ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಒದ್ದಾಡಿದ ತಲೆಯಿಲ್ಲದ ಮೀನು

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವಿಡಿಯೋವೊಂದು ಹರಿದಾಡುತ್ತಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಸಾಮಾನ್ಯವಾಗಿ ನಾನ್ ವೆಜ್ ಪ್ರಿಯರು ಮೀನುಗಳನ್ನು ತಿನ್ನುತ್ತಾರೆ. ಆದರೆ ಆಹಾರ ತಯಾರಿಸುವ ವೇಳೆ ತಲೆಯಿಲ್ಲದ ಮೀನು ಬದುಕಿರುವುದು ಕಂಡು ಬಂದಿದೆ. ವೈರಲ್ ವಿಡಿಯೋವೊಂದರಲ್ಲಿ ಈ ವಿಚಿತ್ರ ಘಟನೆಯ ದೃಶ್ಯ ಕಂಡು ಬಂದಿದೆ.

ಮೀನು ನೀರಿನ ರಾಣಿ ಎಂದು ಕರೆಯಲಾಗುತ್ತದೆ. ಇದನ್ನು ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಕವಿತೆಯನ್ನು ಕೇಳಿದ್ದೇವೆ. ಆದರೆ ಮೀನು ನೀರಿನ ರಾಣಿ ಮಾತ್ರವಲ್ಲ ಎಣ್ಣೆಯ ರಾಣಿ ಕೂಡ ಹೌದು.. ಏನಿದು ಎಣ್ಣೆಯ ರಾಣಿ? ಮೀನು ಕುಡಿಯುತ್ತಾ ಅಂತ ಯೋಚನೆ ಮಾಡಬೇಡಿ. ಈ ಮೀನು ಕುಡಿಯೋದಿಲ್ಲ. ಬದಲಿಗೆ ತಲೆಯಿಲ್ಲದ ಮೀನು ಕಾದ ಎಣ್ಣೆಯಲ್ಲಿ ಒದ್ದಾಡಿರುವ ವಿಡಿಯೋ ನೋಡಿ ಜನ ಈ ಕ್ರೆಡಿಟ್ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.

ತಲೆ ಇಲ್ಲದ ಮೀನಿನ ಒದ್ದಾಡ ನೋಡಿ ಬೆಚ್ಚಿ ಬಿದ್ದ ವ್ಯಕ್ತಿ

ತಲೆ ಇಲ್ಲದ ಮೀನಿನ ಒದ್ದಾಡ ನೋಡಿ ಬೆಚ್ಚಿ ಬಿದ್ದ ವ್ಯಕ್ತಿ

ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಆಘಾತಕಾರಿಯಾಗಿದೆ. ಮೀನಿಗೆ ತಲೆ ಇರಲಿಲ್ಲ. ಆಹಾರ ತಯಾರಿಸಲು ಅದರ ತಲೆ ತೆಗೆದ ಮೀನು ಇದಾಗಿತ್ತು. ತಲೆಯಿಲ್ಲದ ಸತ್ತ ಮೀನನ್ನು ಹುರಿಯಲು ಎಣ್ಣೆಯ ಬಾಣಲೆಯಲ್ಲಿ ಹಾಕಿದಾಗ ಆ ಮೀನು ವಿಲ ವಿಲ ಒದ್ದಾಡಿದೆ. ಮೀನು ಒದ್ದಾಡುವುದನ್ನು ಕಂಡ ವ್ಯಕ್ತಿ ಗಾಬರಿಗೊಂಡಿದ್ದಾರೆ. ಕಾದ ಎಣ್ಣೆಯಲ್ಲಿ ನೀರಿನಲ್ಲಿ ಇರುವಂತೆ ಮೀನು ಒದ್ದಾಡಿದೆ.

ಕಾದ ಎಣ್ಣೆಯಲ್ಲಿ ಒದ್ದಾಡಿದ ಮೀನು

ಕಾದ ಎಣ್ಣೆಯಲ್ಲಿ ಒದ್ದಾಡಿದ ಮೀನು

ಕಾದ ಎಣ್ಣೆಗೆ ಹಾಕಿದ ತಕ್ಷಣ ಮೀನಿಗೆ ಜೀವ ಬಂತೋ ಅಥವಾ ಮೊದಲೇ ಜೀವವಿತ್ತೋ ಗೊತ್ತಿಲ್ಲ. ಕಾದ ಎಣ್ಣೆಯಲ್ಲಿ ಈ ಮೀನು ವಿಲ ವಿಲ ಒದ್ದಾಡಿದೆ. ವ್ಯಕ್ತಿ ಈ ತಲೆಯಿಲ್ಲದ ಮೀನಿಗೆ ಹಿಟ್ಟನ್ನು ಹಚ್ಚಿದ್ದರು. ಆಗಲೂ ಈ ಮೀನು ಒದ್ದಾಡಿರಲಿಲ್ಲ. ವ್ಯಕ್ತಿ ಮೊದಲು ಮೀನನ್ನು ಲಘುವಾಗಿ ಅದ್ದಿದನು, ಆದರೆ ಏನೂ ಆಗಲಿಲ್ಲ. ಆದರೆ ಇದರ ನಂತರ, ಮೀನಿನ ದೇಹದಲ್ಲಿ ಸ್ವಲ್ಪ ಚಲನೆ ಕಂಡುಬಂದಿದೆ. ನಂತರ ಅದು ಇದ್ದಕ್ಕಿದ್ದಂತೆ ಜೋರಾಗಿ ಒದ್ದಾಡಲು ಪ್ರಾರಂಭಿಸಿದೆ.

ತಲೆ ಇಲ್ಲದ ಮೀನಿಗೆ ಜೀವ ಬಂದಿದ್ದು ಹೇಗೆ?

ತಲೆ ಇಲ್ಲದ ಮೀನಿಗೆ ಜೀವ ಬಂದಿದ್ದು ಹೇಗೆ?

ಬಾಣಲೆಯಲ್ಲಿಟ್ಟ ಎಣ್ಣೆಯೂ ಹೊರಬರುವಷ್ಟು ಜೋರಾಗಿ ಮೀನು ಒದ್ದಾಡಿದೆ. ಮೀನು ಚೆಲ್ಲಾಪಿಲ್ಲಿಯಾಗುತ್ತಿರುವುದನ್ನು ಕಂಡು ಆ ವ್ಯಕ್ತಿ ಅಲ್ಲಿಂದ ಕೊಂಚ ದೂರ ಸರಿಯುತ್ತಾನೆ. ಮೀನಿನ ದೇಹದಲ್ಲಿನ ಚಲನೆಯು ಹಗುರವಾಗಿರಲಿಲ್ಲ ಆದರೆ ತುಂಬಾ ವೇಗವಾಗಿತ್ತು. ನಂತರ ಅದರ ಒದ್ದಾಟ ನೋಡಲಾಗದೆ ವ್ಯಕ್ತಿ ಅದನ್ನು ಸಿಂಕ್ ಬಳಿ ತರುತ್ತಾನೆ. ಅದು ನೀರಿನಿಂದ ತೆಗೆದಾಗ ಮಾಡುವಂತೆಯೇ ಇತ್ತು. ಈ ಆಘಾತಕಾರಿ ವಿಡಿಯೊವನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಸರಳ ರಾಸಾಯನಿಕ ಕ್ರಿಯೆ

ಸರಳ ರಾಸಾಯನಿಕ ಕ್ರಿಯೆ

ಯಾವಾಗಲೂ ಮೀನು ಸಾವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಜಗತ್ತಿನಲ್ಲಿ ಏನು ಬೇಕಾದರೂ ಆಗಬಹುದು ಮತ್ತು ಅದರ ಹಿಂದೆ ವಿಜ್ಞಾನವಿದೆ. ಇದು ಸರಳ ರಾಸಾಯನಿಕ ಕ್ರಿಯೆಯಾಗಿದೆ ಎಂದು ರೆಡ್ಡಿಟ್ ಬಳಕೆದಾರರು ಹೇಳಿದ್ದಾರೆ. ಮೀನನ್ನು ಬಿಸಿ ಎಣ್ಣೆಯಲ್ಲಿ ಹಾಕಿದಾಗ ಎಣ್ಣೆಯಲ್ಲಿನ ಉಪ್ಪು ಅದರ ನರಗಳನ್ನು ತಲುಪಿ ಅವುಗಳನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಮೀನಿನ ಸ್ನಾಯುಗಳು ಚಲಿಸಲು ಪ್ರಾರಂಭಿಸುತ್ತವೆ. ಆಗ ಅದು ಒದ್ದಾಡಲು ಆರಮಭಿಸುತ್ತದೆ. ವಾಸ್ತವವಾಗಿ ಮೀನು ಜೀವಂತವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+