• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ರ ಭವಿಷ್ಯ: ಇಡೀ ಜಗತ್ತಿಗೆ ಬಾಬಾ ವಂಗಾ ನೀಡಿರುವ ಎಚ್ಚರಿಕೆಯೇನು?

|
Google Oneindia Kannada News

ನವದೆಹಲಿ, ನವೆಂಬರ್ 2: ಹೊಸ ವರ್ಷದಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಜಗತ್ತು 2023ರ ಕಡೆಗೆ ಎದುರು ನೋಡುತ್ತಿದೆ. ಅನೇಕ ನಿರೀಕ್ಷೆ ಇಟ್ಟುಕೊಂಡಿರುವ ಪ್ರಪಂಚದ ಮಂದಿಗೆ ಬಾಬಾ ವಂಗಾ ಮತ್ತೊಮ್ಮೆ ನೆನಪಿಗೆ ಬಂದಿದ್ದಾರೆ. ಮುಂಬರುವ 2023ರ ವರ್ಷ ಭವಿಷ್ಯದ ಬಗ್ಗೆ ಬಾಬಾ ವಂಗಾ ಏನು ಹೇಳಿದ್ದರು ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಬಲ್ಗೇರಿಯಾದ ಬಾಬಾ ವಂಗಾ ಇದುವರೆಗೂ ನೀಡಿರುವ ಭವಿಷ್ಯಗಳಲ್ಲಿ ಬಹುತೇಕ ಅಂಶಗಳು ಸತ್ಯವಾಗಿವೆ. ಮುಂಬರುವ ವರ್ಷದಲ್ಲೂ ಅದು ನಿಜವಾಗುತ್ತದೆ ಎಂದು ಅವರ ಶಿಷ್ಯಂದಿರು ಹೇಳುತ್ತಿದ್ದಾರೆ. 2023ರ ಬಗ್ಗೆ ವಂಗಾ ನೀಡಿದ ಭವಿಷ್ಯವಾಣಿ ಹೇಗಿತ್ತು ಎಂಬುದು ಇದೀಗ ಕುತೂಹಲ ಕೆರಳಿಸಿದೆ.

2023ರಲ್ಲಿ ಇಡೀ ಜಗತ್ತು ತೆಲೆ ಕೆಳಗಾಗುತ್ತಾ?, ಸೌರ ಮಂಡಲಕ್ಕೆ ಬಿರುಗಾಳಿ ಅಪ್ಪಳಿಸುತ್ತಾ?, ವ್ಲಾಡಿಮಿರ್ ಪುಟಿನ್ ಮತ್ತು ಜೋ ಬೈಡನ್ ಕಥೆ ಏನಾಗುತ್ತೆ?, ಸುನಾಮಿಗಳ ಸಂಖ್ಯೆ ಹೆಚ್ಚಾಗುತ್ತಾ?, ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು ವಾಡಿಕೆಯಂತೆ ಆಗುತ್ತಾ?, ಪರಮಾಣು ಅಸ್ತ್ರಗಳು ಮಾನವೀಯತೆಯನ್ನು ಮರೆತು ಅಬ್ಬರಿಸುತ್ತವಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಬಾಬಾ ವಂಗಾ ಉತ್ತರಿಸಿದ್ದರು. ಅದನ್ನು ತಿಳಿಯಲು ಮುಂದೆ ಓದಿ.

2023ರಲ್ಲಿ ರಾಸಾಯನಿಕ ದಾಳಿ ಹೆಚ್ಚಾಗುವ ಅಪಾಯ

2023ರಲ್ಲಿ ರಾಸಾಯನಿಕ ದಾಳಿ ಹೆಚ್ಚಾಗುವ ಅಪಾಯ

ಮುಂಬರುವ 2023ರಲ್ಲಿ ಯುರೋಪಿನಲ್ಲಿ ರಾಸಾಯನಿಕ ದಾಳಿಗಳ ಸಂಖ್ಯೆಯು ಹೆಚ್ಚಾಗುವ ಅಪಾಯವಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2023ರ ಬಗ್ಗೆ ಅನೇಕ ಸಂವೇದನಾಶೀಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಧರ್ಮ ಗಲಭೆಯಲ್ಲಿ ಇಡೀ ಜಗತ್ತು ಮುಳುಗಲಿದ್ದು, ಭಾರತವೂ ಕೂಡ ಇದರಿಂದ ಹೊರತಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷದಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಎಲ್ಲಾ ವಲಯಗಳಲ್ಲಿ ಮತ್ತಷ್ಟು ಬಲಿಷ್ಠವಾಗಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಬಿರುಗಾಳಿ ಮತ್ತು ಪರಮಾಣು ಸ್ಫೋಟಕ್ಕೆ ಏಷ್ಯಾ ತತ್ತರ

ಬಿರುಗಾಳಿ ಮತ್ತು ಪರಮಾಣು ಸ್ಫೋಟಕ್ಕೆ ಏಷ್ಯಾ ತತ್ತರ

2023ರಲ್ಲಿ ಬಿರುಗಾಳಿ ಮತ್ತು ಪರಮಾಣು ಸ್ಫೋಟಕ್ಕೆ ಇಡೀ ಏಷ್ಯಾ ತತ್ತರಿಸಲಿದೆ. ಸೌರ ಚಂಡ ಮಾರುತ ಮತ್ತು ಸೌರ ಸುನಾಮಿಗಳು ಸಂಭವಿಸುತ್ತವೆ. ಇದರಿಂದ ಭೂಮಿಗೆ ಹಾಗೂ ಭೂಮಿಯ ಕಾಂತೀಯ ಶಕ್ತಿಗೆ ಸಾಕಷ್ಟು ಹಾನಿಯಾಗಲಿದೆ ಎಂದು ಬಾಬಾ ವಂಗಾ ಭವಿಷ್ಯದಲ್ಲಿ ತಿಳಿಸಿದ್ದಾರೆ. ಅದೇ ರೀತಿ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಸ್ಫೋಟದಿಂದ ಏಷ್ಯಾ ಕಂಡದಲ್ಲಿ ವಿಷಕಾರಿ ಮೋಡವು ಆವರಿಸುವುದಕ್ಕೆ ಕಾರಣವಾಗಬಹುದು. ಇದರ ಪರಿಣಾಮ ಅನೇಕ ರಾಷ್ಟ್ರಗಳಲ್ಲಿ ತೀವ್ರ ರೋಗ ಉಂಟಾಗುತ್ತದೆ. ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗಲಿದೆ. ಏಲಿಯನ್ ಭೂಮಿಯ ಮೇಲೆ ದಾಳಿ ನಡೆಸಬಹುದು, ಲಕ್ಷಾಂತರ ಜನರನ್ನು ಕೊಲ್ಲಬಹುದು ಎಂದು ಬಾಬಾ ವಂಗಾ ಎಚ್ಚರಿಕೆ ನೀಡಿದ್ದಾರೆ.

ಪರಮಾಣು ದಾಳಿಗೆ ಲಕ್ಷಾಂತರ ಜನರು ಪ್ರಾಣ ಬಿಡುವರು!

ಪರಮಾಣು ದಾಳಿಗೆ ಲಕ್ಷಾಂತರ ಜನರು ಪ್ರಾಣ ಬಿಡುವರು!

ಬಾಬಾ ವಂಗಾ ಭವಿಷ್ಯದ ಪ್ರಕಾರ, ದೊಡ್ಡ ರಾಷ್ಟ್ರಗಳ ಮಧ್ಯೆ ಜೈವಿಕ ಪರಮಾಣು ಬಾಂಬ್ ದಾಳಿ ನಡೆಯುವ ಅಪಾಯವಿದೆ. ಸಾಮಾನ್ಯ ಜನರ ಮೇಲೆ ಈ ಜೈವಿಕ ದಾಳಿಯನ್ನು ನಡೆಸುವ ಸಾಧ್ಯತೆಯಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪ್ರಖರತೆಯನ್ನು ಗಮನಿಸಿದರೆ, ಇಡೀ ಜಗತ್ತು ಅಪಾಯವನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಕ್ರೇನ್ ನೆಲದಲ್ಲಿ ಪರಮಾಣು ಬಾಂಬ್ ದಾಳಿ ನಡೆಸುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ.

ಪ್ರಯೋಗಾಲಯಗಳಲ್ಲಿ ಮಾನವರ ಜನನ ಎಂದು ವಂಗಾ ಭವಿಷ್ಯ

ಪ್ರಯೋಗಾಲಯಗಳಲ್ಲಿ ಮಾನವರ ಜನನ ಎಂದು ವಂಗಾ ಭವಿಷ್ಯ

ಮುಂಬರುವ 2023ರ ವರ್ಷದಲ್ಲಿ ಮಾನವರ ಜನನವು ಪ್ರಯೋಗಾಲಯಗಳಲ್ಲಿ ಆಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ಹೇಳಿದ್ದಾರೆ. ಈ ಜನರ ಚರ್ಮದ ಬಣ್ಣ ಮತ್ತು ಪಾತ್ರವನ್ನು ಪ್ರಯೋಗಾಲಯವೇ ನಿರ್ಧರಿಸುತ್ತೆ. ಇದರ ಅರ್ಥ ಜನನ ಪ್ರಕ್ರಿಯೆಯು ಸಂಪೂರ್ಣ ನಿಯಂತ್ರಿಸಲ್ಪಟ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯಾರು ಈ ಬಾಬಾ ವಂಗಾ ಅಂತಾ ತಿಳಿಯಿರಿ

ಯಾರು ಈ ಬಾಬಾ ವಂಗಾ ಅಂತಾ ತಿಳಿಯಿರಿ

ಬಲ್ಗೇರಿಯಾದ ಬಾಬಾ ವಂಗಾ ತಮ್ಮ 12ನೇ ವಯಸ್ಸಿಗೆ ದೃಷ್ಟಿಯನ್ನು ಕಳೆದುಕೊಂಡರು. ಅದಾಗ್ಯೂ, ತಮ್ಮ ಎದುರಿಗೆ ನಿಂತವರ ಭವಿಷ್ಯವನ್ನು ಕರೆಕ್ಟ್ ಆಗಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು. 1996ರಲ್ಲೇ ನಿಧನರಾಗಿರುವ ಬಾಬಾ ವಂಗಾ, ಭವಿಷ್ಯದ ಕುರಿತು ತಮ್ಮ ಶಿಷ್ಯಂದಿರ ಬಳಿ ಹೇಳಿದ್ದಾರೆ. ಈ ಅಂಶಗಳೆಲ್ಲ ಈಗ ಪುಸ್ತಕವಾಗಿ ಹೊರಹೊಮ್ಮಿವೆ. ಇದಕ್ಕೂ ಮೊದಲು ಬಾಬಾ ವಂಗಾ ನುಡಿದಿರುವ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ. ಅಮೆರಿಕದ ಅವಳಿ ಗೋಪುರದ ಮೇಲೆ ಭಯೋತ್ಪಾದನಾ ದಾಳಿ ನಡೆಯುವ ಅಪಾಯವಿದೆ ಎಂದು ವಂಗಾ ಭವಿಷ್ಯ ನುಡಿದಿದ್ದರು, ಅದರಂತೆ ಅಲ್-ಖೈದಾ ಸಂಘಟನೆಯು ದಾಳಿ ನಡೆಸಿತು. ಯುರೋಪ್ ಒಕ್ಕೂಟವೂ ಒಡೆಯುವುದು ಎಂದು ವಂಗಾ ಈ ಹಿಂದೆಯೇ ಭವಿಷ್ಯ ಹೇಳಿದ್ದರು.

English summary
How Baba Vanga Predictions will came to reality in upcoming 2023 about religious riots. Know Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X