9-5 ಕೆಲಸಕ್ಕೆ ಗುಡ್‌ಬೈ ಹೇಳಿ ಟ್ರಾವೆಲರ್‌ ಆದ ಮಹಿಳೆ: ಒಂದೇ ಟ್ರಿಪ್‌ನಿಂದ ಸಿಗ್ತಿದೆ 2.5 ಲಕ್ಷ ಆದಾಯ!

ಜನರು ಸಾಮಾನ್ಯವಾಗಿ ಕೆಲಸ ಮಾಡುತ್ತಾರೆ, ಹಣ ಉಳಿಸುತ್ತಾರೆ ನಂತರ ರಜೆ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ಈ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಾರೆ. ಅವರು ಪ್ರಯಾಣವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಕ್ರಮೇಣ ಅದರಿಂದ ಹಣ ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಯುಕೆಯಲ್ಲಿ ತನ್ನ ಶಿಕ್ಷಣವನ್ನು ಮುಗಿಸಿದ ನಂತರ, ರಿಯಾನನ್ ಎನ್ನುವ 26 ವರ್ಷದ ಮಹಿಳೆ ವಿದೇಶಗಳಲ್ಲಿ ಹಲವಾರು ಕಡೆ ಕೆಲಸ ಮಾಡಿದ್ದಾರೆ. ರೆಂಟಲ್‌ ಕಂಪನಿ, ಜಿಪ್‌ಲೈನ್ ಕಂಪನಿ ಮತ್ತು ಸ್ಕೀ ರೆಸಾರ್ಟ್ ಹೀಗೆ ಬೇರೆ ಬೇರೆ ಕಡೆ ಕೆಲಸ ಮಾಡಿದ್ದಾರೆ. ಆದ್ರೆ ಈ ಕೆಲಸಗಳಿಂದ ಹೆಚ್ಚು ಹಣ ಗಳಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಇಲ್ಲಿ ಅವರಿಗೆ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುವ ಮತ್ತು ಪ್ರಯಾಣಿಸುವ ಅವಕಾಶ ಸಿಕ್ಕಿತ್ತು.

group trip Woman Quits 9 To 5 Job To Become Traveler Earns More Than Two And Half Lakh Per Month From Trip

ಮುಂದೆ ಇವರು ಪ್ರಯಾಣವನ್ನೇ ಫುಲ್‌ ಟೈಂ ವರ್ಕ್‌ ಆಗಿ ಬದಲಿಸಿಕೊಂಡಿದ್ದಾರೆ. ಹಲವಾರು ಕಡಿಮೆ ಸಂಬಳದ ಕೆಲಸಗಳನ್ನು ಮಾಡಿದ ನಂತರ, ಪ್ರಯಾಣದ ಮೂಲಕವೇ ಹೆಚ್ಚು ಹಣ ಗಳಿಸುವುದು ಸಾಧ್ಯ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಇದೀಗ ಅವರು ಗ್ರೂಪ್‌ ಟೂರ್‌ಗಳನ್ನು ಮುನ್ನಡೆಸುತ್ತಿದ್ದಾರೆ.

2.5 ಲಕ್ಷ ರೂ.ವರೆಗೆ ಕಮಿಷನ್

ಇನ್‌ಸ್ಟಾಗ್ರಾಮ್‌ನಲ್ಲಿ ರಿಯಾನನ್ ವುಡ್ ಸುಮಾರು 60,000 ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರು ಒಂದೇ ಪ್ರವಾಸದಿಂದ 3,000 ಡಾಲರ್‌ ಅಂದರೆ ಸುಮಾರು 2.5 ಲಕ್ಷ ರೂ.ವರೆಗೆ ಕಮಿಷನ್ ಗಳಿಸುತ್ತಾರೆ. ಅವರು ಬ್ರ್ಯಾಂಡ್ ಡೀಲ್‌ಗಳು ಮತ್ತು ಪ್ರಾಯೋಜಿತ ಪೋಸ್ಟ್‌ಗಳಿಂದಲೂ ಹಣವನ್ನು ಗಳಿಸುತ್ತಾರೆ. ಇದೀಗ ತಮ್ಮದೇ ಆದ ಟ್ರಾವೆಲ್‌ ಏಜೆನ್ಸಿಯನ್ನು ಶುರು ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

ವಿಶ್ವವಿದ್ಯಾಲಯದ ದಿನಗಳಿಂದಲೂ ಪ್ರಯಾಣವೆಂದರೆ ತುಂಬಾ ಇಷ್ಟ

2021-22ರಲ್ಲಿ ಫ್ರಾನ್ಸ್‌ನ ಲಿಯಾನ್‌ನಲ್ಲಿ ಓದುತ್ತಿದ್ದಾಗ ವುಡ್ ಹೊಸ ಹೊಸ ಸ್ಥಳಗಳಿಗೆ ಪ್ರಯಾಣಿಸುವ ಆಸಕ್ತಿ ಬೆಳೆಸಿಕೊಂಡರು. ನಂತರ ಅವರು ಕೆನಡಾಕ್ಕೆ ತೆರಳಿದರು, ಅಲ್ಲಿ ಕೈನೋ ರೆಂಟಲ್ ಕಂಪನಿ, ಜಿಪ್‌ಲೈನ್ ವ್ಯವಹಾರ ಮತ್ತು ಸ್ಕೀ ರೆಸಾರ್ಟ್‌ನಲ್ಲಿ ಕೆಲಸ ಮಾಡಿದರು. ಆದರೆ ಇಲ್ಲಿ ಬರುತ್ತಿದ್ದ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ.
2024 ರ ಕೊನೆಯಲ್ಲಿ, ಅವರು ತಮ್ಮ ಟ್ರಾವೆಲ್‌ ಕಟೆಂಟನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಲು ಯೋಚಿಸಿದರು. ಹೀಗಾಗಿ Instagram ಅನ್ನು ಹೆಚ್ಚು ಗಂಭೀರವಾಗಿ ಬಳಸಲು ಪ್ರಾರಂಭಿಸಿದರು. ಅವರು ಸೋಶಿಯಲ್‌ ಮಿಡಿಯಾ ಸ್ಟಾಟರ್ಜಿ ಕೋರ್ಸ್‌ಗಳನ್ನು ಮಾಡಿದರು. ತಮ್ಮ ಖಾತೆಯನ್ನು ಹೇಗೆ ಬೆಳೆಸುವುದು ಮತ್ತು ಅದರಿಂದ ಹಣ ಗಳಿಸುವುದು ಹೇಗೆ ಎಂಬುದನ್ನು ಕಲಿಯಲು Instagram ತರಬೇತುದಾರರನ್ನು ನೇಮಿಸಿಕೊಂಡರು.

ನಾಲ್ಕು ತಿಂಗಳ ನಂತರ ಅವರಿಗೆ ಮೊದಲ ದೊಡ್ಡ ಬ್ರೇಕ್ ಸಿಕ್ಕಿತು. ಗ್ರೂಪ್-ಟ್ರಿಪ್ ಕಂಪನಿ ಮಾಪೋ ಟ್ಯಾಪೋ ಅವರಿಗೆ ಸ್ವಿಟ್ಜರ್ಲೆಂಡ್‌ನಲ್ಲಿ ಪ್ರವಾಸವನ್ನು ಮುನ್ನಡೆಸುವ ಅವಕಾಶವನ್ನು ನೀಡಿತು. ಇದರಿಂದಾಗಿ ಅವರಿಗೆ 330 ಪೌಂಡ್‌ಗಳನ್ನು ಗಳಿಸಲು ಸಾಧ್ಯವಾಯಿತು.‌

ಸಿಗುತ್ತಾ ಹೋಯಿತು ಅವಕಾಶ

ವುಡ್‌ಗೆ ಆರ್ಗನೈಸ್ಡ್‌ ಟೂರ್‌ ಅನ್ನು ಲೀಡ್‌ ಮಾಡುವ ಯಾವುದೇ ಅನುಭವವಿರಲಿಲ್ಲ. ಆದರೆ, ಹೈಕಿಂಗ್, ಮೌಂಟೇನಿಯರಿಂಗ್‌ ಮತ್ತು ರಾಕ್‌ ಕ್ಲೈಂಬಿಂಗ್‌ನಲ್ಲಿನ ಅನುಭವ ಹೊರಾಂಗಣ ಚಟುವಟಿಕೆಗಳ ಆಧಾರದ ಮೇಲೆ ಪ್ರವಾಸಗಳನ್ನು ಯೋಜಿಸಲು ಸಹಾಯ ಮಾಡಿತು. ಸ್ವಿಟ್ಜರ್ಲೆಂಡ್‌ಗೆ ಪ್ರವಾಸವು ಹೆಚ್ಚಿನ ಅವಕಾಶಗಳನ್ನು ತೆರೆಯಿತು. ನಂತರ ಅವರು ಸ್ಕೈಸ್ಕ್ಯಾನರ್, ಸಿರೊಕೊ ಮತ್ತು ರೋಮ್‌ಲೆಸ್‌ನಂತಹ ಟ್ರಾವೆಲ್‌ ಮತ್ತು ಸ್ಪೋರ್ಟ್ಸ್‌ನೊಂದಿಗೆ ವ್ಯವಹಾರ ನಡೆಸುವ ಕಂಪನಿಗಳೊಂದಿಗೆ ಕೆಲಸ ಮಾಡಿದರು.

ಒಂದೇ ಪ್ರವಾಸದಿಂದ 3,000 ಡಾಲರ್‌ವರೆಗೆ ಸಂಪಾದನೆ

ಪ್ರವಾಸಗಳಿಂದ ಆಕೆ ಎಷ್ಟು ಗಳಿಸುತ್ತಾರೆ ಎನ್ನುವುದು ಗ್ರೂಪಿನಲ್ಲಿ ಎಷ್ಟು ಜನ ಇದ್ದಾರೆ ಮತ್ತು ಯಾವ ಏಜೆನ್ಸಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಆದರೆ ಅವರು ಈಗ ಸಾಮಾನ್ಯವಾಗಿ ಒಂದೇ ಪ್ರವಾಸದಿಂದ ಅವರು 3,000 ಡಾಲರ್‌ವರೆಗೆ ಗಳಿಸುತ್ತಾರೆ. ಆರಂಭದಲ್ಲಿ ಕೆಲವು ನೂರು ಡಾಲರ್‌ಗಳಿಂದ ಪ್ರಾರಂಭವಾದ ಅವರ Instagram ಕೋಲ್ಯಾಬರೇಶನ್‌ ಫೀಸ್‌ ಕೂಡಾ ಈಗ 1,000 ಡಾಲರ್‌ಗಿಂತ ಹೆಚ್ಚಾಗಿದೆ. ವುಡ್ ಅವರ ಪ್ರಸ್ತುತ ಗಳಿಕೆಯು ಐದು-ಅಂಕಿಯ ವ್ಯಾಪ್ತಿಯಲ್ಲಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಅವರು ತಮ್ಮ ಪ್ರವಾಸ ಗಳಿಕೆಯ ದೊಡ್ಡ ಭಾಗವನ್ನು ಉಳಿಸುತ್ತಾರೆ. ಪ್ರಾಯೋಜಕತ್ವದ ಹಣವನ್ನು ವೈಯಕ್ತಿಕ ವೆಚ್ಚಗಳಿಗಾಗಿ ಬಳಸುತ್ತಾರೆ.

ಟ್ರಾವೆಲ್‌ ಬ್ಯುಸಿನೆಸ್‌ನಲ್ಲಿಯೇ ಬ್ಯುಸಿ

ಈ ಜೀವನಶೈಲಿಯೂ ಸಹ ಸವಾಲುಗಳೊಂದಿಗೆ ಬರುತ್ತದೆ. ವುಡ್ ಸಾಮಾನ್ಯವಾಗಿ ಸೀಮಿತ ಸಾಮಾನುಗಳೊಂದಿಗೆ ಪ್ರಯಾಣಿಸುತ್ತಾರೆ. ಬಜೆಟ್ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ವರ್ಷದ ಬಹುಪಾಲು ಬ್ಯಾಕ್‌ಪ್ಯಾಕ್‌ ಹೊತ್ತೇ ಸಾಗಬೇಕು. ಅವರ ದೈನಂದಿನ ದಿನಚರಿಯಲ್ಲಿ ಕಟೆಂಟ್‌ ಕ್ರಿಯೇಟ್‌ ಮಾಡುವುದು, ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು, ಬ್ರ್ಯಾಂಡ್ ಡೀಲ್‌ಗಳ ಮಾತುಕತೆ ಮಾಡುವುದು ಮತ್ತು ಗ್ರೂಪ್‌ ಟೂರ್‌ಗಳನ್ನು ಆಯೋಜಿಸುವುದು ಸೇರಿವೆ. ಇವರಿಗೆ ವಿರಾಮ ಎನ್ನುವುದು ಅತಿ ವಿರಳ.

ಇವರು ಮೊದಲು ಈ ವ್ಯವಹಾರಕ್ಕೆ ಇಳಿದಾಗ ಎಷ್ಟು ಶುಲ್ಕ ವಿಧಿಸಬೇಕೆಂದು ನಿರ್ಧರಿಸುವಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗಿತ್ತಂತೆ. ಪ್ರಾಯೋಜಕತ್ವಗಳ ಬಗ್ಗೆ ಮಾತುಕತೆ ನಡೆಸುವುದು ಕೂಡಾ ಕಷ್ಟವಾಗುತ್ತಿತ್ತಂತೆ. ಈಗ, ಅವರು ತನ್ನದೇ ಆದ ಟ್ರಾವೆಲ್‌ ಏಜೆನ್ಸಿಯನ್ನು ಪ್ರಾರಂಭಿಸುವತ್ತ ಕೆಲಸ ಮಾಡುತ್ತಿದ್ದಾರೆ. ತನ್ನ ಪಾಲೋವರ್ಸ್‌ಗಳೊಂದಿಗಿನ ಪ್ರಯಾಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ವ್ಯವಹಾರವನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+