ಜೀರಿಗೆ, ಸೋಂಪು, ಅಜವಾನದ ನೀರನ್ನು ಕುಡಿಯುವುದರಿಂದ ಏನು ಪ್ರಯೋಜನ? ಇದರ ಲಾಭ ತಿಳಿದರೆ ನೀವು ಸ್ಟಾರ್ಟ್ ಮಾಡೋದು ಗ್ಯಾರಂಟಿ
ದೇಹದ ಆರೋಗ್ಯಕ್ಕಾಗಿ ನಾವೆಲ್ಲಾ ಏನೆಲ್ಲಾ ಸರ್ಕಸ್ ಮಾಡುತ್ತೇವೆ ಎಂದು ಎಲ್ಲರಿಗೂ ತಿಳಿದಿದೆ. ಇದಕ್ಕಾಗಿ ಜನಾ ತಮಗಿಷ್ಟದ ಒಂದು ಪದ್ಧತಿಯನ್ನು ರೂಢಿ ಮಾಡಿಕೊಂಡಿರುತ್ತಾರೆ. ಇನ್ನು ಹೆಚ್ಚಾಗಿ ದೇಹದ ಆರೋಗ್ಯ ಸಮಸ್ಯೆಗಳಿಗೆ ಹೊಟ್ಟೆಯೇ ಕಾರಣವಾಗಿದೆ. ಹೀಗಾಗಿ ನಿಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ.
ನೀವು ಸಹ ಮನೆಯಲ್ಲಿ ಹಲವು ಟಿಪ್ಸ್‌ಗಳನ್ನು ನೋಡಿ ಟ್ರೈ ಮಾಡಿರಬಹುದು. ಆದರೆ ಈ ರೀತಿ ಮಾಡಿದರೆ ನಿಮಗೆ ಇನ್ನು ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ. ಅಜವಾನ, ಜೀರಗೆ, ಸೊಂಪು ಸಹ ನಿಮ್ಮ ಆರೋಗ್ಯ ವೃದ್ಧಿಗೆ ಸಹಾಯಕ. ಅಷ್ಟೇ ಅಲ್ಲ ಇವು ದೇಹದ ಜೀರ್ಣಕ್ರಿಯೆಯನ್ನು ಉತ್ತಮವಾಗಿಸಲು ನೆರವಾಗುತ್ತವೆ. ಈ ಮೂರೂ ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೆರವಾಗುತ್ತದೆ.

ಜೀರಿಗೆ ನೀರು
ಜೀರಿಗೆ ನೀರು ಭಾರತೀಯ ಅಡುಗೆಮನೆಗಳಲ್ಲಿ ಜನಪ್ರಿಯ. ಇದು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಗ್ಯಾಸ್ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿರುವ ಥೈಮಾಲ್ ಎಂಬ ಸಂಯುಕ್ತವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಅಲ್ಲದೆ ಈ ನೀರನ್ನು ಸೇವನೆ ಮಾಡುವುದರಿಂದ ವೇಟ್ ಲಾಸ್ ಸಹ ಮಾಡಿಕೊಳ್ಳಬಹುದು.
ಆರ್ಯುವೇದದಲ್ಲೂ ಜೀರಾಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇದರಲ್ಲಿರುವ ದೇಹವನ್ನು ತಂಪಾಗಿಸುವ ಗುಣವೇ ದೇಹಕ್ಕೆ ಸಹಾಯಕ. ಇನ್ನು ತೂಕ ಇಳಿಸಿಕೊಳ್ಳಲು ಸಹ ಇದು ತುಂಬಾ ನೆರವಾಗುತ್ತದೆ. ಒಂದು ಲೋಟ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆದರಿಂದ ಆ ದಿನವು ತುಂಬಾ ಪರಿಣಾಮಕಾರಿ ಆಗಿರುತ್ತದೆ. ಅಲ್ಲದೆ ಇದರ ಸೇವನೆಯಿಂದ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಸೋಂಪು ನೀರು
ಜೀರಿಗೆಯ ರೀತಿ ಸೊಂಪಿನ ನೀರನ್ನು ಪ್ರತಿ ದಿನ ಸೇವನೆ ಮಾಡುವುದರಿಂದವೂ ಹಲವು ಪ್ರಯೋಜನಗಳಿವೆ. ಸೋಂಪಿನ ನೀರು ದೈಹಿಕ ಪ್ರಕ್ರಿಯೆಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣವನ್ನು ನಿವಾರಿಸುತ್ತದೆ. ಸೋಂಪಿನ ನೀರು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವ ಆಸೆಯನ್ನು ಹೊಂದಿರುವವರು ದೇಶೀಯ ಮತ್ತು ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಸೂಕ್ತ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದಲ್ಲದೆ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಸೋಂಪಿನಲ್ಲಿ ಹೇರಳವಾದ ನಾರಿನಂಶವಿದ್ದು ಇದು ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವನ್ನು ತಡೆಯುತ್ತದೆ. ಸೋಂಪು ಸೇವನೆಯು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪಿನ ನೀರನ್ನು ಕುಡಿಯುವುದರಿಂದ, ಒಂದು ತಿಂಗಳೊಳಗೆ ನಿಮ್ಮ ತೂಕದಲ್ಲಿ ವ್ಯತ್ಯಾಸವನ್ನು ನೀವು ಕಾಣಲು ಪ್ರಾರಂಭಿಸುತ್ತೀರಿ.
ಅಜವಾನದ ನೀರು
ಅಜವಾನದ ನೀರು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ಫೈಬರ್ ಅನ್ನು ಸಹ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಜವಾನ ನೀರನ್ನು ಕುಡಿಯುವುದರಿಂದ ಗ್ಯಾಸ್, ಅಜೀರ್ಣ, ಹೊಟ್ಟೆನೋವು ಮತ್ತು ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಜವಾನ್ ಆಯುರ್ವೇದ ಗುಣಗಳಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಅಜವಾನ್ ನೀರನ್ನು ಸೇವಿಸುವುದರಿಂದ ತೂಕವನ್ನು ಸಹ ನಿಯಂತ್ರಿಸಬಹುದು.
ಔಷಧೀಯ ಗುಣಗಳನ್ನು ಹೊಂದಿರುವ ಅಜವಾನ ಸೇವನೆಯಿಂದ ಆರೋಗ್ಯಕ್ಕೆ ನೂರೆಂಟು ಲಾಭಗಳಿವೆ. ಒಂದು ವೇಳೆ ನೀವು ಹೊಟೆ ತುಂಬವ ರೀತಿ ಊಟಮಾಡಿದಾಗ, ಅಜವಾನದ ಚಹಾ ಅಥವಾ ಕಷಾಯ ಕುಡಿಯುವದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ. ಇನ್ನು ಜೀರ್ಣಾಗಗಳ ತೊಂದರೆಯನ್ನು ಕಡಿಮೆ ಮಾಡಿ ದೇಹದ ಚಯಾಪಚಯವನ್ನು ಹೆಚ್ಚಿಸುವ ಈ ಮಸಾಲೆ ಬೀಜಗಳು ತೂಕ ಇಳಿಕೆಗೂ ಸಹಾಯಕ.
ಈ ಮೂರು ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು, ಆದರೆ ಅವುಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.












Click it and Unblock the Notifications