ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?
Recommended Video
ನವದೆಹಲಿ, ಸೆ. 08: ಇಸ್ರೋದ ಮಹತ್ವದ ಚಂದ್ರಯಾನ2 ಯೋಜನೆಯ ಪ್ರಮುಖ ಅಂಗಗಳಾದ ಆರ್ಬಿಟರ್ ಹಾಗೂ ಲ್ಯಾಂಡರ್ ಗಳ ಪೈಕಿ ಆರ್ಬಿಟರ್ ಸುರಕ್ಷಿತವಾಗಿ ಚಂದ್ರನ ಸುತ್ತುತ್ತಿರುವುದು ಈಗ ಭಾರತದ ಪಾಲಿಗೆ ಬಲ ತಂದಿದೆ. ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಯಬೇಕಿದ್ದ ವಿಕ್ರಮ್ ಲ್ಯಾಂಡರ್ ಬಗ್ಗೆ ಸುಳಿವು ಸಿಗದೆ ಕಂಗಾಲಾಗಿದ್ದ ಇಸ್ರೋಗೆ ಈಗ ಜೀವ ಬಂದಿದೆ. ಚಂದ್ರನ ಸುತ್ತ ಸುತ್ತಿರುವ ಆರ್ಬಿಟರ್ ಭಾನುವಾರದಂದು ವಿಕ್ರಮ್ ಪತ್ತೆ ಹಚ್ಚಿದೆ.
"ಶನಿವಾರ ಬೆಳಗ್ಗೆ 1.53ರ ಸುಮಾರಿಗೆ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಮೇಲೆ ಒತ್ತಡ ಹೆಚ್ಚಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಇಳಿಯಲು ಆರಂಭಿಸಿದ್ದು ಹಾಗೂ ಥ್ರಸ್ಟರ್ ಅಸಮರ್ಪಕ ನಿರ್ವಹಣೆಯಿಂದ ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ದೂರವಿದ್ದಾಗ ಬೆಂಗಳೂರಿನ ಕೇಂದ್ರದೊಡನೆ ಸಂಪರ್ಕ ಕಳೆದುಕೊಂಡಿತ್ತು. ಈಗ ಚಂದ್ರನ ಮೇಲ್ಮೈನಲ್ಲೇ ವಿಕ್ರಮ್ ಪತ್ತೆಯಾಗಿದ್ದು, ಲ್ಯಾಂಡರ್ ನಾಶವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ವಿಕ್ರಮ್ ಇರುವ ಜಾಗವನ್ನು ಥರ್ಮಲ್ ಇಮೇಜಿಂಗ್ ಮೂಲಕ ಆರ್ಬಿಟರ್ ಪತ್ತೆ ಮಾಡಿ ಚಿತ್ರ ಕಳಿಸಿದೆ" ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ.
ವಿಕ್ರಂ ಲ್ಯಾಂಡರ್ ನ ಕಮ್ಯೂನಿಕೇಷನ್ ಕಿಟ್ ಇನ್ನು ಕಾರ್ಯ ನಿರ್ವಹಿಸುವಂತೆ ಕಾಣುತ್ತಿಲ್ಲ. ಇನ್ನೂ 13 ದಿನಗಳ ಕಾಲ ನಿರಂತರವಾಗಿ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯಲಿದೆ. ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್ ಇನ್ನೂ 7 ವರ್ಷ ಅಲ್ಲೇ ಇರಲಿದೆ. ಅದರಿಂದ ಫೋಟೋಗಳನ್ನು ತೆಗೆದು ಪರಿಸ್ಥಿತಿ ವಿಶ್ಲೇಷಣೆ ಮಾಡಬಹುದು. ಸ್ವಯಂ ಚಾಲಿತವಾಗಿ ಪುನರಾರಂಭ ಗೊಂಡು ಭೂಮಿಯೊಂದಿಗೆ ಸಂಪರ್ಕ ಬರುವ ನಿರೀಕ್ಷೆ ಇದ್ದೇ ಇದೆ.

ಆರ್ಬಿಟರ್ ಥರ್ಮಲ್ ಇಮೇಜಿಂಗ್
ಚಂದ್ರಯಾನದ ಆರ್ಬಿಟರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಅಲ್ಲಿ ತನ್ನ ಕಾರ್ಯಾಚರಣೆ ನಡೆಸಬಲ್ಲದಾಗಿದೆ. ಚಂದ್ರದ ದಕ್ಷಿಣ ಧ್ರುವದ ವಿಶಿಷ್ಟ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಲಿದೆ, ಪ್ರಸ್ತುತ ತನ್ನಿಂದ ಬೇರ್ಪಟ್ಟ ಲ್ಯಾಂಡರ್ ಈಗ ಎಲ್ಲಿದೆ, ಅದರ ಸ್ಥಿತಿಗತಿಗಳು ಹೇಗಿವೆ ಎಂಬುದನ್ನು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನದ ಮೂಲಕ ಇಸ್ರೋ ನಿರ್ವಹಣಾ ಕೇಂದ್ರಕ್ಕೆ ತಲುಪಿಸಿದೆ. ಅತ್ಯಂತ ಕತ್ತಲೆ ಪ್ರದೇಶದಲ್ಲೂ ಶಾಖೋತ್ಪಾದನೆ ವಸ್ತುವಿನ ಇನ್ಫ್ರಾರೆಡ್ ವಿಕಿರಣದ ಮೂಲಕ ಚಿತ್ರವನ್ನು ತೆಗೆಯುವ ಕೆಮೆರಾವನ್ನು ಆರ್ಬಿಟರ್ ಹೊಂದಿದೆ.

ಆರ್ಬಿಟರ್ ಎಂಬ ಗಸ್ತುವಾಹನ
2,379 ಕೆಜಿ ತೂಕದ ಆರ್ಬಿಟರ್ ಎಂಟು ವೈಜ್ಞಾನಿಕ ಪೇಲೋಡ್‌ಗಳನ್ನು (ಅಧ್ಯಯನ ಸಾಧನಗಳು) ಹೊಂದಿದ್ದು, ಇವು ಚಂದ್ರನ ಮೇಲ್ಮೈಅನ್ನು ಪರೀಕ್ಷಿಸಿ ಚಂದ್ರನ ಹೊರಭಾಗದ ವಾತಾವರಣವನ್ನು ಅಧ್ಯಯನ ಮಾಡಲಿವೆ. ಚಂದ್ರನ ಮೇಲ್ಮೈನಿಂದ 100 ಕಿ.ಮೀ. ದೂರದಲ್ಲಿ ಸುತ್ತಲಿದ್ದು, ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಸಹ ಪ್ರಯತ್ನ ಮುಂದುವರಿಸಲಿದೆ.

ಮೂರು ರೀತಿ ಇಮೇಜಿಂಗ್ ವ್ಯವಸ್ಥೆ
ಸಾಮಾನ್ಯವಾಗಿ ಬಾಹ್ಯಾಕಾಶ ಯೋಜನೆಗಳ ಇಂಥ ಸಾಧನಗಳಲ್ಲಿ ಅತ್ಯಾಧುನಿಕ ಕೆಮೆರಾ ಲೆನ್ಸ್ ಗಳ ಜೊತೆಗೆ ಥರ್ಮಲ್ ಇಮೇಜಿಂಗ್, ನಿಯರ್ ಇನ್ಫ್ರಾರೆಡ್ ಬಳಕೆ ಫೋಟೊ ತೆಗೆಯುವುದು ಹಾಗೂ ಅತಿ ಕಡಿಮೆ ಬೆಳಕಿನಲ್ಲಿ ಇಮೇಜಿಂಗ್ ಮೂರು ವಿಧಾನ ಬಳಸಲಾಗುತ್ತದೆ. ಇದರಲ್ಲಿ ಥರ್ಮಲ್ ಇಮೇಜಿಂಗ್ ಅತ್ಯಂತ ಪರಿಣಾಮಕಾತಿಯಾಗಿದ್ದು, ಬೆಳಕಿಲ್ಲದ ತಾಣಗಳಲ್ಲಿ ಧೂಳು, ಹೊಗೆ, ಮಂಜಿನ ನಡುವೆ ಇರುವ ವಸ್ತುವನ್ನು ಪತ್ತೆ ಹಚ್ಚಿ ಚಿತ್ರ ತೆಗೆಯಬಲ್ಲದಾಗಿದೆ. ಹೀಗಾಗಿ, ಚಂದ್ರನ ಮೇಲ್ಮೈನಲ್ಲಿರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಕ್ರಮ್ ಪತ್ತೆ ಹಚ್ಚಲು ಸಾಧ್ಯವಾಗಿದೆ.

ಆರ್ಬಿಟರ್ ಸಾಮರ್ಥ್ಯ
ಚಂದ್ರನ ಅಂಗಳದ 0.3 ಮೀಟರ್ ಅಥವಾ .08 ಅಡಿಗಳ ತನಕ ಏನೇ ಕಂಡರೂ ಚಿತ್ರಿಸುವ ಸಾಮರ್ಥ್ಯವನ್ನು ಆರ್ಬಿಟರ್ ಬಳಿ ಇರುವ ಕೆಮರಾ ಹೊಂದಿದೆ. ಇನ್ಫ್ರಾರೆಡ್ ವಿಕಿರಣ ಬಳಿಸಿ ಥರ್ಮೋಗ್ರಾಫಿ ಮೂಲಕ ತೆಗೆಯುವ ಚಿತ್ರಗಳು 14,000 nm ತರಂಗಾಂತರ ತನಕ ಕಾರ್ಯ ನಿರ್ವಹಿಸಬಲ್ಲುದು, ಸಾಮಾನ್ಯ ಕೆಮೆರಾದ ಸಾಮರ್ಥ್ಯ ಬೆಳಕಿದ್ದಲ್ಲಿ 400 ರಿಂದ 700 ನ್ಯಾನೋ ಮೀಟರ್ ತನಕ ರೇಂಜ್ ಇರುತ್ತದೆ. ಹೀಗಾಗಿ, ಆರ್ಬಿಟರ್ ಉಳಿದುಕೊಂಡಿದ್ದು ಇಸ್ರೋ ಪಾಲಿಗೆ ವರವಾಗಿ ಪರಿಣಮಿಸಲಿದೆ.

3-ಲ್ಯಾಂಡರ್(ವಿಕ್ರಮ್), 2-ರೋವರ್ (ಪ್ರಜ್ಞಾನ್) (27ಕೆಜಿ, 50 ವ್ಯಾಟ್ ಶಕ್ತಿ)
3-ಲ್ಯಾಂಡರ್ ಗಳಿದ್ದು ಡಾ. ವಿಕ್ರಮ್ ಎ ಸಾರಾಭಾಯಿ ಹೆಸರಿನಲ್ಲಿ ವಿಕ್ರಮ್ ಎಂಬ ಹೆಸರಿಡಲಾಗಿದೆ. (1,471 ಕೆಜಿ, 650 ವ್ಯಾಟ್ ಶಕ್ತಿ ಹೊಂದಿದೆ.) ಒಟ್ಟು 14 ಪೇ ಲೋಡ್(ನಾಸಾದ ವೈಜ್ಞಾನಿಕ ಉಪಕರಣ ಸೇರಿ) ಹೊಂದಿದೆ. ಎರಡು ರೋವರ್ (ಪ್ರಜ್ಞಾನ್ ಹೆಸರು) (27ಕೆಜಿ, 50 ವ್ಯಾಟ್ ಶಕ್ತಿ)
ಅತಿಯಾದ ತಾಪಮಾನದಲ್ಲಿ ಉಳಿದುಕೊಳ್ಳಬಲ್ಲ ಲ್ಯಾಂಡರ್, ಸೂರ್ಯನ ಸಂಪರ್ಕ ಇಲ್ಲದ ಚಂದ್ರನಲ್ಲಿ -180 ಸೆ. ವಾತಾವರಣದಲ್ಲಿ ಶೀತವನ್ನು ಸಹಿಸಿಕೊಳ್ಳಲಾರದು. ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇನ್ನೂ 13 ದಿನಗಳು ಸಿಗಲಿವೆ. ವಿಕ್ರಮ್ ಗೆ ಆರ್ಬಿಟರ್ ಹಾಗೂ ರೋವರ್ ಎರಡರ ಜೊತೆ ಸ್ವಂತವಾಗಿ ಸಂವಹನ ನಡೆಸುವ ಸಾಮರ್ಥ್ಯವಿದೆ ಜೊತೆಗೆ ಬೆಂಗಳೂರಿನ ಬ್ಯಾಲಾಳುವಿನ ಐ ಡಿ ಎಸ್ ಎನ್ ಕೇಂದ್ರದ ಜೊತೆಗೆ ಸಂವಹನ ನಡೆಸಬಹುದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications