ಕೆಲಸಗಾರರನ್ನು ಕೆಲಸದಿಂದ ತೆಗೆಯಲು ಬಾಸ್ ಕೊಡುವ ಐದು ಕಾರಣಗಳು
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಿಗುವುದು ತುಂಬಾ ಕಷ್ಟವಾಗಿ ಹೋಗಿದೆ. ಶಿಕ್ಷಣ, ಜ್ಞಾನ, ಸಾಮಾರ್ಥ್ಯ ಪರಿಗಣಿಸುವುದಕ್ಕಿಂತ ಪರಿಚಯದ ಆಧಾರದ ಮೇಲೆ ಉದ್ಯೋಗ ನೀಡುವ ಕಂಪನಿಗಳು ಹೆಚ್ಚಾಗಿ ಹೋಗಿವೆ. ಕೆಲಸಕ್ಕೆ ಪಡೆಯುವಾಗ ಸಾವಿರ ಪ್ರಶ್ನೆಗಳನ್ನು ಹಾಕುವ ಕಂಪನಿಗಳು ಕೆಲಸದಿಂದ ತೆಗೆಯಲು ಕಾರಣವೇ ನೀಡುತ್ತಿಲ್ಲ. ಒಂದು ವೇಳೆ ಕಾರಣ ನೀಡಿದರೂ ಆ ಕಾರಣಗಳು ಹಲವಾರು ಪ್ರಶ್ನೆಗಳನ್ನು ಹುಟ್ಟಿಸುತ್ತವೆ.
ಹೌದು ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಅನ್ನೋ ಗಾದೆ ಮಾತಿನಂತಾಗಿವೆ ಬೆಂಗಳೂರಿನಲ್ಲಿರುವ ಬಹುತೇಕ ಖಾಸಗಿ ಕಂಪನಿಗಳು. ಉದ್ಯೋಗಿಗಳನ್ನು ಕೀಳಾಗಿ ಪರಿಗಣಿಸಿ ಅವಮಾನಿಸಿ ಕಳಿಸುವ ಅವ್ಯವಸ್ಥೆ ಇಂದು ಹೆಚ್ಚಾಗಿದೆ. ಕೆಲಸಕ್ಕೆ ಪಡೆಯುವಾಗ ಇರುವ ಹೊಗಳಿಕೆ, ಪ್ರಾಶಸ್ತ್ಯ ಕೆಲಸದಿಂದ ತೆಗೆಯುವಾಗ ನಿರೀಕ್ಷೆ ಮಾಡುವುದು ಕಷ್ಟವಿದೆ. ಅನುಭವಸ್ತರಾಗಿರಲಿ ಹೊಸಬರಾಗಿರಲಿ ಸಮವಾಗಿ ನೋಡುವ ದುಸ್ಥಿತಿ ಇದೆ.

ಕಿರಿಯರ ಮುಂದೆ ಹಿರಿಯರನ್ನು ಕೀಳಾಗಿ ಕಾಣುವುದು, ಅವಮಾನಿಸುವುದು, ಕೆಟ್ಟ ಪದಗಳಿಂದ ನಿಂದಿಸುವುದು ಇದೆಲ್ಲವೂ ಸರ್ವೇ ಸಾಮಾನ್ಯ ಎಂಬತಾಗಿದೆ. ಹಿರಿಯರಿಗೆ ನೀಡುವ ಸಂಬಳದಲ್ಲಿ ಇನ್ನಷ್ಟು ಜನ ಕೆಲಸಕ್ಕೆ ಪಡೆಯುವ ಯೋಚನೆಯಲ್ಲಿ ಕಂಪನಿಗಳು ಎಷ್ಟೋ ವರ್ಷ ಕಷ್ಟಪಟ್ಟು ದುಡಿದರೂ ಲೆಕ್ಕಿಸದೇ ಅವಮಾನಿಸಿ ಕೆಲಸದಿಂದ ವಜಾಗೊಳಿಸುವುದು ಹೆಚ್ಚಾಗಿದೆ. ವಿಶೇಷವಾಗಿ ಕ್ಷುಲ್ಲಕ ಕಾರಣಗಳನ್ನು ನೀಡಿ ಉದ್ಯೋಗಿಗಳನ್ನು ಹೊರಹಾಕುವುದು ಇತ್ತೀಚಿನ ಟ್ರೆಂಡ್. ಹಾಗಾದರೆ ಒಬ್ಬ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲು ಕಂಪನಿ ಅಥವಾ ಬಸ್ ನೀಡುವ ಕ್ಷುಲ್ಲಕ ಕಾರಣಗಳೇನು?
1.ಪರ್ಫಾಮೆನ್ಸ್ ಇಲ್ಲ
ಬಹುತೇಕ ಕಂಪನಿಗಳಲ್ಲಿ ಒಬ್ಬ ಉದ್ಯೋಗಿಯನ್ನು ತೆಗೆಯಬೇಕು ಅಂದರೆ ನೀಡುವ ಮೊದಲ ಕಾರಣ ಪರ್ಫಾಮೆನ್ಸ್ ಇಲ್ಲ. ಕಂಪನಿಗಳಿಗೆ ಕೆಲಸಗಾರರ ಅವಶ್ಯಕತೆ ಇದ್ದಾಗ ತಿದ್ದಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಲು ಅವಕಾಶಗಳು ಸಿಗುತ್ತವೆ. ಆದರೆ ಕೆಲಸದಿಂದ ತೆಗೆಯಬೇಕು ಅಂದುಕೊಂಡರೆ ಅವಕಾಶ ಕೊಡುವುದಿರಲಿ ಒಂದು ನಿಮಿಷ ನೆಮ್ಮದಿಯಾಗಿ ಕೆಲಸ ಮಾಡಲು ಬಿಡದ ವಾತಾವರಣ ಸೃಷ್ಟಿಯಾಗಿ ಬಿಡುತ್ತದೆ. ಕೊನೆಗೆ ಕಂಪನಿಗಳು 'ಪರ್ಫಾಮೆನ್ಸ್ ಇಲ್ಲ' ಎನ್ನುವ ಕಾರಣ ನೀಡಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿಬಿಡುತ್ತವೆ.
2.ನಿಮ್ಮಿಂದ ಕಂಪನಿಗೆ ಯೂಸ್ ಇಲ್ಲ
ಇನ್ನೂ ಕೆಲ ಕಂಪನಿಗಳು ಅವಶ್ಯಕತೆ ಇದ್ದಾಗ ಮಾತ್ರ ಹಗಲಿರುಳು ಕೆಲಸ ಮಾಡಿಸಿಕೊಂಡು, ಇನ್ನೇನು ಕೆಲಸ ಕಡಿಮೆ ಇದೆ ಅಂದಾಗ ಸಿಬ್ಬಂದಿಗಳನ್ನು ಕೆಲಸದಿಂದ ಕಿತ್ತು ಹಾಕುವ ಉದಾಹರಣೆಗಳು ಸಾಕಷ್ಟಿವೆ. ಹಿಂದಿನ ಪರಿಶ್ರಮವನ್ನು ಲೆಕ್ಕಿಸದೇ ನಿಮ್ಮಿಂದ ಕಂಪನಿಗೆ ಲಾಭವಿಲ್ಲ ಎಂದು ಹೇಳುವುದು ಇದೆ.

3.ಸಣ್ಣ ತಪ್ಪಿಗೆ ಕೊಲೆ ಮಾಡಿದಂತೆ ಬಿಂಬಿಸುವುದು
ಇನ್ನೂ ಕೆಲ ಸಂದರ್ಭಗಳಲ್ಲಿ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕೆಲಸರಾರನ್ನು ಕೊಲೆಗಾರರಂತೆ ನೋಡುವ ಬಾಸುಗಳಿರುತ್ತಾರೆ. ತಪ್ಪಿರಲಿ ಸರಿ ಇರಲಿ ಬೈಸಿಕೊಂಡು, ತಲೆ ಅಲ್ಲಾಡಿಸಿಕೊಂಡು ಇದ್ದರೆ ಆ ಬಾಸ್‌ಗೆ ಆ ಕೆಲಸಗಾರನಷ್ಟು ನೆಚ್ಚಿನ ಕೆಲಸಗಾರ ಬೇರೊಬ್ಬರು ಇರಲು ಸಾಧ್ಯವೇ ಇಲ್ಲ. ಅಂತವರನ್ನು ಕ್ಷಮಿಸುವುದು, ಹೆಚ್ಚಿನ ರಾಜಾತಿಥ್ಯ ನೀಡಿ ನೋಡುಕೊಳ್ಳುವ ಬಾಸುಗಳು ಇರುತ್ತಾರೆ. ಇದರಿಂದ ಬೇಸತ್ತು ಉತ್ತಮ ಕೆಲಸಗಾರರಾಗಿದ್ದರೂ ಕೂಡ ಕೆಲಸ ಬಿಡುವ ಸಂದರ್ಭಗಳು ಎದುರಾಗುತ್ತವೆ.
4.ಕಂಪನಿ ಲಾಸ್ ಅಲ್ಲಿ ಇದೆ
ಕಂಪನಿಯಿಂದ ತೆಗೆಯಲು ಇನ್ನೂ ಒಂದು ಸುಲಭವಾಗಿ ಬಾಸುಗಳು ಹೇಳುವ ಕಾರಣ ಅಂದರೆ 'ಕಂಪನಿ ಲಾಸ್ ಅಲ್ಲಿ ಇದೆ'. ನಾವು ಅಸಮರ್ಥರಾಗಿದ್ದೇನೆ. ನಿಮ್ಮನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇಲ್ಲ. ಅವಕಾಶ ಸಿಕ್ಕರೆ ಬೇರೆಡೆ ಕೆಲಸ ನೋಡಿಕೊಳ್ಳಿ. ಇದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು ಎನ್ನುವವರು ಇದ್ದಾರೆ.
5.ನೋ ರೀಸನ್
ಇನ್ನೂ ಇತ್ತೀಚೆಗೆ ಹೆಚ್ಚು ಕಂಪನಿಗಳು ಕಾರಣನೇ ನೀಡದೆ ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕುವ ಪ್ರೌವೃತ್ತಿ ಹೆಚ್ಚಿಸಿವೆ. ಹೆಚ್ಚು ವರ್ಷದಿಂದ ಕೆಲಸ ಮಾಡುತ್ತಿದ್ದರೆ, ಹೆಚ್ಚು ಸಂಬಳವನ್ನು ಪಡೆಯುತ್ತಿದ್ದರೆ, ಯಾವುದೋ ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ನೀಡಿ ಕೆಲಸದಿಂದ ತೆಗೆದು ಹಾಕುವ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿವೆ.
ಇದೆಲ್ಲಾ ಒಂದು ರೀತಿ ಆದರೆ ಮತ್ತೊಂದು ರೀತಿಯ ಸಂಚುಗಳು ಕಂಪನಿಗಳಲ್ಲಿ ನಡೆಯುತ್ತವೆ. ಜಾತಿ ಆಧಾರದ ಮೇಲೆ, ಆಪ್ತತತೆಯ ಆಧಾರದ ಮೇಲೆ ಕೆಲಸಗಾರರನ್ನು ಕೆಲಸಕ್ಕೆ ಪಡೆದು, ಉಳಿದ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿಸುವುದು, ಹಿಂಸೆ, ನರಕದ ವಾತಾವರಣ ಸೃಷ್ಟಿಸುವುದು, ಕಡಿಮೆ ಸಂಬಳ ನೀಡಿ ಹೆಚ್ಚು ಕೆಲಸ ಮಾಡಿಸುವುದು, ಸಮಯಕ್ಕಿಂತ ಹೆಚ್ಚಿನ ಅವಧಿ ದುಡಿಮೆ ಹೀಗೆ ಹೇಳುತ್ತಾ ಹೋದರೆ ಉದ್ಯೋಗಿಗಳ ಸಮಸ್ಯೆಗಳನ್ನ ಹನುಮಂತನ ಬಾಲದಂತೆ ದೊಡ್ಡ ಪಟ್ಟಿಯೇ ತಯಾರಿಸಬೇಕಾಗುತ್ತದೆ. ಇದೆಲ್ಲರಿಂದ ಇಂದು ಅದೆಷ್ಟೋ ಸಾಮಾರ್ಥ್ಯ ಇರುವ, ಜ್ಞಾನವಿರುವ, ಉನ್ನತ ಶಿಕ್ಷಣ ಹೊಂದಿರುವ ಅರ್ಹರು, ಅನುಭವಿಗಳು ಉದ್ಯೋಗ ಇಲ್ಲದೆ ಬದುಕುತ್ತಿದ್ದಾರೆ.
ಹೀಗೆ ಉದ್ಯೋಗ ನೀಡುವ ಭರವಸೆ ನೀಡಿ ರಕ್ತ ಸುಡುವಂತೆ ದುಡಿಸಿಕೊಂಡು ಕಾರಣವಿಲ್ಲದೆ ಮನೆಗೆ ಕಳಿಸುವ ಕಂಪನಿಗಳಿಗೆ ಒಂದು ನಿಯಮ ಜಾರಿಯಾಗಬೇಕಿದೆ. ಅಂದಾಗ ಮಾತ್ರ ಕೆಲಸದ ಸ್ಥಳದಲ್ಲಿ ಶ್ರಮಪಡುವ ಉದ್ಯೋಗಿಗಳಿಗೆ ಬೆಲೆ ಸಿಗುತ್ತದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications