• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುಷಿ ವಿಚಾರ ಇದು: ಏಡ್ಸ್ ರೋಗಕ್ಕೂ ಬಂತು ಔಷಧಿ

|
Google Oneindia Kannada News

ಆ ರೋಗದ ಹೆಸರು ಕೇಳಿದರೆ ಜನರಿಗೆ ಶಾಕ್ ಆಗುತ್ತದೆ. ಅದೊಂದು ರೋಗ ಅಂಟಿಕೊಂಡಿದೆ ಎಂದು ಗೊತ್ತಾದರೆ, ಜಗತ್ತು ನಿಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗುತ್ತೆ. ಸಾಮಾನ್ಯವಾಗಿ ಈ ರೋಗವು ವ್ಯಕ್ತಿಯನ್ನು ಸಮಾಜದಿಂದಲೇ ದೂರ ಇರಿಸುವಂತೆ ಮಾಡಿ ಬಿಡುತ್ತದೆ. ಈಗ ನಾವು ಹೇಳುತ್ತಿರುವುದು ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಕಥೆಯಲ್ಲ.

ಸಾಮಾನ್ಯರ ಮಧ್ಯ ಸಾಮಾನ್ಯವಾಗಿ ಬದುಕುತ್ತಿರುವ, ಪ್ರತಿನಿತ್ಯ ಸಾವಿನ ದಿನಗಳನ್ನು ಎಣಿಸುತ್ತಾ ಕಾಲ ಕಳೆಯುತ್ತಿರುವ, ಸಾವಿನ ಹೊಸ್ತಿಲಿನಲ್ಲಿ ನಿಂತು ಬದುಕಿನ ಕನಸು ಕಾಣುತ್ತಿರುವವರ ಕಥೆ. ಅದು ಬೇರೆ ಯಾರೂ ಅಲ್ಲ ಅವರೇ ಏಡ್ಸ್ ರೋಗಿಗಳು. ಈಗ ಅಂಥ ಏಡ್ಸ್ ರೋಗಿಗಳಿಗೂ ಖುಷಿ ಕೊಡುವ ಸಂತೋಷದ ಸುದ್ದಿಯೊಂದನ್ನು ನಾವು ನಿಮಗೆ ಹೇಳುವುದಕ್ಕೆ ಬಯಸುತ್ತೇವೆ.

ಕೊರೊನಾದಿಂದ ತಪ್ಪಿಸಿಕೊಳ್ಳೋಕೆ ಮನೇಲಿರಿ ಅಂದ್ರೆ ಹೆಚ್ಐವಿ ಅಂಟಿಸಿಕೊಳ್ಳುವುದೇ!?ಕೊರೊನಾದಿಂದ ತಪ್ಪಿಸಿಕೊಳ್ಳೋಕೆ ಮನೇಲಿರಿ ಅಂದ್ರೆ ಹೆಚ್ಐವಿ ಅಂಟಿಸಿಕೊಳ್ಳುವುದೇ!?

ಒಂದು ಕಾಲದಲ್ಲಿ ಇಡೀ ಜಗತ್ತನ್ನು ಬೆಚ್ಚಿ ಬೀಳುವಂತೆ ಮಾಡಿದ ಏಡ್ಸ್ ರೋಗಕ್ಕೂ ಮದ್ದು ಸಿಕ್ಕಿದೆ. ವೈದ್ಯಕೀಯ ಸಂಶೋಧನೆಯೊಂದರಲ್ಲಿ ಹೆಚ್ಐವಿ ಸೋಂಕಿನಿಂದ ಜನರನ್ನು ಸುರಕ್ಷಿತವಾಗಿ ಇರಿಸುವುದು ಹೇಗಪ್ಪಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಏಡ್ಸ್ ಔಷಧಿಯ ಕುರಿತಾಗಿ ನಡೆಸಿದ ವೈದ್ಯಕೀಯ ಸಂಶೋಧನೆ ಹೇಗಿತ್ತು?, ಏಡ್ಸ್ ರೋಗಿಗಳು ಸಾವಿನ ಮನೆಯಿಂದ ಬಚಾವ್ ಆಗುವುದಕ್ಕೆ ಸಿದ್ಧವಾಗಿರುವ ಆ ಔಷಧಿ ಯಾವುದು?, ಏಡ್ಸ್ ರೋಗಿಗಳಲ್ಲಿ ಈಗ ಸಂಶೋಧಿಸಿರುವ ಔಷಧಿಯು ಹೇಗೆ ಕೆಲಸ ಮಾಡುತ್ತದೆ ಎಂಬ ಹಲವು ಅಂಶಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಚಿಂಪಾಂಜಿ ದೇಹದಲ್ಲಿ ಹೆಚ್ಐವಿ ಏಡ್ಸ್ ಮೊದಲು ಪತ್ತೆ

ಚಿಂಪಾಂಜಿ ದೇಹದಲ್ಲಿ ಹೆಚ್ಐವಿ ಏಡ್ಸ್ ಮೊದಲು ಪತ್ತೆ

ಹೆಚ್ಐವಿ ಏಡ್ಸ್ ಎಂಬ ಮಾರಕ ರೋಗವು ಮಧ್ಯ ಆಫ್ರಿಕಾದ ಒಂದು ರೀತಿಯ ಚಿಂಪಾಂಜಿಯ ದೇಹದಲ್ಲಿ ಮೊದಲು ಪತ್ತೆಯಾಗಿತ್ತು. ತದನಂತರ 1800ರ ದಶಕದ ಉತ್ತರಾರ್ಧದಲ್ಲಿ ಮನುಷ್ಯನಲ್ಲಿಯೂ ಈ ರೋಗವು ಪತ್ತೆ ಆಯಿತು. ಆದರೆ ಇದುವರೆಗೂ ಮನುಷ್ಯನಲ್ಲಿ ಕಾಣಿಸಿಕೊಂಡ ಏಡ್ಸ್ ಅಥವಾ ಹೆಚ್ಐವಿಗೆ ಯಾವುದೇ ರೀತಿಯ ಔಷಧಿಯನ್ನು ಕಂಡು ಹಿಡಿದಿರಲಿಲ್ಲ. ಇದೊಂದು ಅಂಶದಿಂದ ಏಡ್ಸ್ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಭಯದ ವಾತಾವರಣ ಸೃಷ್ಟಿಯಾಗಿತ್ತು.

ಮನುಷ್ಯನಿಗೆ ಹೆಚ್ಐವಿ ಏಡ್ಸ್ ರೋಗ ಅಂಟಿದರೆ ಏನಾಗುವುದು?

ಮನುಷ್ಯನಿಗೆ ಹೆಚ್ಐವಿ ಏಡ್ಸ್ ರೋಗ ಅಂಟಿದರೆ ಏನಾಗುವುದು?

ಸಾಮಾನ್ಯವಾಗಿ ಮನುಷ್ಯನಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV) ಅಂಟಿಕೊಂಡರೆ, ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಕ್ವೈರ್ಡ್ ಇಮ್ಯುನೊಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್)ಗೆ ಕಾರಣವಾಗುತ್ತದೆ. ಕಳೆದ 1800ರ ದಶಕದ ಉತ್ತರಾರ್ಧದಲ್ಲಿ HIV ವೈರಸ್ ಚಿಂಪಾಂಜಿಗಳಿಂದ ಮನುಷ್ಯರಿಗೆ ಹರಡಿರುವುದು ಎಂದು ಹೇಳಲಾಗುತ್ತದೆ.

ಏಡ್ಸ್ ರೋಗಕ್ಕೂ ಸಿಕ್ಕಿದು ಔಷಧಿ

ಏಡ್ಸ್ ರೋಗಕ್ಕೂ ಸಿಕ್ಕಿದು ಔಷಧಿ

ಜಗತ್ತಿನಲ್ಲೇ ನಡೆದಿರುವ ವೈದ್ಯಕೀಯ ಸಂಶೋಧನೆಯೊಂದರಲ್ಲಿ ಏಡ್ಸ್ ರೋಗವನ್ನು ಗುಣಪಡಿಸುವಂತಹ ಔಷಧಿಯೊಂದನ್ನು ತಯಾರಿಸಲಾಗಿದೆ. ಸಂಶೋಧಕರ ತಂಡವು ರಚಿಸಿರುವ ಔಷಧಿಯು ಹೆಚ್ಐವಿ ಏಡ್ಸ್ ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಮನುಷ್ಯನ ದೇಹದಲ್ಲಿ ಇರುವ ಹೆಚ್ಐವಿ ಅನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವ ಇಂಜಿನಿಯರಿಂಗ್-ಟೈಪ್ ಬಿ ರಕ್ತ ಕಣಗಳಿಂದ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸಂಶೋಧಿಸುವಲ್ಲಿ ಸಂಶೋಧಕರು ಯಶಸ್ವಿ ಆಗಿದ್ದಾರೆ. ಟೆಲ್-ಅವಿವ್ ವಿಶ್ವವಿದ್ಯಾಲಯದ ದಿ ಜಾರ್ಜ್ ಎಸ್ ವೈಸ್ ಫ್ಯಾಕಲ್ಟಿ ಆಫ್ ಲೈಫ್ ಸೈನ್ಸಸ್‌ನಲ್ಲಿ ಸ್ಕೂಲ್ ಆಫ್ ನ್ಯೂರೋಬಯಾಲಜಿ, ಬಯೋಕೆಮಿಸ್ಟ್ರಿ ಮತ್ತು ಬಯೋಫಿಸಿಕ್ಸ್‌ನ ಸಂಶೋಧಕರ ತಂಡವು ಈ ಸಂಶೋಧನೆಯನ್ನು ನಡೆಸಿದೆ.

ಮನುಷ್ಯನ ದೇಹದಲ್ಲಿ ಹೇಗೆ ಕೆಲಸ ಮಾಡುವುದು ಬಿ ಸೆಲ್ಸ್?

ಮನುಷ್ಯನ ದೇಹದಲ್ಲಿ ಹೇಗೆ ಕೆಲಸ ಮಾಡುವುದು ಬಿ ಸೆಲ್ಸ್?

ಹೆಚ್ಐವಿ-ಏಡ್ಸ್ ಸೋಂಕು ಮನುಷ್ಯನ ದೇಹದಲ್ಲಿ ಇರುವ ಪ್ರತಿಕಾಯ ಶಕ್ತಿಯ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಯಾವುದೇ ರೋಗದಿಂದ ಮನುಷ್ಯನನ್ನು ರಕ್ಷಿಸುವಂತಹ ವ್ಯವಸ್ಥೆಯೇ ಹಾಳಾಗುವ ಅಪಾಯವಿರುತ್ತದೆ. ಆದರೆ ಈ ಇಂಜಿನಿಯರ್ ಟೈಪ್-ಬಿ ಬಿಳಿ ರಕ್ತ ಕಣಗಳು ಹೆಚ್ಐವಿ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಕಾಯ ಶಕ್ತಿಯನ್ನು ತಗ್ಗಿಸುವ ಹೆಚ್ಐವಿ ಸೋಂಕಿನ ಶಕ್ತಿಯನ್ನು ಕುಗ್ಗಿಸುವಂತಹ ಪ್ರತಿಕಾಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಲಸಿಕೆಯು ಹೊಂದಿರುತ್ತದೆ," ಎಂದು ಡಾ.ಬಾರ್ಜೆಲ್ ವಿವರಿಸಿದ್ದಾರೆ.

ಏಡ್ಸ್ ಔಷಧಿಯ ಸಂಶೋಧನಾ ಫಲಿತಾಂಶ ಏನು ಹೇಳುತ್ತೆ?

ಏಡ್ಸ್ ಔಷಧಿಯ ಸಂಶೋಧನಾ ಫಲಿತಾಂಶ ಏನು ಹೇಳುತ್ತೆ?

ಹೆಚ್ಐವಿ ರೋಗಿಗಳನ್ನು ಸಂಶೋಧನೆಯ ವೇಳೆ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ರೋಗಿಗಳ ರಕ್ತದಲ್ಲಿ ಪ್ರತಿಕಾಯ ಶಕ್ತಿಯನ್ನು ಹೆಚ್ಚಿಸುವ ಪ್ರಮಾಣವು ಕಂಡು ಬಂದಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಏಡ್ಸ್‌ಗೆ ಔಷಧಿಗಳನ್ನು ಉತ್ಪಾದಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಇದರ ಹೊರತಾಗಿ B ಸೆಲ್ ಜಿನೋಮ್‌ನಲ್ಲಿ ಅಪೇಕ್ಷಿತ ಸ್ಥಳದಲ್ಲಿ ನಿಖರವಾಗಿ ಪರಿಚಯಿಸಲು ಸಮರ್ಥರಾಗಿದ್ದೇವೆ. ಈ ಚಿಕಿತ್ಸೆಯನ್ನು ಪಡೆದುಕೊಂಡಿರುವ ರೋಗಿಗಳ ರಕ್ತದಲ್ಲಿ ಪ್ರತಿಕಾಯ ಶಕ್ತಿಯ ಪ್ರಯಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಇದಲ್ಲದೇ ಹೆಚ್ಐವಿ ರೋಗದ ಪ್ರಭಾವ ಮತ್ತು ಪರಿಣಾಮವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಈ ಲಸಿಕೆಯು ಹೊಂದಿರುತ್ತದೆ ಎಂದು ಸಂಶೋಧಕ ಡಾ ಬಾರ್ಜೆಲ್ ವಿವರಿಸಿದರು.

English summary
HIV can be treated : Researchers were successful in neutralising HIV virus with a single vaccine developed by engineering-type B white blood cells that activate immune system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X