು ದಾಳಿಯಿಟ್ಟರೂ ಅಚ್ಚರಿಪಡಬೇಕಾಗಿಲ್ಲ.

ಎಷ್ಟೇ ಲೆಕ್ಕಾಚಾರಗಳನ್ನು ಕಾಂಗ್ರೆಸ್ ಮಾಡಿದರೂ ಅದಕ್ಕೆ ಮಗ್ಗುಲ ಮುಳ್ಳಾಗಿ ಜೆಡಿಎಸ್ ಚುಚ್ಚುವುದು ಖಚಿತ. ಕಳೆದ ಬಾರಿ ಜೆಡಿಎಸ್ ನಿಗ್ರಹಿಸಿದರೆ ತಮಗೆ ದಾರಿ ಸುಗಮವಾಗುತ್ತದೆ ಎಂದು ನಂಬಿದ್ದ ಕಾಂಗ್ರೆಸ್ ನಾಯಕರು ನೇರವಾಗಿ ಜೆಡಿಎಸ್ ನಾಯಕರ ಮೇಲೆಯೇ ಸಮರ ಸಾರಿದ್ದರು. ಬಿಜೆಪಿ ಮೇಲೆ ನೇರಾನೇರ ಸಮರ ಸಾರಿದರೂ ಕೂಡ ಹಾದಿ ಬೀದಿಯಲ್ಲಿ ಸಮಯ ಸಿಕ್ಕಾಗಲೆಲ್ಲ ಜೆಡಿಎಸ್ ಪಕ್ಷ ಮತ್ತು ನಾಯಕರ ಮೇಲೆ ಆರೋಪಗಳನ್ನು ಮಾಡಲಾರಂಭಿಸಿದರು.

 ಸಿದ್ದರಾಮಯ್ಯರಿಗೆ ತಿರುಮಂತ್ರವಾದ ಹೇಳಿಕೆ

ಸಿದ್ದರಾಮಯ್ಯರಿಗೆ ತಿರುಮಂತ್ರವಾದ ಹೇಳಿಕೆ

ಸಿದ್ದರಾಮಯ್ಯ ಅವರಂತೂ ನೇರವಾಗಿ ಎಚ್.ಡಿ. ದೇವೇಗೌಡರ ಮೇಲೆಯೇ ಆರೋಪಗಳ ಮಳೆಯನ್ನು ಸುರಿಸಿದ್ದರು. ಈ ರೀತಿಯ ಹೇಳಿಕೆಗಳು ಚುನಾವಣೆಗೆ ಹತ್ತಿರವಾದಂತೆಲ್ಲ ಸಿದ್ದರಾಮಯ್ಯ ಅವರಿಗೆ ತಿರುಮಂತ್ರವಾಗಲಾರಂಭಿಸಿತು. ಜೆಡಿಎಸ್‌ನವರು ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ ಎಂಬಂತೆ ಬಿಂಬಿಸಿದರೆ, ಅತ್ತ ಬಿಜೆಪಿ ನಾಯಕರು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಿದರು. ಅದಕ್ಕೆ ಇಂಬು ಕೊಡುವಂತೆ ಸಿದ್ದರಾಮಯ್ಯ ಅವರ ಹೇಳಿಕೆಗಳು ಕೂಡ ಇದ್ದವು. ಇದೆಲ್ಲದರ ಪರಿಣಾಮ ಕಾಂಗ್ರೆಸ್ ನಿರೀಕ್ಷೆಯೇ ಮಾಡದಂತೆ ನೆಲಕಚ್ಚುವಂತಾಯಿತು.

ಬಿಜೆಪಿ ಆಡಳಿತಕ್ಕೆ ಬಂದ ನಂತರ ರಾಷ್ಟ್ರವ್ಯಾಪಿಯಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೆಲ್ಲ ಘಟನೆಗಳು ನಡೆದವು? ಕಾಂಗ್ರೆಸ್ ಅವತ್ತು ಏನು ಮಾಡಿತು? ಹೀಗೆ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸ ಮಾಡಿಕೊಟ್ಟಿತು. ಅತ್ತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಗಂಭೀರ ಹೇಳಿಕೆ ನೀಡಿದರೂ ಕೂಡ ಅದು ಲಘುವಾಗಿಯೇ ಪರಿಗಣಿಸಲ್ಪಡಲಾರಂಭಿಸಿತು. ಏಕೆಂದರೆ ಸಾಮಾಜಿಕ ಜಾಲತಾಣವನ್ನು ಬಿಜೆಪಿ ಅಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿತು.

 ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಮೇಲುಗೈ

ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಮೇಲುಗೈ

ಇಂದಿಗೂ ಕಾಂಗ್ರೆಸ್ ನಾಯಕರಿಗೆ ಬಿಜೆಪಿಯ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಬಗ್ಗೆ ಭಯವಿದೆ. ಕಾಂಗ್ರೆಸ್‌ನ ಸಣ್ಣ ತಪ್ಪುಗಳನ್ನು ಹುಡುಕಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಈ ಬಗ್ಗೆ ಖುದ್ದು ಸೋನಿಯಾ ಗಾಂಧಿ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ ರಾಜ್ಯ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಮುಖಂಡ ಸಿ.ಎಂ. ಇಬ್ರಾಹಿಂ ಅವರ ವಾಗ್ಬಾಣಗಳಿಗೆ ಉತ್ತರ ಕೊಡಬೇಕಾಗಿದೆ. ಈಗಾಗಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ವೇಳೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಕುರಿತಂತೆ ಬಹಳಷ್ಟು ಆರೋಪಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮಾತಿನ ಬಾಣಗಳು ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿ ನಾಟಬಹುದು ಎಂಬುದು ಕುತೂಹಲಕಾರಿಯಾಗಿದೆ.

 ಸಿ.ಎಂ. ಇಬ್ರಾಹಿಂಗೆ ವೇದಿಕೆ ಸೃಷ್ಟಿ

ಸಿ.ಎಂ. ಇಬ್ರಾಹಿಂಗೆ ವೇದಿಕೆ ಸೃಷ್ಟಿ

ಜೆಡಿಎಸ್ ಸೇರ್ಪಡೆ ಸಂಬಂಧ ಕಾಂಗ್ರೆಸ್ ತೊರೆದಿರುವ ಸಿ.ಎಂ. ಇಬ್ರಾಹಿಂ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಬಗ್ಗೆಯೂ ಮಾತುಗಳನ್ನು ಹೇಳಿದ್ದರು. ಚುನಾವಣೆಗೆ ದಿನಗಳು ಹತ್ತಿರವಾದಂತೆಲ್ಲ ಸಿದ್ದರಾಮಯ್ಯ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸುವುದಂತು ಖಚಿತ. ಹಿಂದಿನ ಚುನಾವಣೆಗಳಲ್ಲಿ ಇದನ್ನು ರಾಜ್ಯದ ಜನ ನೋಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡಲು ಸಿ.ಎಂ. ಇಬ್ರಾಹಿಂ ಅವರಿಗೆ ವೇದಿಕೆ ತಯಾರಿ ಮಾಡುವ ಕೆಲಸ ಜೆಡಿಎಸ್‌ಲ್ಲಿ ಶೀಘ್ರದಲ್ಲಿಯೇ ಆಗುವ ಸಾಧ್ಯತೆಯಿದೆ.

English summary
Is JDS Party to become Stronger After Former Union Minister CM Ibrahim Joins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X