ಟಿಕೆಟ್ ದರ ಕಡಿತಗೊಳಿಸಿದ ಭಾರತೀಯ ರೈಲ್ವೆ: ಯಾವೆಲ್ಲಾ ರೈಲಿನಲ್ಲಿ ದರ ಕಡಿಮೆ?
ನವದೆಹಲಿ, ನವೆಂಬರ್ 18: ಭಾರತೀಯ ರೈಲ್ವೆ ಬುಧವಾರ ಹೊಸ ಪ್ರಕಟಣೆಯನ್ನು ಹೊರಡಿಸಿದೆ. ವಾಯುವ್ಯ ರೈಲ್ವೆ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕನಿಷ್ಠ 32 ರೈಲುಗಳ ವಿಶೇಷ ರೈಲು ಎಂಬ ಟ್ಯಾಗ್ ಅನ್ನು ಕೈಬಿಟ್ಟಿದೆ. ಇದರಿಂದಾಗಿ ಈ ರೈಲುಗಳಲ್ಲಿ ಟಿಕೆಟ್ ದರವು ಕಡಿಮೆ ಮಾಡಲಾಗುವುದು ಎಂದು ಕೂಡಾ ಭಾರತೀಯ ರೈಲ್ವೆಯು ತಿಳಿಸಿದೆ.
ಭಾರತೀಯ ರೈಲ್ವೆ ಸಚಿವಾಲಯವು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಹಾಕಲಾಗಿದ್ದ ವಿಶೇಷ ಟ್ಯಾಗ್ ಅನ್ನು ತೆಗೆಯಲಾಗುತ್ತದೆ ಎಂದು ತಿಳಿಸಿದೆ. ರೈಲು ಪ್ರಯಾಣ ದರವು ಕೊರೊನಾ ವೈರಸ್ ಸೋಂಕಿಗೂ ಮುನ್ನ ಎಷ್ಟು ಇತ್ತು, ಅಷ್ಟೇ ಇರಲಿದೆ ಎಂದು ಮಾಹಿತಿ ನೀಡಿದೆ.
ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪೂರ್ಣ ಲಾಕ್‌ಡೌನ್ ಅನ್ನು ಘೋಷಣೆ ಮಾಡಿದ ಬಳಿಕ ರೈಲುಗಳನ್ನು ಕೂಡಾ ಸ್ಥಗಿತ ಮಾಡಲಾಗಿತ್ತು. ಆದರೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಬಳಿಕ ಕೆಲವು ಪ್ರಯಾಣಿಕ ರೈಲುಗಳು ಆರಂಭ ಮಾಡಲಾಗಿತ್ತು. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಟಿಕೆಟ್ ದರದ ಶೇಕಡ ಮೂವತ್ತರಷ್ಟು ಅಧಿಕ ದರವನ್ನು ವಿಧಿಸುತ್ತಿದ್ದವು. ಆದರೆ ಈಗ ಪ್ರಯಾಣಿಕರು ಶೇಕಡ 30 ರಷ್ಟು ಟಿಕೆಟ್ ದರವನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ಶುಕ್ರವಾರದಂದು ಜೋನಲ್ ರೈಲ್ವೇಗಳಿಗೆ ಬರೆದ ಪತ್ರದಲ್ಲಿ ರೈಲ್ವೇ ಬೋರ್ಡ್ ಟಿಕೆಟ್ ದರವನ್ನು ಕೋವಿಡ್ ಪೂರ್ವದಲ್ಲಿ ಎಷ್ಟಿತ್ತೋ ಅಷ್ಟಕ್ಕೆ ಇಳಿಕೆ ಮಾಡಲು ತಿಳಿಸಲಾಗಿದೆ. "ಇನ್ನು ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಯಾವುದೇ ದರದ ವ್ಯತ್ಯಾಸಗಳು ಇರುವುದಿಲ್ಲ ಹಾಗೂ ಯಾವುದೇ ಮರುಪಾವತಿ ಇರುವುದಿಲ್ಲ," ಎಂದು ಸ್ಪಷ್ಟಪಡಿಸಿದೆ. ಆದರೆ ಎಂದಿನಿಂದ ರೈಲ್ವೇ ಟಿಕೆಟ್ ದರವು ಕೋವಿಡ್‌ಗೂ ಮುಂಚಿನ ದರಕ್ಕೆ ಹಿಂದಿರುಗಲಿದೆ ಎಂಬುವುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ.
ಯಾವೆಲ್ಲಾ ರೈಲುಗಳಲ್ಲಿ ಟಿಕೆಟ್ ದರವು ಕಡಿಮೆ ಆಗಲಿದೆ?
ಉತ್ತರ ಪಶ್ಚಿಮ ರೈಲ್ವೆಯು ಹೊರಡಿಸಿರುವ ಪ್ರಕಟಣೆಯ ಪ್ರಕಾರ ಒಟ್ಟು ಸುಮಾರು 32 ರೈಲುಗಳಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಬೆಂಗಳೂರು, ಮೈಸೂರಿನ ರೈಲುಗಳು ಕೂಡಾ ಇದೆ. ಆ ರೈಲುಗಳು ಯಾವುದು ಎಂಬ ಪಟ್ಟಿ ಈ ಕೆಳಗಿದೆ:
* ಅಜ್ಮೀರ್-ದಾದರ್-ಅಜ್ಮೀರ್ ಸೂಪರ್‌ಫಾಸ್ಟ್ ಟ್ರೈ ವೀಕ್ಲಿ ಸ್ಪೆಶಲ್ , ರೈಲು ಸಂಖ್ಯೆ 02990/02989
* ಶ್ರೀ ಗಂಗಾನಗರ-ಬಾಂದ್ರಾ ಟರ್ಮಿನಸ್-ಶ್ರೀಗಂಗಾನಗರ ಪ್ರತಿನಿಧಿ, ರೈಲು ಸಂಖ್ಯೆ 09708/09707
* ಬಿಕಾನೇರ್-ದಾದರ್-ಬಿಕಾನೇ ಬೈ-ವೀಕ್ಲಿ ಸೂಪರ್ ಫಾಸ್ಟ್ ಸ್ಪೆಶಲ್, ರೈಲು ಸಂಖ್ಯೆ 02489/02490
* ಜೈಪುರ-ಪುಣೆ-ಜೈಪುರ ಬೈ-ವೀಕ್ಲಿ ಸೂಪರ್ ಫಾಸ್ಟ್ ಸ್ಪೆಶಲ್, ರೈಲು ಸಂಖ್ಯೆ 02940/02939
* ಭಗತ್ ಕಿ ಕೋಠಿ - ಬಾಂದ್ರಾ ಟರ್ಮಿನಸ್ - ಭಗತ್ ಕಿ ಕೋಠಿ ಬೈ-ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 04817/04818
* ಉದಯಪುರ ನಗರ-ಹೊಸ ಜಲ್ಪೈಗುರಿ-ಉದಯಪುರ ನಗರ ವೀಕ್ಲಿ, ರೈಲು ಸಂಖ್ಯೆ 09601/09602
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ಟ್ರೈ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 04854/044853
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ಟ್ರೈ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ, 04864/04863
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ವೀಕ್ಲಿ ರೈಲು, ರೈಲು ಸಂಖ್ಯೆ, 04866/04865
* ಬಿಕಾನೇರ್-ಕೋಲ್ಕತ್ತಾ-ಬಿಕಾನೇರ್ ವೀಕ್ಲಿ ಸೂಪರ್‌ಫಾಸ್ಟ್ ಸ್ಪೆಶಲ್ ರೈಲು ಸಂಖ್ಯೆ, 02495/02496
* ಜೈಪುರ-ದೌಲತ್‌ಪುರ್ ಚೌಕ್-ಜೈಪುರ ಪ್ರತಿನಿಧಿ ಸ್ಪೆಶಲ್ ರೈಲು ಸಂಖ್ಯೆ, 09717/09718
* ಬಿಕಾನೇರ್-ದೆಹಲಿ ಸರೈ ರೋಹಿಲ್ಲಾ-ಬಿಕಾನೇರ್ ಪ್ರತಿನಿಧಿ ಸೂಪರ್‌ಫಾಸ್ಟ್ ಸ್ಪೆಶಲ್, ರೈಲು ಸಂಖ್ಯೆ 02458/02457
* ದೆಹಲಿ-ಬಟಿಂಡಾ-ದೆಹಲಿ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 04731/04732
* ಶ್ರೀಗಂಗಾನಗರ-ದೆಹಲಿ-ಶ್ರೀಗಂಗಾನಗರ ಪ್ರತಿನಿಧಿ ಸೂಪರ್‌ಫಾಸ್ಟ್ ಸ್ಪೆಶಲ್, ರೈಲು ಸಂಖ್ಯೆ 02471/02472
* ಬಾರ್ಮರ್ - ಋಷಿಕೇಶ - ಬಾರ್ಮರ್ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 04888/04887
* ಅಜ್ಮೀರ್-ಅಮೃತಸರ-ಅಜ್ಮೀರ್ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 09611/09612
* ಅಜ್ಮೀರ್-ಅಮೃತಸರ-ಅಜ್ಮೀರ್ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 09613/09614
* ಅಜ್ಮೀರ್-ಸೀಲ್ದಾ - ಅಜ್ಮೀರ್ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 02988/0298
* ಮಧುರೈ-ಬಿಕಾನೇರ್-ಮಧುರೈ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06053/06054
* ಚೆನ್ನೈ ಎಗ್ಮೋರ್-ಜೋಧಪುರ-ಚೆನ್ನೈ ಎಗ್ಮೋರ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06067/06068
* ಜಮ್ಮು ತಾವಿ-ಅಜ್ಮೀರ್-ಜಮ್ಮುತ್ವಿ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 02422/02421
* ಜೋಧ್‌ಪುರ-ಬೆಂಗಳೂರು-ಜೋಧ್‌ಪುರ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06507/06508
* ಅಜ್ಮೀರ್-ಮೈಸೂರು-ಅಜ್ಮೀರ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06209/06210
* ಅಜ್ಮೀರ್-ರಾಜೇಂದ್ರನಗರ-ಅಜ್ಮೀರ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 02396/02395
* ಜೈಪುರ-ಹೈದರಾಬಾದ್-ಜೈಪುರ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 02719/02720
* ಹೌರಾ-ಬಾರ್ಮರ್-ಹೌರಾ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 02323/02324
* ಅಜ್ಮೀರ್-ಬೆಂಗಳೂರು-ಅಜ್ಮೀರ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06206/06205
* ಜೋಧ್‌ಪುರ-ಬೆಂಗಳೂರು-ಜೋಧ್‌ಪುರ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 06533/06534
* ನಾಂದೇಡ್-ಶ್ರೀಗಂಗಾನಗರ-ನಾಂದೇಡ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 07623/07624
* ಬಾಂದ್ರಾ ಟರ್ಮಿನಸ್ - ಜೈಸಲ್ಮೇರ್ - ಬಾಂದ್ರಾ ಟರ್ಮಿನಸ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 02929/02930
* ಬಿಕಾನೆರ್-ಬಾಂದ್ರಾ ಟರ್ಮಿನಸ್-ಬಿಕಾನೆರ್ ವೀಕ್ಲಿ ಫೆಸ್ಟಿವಲ್ ಸ್ಪೆಶಲ್, ರೈಲು ಸಂಖ್ಯೆ 02473/02474
* ಶ್ರೀಗಂಗಾನಗರ-ಹರಿದ್ವಾರ-ಶ್ರೀಗಂಗಾನಗರ ಪ್ರತಿನಿಧಿ ಸ್ಪೆಶಲ್ ರೈಲು ಸಂಖ್ಯೆ 04712/04711
(ಒನ್‌ಇಂಡಿಯಾ ಸುದ್ದಿ)
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications