• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ರಾನ್ಸ್ ಕೆಥೆಡ್ರಲ್ ನಲ್ಲಿ ಬೆಂಕಿ ಅನಾಹುತದ ಬಗ್ಗೆ ಭವಿಷ್ಯ ನುಡಿದಿದ್ದ ನಾಸ್ಟ್ರಡಾಮಸ್!

|

ಶತಮಾನಗಳ ನಂತರ ಹೀಗೆ ನಡೆಯುತ್ತದೆ ಎಂದು ಆತ ಬರೆದಿಟ್ಟಿದ್ದಾನೆ. ಅವುಗಳ ಆಧಾರದಲ್ಲಿ ಈಗಲೂ ಹೊಸ ವರ್ಷದ ಆರಂಭದಲ್ಲಿ ಈ ಪ್ರಪಂಚದಲ್ಲಿ ಏನಾಗಬಹುದು ಎಂಬ ಭವಿಷ್ಯವನ್ನು ಹೇಳಲಾಗುತ್ತದೆ. ನಿಮಗೆ ಆತನ ಹೆಸರಿನ ಬಗ್ಗೆ ಕುತೂಹಲ ಇರಲಾರದು. ಏಕೆಂದರೆ ನಾಸ್ಟ್ರಡಾಮಸ್ ಭವಿಷ್ಯಕ್ಕೆ ಅಷ್ಟು ತೂಕವಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಏಪ್ರಿಲ್ ಹದಿನೈದನೇ ತಾರೀಕು ಪ್ಯಾರಿಸ್ ನ ನಾಟ್ರ ಡೇಮ್ ಕೆಥೆಡ್ರಲ್ ನಲ್ಲಿ ಭಾರೀ ಅಗ್ನಿ ಅವಗಢ ಸಂಭವಿಸಿತು. ಅಂದಹಾಗೆ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡಾಮಸ್ ಐನೂರು ವರ್ಷಗಳ ಹಿಂದೆಯೇ ಈ ಬಗ್ಗೆ ಭವಿಷ್ಯ ನುಡಿದಿದ್ದಾನೆ. ಈ ಬಗ್ಗೆ ಬ್ರಿಟಿಷ್ ಲೇಖಕರಾದ ನೆಡ್ ಹಾಲೆ ಬರೆದಿರುವ ಫ್ರೆಂಚ್ ಅನುವಾದದ ಇಂಗ್ಲಿಷ್ ಪುಸ್ತಕ ಈಗ ಭಾರೀ ಚರ್ಚೆಯಲ್ಲಿದೆ.

ಹತ್ತಾರು ಲಕ್ಷ ಜನ ಭೇಟಿ ನೀಡುವ ಪ್ಯಾರಿಸ್ ನ ಕೆಥೆಡ್ರಲ್ ನಲ್ಲಿ ಬೆಂಕಿ

ಏಕೆಂದರೆ, ಆ ಭವಿಷ್ಯದ ನುಡಿಯಲ್ಲಿ ಏಪ್ರಿಲ್ ಹದಿನೈದರ ದುರ್ಘಟನೆ ಬಗ್ಗೆ ಸ್ಪಷ್ಟ ಸೂಚನೆ ಇದೆ. ಅಷ್ಟೇ ಅಲ್ಲ, ನಾಸ್ಟ್ರಡಾಮಸ್ ಬಳಸಿದ ಅವೇ ಪದಗಳನ್ನು ಫ್ರೆಂಚ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರೊನ್ ಅವರು ಫ್ರಾನ್ಸ್ ದೇಶದ ಪ್ರತಿಕ್ರಿಯೆಯಾಗಿ ಬಳಕೆ ಮಾಡಿದ್ದಾರೆ.

ನಾಟ್ರ ಡೇಮ್ ಬೆಂಕಿ ಹೊತ್ತಿ ಉರಿಯುತ್ತದೆ. ಇಡೀ ದೇಶದ ಭಾವ ಕಲಕುತ್ತದೆ. ಕ್ಯಾಥೋಲಿಕ್ ರು ಮರುಗುತ್ತಾರೆ ಮತ್ತು ಎಲ್ಲ ಫ್ರೆಂಚರು ದುಃಖ ಪಾಡುವ ದಿನವಾಗುತ್ತದೆ. ಎಲ್ಲ ನಾಗರಿಕರ ರೀತಿಯಂತೆಯೇ ಭಾಗ ಹೊತ್ತಿ ಉರಿಯುವುದನ್ನು ನೋಡಲು ನನಗೆ ದುಃಖವಾಗುತ್ತದೆ ಎಂದಿದೆ.

ಫ್ರೆಂಚ್ ನಲ್ಲಿ ಇರುವ ಭವಿಷ್ಯದ ಇಂಗ್ಲಿಷ್ ಅನುವಾದವನ್ನು ಓದಿದರೆ ಎಂಥವರಿಗೂ ಎದೆ ಝಲ್ ಎನಿಸುತ್ತದೆ. ಅಷ್ಟು ನಿಖರವಾಗಿ ಹೇಳಲಾಗಿದೆ. ಮೇಷದ ಅಧಿಪತಿ, ಗುರು ಹಾಗೂ ಶನಿಯ ಪ್ರಭಾವ ಹಾಗೂ ಆ ದೈವ ರಕ್ಷೆ ಮಧ್ಯೆ ಏನಾಗಬಹುದು. ಶತಮಾನಗಳಿಂದ ಇರುವುದರ ಹಿಂದೆ ಭೂತ ವಾಪಸಾಗುತ್ತದೆ. ಫ್ರಾನ್ಸ್ ಮತ್ತು ಇಟಲಿ, ಏನೆಲ್ಲ ಭಾವನೆಗಳು ಕಾಣಿಸಿಕೊಳ್ಳುತ್ತವೆ ಎಂಬ ಸಾಲುಗಳಿವೆ.

450 ವರ್ಷಗಳ ಹಿಂದೆ ಮೋದಿ ಬಗ್ಗೆ ನಾಸ್ಟ್ರಡಾಮಸ್ ನುಡಿದಿದ್ದ ಭವಿಷ್ಯ!

460 ವರ್ಷಕ್ಕೂ ಹಳೆಯದಾದ ನಾಸ್ಟ್ರಡಾಮಸ್ ಪುಸ್ತಕದಲ್ಲಿ ಹಲವಾರು ಸಂಗತಿಗಳನ್ನು ಇಸವಿ ಸಹಿತ ದಾಖಲಿಸಲಾಗಿದೆ. ಆತನ ಮಿಲೇನಿಯಂ ಪ್ರಕಟಣೆಯಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಗ್ಗೆ ಕೂಡ ಸೂಚನೆಗಳಿದ್ದವು. ಈಗ ಶತಮಾನಗಳ ಇತಿಹಾಸ ಇರುವ ನಾಟರ್ ಡೇಮ್ ಹೊತ್ತಿ ಉರಿಯುವ ಸಂದರ್ಭದಲ್ಲಿನ ಗ್ರಹ ಸ್ಥಿತಿಗಳನ್ನು ಕೂಡ ಅಷ್ಟೇ ನಿಖರವಾಗಿ ದಾಖಲಿಸಿದ್ದಾನೆ ನಾಸ್ಟ್ರಡಾಮಸ್.

ಅಚ್ಚರಿಯ ಸಂಗತಿ ಏನೆಂದರೆ, ನಾಸ್ಟ್ರಡಾಮಸ್ ಬಳಸಿರುವ ಅವೇ ಪದಪುಂಜಗಳನ್ನು ಬಳಸಿ ಫ್ರೆಂಚ್ ಅಧ್ಯಕ್ಷರು ತಮ್ಮ ದುಃಖವನ್ನು ದೇಶದ ಮುಂದೆ ಹೇಳಿಕೊಂಡಿದ್ದು, ಬಿಬಿಸಿಯಲ್ಲಿ ಆ ಬಗ್ಗೆ ವರದಿ ಪ್ರಸಾರವಾಗಿದ್ದನ್ನು ನೋಡಿದರೆ ಹೋಲಿಕೆ ಮಾಡಿ ನೋಡಬಹುದು.

ಅಷ್ಟೇ ಅಲ್ಲ, ಮುಂದಿನ ಒಂದು ವರ್ಷಗಳ ಕಲ ಫ್ರಾನ್ಸ್ ಪಾಲಿಗೆ ಭೀಕರ ಆಗಿರುತ್ತದೆ. ದೇಶದ ಆರ್ಥಿಕತೆಗೆ ಭಾರೀ ಸವಾಲು ಎದುರಾಗುತ್ತದೆ. ಒಂದಾದ ನಂತರ ಒಂದು ಆಘಾತ ಎದುರಿಸಬೇಕಾಗುತ್ತದೆ... ಇತ್ಯಾದಿ ಭಯ ಹುಟ್ಟುವಂಥ ಭವಿಷ್ಯಗಳನ್ನು ನಾಸ್ಟ್ರಡಾಮಸ್ ದಾಖಲಿಸಿದ್ದಾನೆ.

English summary
Paris Notre Dame Cathedral fire which was happened on 15th April 2019 predicted by Nostradamus a long ago. Here is an interesting details about his prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more