ಸಿಗರೇಟ್ ಚಟದಿಂದ ಹೊರಬರೋದು ಕಷ್ಟವೇನಲ್ಲ
ಪ್ರತಿವರ್ಷವೂ ಸಿಗರೇಟ್ ಬೆಲೆ ಗಗನಕ್ಕೇರುತ್ತದೆ. ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಎಷ್ಟು ಹಣವಾದರೂ ತೆತ್ತು ಸೇವನೆ ಮಾಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿ ಮಾತ್ರವಲ್ಲ ಜೇಬಿಗೂ ಕತ್ತರಿಯಾಗುತ್ತಿದೆ.
ಇವತ್ತಿನ ಪರಿಸ್ಥಿತಿಯಲ್ಲಿ ಮಧ್ಯಮವರ್ಗದ ವ್ಯಕ್ತಿ ತನ್ನ ಸಂಪಾದನೆಯಲ್ಲಿ ಕನಿಷ್ಠ ಶೇ. 25ರಷ್ಟು ಭಾಗವನ್ನು ಸಿಗರೇಟ್‍ಗೆ ಹಾಕುತ್ತಾನೆ ಎನ್ನುವುದಾದರೆ ಆ ಸಂಸಾರ ಸಾಗುವುದಾದರೂ ಹೇಗೆ?. ಇತ್ತೀಚೆಗೆ ಸಿಗರೇಟ್, ಬೀಡಿ ಎಲ್ಲೆಂದರಲ್ಲಿ ಸೇದುವಂತಿಲ್ಲ. ಮಾರಾಟವೂ ಮಾಡುವಂತಿಲ್ಲ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಮಾಡಿ ದಂಡ ಕಟ್ಟಿಸಿಕೊಳ್ಳುವ ಜನರಿಗೇನು ಕೊರತೆಯಿಲ್ಲ.
ಯುವಕರಿಗೆ ಸಿಗರೇಟ್ ಸೇದುವುದು ಒಂದು ಫ್ಯಾಶನ್ ಆಗಿದೆ. ಒಂದು ಕಡೆ ಕುಳಿತು ಟೀ ಕುಡಿಯುತ್ತಾ ಒಂದೊಂದೇ ಧಮ್ ಎಳೆಯೋದು ಟೀ ಸ್ಟಾಲ್‍ಗಳಲ್ಲಿ ಕಂಡು ಬರುತ್ತದೆ. ಇದೊಂದು ದುಶ್ಚಟ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ ಎಂಬ ಅರಿವಿದ್ದರೂ ಮೊದಮೊದಲು ಗೆಳೆಯರೊಂದಿಗೆ ಸೇರಿ ಆರಂಭವಾಗುವ ಚಟ ಬಳಿಕ ಅದು ಇಲ್ಲದೆ ಇರುವಂತಿಲ್ಲ ಎಂಬ ಮಟ್ಟಿಗೆ ಅದರ ಗುಲಾಮನನ್ನಾಗಿ ಮಾಡಿ ಬಿಡುತ್ತದೆ.

ಇದೊಂದು ರೀತಿಯ ಭ್ರಮೆ
ಒತ್ತಡದಲ್ಲಿ ಕೆಲಸ ಮಾಡುವ ಬಹಳಷ್ಟು ಮಂದಿ ರಿಲ್ಯಾಕ್ಸ್ ಆಗಲು ಸಿಗರೇಟ್ ಸೇದುವ ಅಭ್ಯಾಸ ಮಾಡಿಕೊಂಡಿವುದಾಗಿ ಹೇಳುತ್ತಾರೆ. ಅವರಿಗೆ ಸಿಗರೇಟ್ ಸೇದಿದ ಬಳಿಕವಷ್ಟೆ ಮುಂದಿನ ಕೆಲಸ ಮಾಡಲು ಹುರುಪು ಬರುತ್ತದೆಯಂತೆ. ಇದೊಂದು ರೀತಿಯ ಭ್ರಮೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮೋಜು ಮಸ್ತಿಯಲ್ಲಿ ಸಿಗರೇಟ್ ಸೇದೋದನ್ನು ಆರಂಭಿಸುವ ಯುವಕ, ಯುವತಿಯರು ಬಳಿಕ ಆ ಚಟದಿಂದ ಹೊರಬರಲಾರದೆ ಒದ್ದಾಡುತ್ತಾರೆ.

ಗಟ್ಟಿ ಮನಸ್ಸು ಮಾಡಿ ಸಿಗರೇಟ್ ಬಿಡಿ
ಹರೆಯದಲ್ಲಿ ಆರೋಗ್ಯ ಚೆನ್ನಾಗಿದ್ದಾಗ ಅದರ ಹೊಡೆತ ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್‍ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ನಮ್ಮ ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಾಗುತ್ತದೆ. ಕಾಯಿಲೆ ಬಂದು ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನು ಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ಬಿಟ್ಟವರು ಬಹಳಷ್ಟು ಮಂದಿಯಿದ್ದಾರೆ. ಇವರ ಪೈಕಿ ಕೆಲವರು ಕೆಲವೊಮ್ಮೆ ಹಲವು ತೊಂದರೆಗಳಿಂದ ಬಳಲಿದ, ಮಾನಸಿಕವಾಗಿ ಕುಗ್ಗಿದ ನಿದರ್ಶನಗಳು ಬೇಕಾದಷ್ಟಿವೆ. ಆದರೂ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.

ಆರ್ಥಿಕವಾಗಿಯೂ ಹೊರೆ
ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ. ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ.

ವಿಟಮಿನ್-ಇ ಮಾತ್ರೆಗಳು
ಬಹಳಷ್ಟು ಮಂದಿ ಇವತ್ತು ಸಿಗರೇಟ್ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ. ಸಿಗರೇಟ್ ಸೇವನೆ ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಅವರು ಗಮನಿಸಿದ್ದಾರೆ. ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ನಾವೇ ಕಲಿತ ಚಟ ನಾವೇ ಬಿಡಬೇಕು
ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ 'ಇ' ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಜಗತ್ತಿಗೆ ತಿಳಿಸಿದ್ದಾರೆ. ಅದು ಏನೇ ಇರಲಿ ಧೂಮಪಾನ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅದರಿಂದ ನರಕ ಅನುಭವಿಸಿ ಬಿಡುಗಡೆ ಆದವರು ಆರೋಗ್ಯವಾಗಿದ್ದಾರೆ.
ಇವತ್ತಿನಿಂದಲೇ ಧೂಮಪಾನ ಬಿಡಿ. ಆರೋಗ್ಯ ವೃದ್ಧಿಸಿ. ಒಂದು ವೇಳೆ ಸಿಗರೇಟ್ ಬಿಟ್ಟ ನಂತರ ತಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆಗೆ ಮುಂದಾಗದೆ ವೈದ್ಯರನ್ನು ಭೇಟಿ ಮಾಡಿ ಸಲಹೆ, ಚಿಕಿತ್ಸೆ ಪಡೆಯಿರಿ. ನಾವೇ ಕಲಿತ ಚಟವನ್ನು ನಾವಷ್ಟೇ ಬಿಡಲು ಸಾಧ್ಯ ಎಂಬುದು ನಮ್ಮ ನೆನಪಿನಲ್ಲಿರಬೇಕಷ್ಟೆ.
-
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ












Click it and Unblock the Notifications