ಘಮಗುಡುವ "ಮೈಸೂರು ಮಲ್ಲಿಗೆ"ಗೆ ಫೇಮಸ್ ದೇವರಾಜ ಮಾರುಕಟ್ಟೆಯ ಈ ಮಳಿಗೆ
ಮೈಸೂರು, ಸೆಪ್ಟೆಂಬರ್ 19; ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರಾರೂ ಪ್ರಸಿದ್ಧ ಮೈಸೂರು ಮತ್ತು ಮಂಡ್ಯದ ಮಲ್ಲಿಗೆಯ ಸುವಾಸನೆಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಮೈಸೂರಿನ ಸುತ್ತ ಮುತ್ತ ಮತ್ತು ಮಂಡ್ಯದ ಶ್ರೀರಂಗ ಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಮಲ್ಲಿಗೆ ಹೂವು ಮೈಸೂರು ಮಲ್ಲಿಗೆ ಎಂದೇ ಪ್ರಸಿದ್ಧಿ ಪಡೆದಿದ್ದು ಸುವಾಸನೆಯಿಂದಾಗಿ.
ರಾಜ್ಯದಲ್ಲಿ ಹಡಗಲಿ ಮಲ್ಲಿಗೆ ಮತ್ತು ಉಡುಪಿ ಮಲ್ಲಿಗೆ ಹೂವುಗಳಿಗೆ ಒಂದಷ್ಟು ಹೆಸರು ಇದೆಯಾದರೂ ಮೈಸೂರು ಮಲ್ಲಿಗೆಯ ಸುಮಧುರ ಕಂಪು ಇವುಗಳಿಗೆ ಇಲ್ಲ.
ಮೈಸೂರು ಮಲ್ಲಿಗೆ ರಾಜ ಮಹಾರಾಜರ ಕಾಲದಿಂದಲೂ ಪಾರಂಪರಿಕ ಹೂವೇ ಆಗಿದೆ. ಅರಮನೆಗೆ ನಿತ್ಯ ಪೂಜೆಗೆ, ನಾಡದೇವಿ ಚಾಮುಂಡೇಶ್ವರಿ ದೇವಾಲಯಕ್ಕೆ ನಿತ್ಯ ಮಲ್ಲಿಗೆ ಹೂವು ಬೇಕೇ ಬೇಕು. ಈ ಹೂವಿನ, ಹೂವಿನ ಇತಿಹಾಸದ ಬಗ್ಗೆ, ಈ ಹೂವು ಮೈಸೂರಿನಲ್ಲಿ ಎಲ್ಲೆಲ್ಲಿ ಸಿಗಬಹುದು ಎಂಬುದರ ಕುರಿತು ಇಲ್ಲಿದೆ ಒಂದು ನೋಟ...

ಮಲ್ಲಿಗೆಗೆ ಫೇಮಸ್ ಈ ಸ್ಟಾಲ್
ದೇವರಾಜ ಮಾರುಕಟ್ಟೆಯ ಹೂವಿನ ಮಂಡಿಯಲ್ಲೇ ಹೆಚ್ಚಾಗಿ ತಾಜಾ ಮಲ್ಲಿಗೆ ಹೂವುಗಳು ಸಿಗುತ್ತವೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹೂ ಮತ್ತು ಹಣ್ಣು ಖರೀದಿಸುವುದು ವಾಡಿಕೆ ಆಗಿದೆ. ಇಲ್ಲಿಗೆ ಬರುತ್ತಿದ್ದಂತೆ ಈ ಹೂವಿನ ಸುವಾಸನೆಯೇ ನಿಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿ ಮೈಸೂರು ಮಲ್ಲಿಗೆಗೆ ಫೇಮಸ್ ಅಗಿರುವ ಅಂಗಡಿ ಗಾಯತ್ರಿ ಫ್ಲವರ್ ಸ್ಟಾಲ್.

70 ವರ್ಷಗಳ ಹಿಂದಿನ ಸ್ಟಾಲ್
ಈ ಗಾಯತ್ರಿ ಫ್ಲವರ್ ಸ್ಟಾಲ್ ಮಾಲೀಕ ನಾರಾಯಣಪ್ಪ ಅವರು. ಇವರ ತಂದೆ ಮರಿಯಪ್ಪ ಅವರಿಂದ 70 ವರ್ಷಗಳ ಹಿಂದೆ ಚಾಲನೆಗೊಂಡ ಅಂಗಡಿಯಲ್ಲಿ ಈಗ ಮೊಮ್ಮಕ್ಕಳು ವ್ಯಾಪಾರ ಮಾಡುತ್ತಿದ್ದಾರೆ. ನಾರಾಯಣಪ್ಪ ಅವರಿಗೆ ಏಳು ಜನ ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು. ಏಳು ಜನ ಮಕ್ಕಳು ಈಗಲೂ ದೇವರಾಜ ಮಾರುಕಟ್ಟೆಯಲ್ಲಿ ಪ್ರತ್ಯೇಕ ಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಐದು ಅಂಗಡಿಗಳಿಗೆ ಗಾಯತ್ರಿ ಫ್ಲವರ್ ಸ್ಟಾಲ್ ಹೆಸರೇ ಇದೆ. ಇನ್ನೆರಡು ಅಂಗಡಿಗಳಿಗೆ ಅನ್ನಪೂರ್ಣ ಫ್ಲವರ್ ಸ್ಟಾಲ್ ಹೆಸರು ಇಟ್ಟಿದ್ದಾರೆ.

ನಿತ್ಯವೂ 2 ಟನ್ ಹೂವು ಮಾರಾಟ
ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ನಾರಾಯಣಪ್ಪ ಅವರ ಮಗ ಶ್ರೀನಿವಾಸ್, "ನಮ್ಮ ತಾತ ಮರಿಯಪ್ಪ ಅವರೇ ಮಲ್ಲಿಗೆ ಹೂವನ್ನು ಬೆಳೆದು ತಮ್ಮ ಅಂಗಡಿಯಲ್ಲೇ ಮಾರಾಟ ಮಾಡುತ್ತಿದ್ದರು. ಈಗಿನ ತಿಬ್ಬಾ ದೇವಿ ಥಿಯೇಟರ್ ಪಕ್ಕದಲ್ಲೇ ನಮ್ಮದು ಎಂಟು ಎಕರೆ ಭೂಮಿ ಇದ್ದು ಮಲ್ಲಿಗೆ ಬೆಳೆಯಲಾಗುತಿತ್ತು. ನಂತರ ಸರ್ಕಾರ ಅದನ್ನು 1972-73ರಲ್ಲಿ ವಶಪಡಿಸಿಕೊಂಡಿತು" ಎಂದರು. ನಿತ್ಯವೂ ಸುಮಾರು 2 ಟನ್ ಗಳಷ್ಟು ಹೂವುಗಳನ್ನು ಮಾರಾಟ ಮಾಡುವ ಇವರು ಹೋಲ್ ಸೇಲ್ ಮತ್ತು ಚಿಲ್ಲರೆ ವ್ಯಾಪಾರವನ್ನೂ ಮಾಡುತ್ತಿದ್ದಾರೆ.

ನೀವೂ ಭೇಟಿ ನೀಡಿ
ನಿತ್ಯವೂ ಬೆಳಿಗ್ಗೆ ಮಲ್ಲಿಗೆ, ಕನಕಾಂಬರ, ಕಾಕಡ ಹೂವುಗಳನ್ನು ಮಡಿಕೇರಿ, ವೀರಾಜಪೇಟೆ, ಚಾಮರಾಜನಗರ, ಹಾಸನ, ಚನ್ನರಾಯಪಟ್ಟಣದ ಹೂವಿನ ವ್ಯಾಪಾರಿಗಳಿಗೆ ಬಸ್ ನಲ್ಲಿ ಕಳಿಸಿಕೊಡುತಿದ್ದೇವೆ ಎಂದು ಹೇಳಿದರು. ಈಗ ಮೈಸೂರು ಸುತ್ತ ಮುತ್ತ ಮಲ್ಲಿಗೆ ಹೂವಿನ ಉತ್ಪಾದನೆ ಕಡಿಮೆ ಆಗಿದ್ದು, ತಮಿಳುನಾಡಿನ ಮಧುರೈ ಮತ್ತು ಸೇಲಂನಿಂದ ಹೆಚ್ಚಾಗಿ ಮಲ್ಲಿಗೆ ಹೂವು ಬರುತ್ತಿದೆ ಎಂದು ಅವರು ಹೇಳಿದರು.
ಹಾಗಿದ್ದರೆ ನೀವೂ ಮೈಸೂರಿಗೆ ಹೋದರೆ, ಮೈಸೂರಿನ ಈ ಫೇಮಸ್ ಮಲ್ಲಿಗೆ ಕೊಳ್ಳಲು ಈ ಮಳಿಗೆಗೆ ಒಮ್ಮೆ ಭೇಟಿ ನೀಡಿ...
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications