Elections Exit Poll Results 2022 Highlights: ಪಂಚ ರಾಜ್ಯಗಳಲ್ಲಿ ಯಾರಿಗೆ ಪಟ್ಟ?

ನವದೆಹಲಿ, ಮಾರ್ಚ್ 7: ದೇಶದಲ್ಲಿ ಏಳು ಹಂತಗಳಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕದನ ಕೌತುಕವನ್ನು ಕೆರಳಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ಯಾವ ಪಕ್ಷಕ್ಕೆ ಗದ್ದುಗೆ ದಕ್ಕಲಿದೆ ಎನ್ನುವ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದೆ.

ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 7ರ ಸಂಜೆ 6.30ರವರೆಗೂ ಯಾವುದೇ ರೀತಿ ಚುನಾವಣಾ ಸಮೀಕ್ಷೆಗಳನ್ನು ನಡೆಸದಂತೆ ನಿರ್ಬಂಧ ವಿಧಿಸಿತ್ತು. ಈ ಹಿನ್ನೆಲೆ ಆಯೋಗದ ಸೂಚನೆ ಮೇರೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಲವು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ಪ್ರಕಟಿಸಿವೆ.

ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗೆ ಸಂಬಂಧಿಸಿದ ಅಂಕಿ-ಅಂಶಗಳು ಮುಂದಿನ ಮೂರು ದಿನಗಳಲ್ಲಿ ಹೊರ ಬೀಳಲಿರುವ ಅಂತಿಮ ಫಲಿತಾಂಶದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಜನವರಿ 27ರಂದು ಮೊದಲಿಗೆ ಆರಂಭವಾದ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯಿತು. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಯಾವ ಪಕ್ಷಕ್ಕೆ ಮತದಾರರು ಮಣೆ ಹಾಕಲಿದ್ದಾರೆ ಎಂಬ ಬಗ್ಗೆ ಹಲವು ಸುದ್ದಿಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಿವೆ. ಈ ಚುನಾವಣೋತ್ತರ ಸಮೀಕ್ಷೆಯ ಒಟ್ಟಾರೆ ಫಲಿತಾಂಶ ಏನು ಹೇಳುತ್ತದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಯುಪಿಗೆ ಸಂಬಂಧಿಸಿದ ಸಮೀಕ್ಷೆಗಳ ಚಿತ್ರಣ

ಯುಪಿಗೆ ಸಂಬಂಧಿಸಿದ ಸಮೀಕ್ಷೆಗಳ ಚಿತ್ರಣ

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವಿಗೆ 202 ಸ್ಥಾನಗಳು ಬೇಕು. ಯುಪಿಗೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:

ಯುಪಿ ಒಟ್ಟಾರೆ ಫಲಿತಾಂಶ:

ಬಿಜೆಪಿ ಮೈತ್ರಿಕೂಟ - 242

ಸಮಾಜವಾದಿ ಮೈತ್ರಿಕೂಟ - 143

ಬಿಎಸ್ಪಿ - 11

ಕಾಂಗ್ರೆಸ್ ಮೈತ್ರಿಕೂಟ - 4

ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಚಿತ್ರಣ ಹೇಳುವುದೇನು?

ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಚಿತ್ರಣ ಹೇಳುವುದೇನು?

ಪಂಜಾಬ್ ಒಟ್ಟು 117 ವಿಧಾನಸಭೆ ಕ್ಷೇತ್ರಗಳಲ್ಲಿ ಗದ್ದುಗೆ ಭಾಗ್ಯ ಒಲಿಯುವುದಕ್ಕೆ ಕನಿಷ್ಠ 59 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:

ಪಂಜಾಬ್ ಒಟ್ಟಾರೆ ಫಲಿತಾಂಶ:

ಬಿಜೆಪಿ - 4

ಕಾಂಗ್ರೆಸ್ - 28

ಆಪ್ - 63

ಅಕಾಲಿ - 19

ಉತ್ತರಾಖಂಡದ ಪೋಲ್ ಆಫ್ ಎಕ್ಸಿಟ್ ಪೋಲ್

ಉತ್ತರಾಖಂಡದ ಪೋಲ್ ಆಫ್ ಎಕ್ಸಿಟ್ ಪೋಲ್

ಉತ್ತರಾಖಂಡದಲ್ಲಿ ಒಟ್ಟು 70 ವಿಧಾನಸಭೆಗಳಲ್ಲಿ 36 ಸ್ಥಾನಗಳನ್ನು ಗೆದ್ದುಕೊಂಡ ಪಕ್ಷವು ಸರ್ಕಾರ ರಚಿಸುವ ಅಧಿಕಾರವನ್ನು ಪಡೆದುಕೊಳ್ಳುತ್ತದೆ. ಉತ್ತರಾಖಂಡಕ್ಕೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:

ಉತ್ತರಾಖಂಡ ಒಟ್ಟಾರೆ ಫಲಿತಾಂಶ:

ಬಿಜೆಪಿ - 35

ಕಾಂಗ್ರೆಸ್ - 32

ಆಪ್ - 1

ಇತರೆ - 2

ಗೋವಾಗೆ ಸಂಬಂಧಿಸಿದ ಪೋಲ್ ಆಫ್ ಎಕ್ಸಿಟ್ ಪೋಲ್

ಗೋವಾಗೆ ಸಂಬಂಧಿಸಿದ ಪೋಲ್ ಆಫ್ ಎಕ್ಸಿಟ್ ಪೋಲ್

ಗೋವಾದಲ್ಲಿ ಒಟ್ಟು 40 ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು ಮ್ಯಾಜಿಕ್ ನಂಬರ್ 21 ಆಗಿದೆ. ಗೋವಾಗೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:

ಗೋವಾದ ಒಟ್ಟಾರೆ ಫಲಿತಾಂಶ:

ಬಿಜೆಪಿ - 16

ಕಾಂಗ್ರೆಸ್ - 16

ಟಿಎಂಸಿ - 3

ಇತರೆ - 5

ಮಣಿಪುರದ ಮತದಾರರ ಭವಿಷ್ಯವಾಣಿಯಲ್ಲಿ ಏನಿದೆ?

ಮಣಿಪುರದ ಮತದಾರರ ಭವಿಷ್ಯವಾಣಿಯಲ್ಲಿ ಏನಿದೆ?

ಮಣಿಪುರದ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿದ್ದು, ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯವಿರುತ್ತದೆ. ಈ ಹಿನ್ನೆಲೆ ಮಣಿಪುರಕ್ಕೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ರಿಪಬ್ಲಿಕ್, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:

ಮಣಿಪುರ ಒಟ್ಟಾರೆ ಫಲಿತಾಂಶ:

ಬಿಜೆಪಿ - 30

ಕಾಂಗ್ರೆಸ್ - 13

ಇತರೆ - 17

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+