WWWಗೆ 30ರ ಹರೆಯ, ಗೂಗಲ್ ಡೂಡ್ಲ್ ನಿಂದ ಸಂಭ್ರಮಾಚರಣೆ
ಬೆಂಗಳೂರು, ಮಾರ್ಚ್ 12: ಇಂಟರ್ನೆಟ್ ಬಲ್ಲವರಿಗೆ ಬ್ರೌಸ್ ಮಾಡುವಾಗ URL ಹಾಕುವಾಗ ಕಾಣ ಸಿಗುವ WWW ಎಂಬ ಜಾಲಕ್ಕೆ ಇಂದು 30ನೇ ಹುಟ್ಟುಹಬ್ಬ. World Wide Web (WWW) 30ನೇ ಹುಟ್ಟುಹಬ್ಬದ ಸಂಭ್ರಮವನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ವಿಶೇಷವಾದ ಡೂಡ್ಲ್ ಮೂಲಕ ಆಚರಿಸುತ್ತಿದೆ.
ಯೂರೋಪಿನ CERN ಲ್ಯಾಬಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟಿಷ್ ವೈದ್ಯ ಸರ್ ಟಿಮ್ ಬರ್ನರ್ಸ್ ಲೀ ಎಂಬುವರು ಮಾರ್ಚ್ 12, 1989ರಂದು ನ್ಫರ್ಮೇಷನ್ ಮ್ಯಾನೇಜ್ಮೆಂಟ್: ಎ ಪ್ರೊಪೋಸಲ್ ಎಂಬ ವರದಿಯನ್ನು ಸಲ್ಲಿಸಿದ್ದರು. ವ್ಯವಸ್ಥಿತವಾಗಿ ಮಾಹಿತಿಯನ್ನು ಸುರಕ್ಷಿತವಾಗಿ ಒದಗಿಸುವ ಜಾಲದ ಉಗಮಕ್ಕೆ ಇದು ನಾಂದಿ ಹಾಡಿತು.

ಸ್ವಿಟ್ಜರ್ಲೆಂಡಿನ ಅಣುಭೌತಶಾಸ್ತ್ರ ಪ್ರಯೋಗಾಲಯ ಎನಿಸಿರುವ ಸಿಇಆರ್ಎನ್ನಲ್ಲಿರುವ ವಿಜ್ಞಾನಿಗಳಿಗೆ ತಮ್ಮ ನಡುವೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮಾತ್ರ WWW ಸೀಮಿತವಾಗಿತ್ತು. ನಂತರ ಎಚ್ಟಿಎಂಎಲ್ ಲಾಂಗ್ವೇಜ್ ಬಳಸಿ ಎಚ್ಟಿಟಿಪಿ ಅಪ್ಲಿಕೇಷನ್ಮತ್ತು WorldWideWeb.app ಅನ್ನು ಅಭಿವೃದ್ಧಿಪಡಿಸಲಾಯಿತು, ಹೈಪರ್ ಟೆಕ್ಸ್ಟ್ ಲಿಂಕ್ ಗಳ ಮೂಲಕ ಒಂದು ವೆಬ್ ಪುಟ ಒಂದು ಪದವನ್ನು ಕ್ಲಿಕ್ ಮಾಡಿದ ತಕ್ಷಣ ಅದು ನೇರವಾಗಿ ಸಂಪರ್ಕ ಸಾಧಿಸುವುದನ್ನು ಕಾಣಲಾಯಿತು.

WWW ಎಂಬುದು ಆನ್ ಲೈನ್ ಅಪ್ಲಿಕೇಷನ್ ಆಗಿದ್ದು, ಎಚ್ ಟಿ ಎಂಎಲ್ ಲಾಂಗ್ವೇಜ್, URL ವಿಳಾಸ, ಹೈಪರ್ ಟೆಕ್ಸ್ಟ್ ಟ್ರಾನ್ಸ್ ಫರ್ ಪ್ರೊಟೊಕಾಲ್ ಅಥವಾ HTTP ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದೆ. ಗೂಗಲ್ ಡೂಡ್ಲ್ ನಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಹಂತಗಳನ್ನು ಪ್ರದರ್ಶಿಸಲಾಗಿದೆ. ಡೆಸ್ಕ್ ಟಾಪ್ ಮಾನಿಟರ್ ನಿಂದ ಇಂದಿನ ಅತಿವೇಗದ ಡೌನ್ ಲೋಡ್ ಯುಗದ ತನಕ ವಿವರ ಸಿಗಲಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿರಿ
ಇಂಟರ್ನೆಟ್ ಆವಿಷ್ಕರಿಸಿದ್ದು ಯಾರು? ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು.












Click it and Unblock the Notifications