ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ, ಅರ್ಹತೆ ಮತ್ತು ಮಾನದಂಡ
ರಾಷ್ಟ್ರೀಯ ಸಾಮಾಜಿಕ ಭದ್ರತೆ ಮತ್ತು ಪಿಂಚಿಣಿಗಳ ನಿರ್ದೇಶನಾಲಯದಿಂದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ ಜಾರಿಯಾಗಿದೆ.ಈ ಯೋಜನೆಯ ಅರ್ಹತೆ, ಪ್ರಯೋಜನಗಳ ಕುರಿತ ಮಾಹಿತಿ ಇಲ್ಲಿದೆ.
ವೃದ್ಧಾಪ್ಯ ವೇತನದ ನಿಯಮಗಳನ್ನು ಬದಲಾಯಿಸಿ 19-11-2007 ರಿಂದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯ ಅನ್ವಯ 65 ರಿಂದ 80 ವರ್ಷದವರಿಗೆ ರೂ.500 ವೇತನ ನೀಡಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ರೂ.500 ರಿಂದ ರೂ.750ಕ್ಕೆ ಮಾಸಾಶನ ಹೆಚ್ಚಿಸಲಾಗಿದೆ. ಹಾಗೂ ಸರ್ಕಾರಿ ಆದೇಶ ಸಂಖ್ಯೆ : ಆರ್‍ಡಿ 47 ಡಿಎಸ್‍ಪಿ 2018, ಬೆಂಗಳೂರು ದಿ:14-09-2018ರ ಆದೇಶದಂತೆ ದಿ:01-11-2018 ರಿಂದ ಜಾರಿಗೆ ಬರುವ 65 ವರ್ಷ ಮೀರಿದ ಹಿರಿಯ ನಾಗರೀಕರಿಗೆ ರೂ.600 ರಿಂದ ರೂ.1000 ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ ಹಾಗೂ 60 ರಿಂದ 65 ವರ್ಷದೊಳಗಿನ ಹಿರಿಯ ನಾಗರೀಕರಿಗೆ ರೂ.600 ರಂತೆ ಮಾಸಿಕ ಪಿಂಚಣಿ ವೇತನ ನೀಡಲಾಗುತ್ತಿದೆ.

ಅರ್ಹತೆ ಮತ್ತು ಮಾನದಂಡಗಳು:
• ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು.
• ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು.
ವೃದ್ಧಾಪ್ಯ ವೇತನ:
ಹಿರಿಯ ನಾಗರೀಕರಿಗೆ ರೂ.600 ರಿಂದ ರೂ.1000 ರು ಖಾತ್ರಿ.
• ಈ ಯೋಜನೆಯಡಿಯ ಫಲಾನುಭವಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
• ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳು :
• ವಾಸಸ್ಥಳ ದೃಢೀಕರಣ ಪತ್ರ
• ವಯಸ್ಸಿನ ದೃಢೀಕರಣ ಪತ್ರ
• ಆದಾಯ ದೃಢೀಕರಣ ಪತ್ರ
ಬಿಪಿಎಲ್ ಕಾರ್ಡ್, ಭಾವಚಿತ್ರ, ಆಧಾರ್ ನಂಬರ್, ಬ್ಯಾಂಕ್ ಪಾಸ್ ಬುಕ್, ತುಂಬಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಸಮಾಜ ಕಲ್ಯಾಣ ಇಲಾಖೆಯು ಫಲಾನುಭವಿಗಳ ಅರ್ಜಿಯನ್ನು ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಕಳಿಸಲಿದೆ. ಅರ್ಜಿ ದೃಢೀಕರಣವಾದ ಬಳಿಕ ಜಿಲ್ಲಾ ಮಟ್ಟದ ಸಮಿತಿಯಿಂದ ಅಂತಿಮ ಪಿಂಚಣಿ ವೇತನ ಸಲ್ಲಲಿದೆ.
ಈ ಎಲ್ಲಾ ಮಾಹಿತಿಯೊಂದಿಗೆ ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ ಖುದ್ದಾಗಿ ನೊಂದಾಯಿಸತಕ್ಕದ್ದು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳನ್ನು ಅಥವಾ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ವಯೋಮಿತಿ ಏರಿಕೆ: ರಾಷ್ಟ್ರೀಯ ಪಿಂಚಣಿ ಯೋಜನೆಯ ವಯೋಮಿತಿಯನ್ನು 60ರಿಂದ 65ಕ್ಕೆ ಏರಿಕೆ ಮಾಡಿ 2017ರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಪ್ರಕಟಣೆ ಹೊರಡಿಸಿತ್ತು.
ಈ ಬದಲಾವಣೆಗೆ ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲಿ ಅಧಿಸೂಚನೆ ನೀಡಲಾಗುವುದು, ಈಗ ರಾಷ್ಟ್ರೀಯ ಪಿಂಚಣಿ ಯೋಜನೆ 18ರಿಂದ 60 ವರ್ಷದ ಜನರಿಗೆ ಮುಕ್ತವಾಗಿದೆ. ವಯೋಮಿತಿಯನ್ನು 65ಕ್ಕೆ ಏರಿಸಲು ಮಂಡಳಿ ಅನುಮೋದನೆ ಸಿಕ್ಕಿದೆ ಎಂದು ಪಿಎಫ್‌ಆರ್‌ಡಿಎಯ ಅಧ್ಯಕ್ಷ ಹೇಮಂತ್ ಕಾಂಟ್ರಾಕ್ಟರ್ ಹೇಳಿದ್ದರು.
ಗ್ರಾಹಕ ಸ್ನೇಹಿ ಹಾಗೂ ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಣೀಯಗೊಳಿಸುವ ಮೂಲಕ ಪಿಂಚಣಿ ನಿಧಿಯನ್ನು ವರ್ಗಾಯಿಸುವ ಸೌಲಭ್ಯ ಒದಗಿಸುವುದು ಇದರ ಉದ್ದೇಶ. ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರಲಾಗಿದೆ.












Click it and Unblock the Notifications