H.K. Patil Profile: ಚಾಣಾಕ್ಷ ರಾಜಕಾರಣಿಯ ವ್ಯಕ್ತಿ ಪರಿಚಯ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಗದಗ ಕ್ಷೇತ್ರವು ರಾಜಕೀಯವಾಗಿ ಪ್ರತಿಷ್ಠಿತ ಕ್ಷೇತ್ರವಾಗಿದೆ. ಕಳೆದ 50 ವರ್ಷಗಳಿಂದ ಈ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್ ಮನೆತನದ ಬಿಗಿಹಿಡಿತವಿದೆ.
ಕರ್ನಾಟಕದ ಗದಗದ ಒಬ್ಬ ಪ್ರಭಾವಿ ರಾಜಕಾರಣಿ. ಕಳೆದ 50 ವರ್ಷಗಳಿಂದ ಈ ಗದಗ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್ ಮನೆತನದ ಬಿಗಿಹಿಡಿತವಿದೆ. ಮಾಜಿ ಸಹಕಾರಿ ಸಚಿವ ಕೆಎಚ್ ಪಾಟೀಲ್, ಅವರ ಅಣ್ಣನ ಮಗ ಡಿಆರ್ ಪಾಟೀಲ್ ಹಾಗೂ ಕೆಚ್ ಪಾಟೀಲ್ ಅವರ ಪುತ್ರ (ಈಗಿನ ಶಾಸಕ) ಎಚ್‌ಕೆ ಪಾಟೀಲ್ ಅವರೇ ಆರಿಸಿಬಂದಿದ್ದಾರೆ.
ತಾಯಿ ಪದ್ಮಾವತಿ ಹಾಗೂ ತಂದೆ ಕೆ ಹೆಚ್ ಪಾಟೀಲ್ ಅವರ ಮಗನಾಗಿ ಆಗಸ್ಟ್ 15 1953 ರಲ್ಲಿ ಗದಗದಲ್ಲಿ ಜನಿಸಿದರು. ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆರ್ ಲಾ ಪದವಿಯನ್ನ ಪಡೆದುಕೊಂಡಿದ್ದು. ಪರ್ತಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನೂ ಗದಗ ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇನ್ನೂ ಅವರ ಧರ್ಮಪತ್ನಿ ಹೇಮಾ ಪಾಟೀಲ್. ಕೃಷ್ಣಗೌಡ, ಲಕ್ಷ್ಮೀ ಹಾಗೂ ರಾಜೇಶ್ವರಿ ಎಂಬ ಮೂವರು ಮಕ್ಕಳಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಪ್ರಯತ್ನದ ಮುಂದಾಳತ್ವದಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವ್ಯಾಪಕ ಪ್ರಶಂಸೆಯನ್ನು ಪಡೆದಿದರು. ಜವಳಿ ಪ್ರಮುಖ ನೀರಾವರಿ, ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು , ಕರ್ನಾಟಕ ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ 2015-16 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಾಗಿ ಕೇಂದ್ರದಿಂದ ಸ್ಥಾಪಿಸಲಾದ ಇ-ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಪಡೆದುಕೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಏಪ್ರಿಲ್ 2017 ರಂದು ಲಕ್ನೋದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ , ಕರ್ನಾಟಕ ಸರ್ಕಾರ ಇಲಾಖೆಯು 2014-15 ರಿಂದ 2017-18 ರವರೆಗೆ ದಾಖಲೆಯ 4 ವರ್ಷಗಳ ಕಾಲ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ.
ಗದಗದಿಂದ ಆಯ್ಕೆಯಾದ ಎಚ್.ಕೆ. ಪಾಟೀಲ್‌ಗೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಜತೆಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1984 ರಿಂದ 2008 ರವರೆಗೂ ಪಶ್ಚಿಮ ಪಧವೀಧರ ಕ್ಷೇತ್ರದಿಂದ 4 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದರು.
ಜವಳಿ ಮತ್ತು ಆಹಾರ ಸಂಸ್ಕರಣೆ, ಜಲಸಂಪನ್ಮೂಲ ಇಲಾಖೆ, ಕೃಷಿ ಇಲಾಖೆ, ಕಾನೂನು ಮಾನವಹಕ್ಕು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 1994 ರಿಂದ 1998 ಹಾಗೂ 2006 ರಿಂದ 2008 ರವರೆಗೆ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

2008ರಲ್ಲಿ ಮಾತ್ರ ಬಿಜೆಪಿಯ ಶ್ರಿಶೈಲಪ್ಪ ಬಿದರೂರ ಅವರು ಆಯ್ಕೆಯಾಗಿದ್ದರು. ಕಳೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ಸರಾಸರಿ 18 ರಿಂದ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ, 2018ರಲ್ಲಿ ಕೇವಲ 1,868 ಮತಗಳ ಅಂತರದಿಂದ ಎಚ್‌ಕೆ ಪಾಟೀಲ್ ಜಯಗಳಿಸಿದ್ದರು. 2008ರಲ್ಲಿ ಬಿಜೆಪಿ, 1978ರಲ್ಲಿ ಜನತಾ ಪಕ್ಷ, 1967ರಲ್ಲಿ ಸ್ವತಂತ್ರ(ಕೆ.ಎಚ್. ಪಾಟೀಲ) ಅಭ್ಯರ್ಥಿ ಗೆಲವು ಹೊರತುಪಡಿಸಿ 1957ರಿಂದ 11 ಬಾರಿ ಕಾಂಗ್ರೆಸ್ ಜಯಗಳಿಸಿದೆ.
ಇನ್ನೂ 2023 ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಗೆ ಹಲವು ಸಲಹೆಗಳನ್ನ ಹೆಚ್.ಕೆ ಪಾಟೀಲ್ ಅವರು ನೀಡುತ್ತಾ ಬಂದಿದ್ದು, ಸದ್ಯ ಪ್ರಜಾಧ್ವನಿ ಯಾತ್ರೆಯಲ್ಲಿ ತೊಡಗಿದ್ದಾರೆ. ಇನ್ನೂ ಗದಗ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಎಂದು ಗೆಲುವಿಗಾಗಿ ಸಾಕಷ್ಟು ಪ್ರಚಾರದಲ್ಲಿ ತೊಡಗಿದ್ದಾರೆ.












Click it and Unblock the Notifications