• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ''ವಿಶ್ವಗುರು''

|

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹತೋಟಿಗೆ ತರಲು, ಸುಳ್ಳುಸುದ್ದಿ, ಪ್ರಚೋದನಕಾರಿ ಹೇಳಿಕೆ, ವಿಡಿಯೋ ಹಂಚಿಕೆ ತಡೆಗಟ್ಟಲು, ಸಾಮಾಜಿಕ ಜಾಲ ತಾಣಗಳ ಮೇಲೆ ನಿಯಂತ್ರಣ ಹೊಂದಲು ವಿಶ್ವದ ಹಲವು ದೇಶಗಳು ಕಂಡುಕೊಂಡಿರುವ ಮಾರ್ಗವೆಂದರೆ ಇಂಟರ್ನೆಟ್ ಸ್ಥಗಿತ. 2014ರಿಂದ ಇಲ್ಲಿ ತನಕದ ಅಂಶ ಗಮನಿಸಿದರೆ ಇಂಟರ್‌ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತವೇ ''ವಿಶ್ವಗುರು'' ಎನ್ನಬಹುದು. ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಇಂಟರ್ನೆಟ್ ಸ್ಥಗಿತ ಮಾಡಿದ ಸಂದರ್ಭಗಳು ಅಧಿಕವಾಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಇಂಟರ್ನೆಟ್- ಸಾಮಾಜಿಕ ಜಾಲ ತಾಣಗಳ ಬಲದಿಂದಲೇ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ಇಂಟರ್ನೆಟ್ ಸಂಪರ್ಕವನ್ನು ದೇಶದೆಲ್ಲೆಡೆ ಹಬ್ಬಿಸುವ ಸಂಕಲ್ಪದ ಜೊತೆಗೆ ಇಂಟರ್ನೆಟ್ ಮೇಲೆ ನಿಯಂತ್ರಣ ಸಾಧಿಸುವುದು ಹೇಗೆ? ಯಾವಾಗ ಸ್ಥಗಿತಗೊಳಿಸಬೇಕು? ಎಂಬುದನ್ನು ಸರಿಯಾಗಿ ಅರಿತಿದೆ.

ಪ್ರತಿಭಟನೆ ಹತ್ತಿಕ್ಕಲು ದ.ಕನ್ನಡದಲ್ಲಿ 48 ಗಂಟೆ ಇಂಟರ್ನೆಟ್‌ ಬಂದ್‌

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ವಿಧಿ 370ನೇ ರದ್ದುಗೊಳಿಸಲು ಮುಂದಾದ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಅಸ್ಲಾಂನಲ್ಲಿ ನಂತರ ಇಂಟರ್ನೆಟ್ ಸ್ಥಗಿತಗೊಂಡಿದ್ದು, ಕರ್ನಾಟಕದ ಮಂಗಳೂರಿಗೂ ಹಬ್ಬಿತು. ಆದರೆ ದೆಹಲಿಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಿರುವುದು ಭಾರಿ ವಿವಾದಕ್ಕೆ ಕಾರಣವಾಯಿತು.

2014ರಿಂದ ಐದು ವರ್ಷದಲ್ಲಿ ದೇಶದಲ್ಲಿ ಬರೋಬ್ಬರಿ 357ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವರ್ಷ ಇಲ್ಲಿ ತನಕ 95 ಬಾರಿ ಇಂಟರ್ನೆಟ್ ಬಂದ್ ಮಾಡಲಾಗಿದೆ ಎಂದು ಬಿಬಿಸಿ ಹೇಳಿದೆ. ಅತಿ ಹೆಚ್ಚು ಬಾರಿ ಇಂಟರ್‌ನೆಟ್ ಸ್ಥಗಿತಗೊಂಡಿರುವುದು ಕಾಶ್ಮೀರದಲ್ಲಿ. 169 ಬಾರಿ ಇಲ್ಲಿ ಶಟ್ ಡೌನ್ ಆಗಿದ್ದು, ನಂತರದಲ್ಲಿ ಪಶ್ಚಿಮ ಬಂಗಾಳದಲ್ಲಿ 99 ದಿನಗಳು, ರಾಜಸ್ತಾನ 67 ಬಾರಿ ಹಾಗೂ ಉತ್ತರ ಪ್ರದೇಶದಲ್ಲಿ 17 ಬಾರಿ ಸ್ಥಗಿತಗೊಂಡಿದೆ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಹಾಂಕಾಂಗ್ ನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ವೇಳೆಯೇ ಇಂಟರ್ನೆಟ್ ಸ್ಥಗಿತವಾಗಿರಲಿಲ್ಲ, ಆದರೆ, ಭಾರತದಲ್ಲಿ ಇಂಟರ್ನೆಟ್ ಸ್ಥಗಿತ ಎಂಬುದು ಸಾಮಾನ್ಯ ಅಸ್ತ್ರವಾಗಿದೆ. ಆದರೆ ಭಾರತದಲ್ಲಿ ಮಾತ್ರ 2014ರಿಂದ ಈಚೆಗೆ 360 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.‌ 2014ರಲ್ಲಿ ಆರು ಬಾರಿ, 2015ರಲ್ಲಿ 14 ಬಾರಿ, 2016ರಲ್ಲಿ 31 ಬಾರಿ, 2017ರಲ್ಲಿ 79 ಹಾಗೂ 2018ರಲ್ಲಿ ಅತಿ ಹೆಚ್ಚು‌ ಅಂದರೆ‌ 134 ಬಾರಿ ಸ್ಥಗಿತಗೊಂಡಿದೆ.

English summary
Internet Shutdown since 2014: India witness highest numbers. Internet services have been suspended 357 times in India since 2014, 93 internet shutdowns in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X