Winter Tips: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಷ್ಟು ಮಾಡಿ ಸಾಕು..!

ಚಳಿಗಾಲ ಬಂದಾಕ್ಷಣ ಎಲ್ಲರಿಗೂ ಒಂದು ರೀತಿಯ ಹೆದರಿಕೆ. ಚುಮುಚುಮು ಚಳಿಗೆ ಹೆದರಿ ಮನೆಯಿಂದ ಹೊರಬರಲು ಹಿಂಜರಿಯುತ್ತಾರೆ. ಮನೆಯಲ್ಲೇ ಇದ್ದರೂ ಕೂಡ ಚಳಿಯಿಂದ ಅನಾರೋಗ್ಯ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಇನ್ನು ಚಳಿಗಾಲದ ತಣ್ಣನೆಯ ವಾತಾವರಣದಿಂದ ತಪ್ಪಿಸಿಕೊಳ್ಳಲು ನಿಮ್ಮ ಆರೋಗ್ಯದ ಮೇಲೂ ಇರಬೇಕು ಕಾಳಜಿ. ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಲ್ಲಿದೆ ನೋಡಿ ಟಿಪ್ಸ್‌..

ಚಳಿಗಾಲ ಬಂದರೆ ಮೈತುಂಬಾ ಬೆಚ್ಚನೆಯ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯ. ವಸ್ತ್ರಗಳನ್ನು ಹಲವು ಪದರಗಳಲ್ಲಿ ಧರಿಸಿ. ಹೊರಗಿನ ತಾಪಮಾನಕ್ಕೆ ಅನುಗುಣವಾಗಿ ನಿಮ್ಮ ದೇಹದ ತಾಪಕ್ಕೆ ಒಗ್ಗುವ ಬಟ್ಟೆ ಧರಿಸುವುದು ಉತ್ತಮ. ತೀರಾ ಚಳಿಯಿದ್ದರೆ ಉಣ್ಣೆಯ ವಸ್ತ್ರಗಳನ್ನು ಬಳಸಿ.

Follow These Tips To Maintain Good Health In Winter

ಚಳಿಗಾಲದಲ್ಲಿ ಬೆಚ್ಚನೆಯ ಪಾನೀಯಗಳನ್ನು ಕುಡಿಯೋಣ ಎನಿಸುವುದು ಸಾಮಾನ್ಯ. ಹಾಗಂತ ಕಾಫಿಯನ್ನು ಪದೇ ಪದೇ ಸವಿದು ಅತಿಯಾದ ಕೆಫೇನ್‌ ನಿಮ್ಮ ದೇಹಕ್ಕೆ ಸೇರಿಸಿಕೊಳ್ಳಬೇಡಿ. ಅರಿಶಿನದ ಹಾಲು, ಹರ್ಬಲ್‌ ಚಹಾ, ಗ್ರೀನ್‌ ಟೀ, ಕಷಾಯ, ಸೂಪ್‌ಗಳು, ಬಿಸಿನೀರನ್ನೂ ಕುಡಿಯಬಹುದು. ಇದರಿಂದ ನಿಮ್ಮ ದೇಹ ಕ್ರಮೇಣ ಬೆಚ್ಚಗಾಗುತ್ತದೆ. ಇನ್ನು ಹೊರಗೆ ಸಿಗುವ ಪದಾರ್ಥಗಳ ಬದಲಿಗೆ ನಿಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಏನಾದರೂ ಕುಡಿಯಲು ಸಿದ್ಧಪಡಿಸಿಕೊಳ್ಳಿ..

ಚಳಿಗಾಲದಲ್ಲಿ ನಿಮ್ಮ ದೇಹ ಹತೋಟಿಯಲ್ಲಿರಬೇಕಾದರೆ ಮುದುರಿಕೊಂಡು ಇರಬೇಡಿ. ಪ್ರತಿದಿನ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಇನ್ನು ಚಳಿಗಾಲಕ್ಕೆ ಇಂತದ್ದೇ ವ್ಯಾಯಾಮ ಮಾಡಬೇಕು ಎಂದೇನಿಲ್ಲ. ಸ್ವಲ್ಪ ದೂರು ನಡೆದರೂ ಸಾಕು! ಸೈಕಲ್‌ ತುಳಿಯುವುದು, ಯೋಗ, ಏರೋಬಿಕ್ಸ್‌ ಸೇರಿದಂತೆ ನಿಮಗೆ ಸುಲಭವಾಗುವ ಏನನ್ನಾದರೂ ಮಾಡಿ ನೋಡಿ..ವ್ಯಾಯಾಮದಿಂದ ಚಳಿ ನಿಮ್ಮ ಹತ್ತಿರ ಸುಳಿಯದು.

Follow These Tips To Maintain Good Health In Winter

ಚಳಿಗಾಲದಲ್ಲಿ ಸಾಮಾನ್ಯವಾಗಿ ಬಿಸಿಲು ಮೈಮೇಲೆ ಬಿದ್ದರೆ ಸಾಕಪ್ಪಾ ಎನ್ನುವುದುಂಟು. ಇದು ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದು. ಚಳಿಗಾಲದಲ್ಲಿ ಸೂರ್ಯನನ್ನು ಹುಡುಕಬೇಡಿ, ಆದರೆ ಕಾಣಿಸಿಕೊಂಡಾದ ಅದಕ್ಕೆ ಮೈಯೊಡ್ಡಿ. ಇದರಿಂದ ನಿಮ್ಮ ದೇಹಕ್ಕೆ ವಿಟಮಿನ್‌ ಡಿ ಕೊರತೆಯನ್ನು ನೀಗಿಸುತ್ತದೆ. ಮುಂಜಾನೆ ಬೀಳುವ ಎಳೆ ಬಿಸಿಲಿನಿಂದ ನಿಮ್ಮಲ್ಲಿ ಚೈತನ್ಯ ಕೂಡ ಮೂಡುತ್ತದೆ.

ಚಳಿಯಾದಾಗ ಬಿಸಿಬಿಸಿ ಪೇಯಗಳನ್ನೇ ಕುಡಿಯುವ ಬದಲಿಗೆ ದಿನಕ್ಕೆ ಮೂರು ಲೀಟರ್‌ ನೀರನ್ನು ತಪ್ಪದೇ ಕುಡಿಯಿರಿ. ಚಳಿಯಿಂದ ಬಾಯಾರಿಕೆ ಆಗುತ್ತಿಲ್ಲ ಎಂದು ಸುಮ್ಮನೆ ಇರಬೇಡಿ, ಚಳಿಗಾಲದಲ್ಲೂ ನಿಮ್ಮ ದೇಹಕ್ಕೆ ನೀರು ಅತ್ಯವಶ್ಯಕ ಎನ್ನುತ್ತಾರೆ ವೈದ್ಯರು. ನಿಯಮಿತ ನೀರು ಸೇವನೆಯಿಂದ ನಿಮ್ಮ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಶೀತ-ಕೆಮ್ಮು ಅಂತಹ ಆರೋಗ್ಯ ಸಮಸ್ಯೆಗಳನ್ನೂ ದೂರಕ್ಕೆ ಸರಿಸಬಹುದು.

ಚಳಿಗಾಲದ ಎಣ್ಣೆ ಸ್ನಾನ ಮಾಡುವುದು ಕೂಡ ಒಳ್ಳೆಯದು. ಪ್ರತಿದಿನ ಎಣ್ಣೆ ಸ್ನಾನ ಮಾಡುವುದು ಬಹುತೇಕರಿಗೆ ಇಷ್ಟವಾಗದು. ಆದರೆ ವಾರಕ್ಕೊಮ್ಮೆಯಾದರೂ ಮಾಡಿದರೆ ನಿಮ್ಮ ಆರೋಗ್ಯಕ್ಕೇ ಲಾಭ. ಏಕೆಂದರೆ ಚಳಿಗಾಲದಲ್ಲಿ ಎದುರಾಗುವ ಚರ್ಮದ ಸಮಸ್ಯೆಗಳನ್ನು ಈ ಎಣ್ಣೆ ಸ್ನಾನದಿಂದ ನಿಯಂತ್ರಿಸಬಹುದು. ದೇಹದಲ್ಲಿ ಯಾವುದೇ ನೋವುಗಳಿದ್ದರೆ ಎಣ್ಣೆ ಸ್ನಾನ ಉಪಶಮನ ನೀಡುತ್ತೆ. ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ದೇಹದಲ್ಲೂ ಸ್ಥಿರತೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+