ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಜಿಲ್ಲೆಯ ಪ್ರಮುಖ ಪ್ರಮುಖ ಪ್ರವಾಸಿ ತಾಣಗಳಿವು.. ಹೇಗೆ ತಲುಪಬಹುದು ಎಂಬ ವಿವರ ಇಲ್ಲಿದೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್‌, 05: ದಸರಾ ಹಬ್ಬದ ರಜೆ ಹಾಗೂ ವೀಕೆಂಡ್ ರಜೆಯನ್ನು ಸವಿಯಲು ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಗೆ ರಾಜ್ಯದ ವಿವಿಧ ಮೂಲೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.

ಕೋಟೆ ನಾಡು ಚಿತ್ರದುರ್ಗದ ವಾಣಿವಿಲಾಸ ಜಲಾಶಯ, ಗಾಯಿತ್ರಿ ಜಲಾಶಯ, ಅಶೋಕ್ ಸಿದ್ದಾಪುರ ಹಾಗೂ ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗಿ ಮಟ್ಟಿ, ಚಂದ್ರವಳ್ಳಿ ತೋಟಕ್ಕೆ ಭೇಟಿ ನೀಡಿ ನಂತರ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಹಾಗೂ ಹೊಳಲ್ಕೆರೆ ಗಣೇಶನ ದರ್ಶನ ಕೂಡ ಪಡೆಯಬಹುದಾಗಿದೆ.

Vani Vilasa Sagara : ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಆತಂಕ ಇಲ್ಲ ಎಂದು ತಜ್ಞರ ವರದಿ: ಗೋವಿಂದ ಕಾರಜೋಳVani Vilasa Sagara : ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಆತಂಕ ಇಲ್ಲ ಎಂದು ತಜ್ಞರ ವರದಿ: ಗೋವಿಂದ ಕಾರಜೋಳ

ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣ ಚಿತ್ರದ ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಬಾಳು ಎಂಬ ಹಾಡು ನೆನಪು ಬಂದರೆ ಸಾಕು ನೆನಪಾಗುವುದೇ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ. ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಮೈದುಂಬಿ ಹರಿದು, ಕೋಡಿಯೂ ಬಿದ್ದಿದೆ. ಜಲಾಶಯದಲ್ಲಿ 131.45 ಅಡಿ ನೀರು ಸಂಗ್ರಹವಾಗಿದೆ. ಈ ಜಲಾಶಯವನ್ನು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದಾರೆ. ಮಾರಿಕಣಿವೆ ನೋಡಲು ರಾಜ್ಯದ ಬಹುತೇಕ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಜಲಾಶಯವನ್ನಯ ನೋಡಲು ಬಯಸುವವರು ಕುಟುಂಬದೊಂದಿಗೆ ಭೇಟಿ ನೀಡಿ, ಜಲಾಶಯದ ನೀರಿನ ಸೊಬಗು, ಹಸಿರು ಕಣಿವೆಗಳ ಗುಡ್ಡ, ಹಿನ್ನೀರು, ಗುಡ್ಡಗಳ ಮೇಲೆ ಇರುವ ವಿಂಡ್ ಮಿಲ್‌ಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡ ಮರಗಳ ನಿಸರ್ಗ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

 ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ದಾರಿ

ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ದಾರಿ

ಇದರ ಜೊತೆಗೆ ಜಲಾಶಯದ ಎಡಭಾಗಕ್ಕೆ ಉತ್ತೇರಿಗುಡ್ಡ, ಬಲಭಾಗಕ್ಕೆ ಛತ್ರಿಗುಡ್ಡ ನೋಡಿಕೊಂಡು ಜಲಾಶಯದ ಕೋಡಿ ಬೀಳುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿಯ ದರ್ಶನವನ್ನು ಕೂಡ ಪಡೆಯಬಹುದಾಗಿದೆ. ಬಳಿಕ ತಾಲೂಕಿನ ಮತ್ತೊಂದು ಜಲಾಶಯವಾದ ಗಾಯಿತ್ರಿ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಸವಿಯಬಹುದಾಗಿದೆ. ಇಲ್ಲಿಂದ ಹಿರಿಯೂರಿನಿಂದ ವಾಣಿ ವಿಲಾಸ ಜಲಾಶಯಕ್ಕೆ 21 ಕಿಲೋ ಮೀಟರ್‌ ಆಗುತ್ತದೆ.

 ಡಾ.ವಿಷ್ಣುವರ್ದನ್‌ ನಟನೆಯ ಚಲನಚಿತ್ರ

ಡಾ.ವಿಷ್ಣುವರ್ದನ್‌ ನಟನೆಯ ಚಲನಚಿತ್ರ

ಇನ್ನು ಚಿತ್ರದುರ್ಗ ಕೋಟೆನಾಡು ಅಂತಲೇ ಪ್ರಖ್ಯಾತಿ ಹೊಂದಿದೆ. ನಾಗರಹಾವು ಅಂದರೆ ತಟ್ಟನೆ ನೆನಪಿಗೆ ಬರುವುದು ಡಾ.ವಿಷ್ಣುವರ್ಧನ್‌ ಅಭಿನಯದ ರಾಮಾಚಾರಿ ಚಿತ್ರ. ಡಾ. ವಿಷ್ಣುವರ್ಧನ್ ಅವರನ್ನು ಚಿತ್ರರಂಗದಲ್ಲಿ ಮಿಂಚಿಸಿದ್ದೇ ವನಿಕೆ ಓಬವ್ವ ಮೆರೆದ ಕೋಟೆ ಆಗಿದೆ. ಜಿಲ್ಲೆಯ ಪ್ರವಾಸಿ ತಾಣವಾದ ಚಿತ್ರದುರ್ಗದ ಪಾಳೆಯಗಾರರು ಆಳ್ವಿಕೆ ನಡೆಸಿರುವ ಏಳು ಸುತ್ತಿನ ಕೋಟೆಗೆ ಒಮ್ಮೆ ಭೇಟಿ ಕೊಡಿ. ಅಲ್ಲಿನ ಇತಿಹಾಸವನ್ನು ತಿಳಿದು ಕೋಟೆ ಸೌಂದರ್ಯವನ್ನು ಸವಿಯಬಹುದಾಗಿದೆ.

 ಕೋಟೆ ನಿರ್ಮಾಣಕ್ಕೆ ಕಾರಣಕರ್ತರು ಯಾರು?

ಕೋಟೆ ನಿರ್ಮಾಣಕ್ಕೆ ಕಾರಣಕರ್ತರು ಯಾರು?

ಕೋಟೆಯನ್ನು ಮೂಲತಃ 11ನೇ ಶತಮಾನದ ಅಂದಿನ ಚಾಲುಕ್ಯ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದು, ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದ ಆಡಳಿತ ನಡೆಸಿರುವ ಕೋಟೆ ಆಗಿದೆ. ಕೋಟೆ ಒಳಗಡೆ ಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಏಕನಾಥೇಶ್ವರಿ, ಗೋಪಾಲಕೃಷ್ಣ ದೇವಾಲಯ, ಅಕ್ಕ ತಂಗಿ ಹೊಂಡ, ಓಬವ್ವನ ಕಿಂಡಿ, ಶಾಸನಗಳು ಈಗೆ ವಿವಿಧ ದೇವಾಲಯಗಳು ಸೇರಿದಂತೆ ಮತ್ತಿತರರ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಇದಾದ ಬಳಿಕ ಜೋಗಿ ಮಟ್ಟಿಯ ಪ್ರಕೃತಿ ಸೌಂದರ್ಯ ಸವಿದು, ಚಂದ್ರವಳ್ಳಿ ತೋಟಕ್ಕೂ ಭೇಟಿ ನೀಡಬಹುದಾಗಿದೆ.

 ಅಶೋಕ ಸಿದ್ದಾಪುರಲ್ಲಿರುವ ಶಾಸನಗಳು?

ಅಶೋಕ ಸಿದ್ದಾಪುರಲ್ಲಿರುವ ಶಾಸನಗಳು?

ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರಕ್ಕೆ ಭೇಟಿ ನೀಡಿ ಅಶೋಕನ ಶಾಸನಗಳ ಬಗ್ಗೆ ತಿಳಿಯಬಹುದು. ಇಲ್ಲಿ ಪ್ರಮುಖವಾಗಿ 30ಕ್ಕೂ ಹೆಚ್ಚು ಶಾಸನಗಳು ಸಂಗ್ರಹವಾಗಿವೆ. ಅಶೋಕನು ತನ್ನದೇ ಆದ ಶಾಸನಗಳನ್ನು ವಿವರಿಸಲು ಧಮ್ಮ ಲಿಪಿ ಎಂಬ ಅಭಿವ್ಯಕ್ತಿಯನ್ನು ಬಳಸಿದ್ದಾರೆ ಎನ್ನುವ ಉಲ್ಲೇಖ ಇದೆ. ಅಶೋಕನು ನಡೆಸಿದ ಆಡಳಿತದ ಬಗ್ಗೆ ಇಲ್ಲಿ ಹೆಚ್ಚಿನದಾಗಿ ತಿಳಿಯಬಹುದಾಗಿದೆ. ಅಶೋಕನ ನೈತಿಕ, ಧಾರ್ಮಿಕ ನಿಯಮಗಳು ಮತ್ತು ಅವನ ಸಾಮಾಜಿಕ ಹಾಗೂ ಪ್ರಾಣಿ ಕಲ್ಯಾಣ ಕಾರ್ಯಕ್ರಮ, ರಾಜಾಜ್ಞೆಗಳು, ಆಡಳಿತದ ತಿಳಿಯಬಹುದಾಗಿದೆ. ಇನ್ನು ಉಳಿದಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆಯಬಹುದು. ಹಾಗೂ ಹೊಳಲ್ಕೆರೆ ನಗರದ ಪ್ರಸಿದ್ಧ ಶ್ರೀ ಗಣಪತಿ ದೇವಾಲಯಕ್ಕೂ ಸಹ ಭೇಟಿ ದರ್ಶನ ಪಡೆಯಬಹುದಾಗಿದೆ.

 ಚಿರ್ತದುರ್ಗ ಕೋಟೆಗೆ ತಲುಪುವ ಮಾರ್ಗ?

ಚಿರ್ತದುರ್ಗ ಕೋಟೆಗೆ ತಲುಪುವ ಮಾರ್ಗ?

ಬೆಂಗಳೂರಿನಿಂದ ಹಿರಿಯೂರಿನ ಮೂಲಕ ಪ್ರಯಾಣ ಬೆಳೆಸಿದರೆ ವಾಣಿ ವಿಲಾಸ ಜಲಾಶಯ ನೋಡಬಹುದು. ನಂತರ ಹಿರಿಯೂರು ಮಾರ್ಗವಾಗಿ ಎಡಭಾಗಕ್ಕೆ ಚಿತ್ರದುರ್ಗ ತಲುಪಿ ಕೋಟೆ, ಜೋಗಿ ಮಟ್ಟಿ, ಚಂದ್ರವಳ್ಳಿ ತೋಟ ಸವಿದು, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಾಗೂ ಮೊಳಕಾಲ್ಮೂರಿನ ಅಶೋಕ ಸಿದ್ದಾಪುರಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.

English summary
Information about route to reach important tourist spots of Chitradurga district is given here, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X