ಪಾಕಿಸ್ತಾನದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ: ಹವಾಮಾನ ವೈಪರಿತ್ಯದಿಂದ ಮುಂದೆ ಭಾರತಕ್ಕೂ ಕಾದಿದೆ ಕಂಟಕ!

ನವದೆಹಲಿ, ಆಗಸ್ಟ್ 31: ಭಾರಿ ಪ್ರವಾಹದಿಂದ ಪಾಕಿಸ್ತಾನ ಮತ್ತು ಭಾರತದ ಕೆಲವು ಪ್ರದೇಶಗಳಲ್ಲಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಜನರ ಬದುಕನ್ನೇ ನಾಶ ಮಾಡಿದೆ. ಜಾಗತಿಕ ತಾಪಮಾನವೇ ಈ ಹವಾಮಾನ ವೈಪರಿತ್ಯಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಈ ವರ್ಷ ಮಾತ್ರವಲ್ಲಿ ಮುಂದಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದಿಂದ ಈ ರೀತಿಯ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, 2022ನೇ ವರ್ಷದಲ್ಲಿ 1902ರ ವರ್ಷದ ನಂತರ ಎರಡನೇ ಅತಿ ಹೆಚ್ಚು ಮಳೆಯನ್ನು ಕಂಡಿದೆ. ದೇಶದ ಮೂರನೇ ಒಂದು ರಾಜ್ಯಗಳು ಸಾಮಾನ್ಯ ಮಳೆಯನ್ನು ಪಡೆದರೆ ಉಳಿದ 63 ಪ್ರತಿಶತ ಪ್ರದೇಶದಲ್ಲಿ ಈ ಮಾನ್ಸೂನ್ ಋತುವಿನಲ್ಲಿ ಇದುವರೆಗೆ ಮಳೆ ಕೊರತೆ ಅಥವಾ ಅಧಿಕ ಮಳೆಯನ್ನು ಕಂಡಿದೆ ಎಂದು ಹೇಳಿದೆ.

2022ರ ಮಾರ್ಚ್‌ನಲ್ಲಿ, ಭಾರತವು 122 ವರ್ಷಗಳಲ್ಲಿ ಅತ್ಯಧಿಕ ತಾಪಮಾನವನ್ನು ಕಂಡಿತು, ಇದು ಗೋಧಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಮತ್ತು ಈಗ ತಜ್ಞರು ಯುಪಿ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕೊರತೆಯ ಮಳೆಯಿಂದಾಗಿ ಅಕ್ಕಿ ಉತ್ಪಾದನೆಯಲ್ಲಿ ಕೊರತೆ ಉಂಟಾಗಬಹುದು ಎನ್ನುವ ಆತಂಕ ವ್ಯಕ್ತವಾಗಿದೆ.

 ಪ್ರವಾಹಕ್ಕೆ ತತ್ತರಿಸಿದ ಪಾಕಿಸ್ತಾನ

ಪ್ರವಾಹಕ್ಕೆ ತತ್ತರಿಸಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಮನೆಗಳು ಕೊಚ್ಚಿಹೋಗಿವೆ, ಸಾವಿರಾರು ಜನರು ಸಾವನ್ನಪ್ಪಿದ್ದು ಮತ್ತು ಲಕ್ಷಾಂತರ ನಿರಾಶ್ರಿತರು ಮತ್ತು ದೇಶದ ಹಲವಾರು ದೊಡ್ಡ ನಗರಗಳ ಬೀದಿಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದಾರೆ, ಇದು ಜಾಗತಿಕ ತಾಪಮಾನ ಹೆಚ್ಚಳದ ದುರಂತ ಎಂದು ಹೇಳಲಾಗಿದೆ.

ಹವಾಮಾನಶಾಸ್ತ್ರಜ್ಞರು ದೇಶಾದ್ಯಂತ ಮಾನ್ಸೂನ್ ಹವಾಮಾನ ವ್ಯವಸ್ಥೆಗಳ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 4-5 ವರ್ಷಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಹೆಚ್ಚು ಗೋಚರಿಸುತ್ತಿದೆ, ಇತ್ತೀಚಿನ ಪಾಕಿಸ್ತಾನ ಪ್ರವಾಹಗಳು ಕೂಡ ಈ ಬದಲಾವಣೆಯ ಪರಿಣಾಮವಾಗಿದೆ.

 ಪಾಕಿಸ್ತಾನದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ

ಪಾಕಿಸ್ತಾನದಲ್ಲಿ ಪ್ರವಾಹ, ಚೀನಾದಲ್ಲಿ ಬರಗಾಲ

ಪಾಕಿಸ್ತಾನದಲ್ಲಿ ಪ್ರವಾಹದಿಂದ ತತ್ತರಿಸಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಚೀನಾ ಮತ್ತು ಹಲವಾರು ಯುರೋಪಿಯನ್ ದೇಶಗಳಲ್ಲಿ ನದಿಗಳು ಮತ್ತು ನೀರಿನ ಕಾಲುವೆಗಳು ಒಣಗುತ್ತಿರುವ ಚಿತ್ರಗಳನ್ನು ನೋಡಬಹುದಾಗಿದೆ. ಜನರು ಹೆಚ್ಚುತ್ತಿರುವ ತಾಪಮಾನ ಮತ್ತು ನೀರಿನ ಕೊರತೆಯಿಂದ ಪರಿತಪಿಸುತ್ತಿದ್ದಾರೆ.

ಕಳೆದ 500 ವರ್ಷಗಳಲ್ಲೇ ಕಂಡು ಕೇಳರಿಯದ ಬರಗಾಲ ಯೂರೋಪ್ ದೇಶಗಳನ್ನು ಬಾಧಿಸುತ್ತಿದೆ. ರೋಮನ್ ಅವಶೇಷಗಳು, ಎರಡನೇ ಮಹಾಯುದ್ಧದ ಸಮಯದ ಬಾಂಬುಗಳು ಮತ್ತು ಒಣಗುತ್ತಿರುವ ನದಿಗಳಿಂದಾಗಿ ನೀರಿನ ಅಡಿಯಲ್ಲಿ ಮುಳುಗಿದ್ದ ಹಸಿವಿನ ಕಲ್ಲುಗಳು ಸಹ ಈಗ ಗೋಚರಿಸುತ್ತಿವೆ.

"ಕಳೆದ ಆರು ತಿಂಗಳ ಅವಧಿಯಲ್ಲಿ, ಇಡೀ ದಕ್ಷಿಣ ಏಷ್ಯಾವು ವಿಪರೀತ ಹವಾಮಾನ ವೈಪರೀತ್ಯ ಘಟನೆಗಳ ಸರಣಿಯನ್ನು ಕಂಡಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತ ಪ್ರವಾಹವನ್ನು ಎದುರಿಸುತ್ತಿದ್ದರೆ, ಚೀನಾದಲ್ಲಿ ಬರ ಪರಿಸ್ಥಿತಿಯಲ್ಲಿ ತತ್ತರಿಸಿದೆ. ಇವು ಹವಾಮಾನ ಬದಲಾವಣೆಗೆ ಸಾಕ್ಷಿಗಳಾಗಿದೆ." ಎಂದು ಭಾರತಿ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿಯ ಸಂಶೋಧನಾ ನಿರ್ದೇಶಕ ಅಂಜಲ್ ಪ್ರಕಾಶ್ ಹೇಳಿದರು.

 ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ

ಭಾರತದಲ್ಲಿ ಮಾನ್ಸೂನ್ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ, ವಿಶೇಷವಾಗಿ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಹೆಚ್ಚಿನ ಮಾನ್ಸೂನ್ ಕಡಿಮೆ-ಒತ್ತಡದ ಪ್ರದೇಶಗಳು ಅಥವಾ ಖಿನ್ನತೆಗಳು ಈಗ ತಮ್ಮ ಸ್ಥಾನದಿಂದ ದಕ್ಷಿಣಕ್ಕೆ ಪ್ರಯಾಣಿಸುತ್ತಿವೆ, ಮಧ್ಯ ಭಾರತದಾದ್ಯಂತ ಮಳೆಯನ್ನು ಕೆಲವು ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರವಾಹದಂತಹ ಕೆಲವು ನಿದರ್ಶನಗಳು ಮಾನ್ಸೂನ್ ವ್ಯವಸ್ಥೆಗಳ ಚಲನೆಯಲ್ಲಿನ ಈ ಬದಲಾವಣೆಯ ಪರಿಣಾಮವಾಗಿದೆ.

"ಮಳೆಯ ಮುನ್ಸೂಚನೆಯನ್ನು ಸುಧಾರಿಸಲು ನಾವು ಮಳೆಯ ಪ್ರಾದೇಶಿಕ ವ್ಯತ್ಯಾಸಗಳನ್ನು ಅಧ್ಯಯನ ಮಾಡಬೇಕಾಗಿದೆ. ಸಮಸ್ಯೆ ಏನೆಂದರೆ, ನಾವು ಬಳಸುವ ಮಾದರಿಗಳು ಭಾರತೀಯ ಮಾನ್ಸೂನ್ ಅನ್ನು ಅನ್ನು ನಿರ್ಧರಿಸಲು ಉತ್ತಮವಾಗಿಲ್ಲ." ಎಂದು ಅವರು ಹೇಳಿದರು.

 ಭತ್ತದ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ

ಭತ್ತದ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ

ಸಿಂಧ್ ಮತ್ತು ಬಲೂಚಿಸ್ತಾನ್ ಪ್ರದೇಶದಲ್ಲಿ ಭಾರಿ ಪ್ರವಾಹ ಉಂಟಾಗಿದೆ. ವಿಪರೀತ ಮಳೆಯ ಜೊತೆಗೆ, ಮಾನ್ಸೂನ್ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಕೆಲವು ಸ್ಥಳಗಳನ್ನು ಹೆಚ್ಚುವರಿ ಮಳೆಯಿಂದ ಕೊರತೆಯ ಮಳೆಗೆ ಪರಿವರ್ತಿಸಿವೆ. ಇದು ಕೃಷಿ ಉತ್ಪಾದನೆಯ ಮೇಲೆ, ವಿಶೇಷವಾಗಿ ಅಕ್ಕಿ ಉತ್ಪಾದನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

"ಹವಾಮಾನದಲ್ಲಿ ಆಗುವ ಬದಲಾವಣೆಗಳು ಈ ಸಮಯದಲ್ಲಿ ಬೆಳೆಯುತ್ತಿರುವ ಹಂತದಲ್ಲಿರುವ ಬೆಳೆಯ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಎಲ್ಲಾ ಪ್ರಮುಖ ಮಾನ್ಸೂನ್ ಕಡಿಮೆ ಒತ್ತಡದ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳ ದಕ್ಷಿಣದ ಚಲನೆಯಿಂದಾಗಿ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದಂತಹ ಅಕ್ಕಿ-ಉತ್ಪಾದನಾ ರಾಜ್ಯಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಇದು ಇಳುವರಿ ಮತ್ತು ಅಕ್ಕಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಸ್ಕೈಮೆಟ್‌ನ ಮಹೇಶ್ ಪಲಾವತ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+