ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಹೇಗೆ?: ಇಲ್ಲಿದೆ ಕೆಲವು ಟಿಪ್ಸ್‌

|
Google Oneindia Kannada News

ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ತೀವ್ರ ಪ್ರಮಾಣದಲ್ಲಿ ಹರಡುತ್ತಿದೆ. ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದರೂ ಕೂಡಾ ಕೋವಿಡ್‌ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಕೊರೊನಾ ವೈರಸ್‌ ಸೋಂಕಿಗೆ ಒಳಗಾದ ಕೆಲವು ಜನರಲ್ಲಿ ಇನ್ನೂ ತೀವ್ರವಾದ ಅನಾರೋಗ್ಯ ಕಾಣಿಸಿಕೊಂಡಿದ್ದರೂ, ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದಿದ್ದರೂ ಕೂಡಾ ಕೋವಿಡ್‌ ಸೋಂಕು ಬರುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಕೋವಿಡ್‌ ವೇಗವಾಗಿ ಹರಡುವುದನ್ನು ಮುಂದುವರೆಸಿದೆ. ಈಗ ಕೋವಿಡ್‌ ರೂಪಾಂತರಗಳಿಂದಾಗಿ ಕೋವಿಡ್ ಪ್ರಕರಣಗಳು ಅಧಿಕವಾಗಿದೆ. ಈಗ ಶೇಕಡ 98ರಷ್ಟು ಕೋವಿಡ್‌ ಪ್ರಕರಣಗಳು ಕೋವಿಡ್‌ ರೂಪಾಂತರದಿಂದಾಗಿ ಕಾಣಿಸಿಕೊಂಡಿದೆ.

ಇನ್ನು ಕೋವಿಡ್‌ ಸೋಂಕಿಗೆ ಒಳಗಾದ ಹೆಚ್ಚಿನ ಜನರು ಈಗ ಸೌಮ್ಯವಾದ ಅನಾರೋಗ್ಯವನ್ನು ಹೊಂದಿದ್ದಾರೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ (CDC) ಮನೆಯಲ್ಲಿ ಚೇತರಿಸಿಕೊಳ್ಳಬಹುದು. "ಕೆಲವು ರೋಗಿಗಳಿಗೆ ಚಿಕಿತ್ಸೆಯ ಅಗತ್ಯವಿದ್ದರೂ ಮನೆಯಲ್ಲಿಯೇ ತಮ್ಮನ್ನು ತಾವು ಸುರಕ್ಷಿತವಾಗಿ ಕಾಳಜಿ ವಹಿಸಿಕೊಳ್ಳುವುದಿಲ್ಲ," ಎಂದು ನ್ಯೂಯಾರ್ಕ್-ಪ್ರೆಸ್ಬಿಟೇರಿಯನ್/ವೈಲ್ ಕಾರ್ನೆಲ್ ಮೆಡಿಕಲ್ ಸೆಂಟರ್‌ನಲ್ಲಿ ಅಡಲ್ಟ್ ಇಂಟರ್ನಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಜೂಡಿ ತುಂಗ್ ಹೇಳಿದ್ದಾರೆ. "ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು, ಅವುಗಳಿಗೆ ಹೇಗೆ ಚಿಕಿತ್ಸೆಯನ್ನು ಪಡೆಯುವುದು ಎಂದು ತಿಳಿಯುವುದು ನೀವು ಶೀಘ್ರದಲ್ಲಿ ಕೋವಿಡ್‌ನಿಂದ ಗುಣಮುಖರಾಗಲು ಸಹಾಯಕವಾಗಿದೆ," ಎಂದು ಕೂಡಾ ಡಾ. ಜೂಡಿ ತುಂಗ್ ತಿಳಿಸಿದ್ದಾರೆ.

ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ: WHOಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ: WHO

ಈ ನಡುವೆ ಡಾ. ಜೂಡಿ ತುಂಗ್ ಒಳ್ಳೆಯ ಸುದ್ದಿಯನ್ನು ನೀಡಿದ್ದಾರೆ. "ಕೋವಿಡ್‌ ಲಸಿಕೆಗಳು ಓಮಿಕ್ರಾನ್ ಸೇರಿದಂತೆ ಕೋವಿಡ್‌ನಿಂದಾಗಿ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಬೂಸ್ಟರ್ ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಅರ್ಹ ವ್ಯಕ್ತಿಗಳು ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ಪಡೆಯಿರಿ," ಎಂದು ಡಾ. ಜೂಡಿ ತುಂಗ್ ಸಲಹೆ ನೀಡಿದ್ದಾರೆ. ಇನ್ನು ನೀವು ಕೋವಿಡ್‌ನ ಸೌಮ್ಯ ಪ್ರಕರಣವನ್ನು ಹೊಂದಿದ್ದರೆ ಮನೆಯಲ್ಲಿಯೇ ಹೇಗೆ ಚಿಕಿತ್ಸೆ ಪಡೆಯಬಹುದು, ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬ ಬಗ್ಗೆ ಡಾ. ಜೂಡಿ ತುಂಗ್ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಕೋವಿಡ್ ಸೋಂಕಿತರು ಟೆಲಿಮೆಡಿಸಿನ್ ಸೇವೆ ಪಡೆಯುವುದು ಹೇಗೆ? ಕೋವಿಡ್ ಸೋಂಕಿತರು ಟೆಲಿಮೆಡಿಸಿನ್ ಸೇವೆ ಪಡೆಯುವುದು ಹೇಗೆ?

 ರೋಗಲಕ್ಷಣಗಳನ್ನು ತಿಳಿಯಿರಿ

ರೋಗಲಕ್ಷಣಗಳನ್ನು ತಿಳಿಯಿರಿ

ಕೋವಿಡ್‌ ರೋಗಿಗಳಲ್ಲಿ ಕಾಣುವ ಕೋವಿಡ್‌ ರೋಗ ಲಕ್ಷಣಗಳು ಹಲವಾರು ಇದೆ. ತಲೆನೋವು, ನೋಯುತ್ತಿರುವ ಗಂಟಲು, ಜ್ವರ, ದಟ್ಟಣೆ ಮತ್ತು ಮೂಗು ಸೋರುವಿಕೆ, ಕೆಮ್ಮು, ಉಸಿರಾಟದ ತೊಂದರೆ, ಸ್ನಾಯು ನೋವು, ತೀವ್ರ ಆಯಾಸ, ವಾಕರಿಕೆ, ಅತಿಸಾರ, ಮತ್ತು ರುಚಿ ಮತ್ತು ವಾಸನೆ ಇಲ್ಲದಿರುವುದು ಕೋವಿಡ್‌ ಸೋಂಕಿನ ಪ್ರಮುಖ ಲಕ್ಷಣಗಳು ಆಗಿದೆ. ಡೆಲ್ಟಾ ಮತ್ತು ಹಿಂದಿನ ರೂಪಾಂತರಗಳಂತೆಯೇ ಓಮಿಕ್ರಾನ್ ರೋಗಲಕ್ಷಣಗಳನ್ನು ಹೊಂದಿದೆ. ಆದರೂ ಹೆಚ್ಚಿನ ಜನರು ಕೆಮ್ಮು, ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳಿಗಿಂತ ಅಧಿಕವಾಗಿ, ಗಂಟಲು ನೋವು ಮತ್ತು ಮೂಗು ಸೋರುವಿಕೆಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಕೆಲವೇ ಜನರಿಗೆ ಮಾತ್ರ ರುಚಿ ಮತ್ತು ವಾಸನೆ ನಷ್ಟ ಉಂಟಾಗುತ್ತಿದೆ ಎಂದು ಡಾ. ತುಂಗ್ ಹೇಳಿದ್ದಾರೆ. "ರೋಗಲಕ್ಷಣಗಳ ತೀವ್ರತೆಯು ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಆದ್ದರಿಂದ ರೋಗದ ಅವಧಿಯು ಕೆಲವು ದಿನಗಳವರೆಗೆ ಇರುತ್ತದೆ. ನಿಮ್ಮ ಆರೋಗ್ಯ ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರುವುದು ಮುಖ್ಯ," ಎಂದು ತಿಳಿಸಿದ್ದಾರೆ.

 ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ಕೋವಿಡ್‌ ರೋಗಲಕ್ಷಣಗಳು ಪ್ರಾರಂಭವಾದ ತಕ್ಷಣ ನಿಮ್ಮ ವೈದ್ಯರಿಗೆ ತಿಳಿಸಿ. ಅವರು ನಿಮಗೆ ಸಲಹೆ ನೀಡಬಹುದು. ವಯಸ್ಸಾದವರು ಮತ್ತು ಸ್ಥೂಲಕಾಯತೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹ ಅಥವಾ ಹೃದಯರಕ್ತನಾಳದ ಕಾಯಿಲೆಯಂತಹ ಪರಿಸ್ಥಿತಿಗಳಿರುವ ಜನರು ಸೇರಿದಂತೆ ಹೆಚ್ಚಿನ ಅಪಾಯವಿರುವ ಜನರಿಗೆ ಇದು ಮುಖ್ಯವಾಗಿದೆ. ನೀವು ಪ್ರಾಥಮಿಕ ಆರೈಕೆ ಪಡೆಯಲು ವೈದ್ಯರ ಸಂಪರ್ಕ ಹೊಂದಿಲ್ಲದಿದ್ದರೆ, ವಿಶೇಷವಾಗಿ ಟೆಲಿಮೆಡಿಸಿನ್ ಸಾಮರ್ಥ್ಯವನ್ನು ಹೊಂದಿರುವ ವೈದ್ಯರೊಂದಿಗೆ ಸಂಪರ್ಕ ಮಾಡಿ. ನೀವು ಕ್ಯಾನ್ಸರ್‌ನಂತಹ ರೋಗವನ್ನು ಹೊಂದಿದ್ದರೆ ನಿಮ್ಮಲ್ಲಿ ಕೋವಿಡ್‌ ಕಾಣಿಸಿಕೊಂಡ ಕೂಡಲೇ ವೈದ್ಯರಿಗೆ ಮಾಹಿತಿ ನೀಡಿ.

 ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ

ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ

ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಜನರನ್ನು ರಕ್ಷಿಸಬೇಕಾದರೆ ನಿಮಗೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕೋವಿಡ್‌ ಸೋಂಕು ಪರೀಕ್ಷೆಗೆ ಒಳಗಾಗಿ. ನೀವು ಮನೆಯಲ್ಲಿಯೇ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಕಿಟ್‌ ಲಭ್ಯವಾಗುತ್ತದೆ. ನೀವು ಕೋವಿಡ್ ಕೇಂದ್ರ, ಆಸ್ಪತ್ರೆಗೆ ಹೋಗಿಯೂ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಸುಮಾರು 15 ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀವು ಪಡೆಯಲು ಸಾಧ್ಯವಿದೆ. ನೀವು ಕೋವಿಡ್‌ ರೋಗ ಲಕ್ಷಣಗಳನ್ನು ಹೊಂದಿದ್ದರೂ ಆಂಟಿಜೆನ್‌ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೆ ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಿ. ಪರೀಕ್ಷೆಯ ವರದಿ ಬರುವವರೆಗೂ ಮನೆಯಲ್ಲಿ ಪ್ರತ್ಯೇಕವಾಗಿರಿ. ನಿಮೆಗ ಪಿಸಿಆರ್‌ ಪರೀಕ್ಷೆಗೆ ಒಳಪಡಲು ಸಾಧ್ಯವಾಗದಿದ್ದರೆ, ಕೋವಿಡ್‌ ಆಂಟಿಜೆನ್‌ ಟೆಸ್ಟ್‌ ಮಾಡಿದ ಮರುದಿನ ಅಥವಾ ಎರಡು ದಿನಗಳ ನಂತರ ಮತ್ತೆ ಆಂಟಿಜೆನ್‌ ಟೆಸ್ಟ್‌ ಮಾಡಿಸಿಕೊಳ್ಳಿ. ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಮತ್ತು ನಿಮ್ಮ ಆಂಟಿಜೆನ್‌ ಟೆಸ್ಟ್‌ ಪಾಸಿಟಿವ್‌ ಆದರೆ ನೀವು ಮತ್ತೆ ಪಿಸಿಆರ್‌ ಪರೀಕ್ಷೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. "ಮನೆಯಲ್ಲಿಯೇ ಕೋವಿಡ್‌ ಪರೀಕ್ಷೆಗೆ ಒಳಗಾಗುವುದು ಉತ್ತಮ. ನೀವು ಗಂಭೀರ ರೋಗಲಕ್ಷಣಗಳನ್ನು ಹೊಂದಿಲ್ಲದಿದ್ದರೆ, ಕೇವಲ ಕೋವಿಡ್‌ ಪರೀಕ್ಷೆಗೆಂದು ಆಸ್ಪತ್ರೆಗೆ ಹೋಗಬೇಡಿ," ಎಂದು ಡಾ. ಜೂಡಿ ತುಂಗ್ ಸಲಹೆ ನೀಡಿದ್ದಾರೆ.

 ವಿಶ್ರಾಂತಿ ಮಾಡಿ, ಲಿಕ್ವಿಡ್‌ ಆಹಾರ ಸೇವಿಸಿ

ವಿಶ್ರಾಂತಿ ಮಾಡಿ, ಲಿಕ್ವಿಡ್‌ ಆಹಾರ ಸೇವಿಸಿ

ನೀವು ಕೋವಿಡ್‌ ಹೊಂದಿದ್ದರೆ ಹೆಚ್ಚಾಗಿ ವಿಶ್ರಾಂತಿ ಪಡೆಯಿರಿ. ಜ್ವರ, ವಾಂತಿ, ಮತ್ತು ಅತಿಸಾರವು ಗಮನಾರ್ಹವಾಗಿ ನಿಮಗೆ ಡಿಹೈಡ್ರೇಷನ್‌ ಉಂಟು ಮಾಡಬಹುದು. ಆದ್ದರಿಂದಾಗಿ ನೀವು ಸಾಧ್ಯವಾದಷ್ಟು ವಿಶ್ರಾಂತಿ ಮಾಡಿ. ಇನ್ನು ನಿಮ್ಮ ಮನಸ್ಸಲ್ಲಿ ಕೆಟ್ಟ ಭಾವನೆಗಳು ಕೂಡಾ ಮೂಡಬಹುದು. ಮಾನಸಿಕವಾಗಿ ನೀವು ಸ್ಥೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಹಾಸಿಗೆಯ ಬಳಿ ಒಂದು ದೊಡ್ಡ ಬಾಟಲಿಯ ನೀರನ್ನು ಇರಿಸಿ ಮತ್ತು ಆಗಾಗ್ಗೆ ಕುಡಿಯಿರಿ. ಸೂಪ್‌ಗಳು, ಜೇನುತುಪ್ಪದೊಂದಿಗೆ ಚಹಾ ಮತ್ತು ಹಣ್ಣಿನ ರಸಗಳು ಸಹ ಉತ್ತಮ ಆಯ್ಕೆಗಳಾಗಿವೆ. "ನಿಮ್ಮ ಬಾಯಿ ಒಣಗಿದ್ದರೆ ನೀವು ಡಿಹೈಡ್ರೇಷನ್‌ಗೆ ಒಳಗಾಗಿದ್ದೀರಿ ಎಂದು ಅರ್ಥ. ನೀವು ಕುಳಿತಿರುವ ಅಥವಾ ಕುಳಿತ ಸ್ಥಳದಿಂದ ಎದ್ದು ನಿಂತು ನಡೆದಾಗ ನಿಮಗೆ ತಲೆ ಭಾರ ಎನಿಸಬಹುದು. ಹಾಗೆಯೇ ನಿಮಗೆ ಮೂತ್ರ ಬರುವುದು ಕೂಡಾ ಕಡಿಮೆ ಆಗಬಹುದು. ಆದರೆ ನೀವು ಕನಿಷ್ಠ ನಾಲ್ಕೈದು ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸುತ್ತಿರಬೇಕು," ಎಮದು ಡಾ. ತುಂಗ್‌ ಹೇಳಿದ್ದಾರೆ.

 ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ

ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ

ನಿಮ್ಮ ರೋಗಲಕ್ಷಣಗಳ ವಿವರವಾದ ದಾಖಲೆಯನ್ನು ಇರಿಸಿ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ದಿನಕ್ಕೆ ಕನಿಷ್ಠ ಎರಡು ಬಾರಿ ನಿಮ್ಮ ತಾಪಮಾನವನ್ನು ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಉಸಿರಾಟದ ಬಗ್ಗೆ ಗಮನ ಕೊಡಿ, ವಿಶೇಷವಾಗಿ ನೀವು ಉಸಿರಾಟದ ತೊಂದರೆ ಅನುಭವಿಸಿದರೆ ಶೀಘ್ರ ವೈದ್ಯರನ್ನು ಸಂಪರ್ಕ ಮಾಡಿ. ಪಲ್ಸ್ ಆಕ್ಸಿಮೀಟರ್ ಹೊಂದಿದ್ದರೆ, ಅದರ ಮೂಲಕ ನಿಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಿರಿ. ಇದು ಶೇಕಡ 93 ಕ್ಕಿಂತ ಕಡಿಮೆಯಾದರೆ, ವೈದ್ಯರನ್ನು ಸಂಪರ್ಕಿಸಿ. ಶೇಕಡ 90 ಕ್ಕಿಂತ ಕಡಿಮೆಯಾದರೆ, ಕೂಡಲೇ 112 ಕರೆ ಮಾಡಿ ಅಥವಾ ತಕ್ಷಣ ತುರ್ತು ಆರೈಕೆಯನ್ನು ಪಡೆಯಿರಿ. ನಿಮಗೆ ಆ ಸಂದರ್ಭದಲ್ಲಿ ತೀವ್ರವಾದ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಆಮ್ಲಜನಕದ ಅಗತ್ಯವಿರಬಹುದು. ನೀವು ಉಸಿರಾಟದ ತೊಂದರೆ, ನಿರಂತರ ನೋವು ಅಥವಾ ಎದೆಯ ಒತ್ತಡ, ಹೊಸ ಗೊಂದಲ, ಎಚ್ಚರಗೊಳ್ಳಲು ಅಸಮರ್ಥತೆ, ನೀಲಿ ತುಟಿಗಳು ಅಥವಾ ಮುಖವನ್ನು ಹೊಂದಿದ್ದರೆ, ತಕ್ಷಣ ತುರ್ತು ವೈದ್ಯಕೀಯ ಆರೈಕೆಯನ್ನು ಪಡೆಯಿರಿ.

 ಕೋವಿಡ್‌ ರೋಗಿಗಳು ಮನೆಯಲ್ಲಿಯೇ ಹೀಗೆ ಚಿಕಿತ್ಸೆ ಪಡೆಯಿರಿ..

ಕೋವಿಡ್‌ ರೋಗಿಗಳು ಮನೆಯಲ್ಲಿಯೇ ಹೀಗೆ ಚಿಕಿತ್ಸೆ ಪಡೆಯಿರಿ..

ಅಧಿಕ ಅಥವಾ ನಿರಂತರ ಜ್ವರಗಳು ಅಪಾಯಕಾರಿ. ಏಕೆಂದರೆ ಅವು ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ. ನಿಮ್ಮ ಪ್ರಮುಖ ಅಂಗಗಳ ಒಟ್ಟಾರೆ ಆಮ್ಲಜನಕದ ಬೇಡಿಕೆಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ನಿಮ್ಮ ಜ್ವರಕ್ಕೆ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ನಿಮ್ಮ ತಾಪಮಾನವನ್ನು 100 ಡಿಗ್ರಿ ಅಡಿಯಲ್ಲಿ ಇರಿಸಿಕೊಳ್ಳಲು ಪ್ರತಿ ಆರರಿಂದ ಎಂಟು ಗಂಟೆಗಳವರೆಗೆ ಜ್ವರಕ್ಕಾಗಿ ಮಾತ್ರೆಯನ್ನು ಪಡೆದುಕೊಳ್ಳಿ. ಹಬೆಯಲ್ಲಿ ಉಸಿರಾಟ ಮಾಡಿದರೆ, ಅಥವಾ ಹಬೆಯ ಶಾಖ ಪಡೆದರೆ ಗಂಟಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಜ್ವರ ಕಡಿಮೆ ಆಗುವವರೆಗೂ ವಿಶ್ರಾಂತಿ ಪಡೆಯಿರಿ. ಉಬ್ಬಸ, ಉಸಿರಾಟದ ಸಮಸ್ಯೆಗೆ ಕೆಲವೊಮ್ಮೆ ಇನ್ಹೇಲರ್ ಅಗತ್ಯವಿರುತ್ತದೆ. ನೀವು ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಚಿಕಿತ್ಸೆ ಪಡೆದರೆ ಉತ್ತಮ.

 ಸಹಾಯ ಪಡೆಯಿರಿ

ಸಹಾಯ ಪಡೆಯಿರಿ

ನಿಮ್ಮ ಮನೆಯ ಸದಸ್ಯರು ದಿನಸಿ ಶಾಪಿಂಗ್ ಮಾಡಬೇಕು, ನಿಮಗೆ ಔಷಧಿ ತರಬೇಕು ಎಂಬ ಅವಶ್ಯಕತೆ ಉಂಟಾದ ಸಂದರ್ಭದಲ್ಲಿ ನೀವು ಇತರರಿಂದ ಸಹಾಯ ಪಡೆಯಿರಿ. ಕೋವಿಡ್‌ ರೋಗಿಗಳ ಕುಟುಂಬಕ್ಕೆ ನೀವು ಸಹಾಯ ಮಾಡಿ. . ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದೀರಿ ಎಂದು ಅವರಿಗೆ ತಿಳಿಸಿ. ರಾತ್ರಿಯಲ್ಲಿ ತಮ್ಮ ಫೋನ್‌ಗಳನ್ನು ಆನ್‌ನಲ್ಲಿ ಇರಿಸಿಕೊಳ್ಳಿ. ಹತ್ತಿರದಲ್ಲಿ ವಾಸಿಸುವ ಯಾರಿಗಾದರೂ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ನಿಮ್ಮ ಬಾಗಿಲಿನಲ್ಲಿ ಇಟ್ಟು ಹೋಗಲು ತಿಳಿಸಿ. (ಒನ್‌ಇಂಡಿಯಾ ಸುದ್ದಿ)

English summary
Here we sharing some tips on how to monitor your symptoms and treat yourself at home if you have a milder case of COVID-19 in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X