ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಕೋರ್ಟ್ ಕೇಸ್ ಟ್ರ್ಯಾಕ್ ಮಾಡಲು ಇಲ್ಲಿದೆ ಮೊಬೈಲ್‌ ಆ್ಯಪ್

|
Google Oneindia Kannada News

ಸುಪ್ರೀಂಕೋರ್ಟ್‌ ಇ ಸಮಿತಿ ಇ-ನ್ಯಾಯಾಲಯ ಸೇವೆಗಳಿಗಾಗಿ ಹದಿನಾಲ್ಕು ಭಾಷೆಗಳಲ್ಲಿ ರೂಪಿಸಿದ್ದ ಉಚಿತ ಮೊಬೈಲ್‌ ಆ್ಯಪ್ ಕುರಿತ ಕೈಪಿಡಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ ಆ್ಯಪ್ ಇದುವರೆಗೆ 58 ಲಕ್ಷ ಡೌನ್‌ಲೋಡ್‌ ಕಂಡಿದೆ.

ಕೊರೊನಾ ಮೊದಲ ಅಲೆ ಕಾಲದಿಂದಲೂ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗದಂತೆ ಕೋರ್ಟ್ ಬಾಗಿಲುಗಳನ್ನು ತೆರೆಯಲಾಗಿತ್ತು. ಇ ಕೋರ್ಟ್, ವರ್ಚ್ಯುಯಲ್ ವಿಚಾರಣೆ ಹೀಗೆ ಹೊಸ ಇ ವ್ಯವಸ್ಥೆಗೆ ನಿಧಾನವಾಗಿ ಕಕ್ಷಿದಾರ, ವಕೀಲ, ಸಿಬ್ಬಂದಿ ಹಾಗೂ ನ್ಯಾಯಮೂರ್ತಿಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಈಗ ಇ-ನ್ಯಾಯಾಲಯ ಸೇವೆ ಮೊಬೈಲ್ ಅಪ್ಲಿಕೇಷನ್ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಾಗೂ ಸರ್ವೋಚ್ಚ ನ್ಯಾಯಾಲಯ ಇ ಸಮಿತಿ ಅಧ್ಯಕ್ಷರಾಗಿರುವ ಡಾ. ಡಿ ವೈ ಚಂದ್ರಚೂಡ್‌ ಆ್ಯಪ್‌ನ ಕೈಪಿಡಿ ಬಿಡುಗಡೆ ಮಾಡಿದ್ದು ಅದರ ಮುನ್ನುಡಿಯಲ್ಲಿ ಅವರು ಆ್ಯಪ್ ಮಹತ್ವ ಮತ್ತು ವ್ಯಾಪ್ತಿ ಮತ್ತು ಉಪಯುಕ್ತತೆ ಕುರಿತು ವಿವರಿಸಿದ್ದಾರೆ.

 ಇ ಕೋರ್ಟ್ಸ್‌ ಸರ್ವೀಸಸ್‌ ಮೊಬೈಲ್‌ ಅಪ್ಲಿಕೇಷನ್‌

ಇ ಕೋರ್ಟ್ಸ್‌ ಸರ್ವೀಸಸ್‌ ಮೊಬೈಲ್‌ ಅಪ್ಲಿಕೇಷನ್‌

"ದೂರದಿಂದಲೇ ಕೆಲಸ ನಿರ್ವಹಿಸುತ್ತಾ ಕಾನೂನು ವೃತ್ತಿ ಅಭ್ಯಾಸ ಮಾಡಲು, ತೊಡಗಿಕೊಳ್ಳಲು ವರ್ಚುವಲ್‌ ನ್ಯಾಯಾಲಯಗಳು, ಡಿಜಿಟಲ್‌ ಕಾರ್ಯಾವಕಾಶಗಳು ಹಾಗೂ ಎಲೆಕ್ಟ್ರಾನಿಕ್‌ ಪ್ರಕರಣ ನಿರ್ವಹಣೆ ಏಕತ್ರಗೊಂಡಿವೆ. ತಂತ್ರಜ್ಞಾನವನ್ನು ಕೇವಲ ಮಧ್ಯಂತರ ಸಾಧನವಾಗಿ ಸ್ವೀಕರಿಸದೆ ನಮ್ಮ ಕಾನೂನು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ಅಂತರ್ಗತಗೊಳಿಸಲು ಕೈಗೆಟಕುವಂತೆ ಮಾಡಲು, ಪರಿಸರ ಸುಸ್ಥಿರತೆ ಕಾಯ್ದುಕೊಳ್ಳಲು ಇದು ನಮಗೆ ಅಪರೂಪದ ಅವಕಾಶ ನೀಡಿದೆ. ಇ ಕೋರ್ಟ್ಸ್‌ ಸರ್ವೀಸಸ್‌ ಮೊಬೈಲ್‌ ಅಪ್ಲಿಕೇಷನ್‌ ಈ ನಿಟ್ಟಿನಲ್ಲಿ ಇರಿಸಿದ ಒಂದು ಹೆಜ್ಜೆ" ಎಂದು ಅವರು ಬಣ್ಣಿಸಿದ್ದಾರೆ.

ಮಾಸ್ಟರ್ ಟ್ರೈನರ್‌ಗಳಿಂದ ಅನುವಾದ

ಮಾಸ್ಟರ್ ಟ್ರೈನರ್‌ಗಳಿಂದ ಅನುವಾದ

ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಬರುನ್ ಮಿತ್ರಾ ಅವರು "ವಕೀಲರು ಪ್ರಕರಣದ ಮಾಹಿತಿ ನಿರ್ವಹಣೆ, ದಾಖಲೆ ಸಂಗ್ರಹ, ವೇಳಾಪಟ್ಟಿ, ಪ್ರಕರಣದ ಸ್ಥಿತಿಗತಿಯ ಟೈಂ ಟ್ರ್ಯಾಕಿಂಗ್‌, ತೀರ್ಪಿನ ಮಾಹಿತಿ ಪಡೆಯುವಿಕೆ, ಅನುಸರಣಾ ಅಗತ್ಯಗಳಿಗಾಗಿ ಇಸಿಎಂಟಿ ಸಾಧನ ಅನುವು ಮಾಡಿಕೊಡುತ್ತದೆ" ಎಂದು ಹೇಳಿದ್ದಾರೆ.

ಹೈಕೋರ್ಟ್‌ಗಳ ಮಾಸ್ಟರ್ ಟ್ರೈನರ್‌ಗಳನ್ನು (ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ) ಒಳಗೊಂಡ ಇ- ಸಮಿತಿಯ ಸದಸ್ಯರು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಿದ್ದಾರೆ.

ಯಾವ ಯಾವ ಭಾಷೆಗಳಲ್ಲಿ ಲಭ್ಯ

ಯಾವ ಯಾವ ಭಾಷೆಗಳಲ್ಲಿ ಲಭ್ಯ

ಕೈಪಿಡಿಯನ್ನು ಇಂಗ್ಲಿಷ್‌ನಿಂದ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ. ಇಂಗ್ಲೀಷ್ ಅಲ್ಲದೆ, ಕನ್ನಡ, ಹಿಂದಿ, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಖಾಸಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಲಭ್ಯವಿದೆ.

ಡೌನ್ ಲೋಡ್ ಎಲ್ಲಿ

ಡೌನ್ ಲೋಡ್ ಎಲ್ಲಿ

ಇ-ಸಮಿತಿಯ ಅಧಿಕೃತ ಜಾಲತಾಣದಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್‌ಗಳ ಮೂಲಕ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

ಗೂಗಲ್ ಪ್ಲೇಸ್ಟೋರ್‌ನಲ್ಲಿ NIC eGov Mobile Apps ಹೊರ ತಂದಿರುವ eCourts Services app ಮಾತ್ರ ಅಧಿಕೃತ ಅಪ್ಲಿಕೇಷನ್ ಆಗಿದ್ದು, ಇದನ್ನು ಸುಲಭವಾಗಿ ನಿಮ್ಮ ಮೊಬೈಲಿನಲ್ಲಿ ಸ್ಥಾಪಿಸಿಕೊಳ್ಳಿ

ಸಿಎನ್‌ಆರ್ ನಂಬರ್‌ ಇದ್ದರೆ ಸುಲಭ

ಸಿಎನ್‌ಆರ್ ನಂಬರ್‌ ಇದ್ದರೆ ಸುಲಭ

ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿ ಪ್ರಕರಣಕ್ಕೂ ಪ್ರತ್ಯೇಕ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ಈ ಸಿಎನ್‌ಆರ್ ನಂಬರ್‌ (16 ಸಂಖ್ಯೆ) ಇದ್ದರೆ, ಆ ಸಂಖ್ಯೆಯನ್ನು APPನಲ್ಲಿ ನಮೂದಿಸಿ ಪ್ರಕರಣ ಸ್ಥಿತಿ ಗತಿ ತಿಳಿದು ಕೊಳ್ಳಬಹುದು.

ಸಿಎನ್‌ಆರ್ ನಂಬರ್‌ ಇಲ್ಲದಿದ್ದರೆ, ಕಕ್ಷಿದಾರರ ಹೆಸರು, ವಕೀಲರ ಹೆಸರು, ಎಫ್ಐಆರ್ ಸಂಖ್ಯೆ, ಯಾವ ರೀತಿ ಕೇಸ್ ಮುಂತಾದ ವಿವರ ನೀಡಿ ಸ್ಥಿತಿ ಗತಿ ತಿಳಿದುಕೊಳ್ಳಬಹುದು. ಯಾವ ಕೋರ್ಟ್ ಎಂಬುದು ಗೊತ್ತಿರಬೇಕು. ಇದಲ್ಲದೆ, ರಾಜ್ಯವಾರು ಕೇಸುಗಳ ವಿವರ ಕೂಡಾ ಸಿಗಲಿದೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
Case status, cause lists, Court orders can be accessed through eCourts Services mobile application, making these services available 24X7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X