• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಕ್ರಿಕೆಟರ್ ಕಮ್ರಾನ್ ಅಕ್ಮಲ್ ಬಕ್ರೀದ್‌ಗೆ ಬಲಿ ನೀಡಲು ತಂದಿದ್ದ ಮೇಕೆ ಕಳ್ಳತನ

|
Google Oneindia Kannada News

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್‌ ಬಕ್ರೀದ್ ಹಬ್ಬಕ್ಕಾಗಿ ಬಲಿಕೊಡಲು ತಂದಿದ್ದ ಮೇಕೆಯನ್ನು ಲಾಹೋರ್‌ನಲ್ಲಿರುವ ಅವರ ಮನೆಯ ಹೊರಗಿನಿಂದ ಈದ್-ಉಲ್-ಅಧಾ ಅಥವಾ ಬಕ್ರೀದ್ ಹಬ್ಬದ ಮುನ್ನವೇ ಕಳವು ಮಾಡಲಾಗಿದೆ. ಕಳ್ಳತನದ ವಿಚಾರ ತಿಳಿಯುತ್ತಿದ್ದಂತೆ ಅಕ್ಮಲ್ ಕುಟುಂಬಸ್ಥರಿಗೆ ಆಘಾತವಾಗಿದೆ.

ಬಕ್ರೀದ್ ಅಥವಾ ಈದ್-ಉಲ್-ಅಧಾ ದಿನದಂದು ಮೇಕೆ, ಕುರಿ, ಹಸು ಅಥವಾ ಒಂಟೆಯಾಗಿರಲಿ ಪ್ರಾಣಿಗಳನ್ನು ಬಲಿಕೊಡುತ್ತಾರೆ. ಇದು ಹಜರತ್ ಇಬ್ರಾಹಿಂ (ಎಎಸ್) ಅವರ ಸುನ್ನತ್ ಅನ್ನು ನಿರ್ವಹಿಸುವ ಮಾರ್ಗವಾಗಿದೆ. ಇದನ್ನು ಜುಲೈ 10 ರಂದು ಭಾನುವಾರ ಆಚರಿಸಲಾಗುತ್ತದೆ ಆದರೆ ಹಬ್ಬಕ್ಕೆ ಮೂರು ದಿನಗಳ ಮೊದಲು, ಅಕ್ಮಲ್ ಮನೆಯವರು ಮೇಕೆಯನ್ನು ಕಳೆದುಕೊಂಡಿದ್ದಾರೆ.

ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಪ್ರಾಣಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಲವು ಮುಸ್ಲಿಂ ಕುಟುಂಬಗಳು ಮಾರುಕಟ್ಟೆಗೆ ಭೇಟಿ ನೀಡಿ ಒಂದು ವಾರ ಮುಂಚಿತವಾಗಿ ಬಲಿ ಕೊಡಲು ಪ್ರಾಣಿಗಳನ್ನು ಖರೀದಿಸುತ್ತಾರೆ. ಕಮ್ರಾನ್ ಅಕ್ಮಲ್ ತಂದೆ ಕೂಡ ಆರು ಮೇಕೆಗಳನ್ನು ಮುಂಗಡವಾಗಿ ಖರೀದಿಸಿದ್ದರು. ಆದರೆ ಅದರಲ್ಲಿ ಒಂದು ಮೇಕೆಯನ್ನು ಗುರುವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಇದೀಗ ಮೇಕೆ ಕಳ್ಳತನವಾಗಿರುವ ಬಗ್ಗೆ ಕುಟುಂಬಸ್ಥರು ವಾಸವಾಗಿರುವ ಖಾಸಗಿ ಹೌಸಿಂಗ್ ಸೊಸೈಟಿಯ ಭದ್ರತಾ ವಿಭಾಗದವರಿಗೆ ತಿಳಿಸಿದ್ದಾರೆ. ಮೇಕೆ ಕದ್ದ ಕಳ್ಳರಿಗಾಗಿ ಹುಡುಕಾಟ ನಡೆದಿದೆ.

ಪ್ರಾಣಿಯನ್ನು ನೋಡಿಕೊಳ್ಳುವ ಜವಾಬ್ದಾರನಾಗಿರುವ ತಮ್ಮ ಸೇವಕ ರಾತ್ರಿಯಲ್ಲಿ ಮಲಗಿದ್ದಾಗ ಮೇಕೆಯನ್ನು ಕಳವು ಮಾಡಲಾಗಿದೆ ಎಂದು ಅವರು ಕಮ್ರಾನ್ ಅಕ್ಮಲ್ ಕುಟುಂಬದವರು ಹೇಳಿದ್ದಾರೆ. 90,000 ರುಪಾಯಿ ನೀಡಿ ಖರೀದಿಸಿದ ಉತ್ತಮವಾದ ಮೇಕೆಯನ್ನೇ ಕಳ್ಳರು ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಮ್ರಾನ್ ಅಕ್ಮಲ್

ಕಮ್ರಾನ್, ಇತ್ತೀಚಿನ ದಿನಗಳಲ್ಲಿ, ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಚಾನೆಲ್‌ನಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿರುವ ವಿವಿಧ ಕ್ರಿಕೆಟ್ ಪಂದ್ಯಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಕಮ್ರಾನ್ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಅವರು ಪೇಶಾವರ್ ಝಲ್ಮಿ ತಂಡದ ಆಟಗಾರನಾಗಿ ಕಣಕ್ಕಿಳಿಯುತ್ತಾರೆ.

Former Pakistan Cricketer Kamran Akmals Goat Stolen Ahead Of Eid-ul-Adha

ಬ್ಯಾಟಿಂಗ್‌ನಲ್ಲಿ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಕಮ್ರಾನ್ ಅಕ್ಮಲ್ ವಯಸ್ಸಿನ ವಿಚಾರದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಜೊತೆಗೆ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ವಿಕೆಟ್‌ಕೀಪರ್‌ಗಳು ಮತ್ತು ಬ್ಯಾಟರ್‌ಗಳಿದ್ದಾರೆ. ಮೊಹಮ್ಮದ್ ರಿಜ್ವಾನ್ ಎಲ್ಲಾ ಸ್ವರೂಪಗಳಲ್ಲಿ ವಿಕೆಟ್ ಕೀಪ್ ಮಾಡುತ್ತಿದ್ದರೆ, ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

English summary
Former Pakistan cricketer Kamran Akmal's goat, which he had brought as a sacrifice for Bakrid, was stolen from outside his house in Lahore ahead of Eid-ul-Adha or Bakrid. Akmal's family members are shocked when they come to know about the theft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X