• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧಿಯನ್ನು ಕೊಂದ ಗೋಡ್ಸೆ 'ಹಿಂದೂ ಉಗ್ರ'ನಾಗಲು ಹೇಗೆ ಸಾಧ್ಯ?

By ಸುಪ್ರೀತ್ ಕೆಎನ್
|

ನಟ-ರಾಜಕಾರಣಿ ಕಮಲ್ ಹಾಸನ್ ಅವರ 'ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ. ಆತನ ಹೆಸರು ನಾಥೂರಾಮ್ ಗೋಡ್ಸೆ' ಈ ಹೇಳಿಕೆ ಬಾರಿ ಚರ್ಚೆಯಾಗುತ್ತಿದೆ. ಆಗಾಗ 'ಹಿಂದೂ' ಎಂಬ ಪದ ತೆಗೆದು, ಅದಕ್ಕೆ ಎ‌ಷ್ಟು ಸಾಧ್ಯವೋ ಅ‌ಷ್ಟು ಅವಮಾನಿಸೋದೆ ಕೆಲವರ ಕೆಲಸ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸದ್ಯದ ಪರಿಸ್ಥಿತಿಯಲ್ಲಿ ಇಡಿ ಜಗತ್ತು ಇಸ್ಲಾಂ ಭಯೋತ್ಪಾದನೆಯ ಬಗ್ಗೆ ತಲೆಕೆಡಸಿಕೊಂಡಿದ್ದಿದ್ದರೆ, ಕಮಲ್ ಹಾಸನ್ ರಂತವರು ಮಾತ್ರ 'ಹಿಂದೂ ಉಗ್ರ', 'ಹಿಂದೂ ಭಯೋತ್ಪಾದಕ' ಈ ಪದಗಳಿಗೆ ಅಂಟಿಕೊಂಡಿದ್ದಾರೆ. ಇವರ ಬಾಯಲ್ಲಿ, 'ಮುಸ್ಲಿಂ ಉಗ್ರ' ಎಂಬ ಪದ ಎಷ್ಟುಬಾರಿ ಬಂದಿದೆ?

ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್

ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ಮಾಡಿದ್ದು ಇಸ್ಲಾಂ ಉಗ್ರರು ಎಂದು ಇಡೀ ಜಗತ್ತಿಗೆ ಗೊತ್ತು. ಆದರೆ ಒಂದು ಗುಂಪು ಮಾತ್ರ 'ಭಯೋತ್ಪಾದಕರಿಗೆ ಧರ್ಮವಿಲ್ಲ' ಎನ್ನುತ್ತದೆ. ತಮಾಷೆಯೆಂದರೆ, ಅದೇ ಗುಂಪು ನಾಥೂರಾಮ ಗೋಡ್ಸೆಯನ್ನು 'ಹಿಂದೂ ಉಗ್ರ' ಎನ್ನುತ್ತದೆ. ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದ ಮೇಲೆ, ನಾಥೂರಾಮ್ ಗೋಡ್ಸೆ 'ಹಿಂದೂ ಉಗ್ರ'ನಾಗಲು ಹೇಗೆ ಸಾದ್ಯ?

ಉಗ್ರನಿಗೂ, ಕೊಲೆಗಾರನಿಗೂ ಬಹಳ ವ್ಯತ್ಯಾಸವಿದೆ. ಬಹುತೇಕ ಉಗ್ರ ದಾಳಿಯಲ್ಲಿ ಉಗ್ರರಿಗೆ ಸಾಯಿಸುವುದಷ್ಟೆ ಗುರಿಯಾಗಿರುತ್ತದೆ. ತಾವು ಸಾಯಿಸಲಿರುವ ವ್ಯಕ್ತಿಯ ಪರಿಚಯವೂ ಉಗ್ರರಿಗೆ ಇರುವುದಿಲ್ಲ. ಇನ್ನು ವೈಯಕ್ತಿಕ ದ್ವೇಷವಂತೂ ದೂರದ ಮಾತು. 2008ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿ, ಇತ್ತೀಚೆಗೆ ಶ್ರೀಲಂಕದಲ್ಲಿ ನಡೆದ ಉಗ್ರರ ದಾಳಿ; ಇಲ್ಲಿ ಮೃತಪಟ್ಟ ಅಮಾಯಕರ ಪರಿಚಯ ಆ ಉಗ್ರರಿಗೆ ಇರಲಿಲ್ಲ. ಯಾರನ್ನಾದರೂ ಸರಿ, ಸಾಯಿಸಬೇಕಷ್ಟೆ- ಇದು ಉಗ್ರರ ಉದ್ದೇಶವಾಗಿತ್ತು.

ಮೊದಲ ಉಗ್ರ ಹಿಂದು: ಸತ್ಯವನ್ನೇ ಹೇಳಿದ್ದೇನೆ ಎಂದ ಕಮಲ್ ಹಾಸನ್

ಆದರೆ ನಾಥೂರಾಮ್ ಗೋಡ್ಸೆ, ಗಾಂಧಿಯವರನ್ನು ಕೊಲ್ಲುವುದ್ದಕ್ಕೇ ಅವನದ್ದೇ ಆದ ಕೆಲವು ಕಾರಣಗಳಿದ್ದವು. ದೇಶ ವಿಭಜನೆ ಸಮಯದಲ್ಲಿ ನಡೆದ ಕೆಲವು ಘಟನೆಗಳು, ಹಿಂದೂಗಳ ಮಾರಣ ಹೋಮ, ಹಿಂದೂ ಮಹಿಳೆಯರ ಅತ್ಯಾಚಾರ; ಇವೆಲ್ಲಾ ಗೋಡ್ಸೆಗೆ ತುಂಬ ಸಿಟ್ಟು-ಬೇಸರಗಳನ್ನು ತಂದಿದ್ದವು. (ಅದನ್ನು ಇಲ್ಲಿ ವಿಸ್ತಾರವಾಗಿ ಬರೆಯಲು ಸಾಧ್ಯವಿಲ್ಲ. ತಿಳಿದುಕೊಳ್ಳಲು ಆಸಕ್ತಿ ಇರುವವರು ರವಿ ಬೆಳಗೆರೆಯವರ 'ಗಾಂಧಿ ಹತ್ಯೆ ಮತ್ತು ಗೋಡ್ಸೆ' ಪುಸ್ತಕ ಓದಬಹುದು). ಗೋಡ್ಸೆ ದೃಷ್ಟಿಯಲ್ಲಿ ಇವೆಲ್ಲಕ್ಕೂ ಗಾಂಧಿಯೇ ಪರೋಕ್ಷವಾಗಿ ಕಾರಣರಾಗಿದ್ದರು. ಹಾಗಾಗಿ ಅವನು ಗಾಂಧಿಯವರ ಮುಂದೆಯೇ ನಿಂತು ಗುಂಡು ಹಾರಿಸಿ ಹತ್ಯೆ ಮಾಡಿದ. ಸಿಕ್ಕ ಸಿಕ್ಕವರ ಮೇಲೆಲ್ಲ ಗುಂಡಿನ ದಾಳಿ ಮಾಡಲಿಲ್ಲ.

ನಾಥೂರಾಮ್ ಗೋಡ್ಸೆಯ ದುಷ್ಕೃತ್ಯ ಸಮರ್ಥನೀಯವಲ್ಲ. ಆದರೆ ಆತ ಉಗ್ರನಲ್ಲ ಎಂಬ ವಾದ ಮಂಡಿಸುವುದಕ್ಕಾಗಿ ಇದನ್ನು ವಿವರಿಸಿ ಹೇಳಬೇಕಾಯ್ತು. ಏಕೆಂದರೆ ಕೆಲವರಿಗೆ ಹಿಂದೂ ಧರ್ಮವನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ, ಹಿಂದೂಗಳಲ್ಲಿ ಕೀಳರಿಮೆ ಹುಟ್ಟಿಸುವುದೇ ಚಟವಾಗಿ ಬಿಟ್ಟಿದೆ. ಹಿಂದೂಗಳು ಮುಸ್ಲಿಮರ ಮೇಲೆ ದಾಳಿ ಮಾಡೇ ಇಲ್ಲ ಎಂದು ನಾನು ಹೇಳುವುದಿಲ್ಲ. ಖಂಡಿತಾ ಮಾಡಿದ್ದಾರೆ.

ಆದರೆ ಇಸ್ಲಾಂ ಮತಾಂಧರು ನಮ್ಮ ದೇಶದ ಮೇಲೆ, ಧರ್ಮದ ಮೇಲೆ ಯಾವ ಪರಿ ದಾಳಿ ಮಾಡಿ, ನಮ್ಮ ದೇವಸ್ಥಾನಗಳನ್ನು ಧ್ವಂಸ ಮಾಡಿದರು, ಸಂಸ್ಕೃತಿಯನ್ನು ನಾಶ ಮಾಡಿದರು, ಬಲವಂತದ ಮತಾಂತರ ಮಾಡಿದರು, ಮತಾಂತರ ಆಗಲು ಒಪ್ಪದ್ದಿದ್ದವರನ್ನು ಕೊಂದು ಹಾಕಿದರು, ಅತ್ಯಾಚಾರಗಳನ್ನು ಮಾಡಿದರು; ಇವೆಲ್ಲವೂ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಹೇಳಿ ಕಮಲ ಹಾಸನ್, ಇದರ ಬಗ್ಗೆ ಯಾವಾಗ ಮಾತಾಡುತ್ತೀರಾ?

English summary
How can Nathuram Godse, who killed Mahatma Gandhi, be termed as terrorist? How can Kamal Hassan call Nathuram as the first Hindu terrorist? Supreeth KN analyses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X