Get Updates
Get notified of breaking news, exclusive insights, and must-see stories!

Dhruv Rathee: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುದುಡಲು ಕಾರಣವಾಗಿದ್ದು ಯೂಟ್ಯೂಬರ್ ಧ್ರುವ ರಾಠಿ..ಹೇಗೆ ಗೊತ್ತಾ?

ಬೆಂಗಳೂರು, ಜೂನ್. 06: ಇತ್ತೀಚೆಗೆ ಮಾಧ್ಯಮಗಳು ಒಂದು ಪಕ್ಷದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿರುವುದು ಕಣ್ಣಿಗೆ ರಾಚುತ್ತಿದೆ. ವಿರೋಧ ಪಕ್ಷಗಳಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ನಾಲ್ಕನೆ ಕಂಬ ತನ್ನ ಕೆಲಸ ಮರೆತಿರುವುದು ಸ್ಪಷ್ಟವಾಗಿದೆ. ಯೂಟ್ಯೂಬ್‌ ಚಾನೆಲ್‌ಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿರುವುದು ಇದನ್ನು ಮತ್ತಷ್ಟು ಸ್ಪಷ್ಟವಾಗಿಸಿದೆ.

ಸದ್ಯ ನಾವು ಹೇಳಲು ಹೊರಟಿರುವುದು ಕೂಡ ಇಂತಹದ್ದೆ ಒಬ್ಬ ಯೂಟ್ಯೂಬರ್ ಒಬ್ಬರ ಬಗ್ಗೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಂದುಕೊಂಡಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಲು, 150ರ ಗಡಿ ದಾಟಲ್ಲ ಎಂದು ಹೇಳಲಾಗುತ್ತಿದ್ದ ಇಂಡಿಯಾ ಒಕ್ಕೂಟದ ಸಾಧನೆಗೆ ಹೆಚ್ಚು ಕೊಡುಗೆ ಕೊಟ್ಟವರಲ್ಲಿ ಈ ಯೂಟ್ಯೂಬರ್ 'ಧ್ರುವ್ ರಾಠಿ' ಪ್ರಮುಖ ಪಾತ್ರ ವಹಿಸಿದ್ದಾರೆ.

How YouTuber Dhruv Rathee ruined Modi-led BJP in Lok Sabha polls 2024

ಧ್ರುವ್ ರಾಠಿ ಮತ್ತು ಸತ್ಯಾಂಶದ ಮೇಲೆ ಬೆಳಕು ಚೆಲ್ಲುವ ವಿಡಿಯೋಗಳು

ಎಸ್... ಧ್ರುವ್ ರಾಠಿ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕಿಂತ ಮುಂಚೆಯಿಂದ ಸರ್ಕಾರದ ನೀತಿಗಳ ವಿರುದ್ಧ ಮಾಡಿದ ವಿಡಿಯೋಗಳು ಜನರ ಗಮನ ಸೆಳೆಯಲು ಆರಂಭಿಸಿದ್ದವು. ಮಾಹಿತಿಯುಕ್ತ ಮತ್ತು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿಷಯವನ್ನು ಮುಟ್ಟಿಸುವ ಅವರ ವಿಡಿಯೋಗಳು ವೈರಲ್ ಆಗಲು ಪ್ರಾರಂಭಿಸಿದ್ದವು. ಜನ ಅವರ ವಿಡಿಯೋಗಳನ್ನು ಹುಡುಕು ಹುಡುಕಿ ನೋಡಲು ಪ್ರಾರಂಭಿಸಿದ್ದೇ ಮೋದಿ ಸರ್ಕಾರದ ಪತನಕ್ಕೆ ಹೊಡೆದ ಮೊದಲ ಮೊಳೆಯಾಗಿತ್ತು!.

ಧ್ರುವ್ ರಾಠಿ ಭಾರತೀಯರಾದರೂ ಜರ್ಮನಿಯಲ್ಲಿ ನೆಲೆಸಿದ್ದಾರೆ. ದೇಶದ ಬಗ್ಗೆ ಅಪಾರ ಕಾಳಜಿ ಇರುವ ಇವರು ತಮ್ಮ ವಿಡಿಯೋಗಳಲ್ಲಿ ಬಿಜೆಪಿ ಸರ್ಕಾರ ನೀತಿಗಳು ಜನ ಸಾಮಾನ್ಯರನ್ನು ಹೇಗೆ ಭಾದಿಸುತ್ತಿವೆ. ಶ್ರೀಮಂತರ ತಿಜೋರಿಯನ್ನು ಹೇಗೆ ತುಂಬಿಸುತ್ತಿದೆ ಎಂಬುದನ್ನು ಅಚ್ಚುಕಟ್ಟಾಗಿ ವಿವರಿಸುತ್ತಾರೆ. ವಿಡಿಯೋಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆಯುತ್ತವೆ.

ಸರ್ವಾಧಿಕಾರ+ಮೋದಿ ಸರ್ಕಾರ

ಲೋಕಸಭಾ ಚುನಾವಣಾ ಸಮಯದಲ್ಲಿ ಮತ ಚಲಾಯಿಸುವ ಮುನ್ನ ಯೋಚಿಸಿ ಮತ ಚಲಾಯಿಸುವಂತೆ ಮಾಡಿದ್ದ ಸರಣಿ ವಿಡಿಯೋಗಳು ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ದಾಖಲೆ ಬರೆದಿದ್ದವು. ರಿಯಾಲಿಟಿ ಆಫ್ ಮೋದಿ, ದಿ ನರೇಂದ್ರ ಮೋದಿ ಫೈಲ್ಸ್, ಸರ್ವಾಧಿಕಾರ ಜಾರಿಯಾಯಿತೆ...?, ಚುನಾವಣಾ ಬಾಂಡ್‌ಗಳ ಹಗರಣ, ಮೋದಿ: ದಿ ರಿಯಲ್ ಸ್ಟೋರಿ, ರೈತರು ಮತ್ತು ಮೋದಿ, ರಾಮ ಮಂದಿರ... ಮುಂದಾದ ವಿಡಿಯೋಗಳನ್ನು ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ.

How YouTuber Dhruv Rathee ruined Modi-led BJP in Lok Sabha polls 2024

ಈ ಎಲ್ಲಾ ವಿಡಿಯೋಗಳು ಮತದಾರನ ಮೇಲೆ ಪ್ರಭಾವ ಬೀರಿವೆ. ಚುನಾವಣಾ ಸಮಯದಲ್ಲಿ ಮಾಧ್ಯಮಗಳು ಬಿಜೆಪಿ ಪರ ವಹಿಸಿದ್ದನ್ನು, ಬಿಜೆಪಿ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ನೀಡಿದ ಹೇಳಿಕೆಗಳನ್ನು ಸಾಕ್ಷಿ ಸಮೇತ ಬಯಲು ಮಾಡುವ ಅವರು ತಾವು ವೈಜ್ಞಾನಿಕ ಮತ್ತು ಶೈಕ್ಷಣಿಕ ವಿಡಿಯೋಗಳನ್ನು ಬಿಟ್ಟು ರಾಜಕೀಯ ವಿಡಿಯೋಗಳನ್ನು ಮಾಡಲು ಆರಂಭಿಸಿದ್ದು ಏಕೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಫೆಬ್ರವರಿ 2024ರಲ್ಲಿ ಚಂಡೀಗಡ ಮೇಯರ್ ಎಲೆಕ್ಷನ್‌ನಲ್ಲಿ ನಡೆದ ಹಗರಣ ಇವರನ್ನು ರಾಜಕೀಯ ವಿಚಾರಗಳ ವಿಡಿಯೋ ಮಾಡಲು ಪ್ರೇರೆಪಿಸಿದ್ದನ್ನು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ಕೊಲೆ ಎಂದು ಸುಪ್ರೀಂಕೋರ್ಟ್ ಕೊಟ್ಟ ಹೇಳಿಕೆ ನನ್ನನ್ನು ತುಂಬಾ ಕಾಡಿತ್ತು. ಅಂದಿನಿಂದ ನಾನು ಸುಮ್ಮನೆ ಕೂರುವುದಿಲ್ಲ ಎಂದು ನಿರ್ಧರಿಸಿದೆ. ಅಂದಿನಿಂದ ಜನರನ್ನು ಎಚ್ಚರಿಸುವುದು ನನ್ನ ಕೆಲಸವಾಯಿತು. ಯಾರು ಏನು ಮಾಡಲಿ ಬಿಡಲಿ, ನಾನು ಮಾತ್ರ ನನ್ನ ಕೆಲಸ ಮಾಡುತ್ತೆನೆ ಎಂದು ನಿರ್ಧರಿಸಿದೆ ಎಂದಿದ್ದಾರೆ.

"ತನ್ನ ಕೆಲಸಕ್ಕೆ 21 ಮಿಲಿಯನ್ ಯೂಟ್ಯೂಬ್ ಚಂದಾದಾರರು, ಮೂರು ತಿಂಗಳಲ್ಲಿ ಬರೋಬ್ಬರಿ 70 ಮಿಲಿಯನ್ ಯೂನಿಕ್ ಯೂಸರ್ಸ ಬಂದಿದ್ದಾರೆ. ಇದರ ಅರ್ಥ ಒಂದು ಯೂಟ್ಯೂಬ್ ಚಾನೆಲ್ ಬರೋಬ್ಬರಿ 7% ಮತದಾರರನ್ನು ತಲುಪಿದೆ. ಇದು ಬರಿ ಯೂಟ್ಯೂಬ್ ಡಾಟ. ಆದರೆ, ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ಗಳ ಮೂಲಕ ಹೆಚ್ಚು ಕಡಿಮೆ 20 ರಿಂದ 25 % ಮತದಾರರನ್ನು ತಲುಪಿದ್ದೇವೆ. ಅದರಲ್ಲಿ ಶೇಕಡಾ 80 ರಷ್ಟು ವೀಕ್ಷಕರು ಭಾರತೀಯರು" ಎಂಬ ಡಾಟವನ್ನು ಹಂಚಿಕೊಂಡಿದ್ದಾರೆ.

ಪ್ರೋಜೆಕ್ಟರ್‌ಗಳ ಮೂಲಕ ಧ್ರುವ್ ರಾಠಿ ವಿಡಿಯೋ ಪ್ರದರ್ಶನ!

ಇನ್ನು, ಧ್ರುವ್ ರಾಠಿ ಅವರ ಈ ವಿಡಿಯೋಗಳನ್ನು ಹರಿಯಾಣ, ಚಂಢೀಗಡ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರೊಜೆಕ್ಟರ್‌ಗಳ ಮೂಲಕ ಪ್ರಸಾರ ಮಾಡಲಾಗಿದೆ. ಹಲವು ಸಂದರ್ಶನಗಳಲ್ಲಿ ಯುವಜನತೆ ಇವರ ಹೆಸರನ್ನು ಪ್ರಸಾರಪಡಿಸಿದ್ದಾರೆ. ಇದಲ್ಲದೆ ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ಇವರ ಇಂಟರ್‌ವ್ಯೂ , ಇವರ ವಿಡಿಯೋಗಳನ್ನು ವರದಿ ಮಾಡಿವೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇವರ ವಿಡಿಯೋಗಳು ವೈರಲ್ ಆದ ಕಾರಣ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ವಿಡಿಯೋ ಬಿಡುಗಡೆ ಮಾಡಿದರು.

ಈ ವಿಡಿಯೋಗಳನ್ನು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಹಲವು ಮಂದಿ ಭಾಷಾಂತರ ಮಾಡಿದ್ದರು. ಈ ಮೂಲಕ ಕೋಟ್ಯಾಂತರ ಜನರನ್ನು ಧ್ರುವ್ ರಾಠಿ ತಲುಪಿದ್ದರು. ಅವರನ್ನು ತಡೆಯಲು ನಡೆದ ‍ಷಡ್ಯಂತರಗಳು ಕೂಡ ಕಡಿಮೆ ಏನಲ್ಲ... ಆದರೂ ಎಲ್ಲವನ್ನೂ ದಾಟಿ ಒಬ್ಬ ಸಾಮಾನ್ಯ ಮನುಷ್ಯ ಕೂಡ ತನ್ನ ಹಕ್ಕಿಗಾಗಿ ಹೋರಾಡಿದರೇ ಫಲ ಸಿಗುವುದು ಗ್ಯಾರಂಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿಯೇ ಕಾಮನ್ ಮ್ಯಾನ್ ಯಾವತ್ತೂ ಕಾಮನ್ ಮ್ಯಾನ್ ಅಲ್ಲ, ಕಾಮನ್ ಮ್ಯಾನ್ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ ಎಂದು ಒತ್ತಿ ಹೇಳಿದ್ದಾರೆ.

543 ಲೋಕಸಭಾ ಸ್ಥಾನಗಳ ಪೈಕಿ 400 ಸ್ಥಾನಗಳನ್ನು ಗಳಿಸುತ್ತೇವೆ ಎಂದು ಬೀಗುತ್ತಿದ್ದ ಎನ್‌ಡಿಎ ಕೇವಲ 292 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಾರೆ. ಆದರೆ, ಆಡಳಿತಾರೂಢ ಮೈತ್ರಿಕೂಟದ ಬಗ್ಗೆ ಎಕ್ಸಿಟ್ ಪೋಲ್‌ಗಳು ಊಹಿಸಿದ್ದಕ್ಕಿಂತ ಕಡಿಮೆಯಾಗಿದೆ. ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟವು 233 ಸ್ಥಾನಗಳನ್ನು ಪಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+