ಫೇಸ್ ಬುಕ್ ನ ಸೂಪರ್ ಸ್ಟಾರ್ 'ಬಾಜೂ ಮನಿ ಕಾಕು' ಸೋನು!

Posted By:
Subscribe to Oneindia Kannada

ಆಕೆ ಫೇಸ್ ಬುಕ್ ನಲ್ಲಿ ಒಂದು ವಿಡಿಯೋ ಅಪ್ ಲೋಡ್ ಮಾಡಿದರೆ ಸಾಕು, ಒಂದು ವಿಡಿಯೋ ದಿನವೊಂದಕ್ಕೆ ಸಾವಿರಾರು ಶೇರ್ ಗಳು, ಲಕ್ಷಗಟ್ಟಲೆ ನೋಡುಗರನ್ನು ಸೆಳೆಯುತ್ತದೆ. ಪಡ್ಡೆ ಹುಡುಗರಿಂದ ವಯೋವೃದ್ಧರವರೆಗೂ ಕೇವಲ 3 ನಿಮಿಷದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿ ಸೆಳೆಯುತ್ತಿರುವ ಯುವತಿ ಸೋನು ವೇಣುಗೋಪಾಲ್.

ಹೌದು, ಫೇಸ್ ಬುಕ್ ನಲ್ಲಿ ಬಾಜೂ ಮನಿ ಕಾಕು ಹೆಸರಿನ ಮೂಲಕ ವಿಡಿಯೋಗಳನ್ನು ಮಾಡಿ, ವಾರಕ್ಕೊಂದರಂತೆ ಅದನ್ನು ಅಪ್ ಲೋಡ್ ಮಾಡುವ ಸೋನು, ಸದ್ಯ ಉತ್ತರ ಕರ್ನಾಟಕ ಜನತೆಯ ಮನೆ ಮಾತಾಗಿದ್ದಾರೆ. ಉತ್ತರ ಕರ್ನಾಟಕ ಮೀಮ್ಸ್ ನಲ್ಲಿಯೂ ಈಕೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ದೇಶದ ಟಾಪ್ 10 ಕಾಪ್ ಗಳಲ್ಲಿ ಕನ್ನಡತಿ ಡಿ ರೂಪಾ

ತಾನು ಹುಟ್ಟಿ - ಬೆಳೆದ ಬೆಳಗಾವಿಯ ಸುಂದರ ಪರಿಸರ ತಾಣಗಳ ಮಧ್ಯೆ ಅವರಿಗಾದ ಅನುಭವವನ್ನು ತಮ್ಮದೇ ಆದ ಶೈಲಿಯಲ್ಲಿ ಬಿಂಬಿಸುವ ಸೋನು, ಅದಕ್ಕೆ ತಕ್ಕ ಎಡಿಟಿಂಗ್ ಹಾಗೂ ಕಾಮಿಕ್ ಗಳ ಟಚ್ ನೀಡಿ ಗ್ರಾಫಿಕ್ಸ್ ಗಳ ಮೂಲಕ ಜನರಿಗೆ ತಲುಪಿಸುತ್ತಾರೆ. ಮೊದಲೊಂದೆರಡು ವಾರಗಳು ಜನರ ಅಭಿಪ್ರಾಯ ಹೇಗಿರುತ್ತದೆಯೋ ಎಂಬ ಅಂಜಿಕೆಯಿಂದಲೇ ಆರಂಭಿಸಿದ ಅವರು, ಸದ್ಯ ಜನರೇ ಈಕೆಯ ವಿಡಿಯೋಗಾಗಿ ಕಾಯುವಂಥ ಪರಿಸ್ಥಿತಿಗೆ ತಂದಿಟ್ಟಿದ್ದಾರೆ.

ಸೋನು ಬೆಳಗಾವಿಯವರು

ಸೋನು ಬೆಳಗಾವಿಯವರು

ಸೋನು ವೇಣುಗೋಪಾಲ್ ಮೂಲತಃ ಬೆಳಗಾವಿಯವರು. ಮೊದಲಿನಿಂದಲೂ ಇವರಿಗೆ ಇದ್ದದ್ದು ರೇಡಿಯೋದಲ್ಲಿ ಆರ್ ಜೆಯಾಗಿ ಕೆಲಸ ಮಾಡಬೇಕೆಂಬ ಒಲವು. ಎನ್ ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೋನುಗೆ, ಆರ್ ಜೆ ಆಗಲೇಬೇಕೆಂಬ ಹಠವಿತ್ತು. ಎಲ್ಲಾ ರೇಡಿಯೋ ಸ್ಟೇಷನ್ ಗಳ ಅಡ್ರೆಸ್ ಗಳಿಗೂ ಕೆಲಸ ಬೇಕೆಂದು ತಿಂಗಳಿಗೊಂದು ಪತ್ರ ಗುಜಾರಾಯಿಸುವುದು ಇವರ ಕಾಯಕವಾಗಿಬಿಟ್ಟಿತು.

ಹೀಗೆ ಕ್ಲಿಕ್ ಆದ ಸೋನು ಸ್ಟ್ಯಾರ್ಜಿ ಅವರನ್ನು ಹಿಂದಿ ರೇಡಿಯೋ ಸ್ಟೇಷನ್ ಒಂದರಲ್ಲಿ ಆರ್ ಜೆಯಾಗಿ ಕೆಲಸ ಮಾಡುವ ಹಾದಿಗೆ ತಂದು ಬಿಟ್ಟಿತು. ಓದಿದ್ದು ಇಂಜಿನಿಯರಿಂಗ್ ಆದರೂ ಒದಗಿದ್ದು ಮಾತ್ರ ಆರ್ ಜೆಯಾಗುವ ಭಾಗ್ಯ.

 ಮದುವೆ ನಂತರ ಸ್ವಿಟ್ಜರ್ ಲೆಂಡ್ ಗೆ

ಮದುವೆ ನಂತರ ಸ್ವಿಟ್ಜರ್ ಲೆಂಡ್ ಗೆ

ಹೀಗೆ ಬಂಡಿ ಸಾಗುತ್ತಿತ್ತು. ಇದೇ ವೇಳೆಗೆ ಮದುವೆಯು ಗೊತ್ತಾಗಿ, ಸ್ವಿಟ್ಜರ್ ಲೆಂಡ್ ಗೆ ತೆರಳಿದ ಬಳಿಕ ಮುಂದೇನು ಮಾಡುವೆಂದು ಯೋಚಿಸುತ್ತಿದ್ದಾಗ ತಕ್ಷಣ ಹೊಳೆದದ್ದೇ ಬಾಜೂ ಮನಿ ಕಾಕು. ವಿದೇಶಕ್ಕೆ ನಮ್ಮವರು ಹಾರಿ ಅಲ್ಲಿಯ ಸಂಸ್ಕೃತಿಯನ್ನು ಹೊಂದಿಕೊಳ್ಳುವುದೇ ಹೆಚ್ಚು. ಆದರೆ ಸೋನು ವೇಣುಗೋಪಾಲ್ ಎಲ್ಲಕ್ಕಿಂತ ವಿಭಿನ್ನ.

ಕೆಲಸ ಮಾಡಿದ್ದು ಹಿಂದಿ ರೇಡಿಯೋ ಸ್ಟೇಷನ್ ನಲ್ಲಿ, ಇದ್ದ ಊರು ನಮ್ಮದ್ದಲ್ಲ, ಮಾತೃಭಾಷೆಯ ಪ್ರೇಮ ಕನ್ನಡದಲ್ಲೇ ವಿಡಿಯೋ ಮಾಡಬೇಕೆಂಬ ಆಸೆ ಸೋನು ತಲೆಯಲ್ಲಿ ಹೊಕ್ಕಿತು. ಅಂದೇ ಶುರುವಾಯಿತು ಬಾಜೂ ಮನಿ ಕಾಕು.

 ಉತ್ತರ ಕರ್ನಾಟಕದ ಕಾಕು

ಉತ್ತರ ಕರ್ನಾಟಕದ ಕಾಕು

ಉತ್ತರ ಕರ್ನಾಟಕದ ಪರಿಕಲ್ಪನೆಯ ಕೂಸು ಈ ಕಾಕು. ಅಲ್ಲಿನ ಮಾತಿನ ಧಾಟಿ, ಜನರ ನಡವಳಿಕೆ ಸೋನು ಅವರಿಗೆ ಅರಿವಿದ್ದ ಕಾರಣ, ಕಾಕು ಜನ್ಮ ತಾಳಿದಳು. ರೇಡಿಯೋದಲ್ಲಿ ಹಲವು ಕಾಮಿಕ್ ಮಾಡುತ್ತಿದ್ದಾಗ ನನ್ನನ್ನು ಹಲವು ಕೇಳುತ್ತಿದ್ದರು: ನೀವ್ಯಾಕೆ ಹಾಸ್ಯ ಕಲಾವಿದರಾಗಬಾರದು ಅಂತ. ಅದು ಈ ರೂಪದಲ್ಲಿ ಒಡಮೂಡಿದೆ ಎನ್ನುತ್ತಾರೆ ಸೋನು.

ಸಾವಿರಾರು ಜನ ಲೈಕ್ ಮಾಡ್ತಾರೆ

ಸಾವಿರಾರು ಜನ ಲೈಕ್ ಮಾಡ್ತಾರೆ

ನಾನು ಆರ್ ಜೆಯಾಗಿದ್ದಾಗಲೂ ಇಷ್ಟೊಂದು ಮಂದಿ ಇಷ್ಟಪಡುತ್ತಿರಲಿಲ್ಲ ರೀ.. ಆದರೆ ನಾನೊಮ್ಮೆ ವಿಡಿಯೋ ಮಾಡಿ ಹಾಕಿದ್ರೆ ಸಾಕು ಸಾವಿರಾರು ಜನ ಲೈಕ್ ಮಾಡುತ್ತಾರಾ.. ನನಗೆ ಖುಷಿ ಆಗುತ್ತೆ.. ಮುಂದಿನ ವಿಡಿಯೋ ಈ ತರಹ ಮಾಡಿ ಎಂದು ಟಾಪಿಕ್ ಸಹ ಕೊಡುತ್ತಾರೀ... ಖುಷಿ ಅನುಸುತ್ತೆ ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ಕೊಡುತ್ತಾರೆ ಸೋನು ವೇಣುಗೋಪಾಲ್.

ಆಲ್ ದಿ ಬೆಸ್ಟ್ ಬಾಜೂ ಮನಿ ಕಾಕು

ಆಲ್ ದಿ ಬೆಸ್ಟ್ ಬಾಜೂ ಮನಿ ಕಾಕು

ಮುಂದಿನ ದಿನದಲ್ಲಿ ಭಾರತಕ್ಕೆ ಬಂದು ಸಮಾಜಮುಖಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಹಂಬಲ ಇವರಿಗೆ. ಅಷ್ಟೇ ಅಲ್ಲ ಜನರಿಗೆ ಅರಿವು ಮೂಡಿಸುವಂತಹ ವಿಡಿಯೋಗಳನ್ನು ಹೊರ ತರುವ ಯೋಚನೆಯಲ್ಲಿದ್ದಾರೆ ಸೋನು. ಇವರ ಎಲ್ಲ ಪ್ರಯತ್ನಗಳು ಸಫಲವಾಗಲಿ. ಆಲ್ ದಿ ಬೆಸ್ಟ್ ಬಾಜೂ ಮನಿ ಕಾಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttara Karnataka slang conversation is very sweet and people like very much. Facebook super star Bajoo Mani Kakoo Sonu Venugopal is posting such conversation in facebook and it is getting good response from people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ