India TV Opinion Poll: ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತ ಕೊರತೆ ಸಾಧ್ಯತೆ

ನವದೆಹಲಿ, ಜನವರಿ 30: ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಉಳಿದಿದೆ. ಪಂಜಾಬ್‌ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೋಟೆಯನ್ನು ಉಳಿಸಬಹುದೇ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ) ಕಾಂಗ್ರೆಸ್‌ ಕೋಟೆಯನ್ನು ಉರುಳಿಸಬಹುದೇ ಎಂಬ ಪ್ರಶ್ನೆ ಈಗ ನಮ್ಮ ಮುಂದಿದೆ. ಮಾಜಿ ಸಿಎಂ ಅಮರಿಂದರ್ ಸಿಂಗ್ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಎಸ್‌ಎಡಿ ಜೊತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೈತ್ರಿ ಯಾವ ಪರಿಣಾಮವನ್ನು ಬೀರುತ್ತದೆ ಎಂಬುವುದನ್ನು ಕೂಡಾ ನಾವು ಕಾದು ನೋಡಬೇಕಾಗಿದೆ.

ಈ ನಡುವೆ ಹಲವಾರು ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ. India TV ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಪಂಜಾಬ್‌ನಲ್ಲಿ ಕಾಂಗ್ರೆಸ್ ಚುನಾವಣಾ ರೇಸ್‌ನಲ್ಲಿ ಮುಂಚೂಣಿಯಲ್ಲಿಯೇ ಇರಲಿದೆ. ಆದರೆ ಬಹುಮತದ ಕೊರತೆ ಕಾಂಗ್ರೆಸ್‌ಗೆ ಕಾಣುವ ಸಾಧ್ಯತೆ ಇದೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಎಷ್ಟು ಸ್ಥಾನವನ್ನು ಪಂಜಾಬ್‌ನಲ್ಲಿ ಗಳಿಸಲಿದೆ ಎಂದು ತಿಳಿಯಲು ಮುಂದೆ ಓದಿ...

 ಕಾಂಗ್ರೆಸ್‌ಗೆ ಬಹುಮತದ ಕೊರತೆ?

ಕಾಂಗ್ರೆಸ್‌ಗೆ ಬಹುಮತದ ಕೊರತೆ?

ಪಂಜಾಬ್‌ನಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಬಹುಮತದ ಕೊರತೆ ಕಾಣಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ ಚುನಾವಣಾ ಪೂರ್ವ ಸಮೀಕ್ಷೆಯು ಹೇಳಿದೆ. ಇಂಡಿಯಾ ಟಿವಿ-ಗ್ರೌಂಡ್ ಝೀರೋ ಒಪಿನಿಯನ್ ಪೋಲ್ ಪ್ರಕಾರ, ಪಂಜಾಬ್‌ನಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಆದರೆ ಗಡಿ ರಾಜ್ಯದಲ್ಲಿ ಬಹುಮತದ ಕೊರತೆ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ ಸುಮಾರು 50-52 ಸ್ಥಾನಗಳನ್ನು ಗೆಲ್ಲಬಹುದು, ಎಸ್‌ಎಡಿ-ಬಿಎಸ್‌ಪಿ 30-32 ಸ್ಥಾನಗಳನ್ನು ಪಡೆಯಬಹುದು, ಎಎಪಿ 29-31 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ಬಿಜೆಪಿ 1-3 ಸ್ಥಾನಗಳನ್ನು ಮತ್ತು ಇತರರು 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಮಾಝಾ ಪ್ರದೇಶದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್

ಮಾಝಾ ಪ್ರದೇಶದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್

ಇಂಡಿಯಾ ಟಿವಿಯು ಪಂಜಾಬ್‌ನಲ್ಲಿ ಕ್ಷೇತ್ರಗಳನ್ನು ಮೂರು ಪ್ರದೇಶಗಳಾಗಿ ವಿಭಜನೆ ಮಾಡಿದೆ. ಮಜಾ, ದೋಬಾ, ಮಾಲ್ವಾ ಎಂದು ಮೂರು ವಿಂಗಡನೆ ಮಾಡಿದೆ. ಈ ಮೂರು ಪ್ರದೇಶವಾರು ಚುನಾವಣಾ ಸಮೀಕ್ಷೆಯನ್ನು ನೀಡಿದೆ. ಇಂಡಿಯಾ ಟಿವಿ-ಗ್ರೌಂಡ್ ಝೀರೋ ಒಪಿನಿಯನ್ ಪೋಲ್ ಪ್ರಕಾರ. ಒಟ್ಟು 117 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನ ಮಾಜಾ ಪ್ರದೇಶದಲ್ಲಿ, ಕಾಂಗ್ರೆಸ್ 14-16 ಸ್ಥಾನಗಳೊಂದಿಗೆ 38 ಪ್ರತಿಶತ ಮತಗಳನ್ನು ಪಡೆಯಬಹುದು. ಎಸ್‌ಎಡಿ-ಬಿಎಸ್‌ಪಿ 5-7 ಸ್ಥಾನಗಳೊಂದಿಗೆ 25 ಪ್ರತಿಶತ ಮತಗಳನ್ನು ಪಡೆಯಬಹುದು. ಎಎಪಿ 2-4 ಸ್ಥಾನಗಳೊಂದಿಗೆ 24 ಪ್ರತಿಶತ ಮತಗಳನ್ನು ಗಳಿಸಬಹುದು. ಬಿಜೆಪಿ 0-2 ಸ್ಥಾನಗಳೊಂದಿಗೆ 7 ಪ್ರತಿಶತ ಮತ ಹಂಚಿಕೆಯನ್ನು ಪಡೆಯಬಹುದು ಮತ್ತು ಇತರರು ಶೇಕಡ 3ರಷ್ಟು ಮತ ಹಂಚಿಕೆಯನ್ನು ಪಡೆಯಬಹುದು. ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಅಥವಾ ಇತರೆ ಪಕ್ಷಗಳು ಗೆಲುವು ಸಾಧಿಸದು.

 ದೋಬಾ ಪ್ರದೇಶದಲ್ಲಿ ಕಾಂಗ್ರೆಸ್‌ ಮೇಲುಗೈ

ದೋಬಾ ಪ್ರದೇಶದಲ್ಲಿ ಕಾಂಗ್ರೆಸ್‌ ಮೇಲುಗೈ

ಗಡಿ ರಾಜ್ಯದಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಲ್ಲಿ 23 ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನ ದೋಬಾ ಪ್ರದೇಶದಲ್ಲಿ, ಕಾಂಗ್ರೆಸ್ 13-15 ಸ್ಥಾನಗಳೊಂದಿಗೆ 35 ಪ್ರತಿಶತ ಮತಗಳನ್ನು ಪಡೆಯಬಹುದು. ಎಸ್‌ಎಡಿ-ಬಿಎಸ್‌ಪಿ 7-9 ಸ್ಥಾನಗಳೊಂದಿಗೆ 26 ಪ್ರತಿಶತ ಮತ ಹಂಚಿಕೆಯನ್ನು ಪಡೆಯಬಹುದು. ಎಎಪಿ 0-2 ಸ್ಥಾನಗಳೊಂದಿಗೆ 25 ಪ್ರತಿಶತ ಮತ ಹಂಚಿಕೆಯನ್ನು ಪಡೆಯಬಹುದು. ಬಿಜೆಪಿ ಕೇವಲ 0-1 ಸ್ಥಾನಗಳೊಂದಿಗೆ 4 ಪ್ರತಿಶತ ಮತಗಳನ್ನು ಗಳಿಸಬಹುದು. ಆದರೆ ಇತರರು ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದಿಲ್ಲ. ಆದರೆ 10 ಪ್ರತಿಶತ ಮತ ಪಡೆಯಬಹುದು.

Recommended Video

    Rafael Nadal writes history with 21st Grand Slam win | Oneindia Kannada
     ಮಾಲ್ವಾ ಪ್ರದೇಶದಲ್ಲಿ ಆಪ್ ಹವಾ

    ಮಾಲ್ವಾ ಪ್ರದೇಶದಲ್ಲಿ ಆಪ್ ಹವಾ

    ಪಂಜಾಬ್‌ ವಿಧಾನಸಭೆ ಚುನಾವಣೆ 2022 ರಲ್ಲಿ, ಎಎಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ವಿಶೇಷವಾಗಿ ಒಟ್ಟು 117 ರಲ್ಲಿ 69 ಸ್ಥಾನಗಳನ್ನು ಹೊಂದಿರುವ ಮಾಲ್ವಾ ಪ್ರದೇಶದಲ್ಲಿ ಕಾಂಗ್ರೆಸ್‌ ಎಎಪಿ ನಡುವೆ ತೀವ್ರ ಸ್ಫರ್ಧೆ ನಡೆಯಲಿದೆ. ಇಂಡಿಯಾ ಟಿವಿ-ಗ್ರೌಂಡ್ ಝೀರೋ ಒಪಿನಿಯನ್ ಪೋಲ್ ಪ್ರಕಾರ, ಕಾಂಗ್ರೆಸ್ 0-24 ಸ್ಥಾನಗಳನ್ನು ಗೆದ್ದು 31 ಪ್ರತಿಶತ ಮತಗಳನ್ನು ಗಳಿಸಬಹುದು. ಎಸ್‌ಎಡಿ 16-20 ಸ್ಥಾನಗಳಲ್ಲಿ ಗೆಲುವು ಸಾಧಿಸಿ 23 ಪ್ರತಿಶತ ಮತವನ್ನು ಪಡೆಯಬಹುದು. ಎಎಪಿ 24-28 ಸ್ಥಾನಗಳನ್ನು ಪಡೆದು 35 ಪ್ರತಿಶತ ಮತವನ್ನು ತನ್ನದಾಗಿಸಬಹುದು. ಬಿಜೆಪಿ 0-2 ಸ್ಥಾನಗಳೊಂದಿಗೆ 2 ಪ್ರತಿಶತ ಮತ ಹಂಚಿಕೆಯನ್ನು ಪಡೆಯಬಹುದು. ಇನ್ನು ಈ ಪ್ರದೇಶದಲ್ಲಿ ಮಾತ್ರ ಇತರರು 1-3 ಸ್ಥಾನಗಳನ್ನು ಪಡೆಯಬಹುದು. 9 ಪ್ರತಿಶತ ಮತ ಹಂಚಿಕೆಯನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತದೆ. (ಒನ್‌ಇಂಡಿಯಾ ಸುದ್ದಿ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+