• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವಿಎಂ ದುರ್ಬಳಕೆ ಸಾಧ್ಯವೇ? ಅದಕ್ಕೆ ಇರುವ ಭದ್ರತೆ ಏನು? ಇಲ್ಲಿದೆ ಮಾಹಿತಿ

|

ನವದೆಹಲಿ, ಮೇ 22: ವಿದ್ಯುನ್ಮಾನ ಮತಯಂತ್ರ (ಇವಿಎಂ) ಕಳೆದ ಹಲವು ವರ್ಷಗಳಿಂದ ದೇಶದಲ್ಲಿ ಹೆಚ್ಚು ವಿವಾದ ಮತ್ತು ಚರ್ಚೆಯಲ್ಲಿರುವ ವಸ್ತು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಇವಿಎಂ ಕುರಿತಾದ ಚರ್ಚೆಗಳ ತಾರಕಕ್ಕೇರುತ್ತವೆ. ಈ ಚುನಾವಣೆಯಲ್ಲಿ ಈಗಾಗಲೇ ಪ್ರತಿಪಕ್ಷಗಳು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ. ಮಂಗಳವಾರ 22 ವಿರೋಧಪಕ್ಷಗಳು ಜತೆಗೂಡಿ ಚುನಾವಣಾ ಆಯೋಗದ ಮುಂದೆ ಅಸಮಾಧಾನ ತೋಡಿಕೊಂಡಿವೆ. ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳನ್ನು ಆಯೋಗ ತಳ್ಳಿಹಾಕಿದೆ.

ಇವಿಎಂ ದುರ್ಬಳಕೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಅದಕ್ಕೆ ಅವಕಾಶಗಳಿವೆಯೇ? ಸ್ಟ್ರಾಂಗ್ ರೂಮ್‌ನಿಂದ ಇವಿಎಂ ಮತಗಟ್ಟೆಗಳಿಗೆ ಹೇಗೆ ಹೋಗುತ್ತದೆ ಮತ್ತು ಹೇಗೆ ಮರಳಿಬರುತ್ತದೆ?

ಪ್ರತಿಪಕ್ಷಗಳ ಇವಿಎಂ ಗಲಾಟೆಗೆ ಪ್ರಧಾನಿ ಬೇಸರ

ಎಲ್ಲ ಇವಿಎಂಗಳನ್ನೂ ಸಾಮಾನ್ಯವಾಗಿ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಅವರ ನೇರ ಸುಪರ್ದಿಯೊಳಗೆ ಖಜಾನೆ ಅಥವಾ ವೇರ್‌ಹೌಸ್‌ನಲ್ಲಿ ಭದ್ರವಾಗಿ ಇರಿಸಲಾಗುತ್ತದೆ. ಸಂಗ್ರಹಕ್ಕೆ ಸ್ಥಳಗಳು ಲಭ್ಯವಿಲ್ಲದೆ ಇದ್ದಾಗ ಇದರಲ್ಲಿ ಬದಲಾವಣೆ ಮಾಡಬಹುದು. ಆದರೆ, ತಾಲ್ಲೂಕು ಮಟ್ಟಕ್ಕಿಂತ ಕೆಳಗಿನ ಖಜಾನೆ ಅಥವಾ ವೇರ್‌ಹೌಸ್‌ಗಳಲ್ಲಿ ಇರಿಸುವಂತಿಲ್ಲ. ವೇರ್‌ಹೌಸ್‌ ಎರಡು ಲಾಕ್‌ಗಳಿಂದ ಭದ್ರವಾಗಿರಬೇಕು. ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಯ 24 ಗಂಟೆ ಕಾವಲು ಇರಬೇಕು. ಜತೆಗೆ ಸಿಸಿಟಿವಿ ಕಣ್ಗಾವಲು ಇರಬೇಕು.

ಚುನಾವಣೆ ಇಲ್ಲದ ಅವಧಿಗಳಲ್ಲಿ ಚುನಾವಣಾ ಆಯೋಗದ ನಿರ್ದಿಷ್ಟ ಸೂಚನೆ ಇಲ್ಲದೆಯೇ ವೇರ್‌ಹೌಸ್‌ನಿಂದ ಹೊರಕ್ಕೆ ಇವಿಎಂಅನ್ನು ಕೊಂಡೊಯ್ಯುವಂತಿಲ್ಲ. ಚುನಾವಣೆಗೆ ಕೊಂಡೊಯ್ಯವ ಸಂದರ್ಭದಲ್ಲಿ ಎಂಜಿನಿಯರ್‌ಗಳು ಮೊದಲ ಹಂತದ ಪರಿಶೀಲನೆ ನಡೆಸುತ್ತಾರೆ, ಈ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿರುತ್ತಾರೆ.

ಸಾಫ್ಟ್‌ವೇರ್ ಮೂಲಕ ಹಂಚಿಕೆ

ಸಾಫ್ಟ್‌ವೇರ್ ಮೂಲಕ ಹಂಚಿಕೆ

ಚುನಾವಣೆ ಸಮೀಪಿಸಿದಾಗ ವಿವಿಧ ವಿಧಾನಸಭಾ ಕ್ಷೇತ್ರಗಳ (ಲೋಕಸಭೆ ಕ್ಷೇತ್ರದಲ್ಲಿ) ಮತಗಟ್ಟೆಗಳಿಗೆ ಇವಿಎಂಗಳನ್ನು ರಾಂಡಮ್ ಆಗಿ ಸಾಫ್ಟ್‌ವೇರ್ ಒಂದರ ಮೂಲಕ ಹಂಚಿಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೂಡ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ಒಂದು ವೇಳೆ ಪ್ರತಿನಿಧಿಗಳು ಗೈರಾಗಿದ್ದರೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆ ಮಾಡಲಾಗಿರುವ ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಪಟ್ಟಿಯನ್ನು ಪಕ್ಷದ ಕಚೇರಿಗೆ ನೀಡಲಾಗುತ್ತದೆ. ಈ ಹಂತದಿಂದ ವಿಧಾನಸಭೆ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿ (ಆರ್‌ಒ) ಹಂಚಿಕೆಯಾದ ಯಂತ್ರಗಳ ಉಸ್ತುವಾರಿ ವಹಿಸಿಕೊಂಡು ಅವುಗಳನ್ನು ನಿರ್ದಿಷ್ಟ ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸುತ್ತಾರೆ.

ಇಲ್ಲಿ, ಎರಡನೆಯ ಸುತ್ತಿನ ವಿಲೇವಾರಿ ನಡೆಯುತ್ತದೆ. ಇವಿಎಂಗಳನ್ನು ನಿರ್ದಿಷ್ಟ ಮತಗಟ್ಟೆಗಳಿಗೆ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಿಯೋಜಿಸಲಾಗುತ್ತದೆ. ಮುಖ್ಯವಾಗಿ ಚುನಾವಣಾ ಆಯೋಗವು ಯಂತ್ರಗಳ ಸಂಖ್ಯೆಗಳನ್ನು ತಮ್ಮ ತಮ್ಮಮತಗಟ್ಟೆ ಏಜೆಂಟ್‌ಗಳ ಜೊತೆ ಹಂಚಿಕೊಳ್ಳಲು ಅಭ್ಯರ್ಥಿಗಳಿಗೆ ಸಲಹೆ ನೀಡುತ್ತದೆ. ಇದರಿಂದ ಮತದಾನ ಶುರುವಾಗುವುದಕ್ಕೆ ಮೊದಲು ಅದನ್ನು ಪರಿಶೀಲನೆ ಮಾಡಬಹುದು.

ಸ್ಟ್ರಾಂಗ್‌ ರೂಂಗೆ ರವಾನೆ

ಸ್ಟ್ರಾಂಗ್‌ ರೂಂಗೆ ರವಾನೆ

ಎಲ್ಲ ಯಂತ್ರಗಳಲ್ಲೂ ಅಭ್ಯರ್ಥಿಗಳ ಹೆಸರನ್ನು ಅಳವಡಿಸಿ ಬ್ಯಾಲೆಟ್ ಪೇಪರ್‌ಗಳನ್ನು ಸಿದ್ಧಗೊಳಿಸಿ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸೀಲ್ ಮಾಡಿ ಸ್ಟ್ರಾಂಗ್ ರೂಂಗಳಿಗೆ ರವಾನಿಸಲಾಗುತ್ತದೆ. ಪಕ್ಷಗಳ ಪ್ರತಿನಿಧಿಗಳು ಬಯಸಿದ್ದಲ್ಲಿ ಸ್ಟ್ರಾಂಗ್ ರೂಂ ಬೀಗಕ್ಕೆ ತಮ್ಮದೇ ಸೀಲ್ ಹಾಕಬಹುದು. ಈ ಸ್ಟ್ರಾಂಗ್ ರೂಂಗಳನ್ನು ದಿನದ 24 ಗಂಟೆಯೂ ಕಾವಲು ಕಾಯುವುದಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಉಸ್ತುವಾರಿ ನಿಯೋಜಿಸಲಾಗುತ್ತದೆ. ಅವರು ಉಪ ಪೊಲೀಸ್ ಆಯುಕ್ತರಿಗಿಂತ ಕಡಿಮೆ ಶ್ರೇಣಿಯವರಾಗಿರಬಾರದು. ಸಾಧ್ಯವಿರುವೆಡೆಗಳಲ್ಲಿ ಕೇಂದ್ರ ಪೊಲೀಸ್ ಪಡೆಗಳೂ ಕಾವಲು ಕಾಯಬಹುದು.

ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆಯಬೇಕು

ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆಯಬೇಕು

ಒಮ್ಮೆ ಬೀಗಮುದ್ರೆ ಹಾಕಿದ ಬಳಿಕ ಸ್ಟ್ರಾಂಗ್ ರೂಂಅನ್ನು ನಿರ್ದಿಷ್ಟ ದಿನ ಮತ್ತು ಸಮಯದಲ್ಲಿ ಮಾತ್ರ ತೆರೆಯಬೇಕು. ಆಗ ಮತಯಂತ್ರಗಳನ್ನು ತಮ್ಮ ಮತಗಟ್ಟೆಗಳಿಗೆ ಕೊಂಡೊಯ್ಯಲು ಚುನಾವಣಾ ಸಿಬ್ಬಂದಿಗೆ ಹಸ್ತಾಂತರಿಸಲಾಗುತ್ತದೆ. ಸ್ಟ್ರಾಂಗ್ ರೂಂಗಳನ್ನು ತೆರೆಯುವ ಸಮಯವನ್ನು ಎಲ್ಲ ಚುನಾವಣಾ ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‌ಗಳಿಗೆ ತಿಳಿಸಿರಲಾಗುತ್ತದೆ.

ನಿರ್ದಿಷ್ಟ ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗಿರುವ ಯಂತ್ರಗಳಲ್ಲದೆ, ಕೆಲವು ಕಾಯ್ದಿರಿಸಿದ ಇವಿಎಂಗಳನ್ನು ಕೂಡ ಸ್ಟ್ರಾಂಗ್ ರೂಂನಿಂದ ತೆಗೆದು ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಳದಲ್ಲಿ ಇರಿಸಲಾಗುತ್ತದೆ. ಇದರಿಂದ ದೋಷ ಕಂಡುಬಂದ ಮತಯಂತ್ರಗಳನ್ನು ವಿಳಂಬವಾದರೂ ಬದಲಿಸಲು ಅವಕಾಶವಿರುತ್ತದೆ.

ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ

ವಾಹನದಲ್ಲಿ ಜಿಪಿಎಸ್ ವ್ಯವಸ್ಥೆ

ಕಳೆದ ವರ್ಷ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಳಕೆಯಾಗದ ಇವಿಎಂಗಳನ್ನು ಸಾಗಿಸಿದ್ದು ಮತ್ತು ಸಂಗ್ರಹಿಸಿ ಇರಿಸಿದ್ದು ವಿವಾದ ಸೃಷ್ಟಿಸಿತ್ತು. ಹೀಗಾಗಿ ಪ್ರಸಕ್ತ ವರ್ಷ ಬಳಕೆಯಾಗದ ಇವಿಎಂಗಳನ್ನು ಜಿಪಿಎಸ್ ವ್ಯವಸ್ಥೆಯುಳ್ಳ ವಾಹನದಲ್ಲಿ ಮಾತ್ರವೇ ಸಾಗಿಸಲಾಗಿದೆ. ಇದರಿಂದ ಡಿಇಒ ಮತ್ತು ಸಿಇಒಗಳು ಅದರ ಚಲನೆಯನ್ನು ತಿಳಿದುಕೊಳ್ಳುತ್ತಿರಬಹುದು.

ಒಮ್ಮೆ ಮತಚಲಾವಣೆ ಮುಗಿದ ಬಳಿಕ ಇವಿಎಂಗಳನ್ನು ನೇರವಾಗಿ ಸ್ಟ್ರಾಂಗ್ ರೂಂಗೆ ಕೊಂಡೊಯ್ಯವುದಿಲ್ಲ. ಸಂಬಂಧಪಟ್ಟ ಅಧಿಕಾರಿಯು ಯಂತ್ರಗಳಲ್ಲಿ ದಾಖಲಾದ ಮತಗಳ ಪ್ರಮಾಣದ ಲೆಕ್ಕವನ್ನು ಸಿದ್ಧಪಡಿಸಬೇಕಾಗುತ್ತದೆ. ಇದರ ಅಧಿಕೃತ ಸಹಿಯೊಂದಿಗೆ ಮತಗಟ್ಟೆಯ ಪ್ರತಿ ಅಭ್ಯರ್ಥಿಯ ಏಜೆಂಟ್‌ಗೆ ಒದಗಿಸಲಾಗುತ್ತದೆ. ಇದರ ಬಳಿಕ ಇವಿಎಂಗಳಿಗೆ ಮುದ್ರೆ ಹಾಕಲಾಗುತ್ತದೆ. ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‌ಗಳು ಸೀಲ್‌ಗಳ ಮೇಲೆ ತಮ್ಮ ಸಹಿ ಹಾಕಬೇಕು. ಈ ಸಂದರ್ಭದಲ್ಲಿ ಅವರು ಟ್ಯಾಂಪರ್ ಮಾಡಿರುವ ಯಾವುದೇ ಸಂಕೇತಗಳಿದ್ದರೆ ಗುರುತಿಸಲು ಸಾಧ್ಯ. ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಇವಿಎಂ ಸಾಗಿಸುವ ವಾಹನದ ಹಿಂದೆಯೇ ಸ್ಟ್ರಾಂಗ್ ರೂಂವರೆಗೂ ಹಿಂಬಾಲಿಸಬಹುದು.

ಮತ ಹಾಕಿರುವ ಇವಿಎಂಗಳ ಜತೆಗೇ ಕಾಯ್ದಿರಿಸಿದ ಇವಿಎಂಗಳನ್ನು ಕೂಡ ಮರಳಿಸಲಾಗುತ್ತದೆ. ಬಳಕೆಯಾದ ಎಲ್ಲ ಇವಿಎಂಗಳೂ ಬಂದ ಬಳಿಕ ಸ್ಟ್ರಾಂಗ್ ರೂಂಗೆ ಬೀಗಮುದ್ರೆ ಹಾಕಲಾಗುತ್ತದೆ. ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಅದಕ್ಕೆ ತಮ್ಮದೇ ಸೀಲ್ ಅಥವಾ ಬೀಗ ಹಾಕಲು ಅವಕಾಶವಿದೆ. ದಿನದ 24 ಗಂಟೆಯೂ ಸ್ಟ್ರಾಂಗ್ ರೂಂಗಳ ಮೇಲೆ ಕಣ್ಣಿಡಲು ಅವರಿಗೂ ಅನುಮತಿಯಿದೆ.

ವಿವಿಪ್ಯಾಟ್ ಹೆಚ್ಚಳದಿಂದ ಲೋಕಸಭೆ ಚುನಾವಣೆ ಫಲಿತಾಂಶ ವಿಳಂಬ

ಎಣಿಕೆ ದಿನದವರೆಗೂ ತೆರೆಯುವಂತಿಲ್ಲ

ಎಣಿಕೆ ದಿನದವರೆಗೂ ತೆರೆಯುವಂತಿಲ್ಲ

ಒಮ್ಮೆ ಬೀಗಮುದ್ರೆ ಹಾಕಿದ ಸ್ಟ್ರಾಂಗ್ ರೂಂಅನ್ನು ಮತ ಎಣಿಕೆಯ ದಿನದ ಬೆಳಗಿನವರೆಗೂ ತೆರೆಯುವಂತಿಲ್ಲ. ಯಾವುದಾದರೂ ಅನಿವಾರ್ಯ ಕಾರಣಕ್ಕೆ ಸ್ಟ್ರಾಂಗ್ ರೂಂಅನ್ನು ತೆರೆಯಲೇಬೇಕಾಗಿದ್ದರೆ, ಅದನ್ನು ಅಭ್ಯರ್ಥಿ ಅಥವಾ ಅವರ ಪ್ರತಿನಿಧಿಗಳ ಹಾಜರಾತಿಯಲ್ಲಿ ಮಾಡಬಹುದು. ಬಳಿಕ ಕೂಡ ಕೊಠಡಿಗೆ ಬೀಗ ಹಾಕಿದ ಬಳಿಕ ಅವರು ತಮ್ಮ ಸೀಲ್‌ ಅಥವಾ ಬೀಗ ಹಾಕಬಹುದು.

ಸ್ಟ್ರಾಂಗ್ ರೂಂ ಸುತ್ತಲೂ ಮೂರು ಹಂತಗಳಲ್ಲಿ ಭದ್ರತಾ ಪಡೆಯನ್ನು ನಿಯೋಜನೆ ಮಾಡಿರಲಾಗುತ್ತದೆ. ಒಳಭಾಗದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕಾವಲು ಕಾಯುತ್ತಿರುತ್ತದೆ. ಫಲಿತಾಂಶದ ದಿನ ಅಭ್ಯರ್ಥಿ ಅಥವಾ ಅವರ ಮತಗಟ್ಟೆ ಏಜೆಂಟ್ ಮತಯಂತ್ರಗಳ ಸಂಖ್ಯೆಗಳನ್ನು ಪರಿಶೀಲಿಸಿ ಹಾಗೂ ತಾವು ಹಾಕಿದ ಸೀಲ್ ಒಡೆದಿಲ್ಲ ಎಂಬುದನ್ನು ಖಾತರಿಪಡಿಸಿದ ಬಳಿಕವಷ್ಟೇ ಮತ ಎಣಿಕೆ ಆರಂಭವಾಗುತ್ತದೆ.

ಪರಿಶೀಲನೆ ಹಂತ

ಪರಿಶೀಲನೆ ಹಂತ

* ಯಂತ್ರಗಳ ಕಾರ್ಯನಿರ್ವಹಿಸುವಿಕೆಯನ್ನು ಖುದ್ದಾಗಿ ಪರಿಶೀಲಿಸಲಾಗುತ್ತದೆ. ದೋಷವಿರುವ ಇವಿಎಂಗಳನ್ನು ಬದಿಗಿರಿಸಲಾಗುತ್ತದೆ.

* ಪ್ರತಿ ಇವಿಎಂ/ವಿವಿಪ್ಯಾಟ್‌ಗಳನ್ನು ಬಳಸಿಕೊಂಡು ಅಣಕು ಮತದಾನ ನಡೆಸಲಾಗುತ್ತದೆ.

* ಇವಿಎಂನ ನಿಯಂತ್ರಣ ಘಟಕ (ಸಿಯು) ಫಲಿತಾಂಶ ಮತ್ತು ವಿವಿಪ್ಯಾಟ್ ಸ್ಲಿಪ್‌ಗಳನ್ನು ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಎಣಿಸಲಾಗುತ್ತದೆ.

* ಸಿಯುವನ್ನು ಪಿಂಕ್ ಪೇಪರ್ ಸೀಲ್‌ನಲ್ಲಿ ಸೀಲ್ ಮಾಡಿ ಇರಿಸಲಾಗುತ್ತದೆ.

ಚುನಾವಣೆ ಮುಗಿದ ಬಳಿಕ

ಚುನಾವಣೆ ಮುಗಿದ ಬಳಿಕ

* ಸಿಯುದ 'ಕ್ಲೋಸ್ ಬಟನ್' ಒತ್ತಿ ಇವಿಎಂಅನ್ನು ಶಟ್‌ಡೌನ್ ಮಾಡಲಾಗುತ್ತದೆ.

* ಮತಗಟ್ಟೆ ಏಜೆಂಟ್‌ಗಳ ಸಹಿಯೊಂದಿಗೆ ಯಂತ್ರಗಳನ್ನು ಸೀಲ್ ಮಾಡಲಾಗುತ್ತದೆ.

* ಸಶಸ್ತ್ರ ಸಿಬ್ಬಂದಿ ಕಾವಲಿನೊಂದಿಗೆ ಯಂತ್ರಗಳನ್ನು ಸಾಗಿಸಲಾಗುತ್ತದೆ. ಅಭ್ಯರ್ಥಿಗಳ ಪ್ರತಿನಿಧಿಗಳು ಅದನ್ನು ಹಿಂಬಾಲಿಸಬಹುದು.

ಮತ ಎಣಿಕೆ ದಿನ

ಮತ ಎಣಿಕೆ ದಿನ

* ಅಭ್ಯರ್ಥಿ, ರಿಟರ್ನಿಂಗ್ ಆಫೀಸರ್, ವೀಕ್ಷಕರ ಸಮ್ಮುಖದಲ್ಲಿ ವಿಡಿಯೋ ಛಾಯಾಗ್ರಹಣದೊಂದಿಗೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ.

* ಸಿಸಿಟಿವಿ ಕಣ್ಗಾವಲಿನಲ್ಲಿ ಸಿಯುಗಳನ್ನು ಎಣಿಕೆ ಟೇಬಲ್‌ಗಳಿಗೆ ತರಲಾಗುತ್ತದೆ.

* ಸಿಯುದ ಯುನೀಕ್ ಐಡಿ ಸಂಖ್ಯೆ ಮತ್ತು ಸಹಿಹಾಕಿದ ಸೀಲ್‌ಗಳನ್ನು ಪರಿಶೀಲಿಸಲಾಗುತ್ತದೆ. ಅದನ್ನು ಮತಗಟ್ಟೆ ಏಜೆಂಟರಿಗೆ ತೋರಿಸಲಾಗುತ್ತದೆ.

* ಮತೆಣಿಕೆ ಬಳಿಕ ಇವಿಎಂ/ವಿವಿಪ್ಯಾಟ್‌ಗಳನ್ನು ಚುನಾವಣಾ ಕಾಲಾವಧಿಯ ಮುಕ್ತಾಯದವರೆಗೂ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಇರಿಸಲಾಗುತ್ತದೆ.

English summary
EVM's storage during non election period, its preparation during election time, how it will be sealed and guarded, how EVM's are allocated and commissioned to specific polling stations, how EVM's are used during voting and counting? Many questions are there regarding security of EVMs'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more