ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಹಂತ: ಬಿಜೆಪಿ 25, ಕಾಂಗ್ರೆಸ್ 11 ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 24: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ. ಈ ಹಂತದಲ್ಲಿ ಒಟ್ಟಾರೆ, 210 ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ಒಟ್ಟಾರೆ, 928 ಅಭ್ಯರ್ಥಿಗಳ ಪೈಕಿ 210(23%) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 928 ಅಭ್ಯರ್ಥಿಗಳ ಪೈಕಿ 158(17%) ಅಭ್ಯರ್ಥಿಗಳ ಮೇಲೆ ಗುರುತರ ಕ್ರಿಮಿನಲ್ ಕೇಸ್ ಗಳಿವೆ.

4ನೇ ಹಂತದ ಚುನಾವಣೆ: ಕಮಲ್ ನಾಥ್ ಮಗ ಅತ್ಯಂತ ಸಿರಿವಂತ ಅಭ್ಯರ್ಥಿ 4ನೇ ಹಂತದ ಚುನಾವಣೆ: ಕಮಲ್ ನಾಥ್ ಮಗ ಅತ್ಯಂತ ಸಿರಿವಂತ ಅಭ್ಯರ್ಥಿ

12 ಅಭ್ಯರ್ಥಿಗಳ ಅಪರಾಧಿಗಳಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. 5 ಅಭ್ಯರ್ಥಿಗಳ ಮೇಲೆ ಐಪಿಸಿ 302 ಅಡಿಯಲ್ಲಿ ಕೊಲೆ ಕೇಸುಗಳಿವೆ.

In 4th phase of LS polls, BJP fields 25 with criminal cases, Congress, 11

24 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307) ಕೇಸ್ ಗಳಿವೆ.4 ಅಭ್ಯರ್ಥಿಗಳು ಕಿಡ್ನಾಪ್ ಕೇಸ್(ಐಪಿಎಸ್ 364 ಎ) ಎದುರಿಸುತ್ತಿದ್ದಾರೆ. 21 ಅಭ್ಯರ್ಥಿಗಳು ಮಹಿಳೆಗೆ ಕಿರುಕುಳ (ಐಪಿಸಿ 354) ನೀಡಿದ ಆರೋಪ ಹೊತ್ತುಕೊಂಡಿದ್ದಾರೆ. ಕೆಲವರ ವಿರುದ್ಧ ಐಪಿಸಿ ಸೆಕ್ಷನ್ 498 ಎ ಅನ್ವಯ ಕೇಸ್ ಗಳಿವೆ. 16 ಅಭ್ಯರ್ಥಿಗಳ ವಿರುದ್ಧ ದ್ವೇಷಭಾಷಣದ ಕೇಸ್ ಗಳಿವೆ.

ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ ಚಾಂದಿನಿ ಚೌಕ್ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಆಸ್ತಿ ವಿವರ

ಪಕ್ಷವಾರು ಅಂಕಿ ಅಂಶದಲ್ಲಿ ಬಿಜೆಪಿಯ 57 ಮಂದಿ ಪೈಕಿ 24(44%), ಕಾಂಗ್ರೆಸ್ಸಿನ 18(32%), ಬಿಎಸ್ಪಿಯ 54ರ ಪೈಕಿ 11(20%), ಎಸ್ ಎಚ್ಎಸ್ ನ 21ರಪೈಕಿ 12(57%) ಹಾಗೂ 347 ಪಕ್ಷೇತರರ ಪೈಕಿ 60(17%) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ಏಪ್ರಿಲ್ 29ರಂದು 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ ನಿಗದಿಯಾಗಿದ್ದು, 37 ಸೂಕ್ಷ್ಮ ಕ್ಷೇತ್ರಗಳಾಗಿವೆ.

English summary
There are 210 candidates with pending criminal cases who are contesting the 4th phase of the Lok Sabha elections. A report by the Association for Democratic Reforms states that 210(23 per cent) out of 928 candidates analysed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X