• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣ ನೋಡುವುದು ಹೇಗೆ?

|
Google Oneindia Kannada News

2021ರ ನವೆಂಬರ್ 19 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಈ ಖಗೋಳ ವಿದ್ಯಮಾನ ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಎನಿಸಿಕೊಂಡಿದೆ. ಭಾರತದಲ್ಲೂ ಚಂದ್ರಗ್ರಹಣ ಗೋಚರಿಸಲಿದೆ.

2021ರ ನವೆಂಬರ್ 19ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ (28 ಕಾರ್ತಿಕ, 1943 ಶಕ ವರ್ಷ). ಭಾರತದಿಂದ ಚಂದ್ರೋದಯದ ಸ್ವಲ್ಪವೇ ಹೊತ್ತಿನಲ್ಲಿ ಭಾಗಶಃ ಚಂದ್ರಗ್ರಹಣದ ಮೋಕ್ಷಕಾಲದ ದರ್ಶನ ಕೆಲವೇ ಕ್ಷಣಗಳ ಕಾಲ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ತೀರಾ ಪೂರ್ವ ಭಾಗಗಳಲ್ಲಿ ಕಾಣಿಸಲಿದೆ.

ನ.19ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ ಸಂಗತಿನ.19ರಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ ಸಂಗತಿ

ಐ.ಎಂ.ಡಿ, ನಾಸಾ, ಟೈಮ್ ಅಂಡ್ ಡೇಟ್ ಮೂಲಗಳ ಪ್ರಕಾರ, ಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ವಲಯದಲ್ಲಿ ಗೋಚರಿಸಲಿದೆ. ಸುಮಾರು 50 ದೇಶಗಳಲ್ಲಿ ಚಂದ್ರಗ್ರಹಣವನ್ನು ಅಲ್ಲಿನ ಕಾಲಮಾನ ಪ್ರಕಾರ ವೀಕ್ಷಿಸಬಹುದು.

ಇಂಡಿಯಾನಾದ ಹೋಲ್‌ಕಾಂಬ್ ವೀಕ್ಷಣಾಲಯವು ಚಂದ್ರನ ಹೆಚ್ಚಿನ ಭಾಗವನ್ನು ಆವರಿಸುವ ಗ್ರಹಣದಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತೋರಿಸುವ ಸೂಕ್ತ ಗ್ರಾಫಿಕ್ ಅನ್ನು ಹಂಚಿಕೊಂಡಿದೆ. "ಇದು 580 ವರ್ಷಗಳಲ್ಲಿ ದೀರ್ಘವಾದ ಭಾಗಶಃ ಚಂದ್ರಗ್ರಹಣವಾಗಿದೆ" ಎಂದು ವೀಕ್ಷಣಾಲಯವು ಟ್ವೀಟ್ ಮಾಡಿದೆ.

ಭಾರತೀಯ ಕಾಲಮಾನದಲ್ಲಿ ಗ್ರಹಣ ವೀಕ್ಷಣೆ

ಭಾರತೀಯ ಕಾಲಮಾನದಲ್ಲಿ ಗ್ರಹಣ ವೀಕ್ಷಣೆ

ಭಾಗಶಃ ಚಂದ್ರಗ್ರಹಣವು ಭಾರತೀಯ ಕಾಲಮಾನ 12 ಗಂಟೆ 48 ನಿಮಿಷಕ್ಕೆ ಆರಂಭವಾಗಲಿದೆ. ಭಾಗಶ ಚಂದ್ರಗ್ರಹಣ ಐ.ಎಸ್.ಟಿ. 16 ಗಂಟೆ 17 ನಿಮಿಷಕ್ಕೆ ಕೊನೆಗೊಳ್ಳಲಿದೆ.

ಮುಂದಿನ ಚಂದ್ರಗ್ರಹಣವು 2022ರ ನವೆಂಬರ್ 8ರಂದು ಭಾರತದಲ್ಲಿಯೂ ಗೋಚರಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ.

 ಚಂದ್ರಗ್ರಹಣ ಸಂಭವಿಸುವುದು ಹೀಗೆ?

ಚಂದ್ರಗ್ರಹಣ ಸಂಭವಿಸುವುದು ಹೀಗೆ?

ಹುಣ್ಣಿಮೆಯ ದಿನ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮೂರೂ ಒಟ್ಟಿಗೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣವು ಚಂದ್ರ ಸಂಪೂರ್ಣವಾಗಿ ಭೂಮಿಯ ಸಂಪೂರ್ಣ ಛಾಯೆಯಡಿ ಬಂದಾಗ ಘಟಿಸುತ್ತದೆ ಮತ್ತು ಭಾಗಶಃ ಚಂದ್ರಗ್ರಹಣವು ಚಂದ್ರನ ಭಾಗಶಃ ಭಾಗ ಭೂಮಿಯ ಛಾಯೆಯಡಿ ಬಂದಾಗ ಸಂಭವಿಸುತ್ತದೆ.

ಸಾವಿರ ಕುಳಿಗಳ ಸರದಾರ ಚಂದ್ರ, ನೀರು ಕಂಡ ಬೆನ್ನಲ್ಲೇ ಮತ್ತೊಂದು ವಿಸ್ಮಯಸಾವಿರ ಕುಳಿಗಳ ಸರದಾರ ಚಂದ್ರ, ನೀರು ಕಂಡ ಬೆನ್ನಲ್ಲೇ ಮತ್ತೊಂದು ವಿಸ್ಮಯ

 ಸುದೀರ್ಘ ಚಂದ್ರಗ್ರಹಣ

ಸುದೀರ್ಘ ಚಂದ್ರಗ್ರಹಣ

ನವೆಂಬರ್ 19 ರಂದು, ಸಂಭವಿಸುವ ಈ ಚಂದ್ರಗ್ರಹಣ 21ನೇ ಶತಮಾನದ ಸುದೀರ್ಘ ಚಂದ್ರಗ್ರಹಣ. 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ. ಮುಂದೆ ಸಂಭವಿಸುವುದೂ ಇಲ್ಲ. 3 ಗಂಟೆ 28 ನಿಮಿಷ 23 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಇರಲಿದೆ. ನೀವು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ಸ್ ಬಳಸುವ ಅಗತ್ಯವಿಲ್ಲ, ಬೆಳಗಿನ ಜಾವ 2.19 ಹಾಗೂ 5.47ಕ್ಕೆ ಹೊರಗಡೆ ಬಂದು ಆಕಾಶ ನೋಡಿದರೆ ಸಾಕು ಚಂದ್ರಗ್ರಹಣ ಗೋಚರಿಸುತ್ತದೆ.

ಮೋಡಕವಿದರೆ ಏನು ಮಾಡುವುದು?

ಮೋಡ ಕವಿದ ವಾತಾವರಣದಿಂದ ಚಂದ್ರಗ್ರಹಣ ವೀಕ್ಷಣೆ ಕಷ್ಟವಾದರೆ.ಟೈಮ್ ಅಂಡ್ ಡೇ ಹಾಗೂ ನಾಸಾ ವರ್ಚ್ಯುಯಲ್ ಟೆಲಿಸ್ಕೋಪ್ ಯೋಜನೆ ಮೂಲಕ ನೇರ ಪ್ರಸಾರ ಮಾಡಲಿದ್ದು, ನವೆಂಬರ್ 18 11 PM Pacific Time(ಭಾರತೀಯ ಕಾಲಮಾನದಂತೆ 12:30 PM) ಗೆ ವೀಕ್ಷಿಸಬಹುದು.

English summary
Lunar partial eclipse on Nov 18-19 will be the longest of the century with a duration of over 3 hours and 28 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X