ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಹುಲಿ ದಿನ 2021: ಇತಿಹಾಸ, ಮಹತ್ವ, ಘೋಷಣೆಗಳು

|
Google Oneindia Kannada News

ಜನರಿಗೆ ಹುಲಿ ಕೇವಲ ಬೇಟೆ ಆಡುವ ಭಕ್ಷಕ, ಆದರೆ ಅದೇ ಕಲಾಕಾರನಿಗೆ ಹುಲಿ ಒಂದು ಅಂದದ ಕಲಾಕೃತಿ. ಇನ್ನು ತಜ್ಞರಿಗೆ ಹುಲಿಯೊಂದು ಕಾಡಿನ ರಕ್ಷಕ. ಜುಲೈ 29ರಂದು ಹಲಿ ದಿನವನ್ನಾಗಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.

ಇದೀಗ ಮನುಷ್ಯನು ಸ್ವಾರ್ಥಕ್ಕಾಗಿ ಕಾಡನ್ನು ಕಡಿಯುತ್ತಿರುವ ಹುಲಿ, ಚಿರತೆ, ಆನೆಗಳು ಸೇರಿದಂತೆ ಹಲವು ಪ್ರಾಣಿಗಳು ಕಾಡನ್ನು ಬಿಟ್ಟು ನಾಡನ್ನು ಪ್ರವೇಶಿಸುತ್ತಿವೆ.

ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಹುಲಿಗಳ ಸಂರಕ್ಷ ಣೆ ಕುರಿತು ಅರಿವು ಮೂಡಿಸುವ ಸಲುವಾಗಿ 2010 ರಲ್ಲಿ ರಷ್ಯಾದ ಸೇಂಟ್‌ ಪೀಟರ್‌ ಬರ್ಗ್‌ ಹುಲಿ ಸಮಿತಿ ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿದಿನವನ್ನಾಗಿ ಆಚರಿಸುವ ಸಂಕಲ್ಪ ಮಾಡಿತು.

International Tiger Day 2021: Date, Theme, History, Importance Quotes & Slogans in Kannada

ಒಂದು ಹುಲಿ 13 ಅಡಿ ಉದ್ದ 300 ಕೆಜಿವರೆಗೂ ತೂಗುತ್ತದೆ. ಸಿಂಹದಂತೆ ಇದು ಗುಂಪಿನಲ್ಲಿ ಇರುವ ಪ್ರಾಣಿಯಲ್ಲ. ಒಂಟಿಯಾಗಿ ಇರಲು ಬಯಸುವ ಬುದ್ಧಿವಂತ ಜೀವಿ.

ಭಾರತದ ಮಟ್ಟಿಗೆ ಬಂಗಾಳದ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗೇ ನೋಡಿದರೆ ವಿಶ್ವದಲ್ಲಿ ಇರುವ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ. ಇದು ನಮಗೆ ಹೆಮ್ಮೆಯ ವಿಷಯ. 2014ರ ಹುಲಿ ಗಣತಿ ಪ್ರಕಾರ 2,226 ಹುಲಿಗಳು ಭಾರತದಲ್ಲಿವೆ. ಪಶ್ಚಿಮ ಘಟಕ್ಕೆ ಹೊಂದಿಕೊಂಡಿರು ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹುಲಿಗಳ ಸಂಖ್ಯೆಹೆಚ್ಚಿದೆ.

ಕರ್ನಾಟಕದಲ್ಲಿ 5 ಹುಲಿ ಸುರಕ್ಷಿತ ಪ್ರದೇಶಗಳಿವೆ. ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂತತಿ ವೃದ್ಧಿಸುತ್ತಿದೆ.

International Tiger Day 2021: Date, Theme, History, Importance Quotes & Slogans in Kannada

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ: ರಷ್ಯಾದಲ್ಲಿ 2010ರಲ್ಲಿ ನಡೆದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆರಂಭಿಸಲಾಯಿತು. ಅಳಿವಿನಂಚಿನಲ್ಲಿ ಇರುವಂತಹ ಹುಲಿಗಳ ಸಂರಕ್ಷಣೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಹುಲಿಗಳ ಸಂರಕ್ಷಣೆಗಾಗಿ ಕಾರ್ಯಕ್ರಮಗಳನ್ನು ಕೂಡ ರೂಪಿಸಬೇಕಾಗಿತ್ತು. ಹುಲಿ ಸಂಖ್ಯೆ ಇರುವಂತಹ ರಾಷ್ಟ್ರಗಳು ಹುಲಿಗಳ ಸಂಖ್ಯೆಯನ್ನು 2020ರ ವೇಳೆಗೆ ದ್ವಿಗುಣ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು.
ಡಬ್ಲ್ಯೂ ಡಬ್ಲ್ಯೂಎಫ್, ಐಎಫ್ ಎಡಬ್ಲ್ಯೂ ನಂತಹ ಕೆಲವೊಂದು ಸಂಘಟನೆಗಳು ಪ್ರತಿ ವರ್ಷ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ.

ಹವಾಮಾನ ವೈಪರಿತ್ಯ: ಹುಲಿಗಳ ಸಂತತಿ ನಾಶಕ್ಕೆ ಹವಾಮಾನ ವೈಪರಿತ್ಯ ಕೂಡ ಒಂದು ಕಾರಣ, ಸಮುದ್ರ ಮಟ್ಟವು ಏರಿಕೆಯಾಗುತ್ತಿರುವುದರಿಂದ ರಾಯಲ್ ಬೆಂಗಾಳ್‌ ಹುಲಿಗಳಿಗೆ ಆವಾಸಸ್ಥಾನವಾಗಿರುವ ಸುಂದರಬನಗಳು ನಾಶವಾಗುತ್ತಿವೆ. ಕೆಲವೊಂದು ಕಾಯಿಲೆಗಳು ಕೂಡ ಇದಕ್ಕೆ ಕಾರಣ.

International Tiger Day 2021: Date, Theme, History, Importance Quotes & Slogans in Kannada

ಹುಲಿ ಸಂತತಿ ಕಡಿಮೆ ಆಗಲು ಇರುವ ಕಾರಣ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹುಲಿ ಚರ್ಮಕ್ಕೆ ಭಾರೀ ಬೇಡಿಕೆ ಇರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣ. ಕೆಲವೊಂದು ಹುಲಿಗಳು ಸಹಜವಾಗಿ ಸಾವನ್ನಪ್ಪಿದರೆ, ಇನ್ನು ಕೆಲವು ಊರೊಳಗೆ ಪ್ರವೇಶ ಪಡೆದ ಕಾರಣ ನೀಡಿ ವಿಷ ಪ್ರಾಶನ, ಬಲೆ ಬೀಸಿ ಗ್ರಾಮಸ್ಥರು, ಪೊಲೀಸರು ಕೊಂದು ಹಾಕಿದ್ದಾರೆ. ಇನ್ನಷ್ಟು ಹುಲಿಗಳನ್ನು ಶಾರ್ಪ್ ಶೂಟರ್ ಗಳು ಹತ್ಯೆ ಮಾಡಿರುವುದರಿಂದ ಹುಲಿಗಳ ಸಂತತಿ ಅಪಾಯದ ಅಂಚಿಗೆ ತಲುಪಿದೆ ಎಂದು ಹಿರಿಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

ಭಾರತದಲ್ಲಿ 50 ಹುಲಿ ಸಂರಕ್ಷಿತ ಅಭಯಾರಣ್ಯ: ಕಳೆದ ಶತಮಾನದಲ್ಲಿ, ಆವಾಸಸ್ಥಾನ ನಷ್ಟ ಮತ್ತು ವನ್ಯಜೀವಿ ಕಳ್ಳಸಾಗಣೆಯಿಂದಾಗಿ ಹುಲಿಗಳ ಸಂಖ್ಯೆಯು ಶೇ. 95% ರಷ್ಟು ಕ್ಷೀಣಿಸಿತ್ತು. ಆದರೆ ಈಗ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸುಮಾರು ಎಂಬತ್ತು ಸಾವಿರವಿದ್ದ ಹುಲಿಗಳ ಸಂಖ್ಯೆ ಒಂದೆರಡು ಸಾವಿರಕ್ಕೆ ಕುಸಿಯಿತು. 1972ರ ವನ್ಯಜೀವಿ ಕಾಯ್ದೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಯೋಜನೆ ಜಾರಿಗೆ ಬಂತು, ಈ ಯೋಜನೆ ಹುಲಿ ಸಂರಕ್ಷಣೆಗೆ ಬಲವನ್ನು ನೀಡಿತು. ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ಒಟ್ಟು 6 ಜಾತಿಯ ಹುಲಿಗಳಿದ್ದು, ಹೆಚ್ಚು ಹುಲಿಗಳು ಏಷ್ಯಾಖಂಡದಲ್ಲಿಯೇ ಕಂಡು ಬರುತ್ತವೆ. ಭಾರತವು 50 ಹುಲಿ ಸಂರಕ್ಷಿತ ಅಭಯಾರಣ್ಯಗಳನ್ನು ಹೊಂದಿದೆ.

International Tiger Day 2021: Date, Theme, History, Importance Quotes & Slogans in Kannada

ಅಂತಾರಾಷ್ಟ್ರೀಯ ಹುಲಿ ದಿನ 2021: ಘೋಷಣೆಗಳು

1. ಹುಲಿಗಳನ್ನು ಉಳಿಸಲು ನಿಮ್ಮ ಧ್ವನಿಯನ್ನು ಏರಿಸಿ

2. ಅದುಶಾಶ್ವತವಾಗಿ ಕಣ್ಮರೆಯಾಗುವ ಮೊದಲು ಎಚ್ಚರವಹಿಸಿ

3. ನಮಗೆ ಹುಲಿಗಳ ಸಂತತಿ ಹೆಚ್ಚಬೇಕು

4. ಕಾಡಿನ ರಾಜನನ್ನು ಉಳಿಸಿ

5. ಹುಲಿ ಇತಿಹಾಸವಾದಲ್ಲಿ ಅದನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ

6. ಹುಲಿಗಳ ಸಂತತಿ ಉಳಿಸಲು ಕೈ ಜೋಡಿಸಿ

7. ನಮ್ಮ ಹುಲಿಗಳನ್ನು ಉಳಿಸಿ, ಭೂಮಿಯನ್ನು ರಕ್ಷಿಸಿ

8. ಹುಲಿಗಳ ಹಕ್ಕಿಗಾಗಿ ಹೋರಾಡಿ.

9. ಹುಲಿಗಳನ್ನು ಉಳಿಸಿ

English summary
Every year on 29th July, Global Tiger Day is celebrated to raise awareness for tiger conservation. Established back in 2010 at the Saint Petersburg Tiger Summit in Russia; the primary goal is to promote a global system for protecting the natural habitats of tigers and raise public awareness and support for tiger conservation issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X