ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ v/s ಯುಎಸ್ಎ: ಮಿಲಿಟರಿ ಶಕ್ತಿ, ಸಾಮರ್ಥ್ಯ ತುಲನೆ

|
Google Oneindia Kannada News

ವಿಶ್ವದ ಪ್ರಬಲ ಮಿಲಿಟರಿ ಪಡೆ ಹೊಂದಿರುವ ಯುಎಸ್ಎ ಹಾಗೂ ವಿಶ್ವದ ಪ್ರಬಲ ತೈಲ ಪೂರೈಕೆ ರಾಷ್ಟ್ರ ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕವಾಗಿ ಈಗಾಗಲೇ ಸಾಕಷ್ಟು ಆರ್ಥಿಕ ಹೊಡೆತ ಬಿದ್ದಿದೆ. ಇರಾನ್ ಮೇಲೆ ಯುಎಸ್ಎ ಆರ್ಥಿಕ ದಿಗ್ಬಂಧನ ಮುಂದುವರೆಸುತ್ತಿದೆ. ಇರಾನ್ನಿನ ಪ್ರಬಲ ಸೇನಾಧಿಕಾರಿ ಖಾಸಿಂ ಸೋಲೆಮನಿ ಹತ್ಯೆ ಬಳಿಕ ನಡೆದ ಘಟನಾವಳಿಗಳು ಮತ್ತೊಂದು ಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಲಕ್ಷಣಗಳನ್ನು ತೋರಿದ್ದವು. ಆದರೆ, ಟ್ರಂಪ್ ವಾರ್ನಿಂಗ್, ಇರಾನ್ ಪರೋಕ್ಷ ಪ್ರತಿಕಾರದ ಕಿಡಿಯಲ್ಲಿ ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳ್ಳುತ್ತಿದೆ.

ಆದರೆ, ಪ್ರಬಲ ರಾಷ್ಟ್ರ ಅಮೆರಿಕಕ್ಕೆ ಇರಾನ್ ಸವಾಲೆಸೆಯಲು ಬರೀ ಸೇನಾ ಬಲ ಮಾತ್ರ ಕಾರಣವಲ್ಲ. ಅಣ್ವಸ್ತ್ರ ಹೊಂದಿರದ ಇರಾನ್ ಮೇಲೆರಗಿ ಧ್ವಂಸ ಕಾರ್ಯದಲ್ಲಿ ತೊಡಗುವುದು ಯುಎಸ್ಎಗೆ ನಿಮಿಷದ ಕೆಲಸ. ಆದರೆ, ಇರಾನ್ನಿನ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟಿರುವ ಅಮೆರಿಕಕ್ಕೂ ''ಯುದ್ಧ'' ಎಂಬುದು ಸದ್ಯಕ್ಕೆ ಅಧ್ಯಕ್ಷೀಯ ಚುನಾವಣೆಯ ಸರಕಾಗಿದೆ.

ಉಕ್ರೇನ್ ವಿಮಾನ ಪತನ; ಇರಾನ್ ಕೈವಾಡಕ್ಕೆ ಸಾಕ್ಷಿ ಕೊಟ್ಟ ಅಮೆರಿಕ ಉಕ್ರೇನ್ ವಿಮಾನ ಪತನ; ಇರಾನ್ ಕೈವಾಡಕ್ಕೆ ಸಾಕ್ಷಿ ಕೊಟ್ಟ ಅಮೆರಿಕ

ಅಮೆರಿಕ ಮತ್ತು ಇರಾನ್ ಸೇನೆಯ ಬಲಾಬಲದ ಮಾಹಿತಿಯನ್ನು ಗ್ಲೋಬಲ್ ಫೈರ್ ಪವರ್ ಸ್ಯೂಚಂಕದಿಂದ ಪಡೆದು ನೋಡಿದಾಗ. ಸೈನಿಕ ಬಲದಲ್ಲಿ ಅಮೆರಿಕ ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಷ್ಯಾ, ಚೀನಾ ಇದ್ದರೆ, ಇರಾನ್ 14ನೇ ಸ್ಥಾನದಲ್ಲಿದೆ. ಟರ್ಕಿ, ಈಜಿಪ್ಟ್ ಗಿಂತಲೂ ಕೆಳಗಿದೆ.

 ಮಿಲಿಟರಿ ಪಡೆಗಾಗಿ ಬಜೆಟ್

ಮಿಲಿಟರಿ ಪಡೆಗಾಗಿ ಬಜೆಟ್

2018ರಲ್ಲಿ ಇರಾನ್ ಮಿಲಿಟರಿ ಪಡೆಗಾಗಿ 13.2 ಬಿಲಿಯನ್ ಡಾಲರ್ ವ್ಯಯಿಸಿದೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ಸೇನೆಗಾಗಿ ವಾರ್ಷಿಕ 648.8 ಬಿಲಿಯನ್ ಯುಎಸ್ ಡಾಲರ್​ ಹಣ ಖರ್ಚು ಮಾಡಿದೆ. ಇರಾನ್ ಗೆ ಹೋಲಿಸಿದರೆ ಯುಎಸ್ ಸಶಸ್ತ್ರ ಬಲದಲ್ಲಿ 1.3 ಮಿಲಿಯನ್ ಸಕ್ರಿಯ ಮಿಲಿಟರಿ ಸಿಬ್ಬಂದಿ, 8,00, 000 ಮೀಸಲು ಸಿಬ್ಬಂದಿ ಇದ್ದಾರೆ. ಆದರೆ, ಇರಾನ್ ನಲ್ಲಿ ಮಿಲಿಟರಿ ಸೇರುವುದು ಕಡ್ಡಾಯವಾಗಿದ್ದು, ಮೀಸಲು ಪಡೆಯನ್ನು ತಕ್ಷಣಕ್ಕೆ ಹೆಚ್ಚಿಸಿಕೊಳ್ಳಬಹುದು.

 ಮಿಲಿಟರಿ ಪಡೆ: ಅಮೆರಿಕ ವಿರುದ್ಧ ಇರಾನ್​

ಮಿಲಿಟರಿ ಪಡೆ: ಅಮೆರಿಕ ವಿರುದ್ಧ ಇರಾನ್​

ಸಕ್ರಿಯ ಸೈನಿಕರ ಸಂಖ್ಯೆ: 12,81,900 v/s 5,50,000

ಮೀಸಲು ಸೈನಿಕರ ಸಂಖ್ಯೆ :8,11,000v/s 3,50,000

ಟ್ಯಾಂಕರ್ ಮತ್ತು ಯುದ್ಧ ವಾಹನಗಳು: 41,760 v/s 1,625

ಫಿರಂಗಿಗಳು: 3,269 v/s 4,096

ಸ್ವಯಂ ಚಾಲಿತ ಫಿರಂಗಿಗಳು : 950 v/s 570

ರಾಕೆಟ್ ಲಾಂಚರ್​ಗಳು : 1,197 v/s 1,438

ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್

 ವಾಯು ಸೇನೆ ಅಮೆರಿಕಾ - ಇರಾನ್

ವಾಯು ಸೇನೆ ಅಮೆರಿಕಾ - ಇರಾನ್

12, 304 ಯುದ್ಧ ವಿಮಾನಗಳು 850

457 ಫೈಟರ್​ ಜೆಟ್​ ವಿಮಾನಗಳು 130

2,192 ಉಭಯ ಸೇವಾ ಯುದ್ಧ ವಿಮಾನಗಳು 73

587 ದಾಳಿ ವಿಮಾನಗಳು 52

4,889 ಹೆಲಿಕಾಫ್ಟರ್​ಗಳು 324

12 ಖಂಡಾಂತರ ಕ್ಷಿಪಣಿ 07

 ನೌಕಾಪಡೆ: ಅಮೆರಿಕಾ - ಇರಾನ್

ನೌಕಾಪಡೆ: ಅಮೆರಿಕಾ - ಇರಾನ್

437 ಯುದ್ಧ ಹಡಗುಗಳು 406

20 ಯುದ್ಧ ವಿಮಾನ ನೌಕೆ 00

85 ವಿಧ್ವಂಸಕ ಯುದ್ಧ ನೌಕೆ 00

71 ಸಬ್​ಮರಿನ್​ಗಳು 40

 ಡ್ರೋನ್ ಬಳಕೆಯಲ್ಲಿ ಇರಾನ್ ಉತ್ತಮ

ಡ್ರೋನ್ ಬಳಕೆಯಲ್ಲಿ ಇರಾನ್ ಉತ್ತಮ

ಒಂದು ವೇಳೆ ಯುದ್ಧ ಆರಂಭವಾದರೆ ಸತತ 140 ದಿನಕ್ಕೂ ಹೆಚ್ಚು ಕಾಲ ಯುದ್ಧ ಮಾಡುವಷ್ಟು ಯುದ್ಧ ಸಾಮಗ್ರಿಗಳನ್ನು ಅಮೆರಿಕ ಹೊಂದಿದೆ. ಇರಾನ್ ಬಳಿ ಇರುವ ಆಯುಧಗಳು ಕೇವಲ 60ನೇ ದಿನ ತನಕ ಬಳಕೆ ಮಾಡಬಹುದು.

ಆದರೆ, ಕ್ಷಿಪಣಿ, ಡ್ರೋನ್ ಬಳಕೆಯಲ್ಲಿ ಇರಾನ್ ಉತ್ತಮ ತಂಡವನ್ನು ಹೊಂದಿದೆ ಎಂದು ವಾಷಿಂಗ್ಟನ್ ಮೂಲದ ಸಂಸ್ಥೆಯೇ ವರದಿ ಮಾಡಿದೆ. 2000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಇರಾನ್ ಹೊಂದಿದೆ. ಯುಎವಿ, ಸೂಸೈಡ್ ಡ್ರೋನ್ ಎಂದು ಕರೆಯಲ್ಪಡುವ ರಾಡ್ 85 ಯುಎವಿ ಬಳಕೆಯಲ್ಲಿ ಇರಾನ್ ತರಬೇತಿ ಹೊಂದಿದೆ.

English summary
The Global Firepower index ranks the US as the most powerful military in the world with Russia second and China third. Iran is ranked number 14 below Turkey and even Egypt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X