• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಿಲು ತೆಗೆಯುತ್ತೆ, ಗಾರ್ಡ್ ಜೊತೆ ಮಾತಾಡುತ್ತೆ ಕ್ಯಾಮರದಲ್ಲಿ ಮಾತ್ರ ಕಾಣಲ್ಲ: ಯಾರದು?

|
Google Oneindia Kannada News

ಭೂತ, ಪಿಶಾಚಿ, ಪ್ರೇತ ಅನ್ನೋದೆಲ್ಲ ಭ್ರಮೆ. ಅದೆಲ್ಲಾ ಸುಳ್ಳು ಎನ್ನುವವರು ಈ ವಿಡಿಯೋವನ್ನು ನೋಡಲೇಬೇಕು. ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ಸೆರೆಯಾದ ಅದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾತ್ರವಲ್ಲದೆ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಭಯ ಹುಟ್ಟಿಸುವಂತ ಈ ವಿಡಿಯೋದಲ್ಲಿ 'ರೋಗಿ ದೆವ್ವ' ಇದೆ.

ಬ್ಯೂನಸ್ ಐರಿಸ್‌ನಲ್ಲಿರುವ ಖಾಸಗಿ ಆರೈಕೆ ಕೇಂದ್ರವಾದ ಫಿನೊಚಿಯೆಟೊ ಸ್ಯಾನಟೋರಿಯಂನಲ್ಲಿ ಈ ಘಟನೆ ನಡೆದಿದೆ. ನೋಡುಗರನ್ನು ಹುಬ್ಬೇರಿಸುವಂತೆ ಮಾಡುವ ಈ ವಿಡಿಯೋದಲ್ಲಿ ದೆವ್ವ ಅರ್ಜೆಂಟೀನಾದ ಆಸ್ಪತ್ರೆಗೆ ಆಗಮಿಸಿದೆ. ಮಾತ್ರವಲ್ಲದೆ ಅದು ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದೆ. ಈ ಮಾತುಕತೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದವರು ಯಾರು ಎಂಬುದು ಕಾಣುವುದೇ ಇಲ್ಲ. ಭದ್ರತಾ ಸಿಬ್ಬಂದಿ ಮಾತ್ರ ತನ್ನ ಮುಂದೆ ಯಾರೋ ಇರುವಂತೆ ಮಾತನಾಡುತ್ತಿರುವುದು ಕಂಡು ಬರುತ್ತದೆ. ಇದು ನಿಜಕ್ಕೂ ಭಯಾನಕ ದೃಶ್ಯ.

ಕಾಣದ ದೆವ್ವದ ವಿಡಿಯೋ ವೈರಲ್

ಇದು ಬೆಳಗ್ಗೆ 3 ಗಂಟೆಗೆ ಆಸ್ಪತ್ರೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಕ್ಷಾಂತರ ವೀಕ್ಷಣೆಗಳನ್ನು ಸಂಗ್ರಹಿಸಿದೆ. 400 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಮಾಡಲಾಗಿದೆ. ಈ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.

ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದ ದೆವ್ವ

ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದ ದೆವ್ವ

ಎಲ್ಲರಿಗೂ ತಿಳಿದಿರುವಂತೆ ಸ್ವಯಂ ಚಾಲಿತ ಬಾಗಿಲುಗಳು ಅದರ ಬಳಿ ಯಾರಾದರು ಬಂದು ನಿಂತಾಗ ಮಾತ್ರ ತೆರೆದುಕೊಳ್ಳುತ್ತವೆ. ವಿಡಿಯೊ ಪ್ರಾರಂಭವಾಗುತ್ತಿದ್ದಂತೆ ಆಸ್ಪತ್ರೆಯ ಸ್ವಯಂ ಚಾಲಿತ ಬಾಗಿಲು ತನ್ನಿಂದ ತಾನೇ ತೆರೆಯುತ್ತದೆ. ಸೆಕ್ಯುರಿಟಿ ಗಾರ್ಡ್ ಶಬ್ದವನ್ನು ಕೇಳಿ ತನ್ನ ಆಸನದಿಂದ ಎದ್ದು, ಕ್ಲಿಪ್ಬೋರ್ಡ್ ಅನ್ನು ಎತ್ತಿಕೊಂಡು ಬಾಗಿಲಿನ ಕಡೆಗೆ ಸಾಗುತ್ತಾರೆ. ಆದರೆ ಬಾಗಿಲು ತೆಗೆಯುವಕ್ಕೂ ಸೆಕ್ಯುರಿಟಿ ಗಾರ್ಡ್ ಬಾಗಿಲ ಬಳಿ ಬರುವುದಕ್ಕೂ ಅಲ್ಲಿ ಯಾರೋ ಬಂದರು ಎನ್ನುವ ಭಾಸವಾಗುತ್ತದೆಯೇ ಹೊರತು ಅಲ್ಲಿ ಯಾರೂ ಕೂಡ ಇಲ್ಲದಿರುವುದು ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಅವನು ಯಾರನ್ನಾದರೂ ಒಳಗೆ ಬಿಡಲು ಲೈನ್ ಡಿವೈಡರ್ ಅನ್ನು ತೆಗೆದುಹಾಕುತ್ತಾನೆ.

ಸಿಸಿಟಿವಿ ಕ್ಯಾಮರಾದಲ್ಲಿ ಕಾಣದ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಜೊತೆಗೆ ಮಾತನಾಡುತ್ತಾನೆ. ಸೆಕ್ಯುರಿಟಿ ಗಾರ್ಡ್ ತನ್ನ ಕ್ಲಿಪ್ಬೋರ್ಡ್ ನಲ್ಲಿ ಸಿಸಿಟಿವಿ ಕ್ಯಾಮರಾದಲ್ಲಿ ಕಾಣಿಸಿದ ವ್ಯಕ್ತಿಯೊಂದಿಗೆ ಮಾತನಾಡುತ್ತಾ ಏನೋ ದಾಖಲಿಸಿಕೊಳ್ಳುತ್ತಾರೆ. ನಂತರ ಯಾರಿಗೋ ವೀಲ್ ಚೇರ್ ಕೂಡ ಕೊಡುತ್ತಾರೆ. ಗಾರ್ಡ್ ಯಾರೊಂದಿಗೆ ಮಾತನಾಡಿದರು, ಯಾರಿಗೆ ವೀಲ್ ಚೇರ್ ಕೊಟ್ಟರು? ಇದ್ಯಾವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಇದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ.

ವಿಡಿಯೋ ಕಂಡು ಭಯಭೀತರಾದ ಜನ

ವಿಡಿಯೋ ಕಂಡು ಭಯಭೀತರಾದ ಜನ

ಡೈಲಿ ಸ್ಟಾರ್ ವರದಿಯ ಪ್ರಕಾರ, ಒಂದು ದಿನ ಮೊದಲು ಅದೇ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಅದೇ ರೋಗಿ ದೆವ್ವವಾಗಿ ಆಸ್ಪತ್ರೆ ಒಳ ಪ್ರವೇಶಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೂ ಕೆಲವರ ಕಾಮೆಂಟ್ ಪ್ರಕಾರ ಗಾರ್ಡ್ ಜೋಕ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಗಾರ್ಡ್ ಜೋಕ್ ಮಾಡಿದ್ದರೂ ಬಾಗಿಲು ಹೇಗೆ ತೆರೆದುಕೊಂಡಿತು ಎಂದು ಕೆಲವರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ "ಅವರ ಸಹೋದ್ಯೋಗಿ ನೆಲಮಾಳಿಗೆಯಲ್ಲಿ ಕುಳಿತು ಸಿಸಿಟಿವಿ ನೋಡುತ್ತಿದ್ದಾರೆಂದು ಅವನಿಗೆ(ಗಾರ್ಡ್) ತಿಳಿದಿರಬಹುದು" ಎಂದು ಬರೆದಿದ್ದಾರೆ.

ಈ ಎಲ್ಲಾ ಕಾಮೆಂಟ್‌ಗಳ ನಡುವೆ ಕೆಲವು ಬಳಕೆದಾರರು ವಿಡಿಯೋವನ್ನು ವೀಕ್ಷಿಸಿದ ನಂತರ ಭಯಭೀತರಾಗಿದ್ದರು. ಸೆಕ್ಯುರಿಟಿ ಗಾರ್ಡ್ ನಂತರ ವೈದ್ಯರ ಕಛೇರಿಯ ಕಡೆಗೆ ತೋರಿಸುತ್ತಿರುವುದನ್ನು ಕಾಣಬಹುದು. ಅಲ್ಲಿ 'ಪ್ರೇತ ರೋಗಿಯ' ಸಹ ಬೆಂಗಾವಲು ಮಾಡುತ್ತಾನೆ.

ಆಸ್ಪತ್ರೆ ಬಾಗಿಲು ಕೆಟ್ಟಿತ್ತು- ವಕ್ತಾರರು

ಆಸ್ಪತ್ರೆ ಬಾಗಿಲು ಕೆಟ್ಟಿತ್ತು- ವಕ್ತಾರರು

ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಆರೈಕೆ ಕೇಂದ್ರದ ವಕ್ತಾರರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು, ಬಾಗಿಲು ದೋಷಯುಕ್ತವಾಗಿದೆ ಮತ್ತು ಅನೇಕ ಬಾರಿ ತೆರೆಯುತ್ತಲೇ ಇತ್ತು. "ಇದು ಮುರಿದುಹೋಗಿದ್ದರಿಂದ, ಗುರುವಾರ ರಾತ್ರಿ ಮತ್ತು ಶುಕ್ರವಾರ ಮುಂಜಾನೆ ನಡುವಿನ 10 ಗಂಟೆಗಳ ಅವಧಿಯಲ್ಲಿ ಅದು 28 ಬಾರಿ ತೆರೆದುಕೊಂಡಿತು" ಎಂದು ಅವರು ಹೇಳಿದ್ದಾರೆ. ಭದ್ರತಾ ಸಿಬ್ಬಂದಿ ಕ್ಲಿಪ್‌ಬೋರ್ಡ್ ಪೇಪರ್‌ನಲ್ಲಿ ಏನನ್ನಾದರೂ ಬರೆಯುತ್ತಿರುವಂತೆ ತೋರುತ್ತದೆ, ಆದರೆ ರಿಜಿಸ್ಟರ್‌ನಲ್ಲಿ ಯಾವುದೇ ಹೆಸರನ್ನು ನಮೂದಿಸಲಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. ಅಂದರೆ ಇಲ್ಲಿ ಭದ್ರತಾ ಸಿಬ್ಬಂದಿ ನಟನೆ ಮಾಡಿದರಾ? ಅಥವಾ ಭದ್ರತಾ ಸಿಬ್ಬಂದಿಗೆ ದೆವ್ವ ಕಾಣಿಸಿಕೊಂಡಿತಾ? ಅಥವಾ ಅವರ ಮೈಯಲ್ಲೇ ದೆವ್ವಾ ಹೊಕ್ಕಿತ್ತಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

English summary
Video of a ghost arriving at a hospital in Argentina and talking to security guards has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X