ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಕಾಶ್ಮೀರಿ ಆ್ಯಪಲ್ ಮೇಲೆ ಸೂರ್ಯನ ಕೆಂಗಣ್ಣು!

|
Google Oneindia Kannada News

ಶ್ರೀನಗರ್, ಜೂನ್ 9: ಚೆಂದದ ಹುಡುಗಿಯನ್ನು ಅಂದದ ಆ್ಯಪಲ್‌ಗೆ ಹೋಲಿಸುವುದನ್ನು ಸಾಮಾನ್ಯವಾಗಿ ನೀವೆಲ್ಲ ಕೇಳಿಯೇ ಇರುತ್ತೀರ. ಆ್ಯಪಲ್ ಅಂದ್ರೆ ಕಾಶ್ಮೀರ, ಕಾಶ್ಮೀರ ಅಂದ್ರೆ ಆ್ಯಪಲ್ ಎನ್ನುವು ರೂಢಿಯೂ ಇದೆ. ಅಂಥ ಕಾಶ್ಮೀರಿ ಆ್ಯಪಲ್ ಹಣ್ಣಿಗೆ ಈ ವರ್ಷ ಬರ ಬರುವ ಲಕ್ಷಣಗಳು ಗೋಚರಿಸುತ್ತಿವೆ.

ನೋಡೋದಕ್ಕೆ ಕೆಂಪು ಕೆಂಪಾದ, ಬಾಯಿಗೆ ಸಿಹಿಯಾದ, ಮನಸಿಗೆ ಮುದವಾದ ಅಂದದ ಕಾಶ್ಮೀರದ ಸೇಬುವನ್ನು ಸವಿಸುವುದು ಈ ವರ್ಷ ಕೊಂಚ ಕಾಸ್ಟ್ಲಿ ಆಗುವ ಹಾಗೆ ಕಾಣುತ್ತಿದೆ. ಕಣಿವೆ ರಾಜ್ಯದ ವಾತಾವರಣವು ಸೇಬು ಹಣ್ಣಿನ ಉತ್ಪನ್ನಕ್ಕೆ ಪೆಟ್ಟು ಕೊಟ್ಟಂತೆ ತೋರುತ್ತಿದೆ.

ಕಾಶ್ಮೀರದಲ್ಲಿ ಸೇಬಿಗೆ ಬರಗಾಲ ಬರುವುದು ಒಂದು ಕಡೆಯಾದರೆ, ಮಹಾರಾಷ್ಟ್ರದಲ್ಲಿ ಕಿತ್ತಳೆ ಹಣ್ಣಿನ ಉತ್ಪಾದನೆ ತಗ್ಗಿರುವುದು ಗೊತ್ತಾಗಿದೆ.

ಕೊರೊನಾ ಸಂಕಷ್ಟ: ತರಕಾರಿ, ಹಣ್ಣಿನ ವ್ಯಾಪಾರದಲ್ಲಿ ಇಳಿಕೆ; ರೈತರು, ವ್ಯಾಪಾರಿಗಳಿಗೆ ನಷ್ಟ ಕೊರೊನಾ ಸಂಕಷ್ಟ: ತರಕಾರಿ, ಹಣ್ಣಿನ ವ್ಯಾಪಾರದಲ್ಲಿ ಇಳಿಕೆ; ರೈತರು, ವ್ಯಾಪಾರಿಗಳಿಗೆ ನಷ್ಟ

ಭಾರತದಲ್ಲಿ ಬೊಂಬಾಟ್ ಎನಿಸಿದ ಸೇಬು ಮತ್ತು ಕಿತ್ತಳೆಯ ಉತ್ಪಾದನೆ ಇಳಿಮುಖವಾಗಿರುವುದು ಫಲಪ್ರಿಯರಿಗೆ ಕೊಂಚ ಬೇಸರ ಹುಟ್ಟಿಸುತ್ತದೆ. ಆದರೆ ಸೇಬು ಹಣ್ಣು ಮತ್ತು ಕಿತ್ತಳೆ ಹಣ್ಣಿನ ಉತ್ಪಾದನೆ ಇಳಿಮುಖವಾಗಲು ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸೇಬು ಉತ್ಪಾದನೆಗೆ ಬಿಸಿಗಾಳಿ ಬಿಡುತ್ತಿಲ್ಲ, ಮಳೆಯೂ ಬರುತ್ತಿಲ್ಲ

ಸೇಬು ಉತ್ಪಾದನೆಗೆ ಬಿಸಿಗಾಳಿ ಬಿಡುತ್ತಿಲ್ಲ, ಮಳೆಯೂ ಬರುತ್ತಿಲ್ಲ

ಇಡೀ ದೇಶದಲ್ಲಿ ಸೇಬು ಉತ್ಪಾದನೆ ಎಂದಾಕ್ಷಣ ನೆನಪಿಗೆ ಬರುವುದೇ ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ. ಈ ಎರಡು ರಾಜ್ಯಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೇಬು ಹಣ್ಣನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದರೆ ಈ ಸಾಲಿನಲ್ಲಿ ಸೇಬು ಉತ್ಪಾದನೆಗೆ ವಾತಾವರಣ ಸಪೋರ್ಟ್ ಮಾಡುತ್ತಿಲ್ಲ. ಸೇಬು ಬೆಳೆಯುವುದಕ್ಕೆ ಬಿಸಿಗಾಳಿ ಬಿಡುತ್ತಿಲ್ಲ, ಮಾನ್ಸೂನ್ ಪೂರ್ವದಲ್ಲಿ ಸುರಿಯುವ ತಂಪು ಮಳೆಯೂ ಸಕಾಲಕ್ಕೆ ಬರುತ್ತಿಲ್ಲ. ಅಲ್ಲಿಗೆ ಸೇಬು ಹಣ್ಣಿಗೆ ಈ ಬಾರಿ ಬಿಸಿಲು ಮತ್ತು ಮಳೆಯು ಕೈಕೊಟ್ಟಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಣಿವೆ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆ ಸೇಬು

ಕಣಿವೆ ರಾಜ್ಯದ ಪ್ರಮುಖ ತೋಟಗಾರಿಕೆ ಬೆಳೆ ಸೇಬು

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸೇಬು ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಕಾಶ್ಮೀರದಲ್ಲಿ ಶೇ.86ರಷ್ಟು ಪ್ರಮಾಣದಲ್ಲಿ ಸೇಬು ಹಣ್ಣನ್ನು ಬೆಳೆಯಲಾಗುತ್ತದೆ. ಆ ಮೂಲಕ ರಾಜ್ಯದ 30 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ನೀಡುತ್ತದೆ. ಆದರೆ ಈ ಬಾರಿ ಜಮ್ಮು ಮತ್ತು ಕಾಶ್ಮೀರದ ಜೊತೆ ಹಿಮಾಚಲ ಪ್ರದೇಶದಲ್ಲಿಯೂ ಬಿಸಿಗಾಳಿ ವೇಗ ಹೆಚ್ಚಿದೆ. ಇದರಿಂದ ಎರಡೂ ರಾಜ್ಯಗಳಲ್ಲಿ ಸೇಬು ಹಣ್ಣಿನ ಉತ್ಪಾದನೆಯು ಶೇ.25ರಷ್ಟು ಇಳಿಮುಖವಾಗಿದೆ.

"ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಯು ಹಣ್ಣಿನ ಬೆಳವಣಿಗೆಯ ಹಂತದಲ್ಲಿ ಸೇಬು ಬೆಳೆಯ ಮೇಲೆ ಪರಿಣಾಮ ಬೀರಿದೆ. ಹಣ್ಣಿನ ಬೆಳವಣಿಗೆಗೆ ಈ ತಿಂಗಳು ಬಹಳ ನಿರ್ಣಾಯಕವಾಗಿದೆ. ಆದರೆ ಇನ್ನೂ ತಾಪಮಾನವು ತುಂಬಾ ಹೆಚ್ಚಾಗಿದೆ," ಎಂದು , ಆಪಲ್ ಗ್ರೋವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ರವೀಂದರ್ ಚೌಹಾಣ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ

ಮಹಾರಾಷ್ಟ್ರದಲ್ಲಿ "ಕಿತ್ತಳೆ"ಯ ಕೈ ಹಿಡಿಯಲಿಲ್ಲ ಮುಂಗಾರು ಮಳೆ

ಉತ್ತರ ಭಾರತದಲ್ಲಿ ಬಿಸಿಗಾಳಿಯ ವೇಗವು ಸೇಬು ಹಣ್ಣಿನ ಉತ್ಪಾದನೆಗೆ ಪೆಟ್ಟು ಕೊಟ್ಟಿದ್ದು ಆಗಿದೆ. ಅದೇ ರೀತಿ ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯು ಕೈ ಕೊಟ್ಟಿದ್ದರಂತೆ ಕಿತ್ತಳೆ ಹಣ್ಣಿನ ಉತ್ಪಾದನೆಯೂ ತಗ್ಗಿದೆ. ರೈತರ ಪ್ರಕಾರ, ಮಹಾರಾಷ್ಟ್ರದ ನಾಗ್ಪುರ್, ಅಮರಾವತಿ, ವಿದರ್ಭಾ ಪ್ರದೇಶಗಳಲ್ಲಿ ಕಿತ್ತಳೆ ಹಣ್ಣಿನ ಉತ್ಪಾದನೆಯು ಶೇ.25 ರಿಂದ ಶೇ.30ರಷ್ಟು ಕಡಿಮೆಯಾಗಲಿದೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ದುಬಾರಿ ಆಗಲಿರುವ ಸೇಬು, ಕಿತ್ತಳೆ

ದೇಶದಲ್ಲಿ ದುಬಾರಿ ಆಗಲಿರುವ ಸೇಬು, ಕಿತ್ತಳೆ

ಆಹಾರ ಹಣದುಬ್ಬರವನ್ನು ಹೆಚ್ಚಿಸುವುದರೊಂದಿಗೆ ಅವುಗಳ ಲಭ್ಯತೆ ಕಡಿಮೆ ಇದೆ. ಆದರೆ ಎರಡೂ ಹಣ್ಣುಗಳಿಗೆ ಬೆಲೆಗಳು ಹೆಚ್ಚಾಗುತ್ತದೆ. ಇದರ ಮಧ್ಯೆ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ಮೇಲೆ ಆರ್‌ಬಿಐ ತನ್ನ ವಿತ್ತೀಯ ನೀತಿಯನ್ನು ರೂಪಿಸುತ್ತದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರದ ಪ್ರಮಾಣವು ಶೇ.7.79ರಷ್ಟಾಗಿದ್ದು, 8 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಚಿಲ್ಲರೆ ಹಣದುಬ್ಬರವು ಈ ವರ್ಷದ ಆರಂಭದಿಂದಲೂ ಆರ್‌ಬಿಐನ ಶೇಕಡಾ 2-6 ಗುರಿ ಬ್ಯಾಂಡ್‌ಗಿಂತ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರೀಯ ಬ್ಯಾಂಕ್ ಹಣದುಬ್ಬರವನ್ನು ಏಪ್ರಿಲ್‌ನಲ್ಲಿ ಶೇ. 5.7 ರಿಂದ ಶೇ.6.7 ಏರಿಕೆಯಾಗಿದೆ.

Recommended Video

ಭಾರತದ ಬಗ್ಗೆ ಚೀನಾ ಈ ರೀತಿ ಹೇಳಿದ್ದೇಕೆ | OneIndia Kannada

English summary
Heatwave in India : Heatwave and the absence of pre-monsoon rain have affected two major fruit crops in India: Jammu and Kashmir Apple and Maharashtra Orange Crops. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X