PFI banned : ಪಿಎಫ್‌ಐ ನಿಷೇಧ ಯಾಕೆ? ಐದು ಕಾರಣ ಕೊಟ್ಟ ಸರಕಾರ
ಬೆಂಗಳೂರು, ಸೆ. 28: ಎರಡು ದಿನ ದೇಶಾದ್ಯಂತ ಪಿಎಫ್‌ಐ ಸ್ಥಳಗಳ ಮೇಲೆ ಎನ್‌ಐಎ ಮತ್ತು ಪೊಲೀಸರ ತಂಡಗಳು ರೇಡ್ ನಡೆಸಿದ ಘಟನೆ ಬೆನ್ನಲ್ಲೇ ಇದೀಗ ಆ ಸಂಘಟನೆಯನ್ನು ಸರಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗು ಅದರ ಎಂಟು ಅಂಗ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ನಿಷೇಧಿಸಿದೆ. ಭಯೋತ್ಪಾದನೆಗೆ ಹಣದ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪದ ಹಿನ್ನೆಲೆಯಲ್ಲಿ ನಿಷೇಧ ಮಾಡಿರುವುದು ತಿಳಿದುಬಂದಿದೆ.
ಪಿಎಫ್‌ಐ ನಿಷೇಧಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ವರ್ಷಗಳಿಂದಲೂ ಇಟ್ಟಿದ್ದ ಬೇಡಿಕೆ. ಈ ಸಂಘಟನೆಯ ವ್ಯವಹಾರಗಳ ಮೇಲೆ ಗಮನ ಇಟ್ಟು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಬಳಿಕವಷ್ಟೇ ಕೇಂದ್ರ ಸರಕಾರ ನಿಷೇಧದ ನಿರ್ಧಾರ ಮಾಡಿದೆ.

ನಿಷೇಧಗೊಂಡ ಸಂಘಟನೆಗಳು:
* ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)
* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)
* ನ್ಯಾಷನಲ್ ವುಮೆನ್ಸ್ ಫ್ರಂಟ್
* ಜೂನಿಯರ್ ಫ್ರಂಟ್
* ರಿಹ್ಯಾಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್)
* ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ)
* ನ್ಯಾಷನಲ್ ಕಾನ್‌ಫೆಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್ (ಎನ್‌ಸಿಎಚ್‌ಆರ್‌ಒ)
* ಎಂಪವರ್ ಇಂಡಿಯಾ ಫೌಂಡೇಶನ್ ಅಂಡ್ ರಿಹ್ಯಾಬ್ ಫೌಂಡೇಶನ್, ಕೇರಳ.
ಸೆಪ್ಟೆಂಬರ್ 22 ಮತ್ತು 27ರಂದು ಎರಡು ದಿನ ಎನ್‌ಐಎ ಮತ್ತು ಇಡಿ ಅಧಿಕಾರಿಗಳ ತಂಡಗಳು ದೇಶದ ವಿವಿಧೆಡೆ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದವು. ಅವುಗಳ ಆಧಾರದ ಮೇಲೆ ಪಿಎಫ್‌ಐ ಹಾಗೂ ಸಹಚರ ಸಂಘಟನೆಗಳನ್ನು ನಿಷೇಧಿಸಲಾಗಿದೆ.
"ಪಿಎಫ್‌ಐ ಮತ್ತದರ ಅಂಗ ಸಂಘಟನೆಗಳು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಹಾಗು ರಾಜಕೀಯ ಸಂಘಟನೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ವಾಸ್ತವದಲ್ಲಿ ಸಮಾಜದ ಒಂದು ನಿರ್ದಿಷ್ಟ ವರ್ಗದವರ ಮನಸಿನಲ್ಲಿ ಮತಾಂಧತೆ ತುಂಬುವ ರಹಸ್ಯ ಕಾರ್ಯಸೂಚಿ ಹೊಂದಿದೆ. ಪ್ರಜಾತಂತ್ರ ಪರಿಕಲ್ಪನೆ ಬದಿಗೊತ್ತುವ ಹಾಗು ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಗೆ ಅಗೌರವ ತೋರುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ" ಎಂದು ಕೇಂದ್ರ ಸರಕಾರ ಹೇಳಿದೆ.

ಐದು ಕಾರಣಗಳು
* ಪಿಎಫ್‌ಐ ದೇಶದ ಭದ್ರತೆಗೆ ಅಪಾಯ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿತ್ತು. ದೇಶಧ ಕೋಮುಸೌಹಾರ್ದ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ಕೆಲಸ ಮಾಡುತ್ತಿತ್ತು.
* ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡಿತ್ತು.
* ಪಿಎಫ್‌ಐನ ಸಂಸ್ಥಾಪಕರು ನಿಷೇಧಿತ ಸಿಮಿ ಉಗ್ರ ಸಂಘಟನೆಯ ನಾಯಕರಾಗಿದ್ದವರು. ಬಾಂಗ್ಲಾದೇಶ ಜಮಾತ್-ಉಲ್-ಮುಜಾಹಿದೀನ್ (ಜೆಎಂಬಿ) ಜೊತೆ ನಂಟು ಹೊಂದಿದ್ದಾರೆ.
* ಐಸಿಸ್ ಮುಂತಾದ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜೊತೆ ಪಿಎಫ್‌ಐಗೆ ಸಂಬಂಧ ಇದೆ.
* ದೇಶದಲ್ಲಿ ನಿರ್ದಿಷ್ಟ ಸಮುದಾಯದವರನ್ನು ಮತಾಂಧಗೊಳಿಸುವ ಮತ್ತು ದೇಶದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಪಿಎಫ್‌ಐ ಕಾರ್ಯನಿರ್ವಹಿಸುತ್ತಿತ್ತು.
ಪಿಎಫ್‌ಐ ನಿಷೇಧಿಸಲು ಈ ಮೇಲಿನ ಕೆಲ ಕಾರಣಗಳಿರುವುದು ಸದ್ಯಕ್ಕೆ ತಿಳಿದುಬಂದಿದೆ. ಈ ಬಗ್ಗೆ ಸರಕಾರದಿಂದ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಪಿಎಫ್‌ಐ ಹುಟ್ಟು:
ಪಾಪುಲರ್ ಫ್ರಂಟ್ ಆಫ್ ಇಂಡಿಯಾ 2006ರಲ್ಲಿ ಸ್ಥಾಪನೆಯಾಗಿದ್ದು. ಸಮಾಜಮುಖಿ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಇದು ಪ್ರಾರಂಭವಾಯಿತು ಎಂದು ಹೇಳಲಾಗಿತ್ತು. ಆದರೆ, ಕೊಲೆ ಇತ್ಯಾದಿ ಕೃತ್ಯಗಳಲ್ಲಿ ಪಿಎಫ್‌ಐ ಕೈವಾಡ ಇರುವುದು ಮತ್ತು ಮುಸ್ಲಿಂ ಸಮುದಾಯದಲ್ಲಿ ಇಸ್ಲಾಂ ಮತಾಂಧತೆಯನ್ನು ಹೆಚ್ಚಿಸುವ, ದೇಶವಿರೋಧಿ ಕೃತ್ಯಗಳಿಗೆ ಪ್ರಚೋದಿಸುವ ಕೆಲಸವನ್ನು ಪಿಎಫ್‌ಐ ಮಾಡುತ್ತಿದೆ ಎಂಬ ಅರೋಪಗಳು ಬಹಳ ಕೇಳಿಬಂದಿದ್ದವು. ಹಿಂದೆ ನಿಷೇಧಿಸಲಾಗಿದ್ದ ಸಿಮಿ ಸಂಘಟನೆಯ ಹೊಸ ರೂಪವೇ ಪಿಎಫ್‌ಐ ಎಂದೂ ಹೇಳಲಾಗುತ್ತಿತ್ತು. ಹೀಗಾಗಿ ಇದನ್ನು ನಿಷೇಧಿಸಬೇಕೆಂಬ ಕೂಗು ಹಲವು ರಾಜ್ಯಗಳಿಂದ ಬಂದಿತ್ತು. ಕೇರಳ ಮತ್ತು ಕರ್ನಾಟಕದಲ್ಲಿ ಪಿಎಫ್‌ಐ ಬಹಳ ಸಕ್ರಿಯವಾಗಿದೆ.
ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಪಿಎಫ್‌ಐ ಸಂಘಟನೆಯ ಸದಸ್ಯರು ಸಂಚು ರೂಪಿಸಿದ ಸಂಗತಿ ಬೆಳಕಿಗೆ ಬಂದಿತ್ತು. ಹೀಗಾಗಿ, ಸರಕಾರ ಬಹಳ ಕ್ಷಿಪ್ರವಾಗಿ ಕಾರ್ಯೋನ್ಮುಖವಾಗಿ ಪಿಎಫ್‌ಐ ನಿಷೇಧಕ್ಕೆ ಅಗತ್ಯವಾಗಿರುವ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಸೆಪ್ಟೆಂಬರ್ 22 ಮತ್ತು 27ರಂದು ಎರಡು ದಿನ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿದೆ ಎನ್ನಲಾಗಿದೆ.
ಪಿಎಫ್‌ಐಗೆ ವಿದೇಶಗಳಿಂದ ಫಂಡಿಂಗ್ ಬರುತ್ತಿರುವ ಬಗ್ಗೆ ಇಡಿ ಬಳಿ ಖಚಿತ ಮಾಹಿತಿ ಇದೆ. ಹಾಗೆಯೇ, ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್‌ಐ ಕೈವಾಡ ಸ್ಪಷ್ಟವಾಗಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ನಂತರ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಹಾಗೂ ಎಂಟು ಸಹಚರ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ.
ಇನ್ನು, ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದಲ್ಲಿ ಪಿಎಫ್‌ಐ, ಸಿಎಫ್‌ಐ ಪಾತ್ರ ಬಹಳ ಇದೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತಿರೋಧಿಸಲು ಪ್ರಚೋದನೆ ಕೊಡಲಾಗಿತ್ತು. ಬೇಕೆಂದೇ ವಿವಾದ ಹುಟ್ಟುಹಾಕಲಾಗಿತ್ತು ಎಂಬ ಆರೋಪ ಇದೆ.
(ಒನ್ಇಂಡಿಯಾ ಸುದ್ದಿ)
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications