• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ: ಇದು ಚೀನಾ ಕೃಪಾ ಪೋಷಿತ 'ಲಾಭ' ಮಂಡಳಿಯೇ.?

|

ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು 9 ಲಕ್ಷ ದಾಟಿದೆ. ಕೋವಿಡ್-19 ನಿಂದಾಗಿ 47 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 35 ಸಾವಿರಕ್ಕೂ ಅಧಿಕ ಜನ ಈಗಲೂ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಡೆಡ್ಲಿ ಕೊರೊನಾ ವೈರಸ್ ಗೆ ಬೆದರಿ, ವಿಶ್ವದ ದೊಡ್ಡ ದೊಡ್ಡ ನಗರಗಳು ಸ್ತಬ್ಧವಾಗಿವೆ. ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ. ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿದೆ. ಒಟ್ನಲ್ಲಿ, ಕೊರೊನಾ ವೈರಸ್ ನಿಂದಾಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ.

ವುಹಾನ್ ನಿವಾಸಿಗಳು ಬಾಯ್ಬಿಟ್ಟ ಭಯಾನಕ ಸತ್ಯ: ಅಸಲಿ ಸಾವಿನ ಪ್ರಮಾಣ ಎಷ್ಟು?

ಹಲವು ರಾಷ್ಟ್ರಗಳು ಎಚ್ಚೆತ್ತುಕೊಳ್ಳವ ಮುನ್ನವೇ.. ಕೊರೊನಾ ಮರಣ ಮೃದಂಗ ಬಾರಿಸಲು ಶುರು ಮಾಡಿತ್ತು. ಅತ್ತ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಇಡೀ ವಿಶ್ವ ಹೆಣಗಾಡುತ್ತಿದ್ದರೆ, ಇತ್ತ ಚೀನಾ ಸಹಜ ಸ್ಥಿತಿಯತ್ತ ಮರಳಿದೆ. ಸಾಲದಕ್ಕೆ, ಕೊರೊನಾ ತಡೆಗಟ್ಟಲು ಬೇಕಾಗುವ ಅಗತ್ಯ ವಸ್ತುಗಳನ್ನು ಇತರೆ ದೇಶಗಳಿಗೆ ಪೂರೈಸುತ್ತಿರುವ ಚೀನಾ ಭಾರಿ ಲಾಭ ಮಾಡುತ್ತಿದೆ.

ಚೀನಾದಲ್ಲಿ ಫ್ಯಾಕ್ಟರಿಗಳಿಗೆ ಸಿಕ್ತು ಮರು ಜೀವ

ಚೀನಾದಲ್ಲಿ ಫ್ಯಾಕ್ಟರಿಗಳಿಗೆ ಸಿಕ್ತು ಮರು ಜೀವ

ಕೊರೊನಾ ವೈರಸ್ ನಿಂದಾಗಿ ಮೊದಲು ಚೀನಿಯರು ನರಳಿದ್ದೇನೋ ನಿಜ. ಆದರೆ, ಚೀನಾದಲ್ಲೀಗ ಕೊರೊನಾ ವೈರಸ್ ಸೋಂಕು ಹಿಡಿತದಲ್ಲಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಳ್ಳುತ್ತಿದೆ. ಸೋಂಕಿನ ಪ್ರಕರಣಗಳು ಗಣನೀಯವಾಗಿ ಕಮ್ಮಿಯಾಗಿರುವುದರಿಂದ ಚೀನಾದಲ್ಲಿ ಫ್ಯಾಕ್ಟರಿಗಳಿಗೆ, ಉದ್ಯಮಗಳಿಗೆ ಮರು ಚಾಲನೆ ಕೊಡಲಾಗಿದೆ.

ಗ್ಲೌಸ್, ಮಾಸ್ಕ್, ವೆಂಟಿಲೇಟರ್

ಗ್ಲೌಸ್, ಮಾಸ್ಕ್, ವೆಂಟಿಲೇಟರ್

ಕೊರೊನಾ ವೈರಸ್ ವಿರುದ್ಧ ಹೋರಾಡಲು ಗ್ಲೌಸ್, ಮಾಸ್ಕ್, ವೆಂಟಿಲೇಟರ್ ಸೇರಿದಂತೆ ಬೇರೆ ದೇಶಗಳಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಉತ್ಪಾದಿಸಲು ಹಲವು ಫ್ಯಾಕ್ಟರಿಗಳಿಗೆ ಚೀನಾ ಉತ್ತೇಜನ ನೀಡುತ್ತಿದೆ. ಇಡೀ ವಿಶ್ವವನ್ನು ಐಸಿಯುಗೆ ತಳ್ಳಿ, ಈಗ ಅದರಿಂದ ಲಾಭ ಮಾಡಿಕೊಳ್ಳಲು ಚೀನಾ ಹೊರಟಿದೆ.

ಕೊರೊನಾ ಬಗ್ಗುಬಡಿಯಲು ಚೀನಾದಲ್ಲೇ ಸಿದ್ಧವಾದ ಹೊಸ 'ಅಸ್ತ್ರ' ಇದು!

ಕೋಟ್ಯಾಂತರ ರೂಪಾಯಿ ಲಾಭ

ಕೋಟ್ಯಾಂತರ ರೂಪಾಯಿ ಲಾಭ

ವರದಿಯೊಂದರ ಪ್ರಕಾರ, 2020 ರ ಆರಂಭದಲ್ಲಿ 8,950 ಹೊಸ ಉದ್ದೆಮೆದಾರರು ಚೀನಾದಲ್ಲಿ ಮಾಸ್ಕ್ ಉತ್ಪಾದಿಸಲು ಆರಂಭಿಸಿದರು. ಚೀನಾದಲ್ಲಿ ದಿನವೊಂದಕ್ಕೆ ಈಗ ಏನಿಲ್ಲ ಅಂದರೂ 116 ಮಿಲಿಯನ್ ಮಾಸ್ಕ್ ಗಳು ತಯಾರಾಗುತ್ತಿವೆ. ಇತರೆ ದೇಶಗಳಿಗೆ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿರುವ ಚೀನಾ ಕಂಪನಿಗಳು ಕೋಟ್ಯಾಂತರ ರೂಪಾಯಿ ಲಾಭ ಪಡೆಯುತ್ತಿವೆ.

ರಿಲೀಫ್ ಪ್ಯಾಕೇಜ್

ರಿಲೀಫ್ ಪ್ಯಾಕೇಜ್

ಚೀನಾದಲ್ಲೀಗ ಲಾಕ್ ಡೌನ್ ತೆರವು ಗೊಳಿಸಲಾಗಿದೆ. ರೆಸ್ಟೋರೆಂಟ್, ಝೂ ಸೇರಿದಂತೆ ಪ್ರವಾಸಿ ತಾಣಗಳು ಜನರಿಗೆ ಓಪನ್ ಆಗಿವೆ. ಪ್ರವಾಸಿಗರಿಗೆ ಚೀನಾದ ಮಹಾಗೋಡೆ ಕೂಡ ಮುಕ್ತವಾಗಿದೆ. ಆರ್ಥಿಕ ವ್ಯವಸ್ಥೆ ಸುಧಾರಿಸಲು ಇತರೆ ದೇಶಗಳಂತೆ ಚೀನಾ ಕೂಡ ರಿಲೀಫ್ ಪ್ಯಾಕೇಜ್ ಘೋಷಿಸಿದೆ.

ಆರ್ಥಿಕ ವೃದ್ಧಿಯತ್ತ ಚೀನಾ

ಆರ್ಥಿಕ ವೃದ್ಧಿಯತ್ತ ಚೀನಾ

ಕೋವಿಡ್-19 ನಿಂದಾಗಿ ಇಡೀ ವಿಶ್ವ ತಿಣುಕಾಡುತ್ತಿದ್ದರೆ, ಅದರಿಂದ ಚೀನಿಯರ ಜೇಬು ತುಂಬುತ್ತಿರುವುದು ಮಾತ್ರ ಸುಳ್ಳು ಎಂದು ತಳ್ಳಿಹಾಕುವಂತಿಲ್ಲ. ಕೊರೊನಾ ವಿರುದ್ಧ ಹೋರಾಡಿ ನಾವೆಲ್ಲ ಸುಧಾರಿಸಿಕೊಳ್ಳುವಷ್ಟರಲ್ಲಿ, ಚೀನಾ ಜಗತ್ತಿನ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದರೆ ಅಚ್ಚರಿ ಪಡಬೇಕಿಲ್ಲ.!

English summary
Is China making profit out of Coronavirus Outbreak?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X