ಐಟಿ ರಿಟರ್ನ್ಸ್ ವೆಬ್‌ತಾಣ ಕಿರಿಕಿರಿ, ಇನ್ಫೋಸಿಸ್ ಸಿಇಒಗೆ ಸಮನ್ಸ್
ನವದೆಹಲಿ, ಆಗಸ್ಟ್ 23: ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ಹಾಗೂ ಸಂಸ್ಥೆಗಳ ಐಟಿ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ಅನೇಕ ಬಾರಿ ವಿಸ್ತರಿಸಿದೆ. ಜೊತೆಗೆ ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣವನ್ನು ಇಂದಿನಿಂದ ಪರಿಚಯಿಸಿದೆ. ಆದರೆ, ಜೂನ್ ತಿಂಗಳಲ್ಲಿ ಆರಂಭವಾದ ಹೊಸ ವೆಬ್‌ತಾಣ ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಪದೇ ಪದೇ ದೂರು ಕೇಳಿ ಬಂದಿದ್ದು, ಹೊಸ ತಾಣ ವಿನ್ಯಾಸಗೊಳಿಸಿದ ಇನ್ಫೋಸಿಸ್ ಸಂಸ್ಥೆ ವಿರುದ್ಧ ವಿತ್ತ ಸಚಿವಾಲಯ ತಿರುಗಿ ಬಿದ್ದಿದೆ. ಇನ್ಫೋಸಿಸ್ ಎಂಡಿ ಹಾಗೂ ಸಿಇಒ ಸಲೀಲ್ ಪರೇಖ್ ಅವರಿಗೆ ಈ ಕುರಿತಂತೆ ಸಮನ್ಸ್ ಜಾರಿ ಮಾಡಲಾಗಿದೆ.
ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ(http://incometax.gov.in) ವನ್ನು ಇಲಾಖೆಯಿಂದ ಪರಿಚಯಿಸಲಾಗಿದೆ. ಇದರ ಜೊತೆಗೆ ಯಾವುದೇ ತೆರಿಗೆದಾರರಿಗಾಗುವ ಅನಾನುಕೂಲತೆಯನ್ನು ತಪ್ಪಿಸಲು ಮುಂಗಡ ತೆರಿಗೆ ಕಂತು ಪಾವತಿ ದಿನಾಂಕದ ನಂತರ ಹೊಸ ಆದಾಯ ತೆರಿಗೆ ಪಾವತಿ ವಿಧಾನವನ್ನು 2021ರ ಜೂನ್ 18 ರಂದು ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಸಿಬಿಡಿಟಿ ಪ್ರಾರಂಭಿಸಿದೆ.
ತೆರಿಗೆದಾರರಿಗೆ ತ್ವರಿತ ಮರುಪಾವತಿ ನೀಡಲು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತಕ್ಷಣದ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್ ಹಾಗೂ ವೆಬ್ ತಾಣದ ವಿನ್ಯಾಸ ಹಾಗೂ ತಾಂತ್ರಿಕ ನಿರ್ವಹಣೆ ಹೊಣೆಯನ್ನು ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿದೆ.

ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್
ಐಟಿಆರ್ ಗೊಂದಲಗಳಿಗೆ ತಕ್ಷಣವೇ ಪರಿಹಾರ, ರೀಫಂಡ್, ತೆರಿಗೆದಾರರ ಎಲ್ಲಾ ಸಂವಹನಗಳು ಮತ್ತು ಅಪ್ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡುವ ಕಾರ್ಯಗಳು, ತೆರಿಗೆ ವೃತ್ತಿಪರರ ಸೇರ್ಪಡೆ, ನೋಟಿಸ್ ಗಳಿಗೆ ಸ್ಪಂದನೆಯ ಸಲ್ಲಿಕೆಯಲ್ಲಿ ಮುಖಾಮುಖಿರಹಿತ ಪರಿಶೀಲನೆ ಅಥವಾ ಮೇಲ್ಮನವಿ ಲಭ್ಯವಿರುತ್ತದೆ ಎಂದು ಹೇಳಲಾಗಿತ್ತು. ಆದರೆ, ಐಟಿ ರಿಟರ್ನ್ಸ್ ಸಲ್ಲಿಕೆಯೇ ಸಾಧ್ಯವಾಗದೆ ಅನೇಕರು ಕಿರಿಕಿರಿ ಅನುಭವಸಿದ್ದಾರೆ ಹಾಗೂ ಇ ರಸೀತಿ ಸಿಗದೆ ಇನ್ನೂ ಹಲವರು ವ್ಯವಸ್ಥೆ ಲೋಪದ ಬಗ್ಗೆ ದನಿಯೆತ್ತಿದ್ದಾರೆ.

ಇನ್ಫೋಸಿಸ್ ಜೊತೆ ಸಭೆ
ಹೊಸದಾಗಿ ಆರಂಭಿಸಿರುವ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಮಸ್ಯೆಗಳು/ತಾಂತ್ರಿಕ ಅಡಚಣೆ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ವಿತ್ತ ಸಚಿವಾಲಯದ ಅಧಿಕಾರಿಗಳು ಜೂನ್ ತಿಂಗಳಲ್ಲೇ ಇನ್ಫೋಸಿಸ್ ತಂಡದ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದರು.
ಐಸಿಎಐನ ಸದಸ್ಯ, ಲೆಕ್ಕ ಪರಿಶೋಧಕರು, ಸಲಹೆಗಾರರು ಮತ್ತು ತೆರಿಗೆ ಪಾವತಿದಾರರು ಸೇರಿ ಎಲ್ಲ ಪಾಲುದಾರರು ಈ ಸಂವಾದಾತ್ಮಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮತ್ತು ತೆರಿಗೆ ಪಾವತಿದಾರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆದಿದ್ದ ಸಭೆ ಬಳಿಕವೂ ವೆಬ್ ತಾಣ ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ.

ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರು ಸಂದಾಯ
2019ರಲ್ಲಿ ಆದಾಯ ತೆರಿಗೆ ಇಲಾಖೆಯ ಐಟಿ ರಿಟರ್ನ್ಸ್ ವೆಬ್ ತಾಣ ನವೀಕರಣ ಯೋಜನೆಯನ್ನು ಇನ್ಫೋಸಿಸ್ ಸಂಸ್ಥೆಗೆ ವಹಿಸಲಾಗಿತ್ತು. ಈ ಹಿಂದಿನ 63 ದಿನಗಳ ಐಟಿ ಮರುಪಾವತಿ ಪ್ರಕ್ರಿಯೆ ಅವಧಿಯನ್ನು ಕಡಿಮೆಗೊಳಿಸಲು ಸೂಕ್ತ ವ್ಯವಸ್ಥೆ ಒದಗಿಸುವ ಭರವಸೆಯನ್ನು ಇನ್ಫೋಸಿಸ್ ನೀಡಿತ್ತು. ಜೂನ್ 2021ರ ಎಣಿಕೆಯಂತೆ ಕೇಂದ್ರ ಸರ್ಕಾರದಿಂದ ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರು ಸಂದಾಯವಾಗಿದೆ.

ಜಿಎಸ್‌ಟಿ ಪೋರ್ಟಲ್ ನಿರ್ವಹಣೆ ಹೊಣೆ
ಈ ಹಿಂದೆ ಜಿಎಸ್‌ಟಿ ಪೋರ್ಟಲ್ ನಿರ್ವಹಣೆ ಹೊಣೆ ಹೊತ್ತು ಸರಿಯಾದ ಸೇವೆ ಒದಗಿಸುವಲ್ಲಿ ಇನ್ಫೋಸಿಸ್ ವಿಫಲವಾಗಿತ್ತು. ಕಡಿಮೆ ಮೊತ್ತದ ಬಿಡ್ ಮಾಡುವ ಮೂಲಕ ಸರ್ಕಾರಿ ಟೆಂಡರ್ ತನ್ನದಾಗಿಸಿಕೊಂಡು ಕಳಪೆ ಸೇವೆ ಒದಗಿಸುತ್ತಿದೆ ಎಂದು ಮಾಹಿತಿ ಮತ್ತು ಪ್ರಸರಣ ಇಲಾಖೆ ಹಿರಿಯ ಸಲಹೆಗಾರ ಕಂಚನ್ ಗುಪ್ತ ಕಿಡಿಕಾರಿದ್ದಾರೆ. ಡೇಟಾ ಎಂಟ್ರಿಯನ್ನು ಕಡಿಮೆ ಮಾಡಲು ತೆರಿಗೆ ಪಾವತಿದಾರರು ಯಾವುದೇ ತೆರಿಗೆ ಜ್ಞಾನವಿಲ್ಲದೆ, ಪೂರ್ವ ಭರ್ತಿಯೊಂದಿಗೆ ಐಟಿಆರ್ ಅನ್ನು ಭರ್ತಿ ಮಾಡಲು ಸಹಾಯ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಂವಾದಾತ್ಮಕ ಪ್ರಶ್ನೆಗಳೊಂದಿಗೆ ಉಚಿತವಾಗಿ ಲಭ್ಯವಿದೆ ಎಂದು ಹೇಳಲಾಗಿತ್ತು ಆದರೆ, ಆಫ್‌ಲೈನ್‌ನಲ್ಲೂ ಯಾವುದೇ ನೆರವು ದೊರಕುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ತಾಂತ್ರಿಕ ಸಮಸ್ಯೆ ಎದುರಾಗಿದೆ
ಖಾತೆದಾರರ ಪ್ರೊಫೈಲ್, ಡ್ಯಾಶ್ ಬೋರ್ಡ್,ಐಟಿಆರ್ 1, 2 ಹಾಗೂ 4 ಸಲ್ಲಿಕೆ, ವಿಡಿಯೋ ಕಾನ್ಫರೆನ್ಸ್ ಮನವಿ, ಡಿಜಿಟಲ್ ಸಹಿ ಪ್ರಮಾಣ ಪತ್ರ, ಹಳೆ ಐಟಿ ರಿಟರ್ನ್ಸ್ ದಾಖಲೆ ವೀಕ್ಷಣೆ, ಇ-ಪ್ಯಾನ್ ಸೇವೆ, ಆಧಾರ್-ಪ್ಯಾನ್ ಜೋಡಣೆ, ಅಧಿಕೃತ ಪ್ರತಿನಿಧಿ ಸೇರ್ಪಡೆಗೊಳಿಸುವುದು ಮುಂತಾದ ಪ್ರಕ್ರಿಯೆಗಳು ಸಮರ್ಪಕವಾಗಿ ಒದಗಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಇತ್ತೀಚೆಗೆ ಲೋಕಸಭೆಯಲ್ಲಿ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧುರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications