HD Revanna profile: ಅಜಾತಶತ್ರು, ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ವ್ಯಕ್ತಿ ಪರಿಚಯ
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮಗನಾದ ಎಚ್‌ಡಿ ರೇವಣ್ಣ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಅಣ್ಣನೂ ಹೌದು. ರೇವಣ್ಣ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮೂವರು ಗಂಡು ಮಕ್ಕಳಲ್ಲಿ ಮೊದಲನೆಯವರು.
ಬೆಂಗಳೂರು, ಫೆಬ್ರವರಿ 28: ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿರುವ ಎಚ್‌ಡಿ ರೇವಣ್ಣ ಅವರು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಹಾಲಿ ಶಾಸಕರಾಗಿದ್ದಾರೆ. ಹಾಸನ, ಹೊಳೆನರಸೀಪುರ ಮಾತ್ರವಲ್ಲದೆ ರಾಜ್ಯದಾದ್ಯಂತ ತಮ್ಮದೇ ಹೆಗ್ಗುರುತು ಹೊಂದಿದವರು.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮಗನಾದ ಎಚ್‌ಡಿ ರೇವಣ್ಣ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಅಣ್ಣನೂ ಹೌದು. ರೇವಣ್ಣ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮೂವರು ಗಂಡು ಮಕ್ಕಳಲ್ಲಿ ಮೊದಲನೆಯವರು. ಎಚ್‌ಡಿ ದೇವೇಗೌಡ ಅವರಿಗೆ ಅನುಸೂಯ, ಬಾಲಕೃಷ್ಣ, ಎಚ್‌ಡಿ ರೇವಣ್ಣ, ಎಚ್‌ಡಿ ಕುಮಾಸ್ವಾಮಿ, ರಮೇಶ್, ಶೈಲಜಾ ಎಂಬ ಐವರು ಮಕ್ಕಳು.

ಅಪ್ಪ ದೇವೇಗೌಡರಿಂದ ರಾಜಕೀಯದ ಪಟ್ಟುಗಳನ್ನ ಕಲಿತ ರೇವಣ್ಣ ಅವರು ಧಾರ್ಮಿಕ ಶ್ರದ್ಧೆ, ಪೂಜೆ, ಪುನಸ್ಕಾರಗಳನ್ನು ತಾಯಿ ಚೆನ್ನಮ್ಮರಿಂದ ಕಲಿತರು. ರೇವಣ್ಣ ಅವರಿಗೆ ಬಾಲ್ಯದಲ್ಲೇ ರಾಜಕೀಯದತ್ತ ಒಲವಿತ್ತು. ಎಲ್ಲರೊಂದಿಗೆ ಬೆರೆಯುವ ರೇವಣ್ಣ ಹಲವು ಹೋರಾಟಗಳು, ಹಿರಿಯ ಮಾರ್ಗದರ್ಶ ಪಡೆದು ಇವರು ಹಂತ ಹಂತವಾಗಿಯೇ ರಾಜಕೀಯದ ಮೆಟ್ಟಿಲುಗಳನ್ನೇರಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಚ್‌ಡಿ ರೇವಣ್ಣ ಅವರು ಡಿಸೆಂಬರ್ 17 1957ರಲ್ಲಿ ಜನಿಸಿದರು. 1994 ರಲ್ಲಿ ಹೊಳೆನರಸೀಪುರ ಕರ್ನಾಟಕ ವಿಧಾನಸಭೆ ಕ್ಷೇತ್ರವನ್ನು ಮೊದಲ ಬಾರಿ ಗೆದ್ದರು. ಅವರು 1999ರಲ್ಲಿ ಅದೇ ಕ್ಷೇತ್ರದಲ್ಲಿ ಸೋತರು. ಅವರು ಅದೇ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದರು.

2008 ರ ಚುನಾವಣೆಯಲ್ಲಿ ಅವರು 27,606 ಮತಗಳ ಅಂತರದಿಂದ ಗೆದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ 54.58 ಪ್ರತಿಶತವನ್ನು ಪಡೆದಿದ್ದರು. ಎಚ್‌ಡಿ ರೇವಣ್ಣ ಅವರು ಭವಾನಿ ರೇವಣ್ಣ ಅವರನ್ನು ವಿವಾಹವಾಗಿದ್ದಾರೆ. ಭವಾನಿ ರೇವಣ್ಣ ಅವರು ಕೂಡ ರಾಜಕಾರಣಿ. ಹಾಸನ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಅವರು ಈಗ ಹಾಲಿ ಸದಸ್ಯೆಯಾಗಿದ್ದಾರೆ. ರೇವಣ್ಣ ಅವರಿಗೆ ಸೂರಜ್ ಮತ್ತು ಪ್ರಜ್ವಲ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರ ಪುತ್ರ ಪ್ರಜ್ವಲ್ ರೇವಣ್ಣ 2019ರಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ರೇವಣ್ಣ ಅವರು ಧರಂ ಸಿಂಗ್ ಮತ್ತು ಎಚ್‌ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಇಂಧನ ಖಾತೆ ಸಚಿವರಾಗಿದ್ದರು. ಎಚ್.ಡಿ.ರೇವಣ್ಣ ಅವರು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) 9 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಎಚ್‌ಡಿ ರೇವಣ್ಣ 92,713 ಮತಗಳನ್ನು ಪಡೆದಿದ್ದರು.

ರೇವಣ್ಣ ಅವರು ಒಂಭತ್ತು ವರ್ಷಗಳ ಕಾಲ ರಾಜ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕಾರ್ಯಹಿಸಿ ಕೆಎಂಎಫ್‌ನಲ್ಲಿ ಸಾಕಷ್ಟು ಬದಲಾವಣೆ ತಂದವರು. ರೈತರ ಪರ ನಾನಾ ಯೋಜನೆಗಳನ್ನು ಹಮ್ಮಿಕೊಂಡು ನಷ್ಟದಲ್ಲಿದ್ದ ಕೆಎಂಎಫ್ ಅನ್ನು ಲಾಭದತ್ತ ಕೊಂಡೊಯ್ದ ಕೀರ್ತಿ ರೇವಣ್ಣ ಅವರುಗೆ ಸಲ್ಲುತ್ತದೆ. ಜೆಡಿಎಸ್ ಪಕ್ಷಕ್ಕೆ ಸಂಕಷ್ಟ ಬಂದಾಗಲೆಲ್ಲಾ ತನ್ನ ಹೆಗಲುಕೊಟ್ಟು ಅದರ ನಿವಾರಣೆ ಅವಿರತವಾಗಿ ಶ್ರಮಿಸಿದ್ದಾರೆ.
ಜ್ಯೋತಿಷಿಗಳ ಸಲಹೆಯ ಮೇರೆಗೆ ಲೋಕೋಪಯೋಗಿದ್ದ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನದ ತಮ್ಮ ವಿಧಾನಸಭಾ ಕ್ಷೇತ್ರವಾದ ಹೊಳೆನರಸೀಪುರ ಮತ್ತು ಬೆಂಗಳೂರು ನಡುವೆ ಪ್ರತಿ ದಿನ 350 ಕಿ.ಮೀ. ಪ್ರಯಾಣ ಮಾಡುತ್ತಿದ್ದರು ಎಂಬ ವದಂತಿಗಳು ಇವೆ. ಎಚ್‌ಡಿ ರೇವಣ್ಣ ಅವರು ಕೋವಿಡ್ ವೇಳೆ ಜನರಿಗೆ ಜನರಿಗೆ ಬಿಸ್ಕೇಟ್ ಎಸೆಯುತ್ತಿದ್ದ ದೃಶ್ಯ ವೈರಲ್ ಆಗಿ ಕಟು ಟೀಕೆಗೆ ಒಳಗಾಗಿದ್ದರು. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಅಣ್ಣನನ್ನು ಎಂದಿಗೂ ಜೊತೆಯಾಗಿ ಇಟ್ಟುಕೊಂಡು ರಾಜಕಾರಣ ಮಾಡಿದ್ದಾರೆ.
ಸಂಪೂರ್ಣ ರಾಜಕೀಯ ಕುಟುಂಬವಾಗಿರುವ ಎಚ್‌ಡಿ ರೇವಣ್ಣ ಅವರ ಕುಟುಂಬದಲ್ಲಿ ಮೊದಲ ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಎರಡನೇ ಮಗ ಸೂರಜ್ ರೇವಣ್ಣ ಕೂಡ ರಾಜಕೀಯಕ್ಕೆ ಈಗ ಮೊದಲ ಹೆಜ್ಜೆ ಇರಿಸಿದ್ದು ಪ್ರಸ್ತುತ ವಿಧಾನ ಪರಿಷತ್ ಸದಸ್ಯನಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಅವರು ಕಣಕ್ಕಿಳಿಯಲು ಸಿದ್ದರಾಗಿದ್ದಾರೆ.












Click it and Unblock the Notifications